Asianet Suvarna News Asianet Suvarna News

ಇಂಧನ ದರ ಮತ್ತಷ್ಟು ಇಳಿಕೆ: ಹಾಗಾದ್ರೆ ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟಾಗಿದೆ?

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆಯಲ್ಲಿ ಇಳಿಕೆಯಾಗುತ್ತಿರುವ ಬೆನ್ನಲ್ಲೇ ದೇಶಾದ್ಯಂತ ಇಂದು [ಸೋಮವಾರ] ಇಂಧನದ ದರದಲ್ಲಿ ಇಳಿಕೆಯಾಗಿದೆ. ಹಾಗಾದ್ರೆ ಎಷ್ಟು ಇಳಿದಿದೆ ನೋಡಿ.

Petrol, diesel prices cut by 35-45 paise per litre on Monday
Author
Bengaluru, First Published Nov 26, 2018, 6:49 PM IST

ನವದೆಹಲಿ, [ನ.26]: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆಯಲ್ಲಿ ಇಳಿಕೆಯಾಗುತ್ತಿರುವ ಬೆನ್ನಲ್ಲೇ ದೇಶಾದ್ಯಂತ ಕಳೆದೊಂದು ತಿಂಗಳಿಂದಲೂ ಇಂಧನ ಬೆಲೆಯು ಇಳಿಕೆಯತ್ತ ಮುಖಮಾಡಿದೆ.

ಸೋಮವಾರ ಕೂಡ ಪೆಟ್ರೋಲ್‌ 35 ರಿಂದ 37 ಪೈಸೆ ಮತ್ತು ಡೀಸೆಲ್‌ಗೆ 41 ರಿಂದ 43 ಪೈಸೆ ಕಡಿಮೆಯಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೂಡ ಲೀಟರ್‌ ಪೆಟ್ರೋಲ್‌ಗೆ 35 ಪೈಸೆ ಇಳಿಕೆಯಾಗುವ ಮೂಲಕ 75.08 ರೂ.ಗಳಷ್ಟಿದೆ. ಇನ್ನು ಡೀಸೆಲ್‌ ಬೆಲೆಯಲ್ಲೂ 42 ಪೈಸೆ ಇಳಿಕೆಯಾಗಿದ್ದು, ಲೀಟರ್ ಗೆ 69.65 ರೂ.ಗೆ ಮಾರಾಟವಾಗುತ್ತಿದೆ.

 ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್‌ ಲೀಟರ್‌ಗೆ 41 ಪೈಸೆ ಕಡಿಮೆಯಾಗಿದ್ದು, 74.49 ರೂ.ಗಳಷ್ಟಾಗಿದೆ. ಡೀಸೆಲ್‌ ಲೀಟರ್ ಗೆ ಭಾನುವಾರ 69.70 ರೂ ಇದ್ದದ್ದು ಇಂದು [ಸೋಮವಾರ] 69.29 ರೂ.ಗೆ ಮಾರಾಟವಾಗುತ್ತಿದೆ.

ಚೆನ್ನೈನಲ್ಲಿ ಲೀಟರ್ ಪೆಟ್ರೋಲ್‌ಗೆ 37 ಪೈಸೆ ಕಡಿಮೆಯಾಗಿ 77.32 ರೂ ಇದ್ದರೆ, ಕೊಲ್ಕತ್ತಾದಲ್ಲಿ 35 ಪೈಸೆ ಕಡಿಮೆಯಾಗುವ ಮೂಲಕ 76.47ರೂ. ಇದ್ದರೆ, ಡೀಸೆಲ್‌ ಲೀಟರ್‌ಗೆ 73.20 ರೂ. ಇದೆ.

ಮುಂಬೈನಲ್ಲಿ ಪ್ರತಿ ಲೀ. ಪೆಟ್ರೋಲ್ 80.03 ರೂ. ಇನ್ನು ಡೀಸೆಲ್ ಲೀ, 72.56 ರೂ.ಗೆ ಮಾರಾಟವಾಗುತ್ತಿದೆ. 

Follow Us:
Download App:
  • android
  • ios