Asianet Suvarna News Asianet Suvarna News

2 ತಿಂಗಳು ಈ ರೂಟ್ಸ್‌ಗೆ ಟ್ರೈನ್ ಇಲ್ಲ: ಪ್ರಯಾಣಿಕರ ಗತಿ ದೇವರೇ ಬಲ್ಲ!

ಬರೋಬ್ಬರಿ ಎರಡು ತಿಂಗಳವರೆಗೆ 130 ರೈಲು ಸಂಚಾರ ಸ್ಥಗಿತ| 130 ರೈಲುಗಳ ಸಂಚಾರ ರದ್ದುಗೊಳಿಸಿ ಪ್ರಕಟಣೆ ಹೊರಡಿಸಿದ ರೈಲ್ವೇ ಇಲಾಖೆ| ಉತ್ತರ ಭಾರತದಲ್ಲಿ ಅತಿ ಮಂಜಿನ ಚಳಿಗಾಲದ ಆರಂಭದ ಹಿನ್ನೆಲೆ| ಉತ್ತರ ಮತ್ತು ಉತ್ತರ ಮಧ್ಯೆ ರೆಲ್ವೇ ಇಲಾಖೆಯಿಂದ 130 ರೈಲು ಸಂಚಾರ ಸ್ಥಗಿತ| ಡಿ.13 ರಿಂದ 15 ಫೆಬ್ರವರಿ 2019ರ ವರೆಗೆ 130 ರೈಲು ಸಂಚಾರ ಸ್ಥಗಿತ
 

Indian Railways Cancels 130 Trains Due To Fog
Author
Bengaluru, First Published Dec 15, 2018, 5:31 PM IST

ನವದೆಹಲಿ(ಡಿ.15): ಏನಾದರಾಗಲಿ, ರೈಲು ಸೇವೆಯೊಂದಿದ್ದರೆ ಸಾಕು ಎಂತದ್ದೇ ಸಮಯದಲ್ಲೂ ನಮ್ಮವರನ್ನು ಕೂಡಿಕೊಳ್ಳುವ ಧೈರ್ಯವಾದರೂ ಇರುತ್ತದೆ.

ಆದರೆ ಹವಾಮಾನದ ಕಾರಣ ನೀಡಿ ರೈಲ್ವೇ ಇಲಾಖೆ ರೈಲು ಸಂಚಾರ ರದ್ದುಗೊಳಿಸಿದರೆ ಅದು ನಿಜಕ್ಕೂ ಸಾಮಾನ್ಯನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಹವಾಮಾನ ಇಲಾಖೆಯ ಕೈಯನ್ನೂ ಕಟ್ಟಿ ಹಾಕುತ್ತದೆ ಎಂಬುದು ಸತ್ಯ.

ಅದರಂತೆ  ಅತಿ ಮಂಜಿನ ಚಳಿಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಉತ್ತರ ರೈಲ್ವೇ ವಲಯ ಬರೋಬ್ಬರಿ 2 ತಿಂಗಳುಗಳ ಕಾಲ  ಸುಮಾರು 130 ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ.

ಉತ್ತರ ಭಾರತದಲ್ಲಿ ಅತಿ ಮಂಜಿನ ಚಳಿಗಾಲ ಪ್ರಾರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಉತ್ತರ ರೈಲ್ವೇ ವಲಯದ ಸುಮಾರು 104 ಮತ್ತು ಉತ್ತರ ಮಧ್ಯ ರೈಲ್ವೇಯ ಸುಮಾರು 21 ರೈಲುಗಳ ಸಂಚರವನ್ನು ರದ್ದುಗೊಳಿಸಲಾಗಿದೆ.

ಡಿ.13 ರಿಂದ 15 ಫೆಬ್ರವರಿ 2019ರ ವರೆಗೆ ಇಲಾಖೆ ಪಟ್ಟಿ ಮಾಡಿರುವ ಮಾರ್ಗದಲ್ಲಿ ರೈಲು ಸಂಚಾರ ಇರಲ್ಲ ಎಂದು ಪ್ರಕಟಣೆ ಹೊರಡಿಸಲಾಗಿದೆ.

ಇನ್ನು ರದ್ದುಗೊಂಡ ರೈಲುಗಳ ಮಾಹಿತಿ ಕುರಿತು ರೈಲ್ವೇ ಇಲಾಖೆ ವೆಬ್ ಸೈಟ್ ನಲ್ಲಿ ಮಾಹಿತಿ ಇದ್ದು, ಆಸಕ್ತರು ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬಹುದು.

ಇನ್ನು ದಕ್ಷಿಣ ಭಾರತದಿಮದ ಉತ್ತರ ಭಾರತದತ್ತ ಪ್ರವಾಸ ಕೈಗೊಳ್ಳುವ ಪ್ರಯಾಣಿಕರು, ಈ ಮಾಹಿತಿ ಆಧರಿಸಿಯೇ ತಮ್ಮ ಪ್ರವಾಸ ಯೋಜನೆ ಸಿದ್ಧಪಡಿಸಿಕೊಳ್ಳುವುದು ಒಳಿತು.
 

Follow Us:
Download App:
  • android
  • ios