Asianet Suvarna News Asianet Suvarna News

ಕೆಲಸಕ್ಕೆ ಒತ್ತಡ ಹೇರುವ ಮ್ಯಾನೇಜರ್ ಕೊಲೆಗೆ ಗೂಂಡಾಗಳನ್ನು ನೇಮಿಸಿದ ಉದ್ಯೋಗಿಗಳು; ಶಾಕಿಂಗ್ ವಿಡಿಯೋ ವೈರಲ್

ಕಲ್ಯಾಣ್ ನಗರದ ರಸ್ತೆಯೊಂದರಲ್ಲಿ ಪುಂಡರ ಗುಂಪೊಂದು ಲೆಕ್ಕ ಪರಿಶೋಧಕನ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸುತ್ತಿರುವುದು ದೃಶ್ಯಾವಳಿಗಳಲ್ಲಿ ಕಂಡುಬರುತ್ತದೆ. 

work pressure effect Men hired goons to assault manager in Bengaluru skr
Author
First Published Apr 8, 2024, 9:56 AM IST

ಉದ್ಯೋಗದಲ್ಲಿರುವವರೆಲ್ಲ ಒಂದಿಲ್ಲೊಂದು ಬಾರಿ ಕೆಲಸದ ಒತ್ತಡದಿಂದ ಹೈರಾಣಾಗಿರುತ್ತಾರೆ. ಕೆಲವೊಮ್ಮೆ ಒತ್ತಡ ಹೇರುವ ಮ್ಯಾನೇಜರ್‌ಗೆ ಬೈದು ಸಮಾಧಾನ ಮಾಡಿಕೊಂಡಿರಲೂಬಹುದು. ಆದರೆ, ಬೆಂಗಳೂರಿನ ಇಬ್ಬರು ಉದ್ಯೋಗಿಗಳು ತಮ್ಮ ಮೇಲೆ ಕೆಲಸದ ಒತ್ತಡ ಹೇರುವ ಮ್ಯಾನೇಜರ್ ಮೇಲಿನ ಕೋಪವನ್ನು ಅತಿರೇಖದ ಕ್ರಮದ ಮೂಲಕ ತೋರ್ಪಡಿಸಿದ್ದಾರೆ.

ಹೌದು, ಮ್ಯಾನೇಜರ್ ಹೇರುತ್ತಿದ್ದ ಕೆಲಸದ ಒತ್ತಡ ತಾಳಲಾರದೆ, ಅವರ ಮೇಲೆ ದಾಳಿ ಮಾಡಲು ಗೂಂಡಾಗಳನ್ನು ನೇಮಿಸಿದ್ದಾರೆ ಇಬ್ಬರು ಉದ್ಯೋಗಿಗಳು!

ಗೂಂಡಾಗಳು ಈ ಮ್ಯಾನೇಜರ್‌ಗೆ ಹಗಲಿನಲ್ಲೇ ರಸ್ತೆ ಮೇಲೆ ಬೀಳಿಸಿಕೊಂಡು ಕಬ್ಬಿಣದ ರಾಡ್‌ನಿಂದ ಥಳಿಸುತ್ತಿರುವ ಈ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಶಾಕ್‌ವೇವ್ ಹರಡುತ್ತಿದೆ. ಮತ್ತೂ ಶಾಕಿಂಗ್ ಎಂದರೆ, ಈ ವ್ಯಕ್ತಿಗೆ ಟ್ರಾಫಿಕ್ ಇರುವ ರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸುತ್ತಿದ್ದರೂ, ಅಲ್ಲಿ ಓಡಾಡುತ್ತಿರುವ ನೂರಾರು ವಾಹನಗಳಲ್ಲಿ ಒಬ್ಬರೂ ಅವರ ರಕ್ಷಣೆಗೆ ಬರದಿರುವುದು!

'9 ಸೈಕೋಪಾತ್‌ಗಳ ಜೊತೆಗಿದ್ದೆ, ಇಲ್ಲಿ ಉಸಿರಾಡೋಕೂ ಹಣ ಚಾರ್ಜ್ ಮಾಡ್ತಾರೆ!' ಬಾಲಿವುಡ್ ಜರ್ನಿ ನೆನೆದ ನೋರಾ ಫತೇಹಿ
 

ಸಂತ್ರಸ್ತರನ್ನು ಸುರೇಶ್ ಎಂದು ಗುರುತಿಸಲಾಗಿದ್ದು, ಅವರು ಪೂರ್ವ ಬೆಂಗಳೂರಿನ ಹೆರಿಟೇಜ್ ಹಾಲು ಉತ್ಪನ್ನ ಖಾಸಗಿ ಸಂಸ್ಥೆಯೊಂದರಲ್ಲಿ ಲೆಕ್ಕ ಪರಿಶೋಧಕರಾಗಿದ್ದಾರೆ. ಅವರು ಸುಮಾರು ಒಂದು ವರ್ಷದ ಹಿಂದೆ ಸಂಸ್ಥೆಗೆ ಸೇರಿದ್ದರು. ಅವರು ಸಂಸ್ಥೆಯ ಇತರ ಇಬ್ಬರು ಉದ್ಯೋಗಿಗಳಾದ ಉಮಾಶಂಕರ್ ಮತ್ತು ವಿನೇಶ್‌ಗೆ ವೇಗವಾಗಿ ಕೆಲಸ ಮಾಡುವಂತೆ ಒತ್ತಡ ಹೇರುತ್ತಿದ್ದರಂತೆ. ಅವರು ದೈನಂದಿನ ವಹಿವಾಟುಗಳನ್ನು ತೆರವುಗೊಳಿಸಲು ಇಬ್ಬರ ಮೇಲೆ ಒತ್ತಡ ಹೇರುತ್ತಿದ್ದರು, ಮತ್ತು ಉದ್ಯೋಗಿಗಳು ಅದನ್ನು ಪೂರ್ಣಗೊಳಿಸಲು ದಿನಗಳನ್ನು ತೆಗೆದುಕೊಳ್ಳುತ್ತಿದ್ದರು. ಅಲ್ಲದೆ, ಹಿರಿಯ ಕೆಲಸಗಾರರ ಎದುರೇ ಹಿಗ್ಗಾಮುಗ್ಗ ಬೈಯ್ಯುತ್ತಿದ್ದರು  ಎಂದು ವರದಿಯಾಗಿದೆ.

ಈ ಚಿತ್ರದ ಚಿತ್ರೀಕರಣಕ್ಕೆ ಮದ್ಯ ಸೇವಿಸಿ ಬರುತ್ತಿದ್ದ ಶಾರುಖ್ ಖಾನ್..!
 

ಈ ಒತ್ತಡವು ಮ್ಯಾನೇಜರ್ ಮೇಲೆ ದ್ವೇಷವಾಗಿ, ಕೋಪವಾಗಿ ಬದಲಾಗಿದ್ದು ಆಡಿಟರ್ ಕೊಲೆ ಮಾಡಲು ಇವರು ಗೂಂಡಾಗಳನ್ನು ನೇಮಿಸಿದ್ದಾರೆ. ಮಾ.31ರಂದು ನಡೆದ ದಾಳಿಯ ವಿಡಿಯೋ ಕಾರೊಂದರ ಡ್ಯಾಶ್ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಲ್ಯಾಣ್ ನಗರದ ರಸ್ತೆಯೊಂದರಲ್ಲಿ ಪುಂಡರ ಗುಂಪೊಂದು ಲೆಕ್ಕ ಪರಿಶೋಧಕನ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸುತ್ತಿರುವುದು ದೃಶ್ಯಾವಳಿಗಳಲ್ಲಿ ಕಂಡುಬರುತ್ತದೆ. 

ವಿಡಿಯೋ ನೋಡಿದ ನೆಟ್ಟಿಗರು ಸಹಾಯಕ್ಕೆ ಧಾವಿಸದ ನೂರಾರು ಜನರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. 'ಮನುಷ್ಯತ್ವ ಯಾರಲ್ಲೂ ಇಲ್ಲವೇ' ಎಂದು ಪ್ರಶ್ನಿಸುತ್ತಿದ್ದಾರೆ. 

ಜನರಿಗೆ ಒತ್ತಡ ನಿಭಾಯಿಸಲು ಕಂಪನಿಗಳು ಕೆಲ ತಂತ್ರಗಳನ್ನು ತರಬೇತಿ ಕೊಡಬೇಕು ಎಂದು ಕೆಲವರು ಹೇಳಿದ್ದಾರೆ.

ಈ ನಡುವೆ ಬೆಂಗಳೂರು ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದ್ದಾರೆ.

 

Follow Us:
Download App:
  • android
  • ios