Asianet Suvarna News Asianet Suvarna News

ಬೆಂಗಳೂರಿನಿಂದ ಮತ್ತೊಂದು ವಿಶೇಷ ರೈಲು ಸಂಚಾರ ಆರಂಭ

ಬೆಂಗಳೂರಿನಿಂದ ವಿಶೇಷ ರೈಲು ಸೇವೆ ಆರಂಭ ಮಾಡಲಾಗಿದೆ. ನವೆಂಬರ್ 1 ರಿಂದಲೇ ರೈಲು ಸಂಚಾರ ಆರಮಭವಾಗಿದ್ದು, ಪ್ರಯಾಣಿಕರು ಅನುಕೂಲ ಪಡೆಯಬಹುದಾಗಿದೆ. 

Special Train Service Begins Between Bangalore To Hindupur
Author
Bengaluru, First Published Nov 4, 2019, 8:16 AM IST

ಬೆಂಗಳೂರು [ನ.04]: ನೈಋುತ್ಯ ರೈಲ್ವೆಯು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ರೈಲು ನಿಲ್ದಾಣದಿಂದ ಹಿಂದೂಪುರಕ್ಕೆ ನ.1ರಿಂದ ಮೆಮು ವಿಶೇಷ ರೈಲು ಸಂಚಾರ ಆರಂಭಿಸಿದೆ.

ಭಾನುವಾರ ಹೊರತುಪಡಿಸಿ ವಾರದ ಆರು ದಿನಗಳ ಕಾಲ ಈ ರೈಲು (ಸಂಖ್ಯೆ 06565/06566) ಸಂಚರಿಸಲಿದೆ. ಪ್ರತಿ ದಿನ ಕೆಎಸ್‌ಆರ್‌ ರೈಲು ನಿಲ್ದಾಣದಿಂದ ಬೆಳಗ್ಗೆ 9.30ಕ್ಕೆ ಹೊರಟು ಮಧ್ಯಾಹ್ನ 12 ಗಂಟೆಗೆ ಹಿಂದೂಪುರ ರೈಲು ನಿಲ್ದಾಣ ತಲುಪಲಿದೆ. ಮಧ್ಯಾಹ್ನ 1 ಗಂಟೆಗೆ ಹಿಂದೂಪುರದಿಂದ ಹೊರಟು ಸಂಜೆ 4.10ಕ್ಕೆ ಕೆಎಸ್‌ಆರ್‌ ರೈಲು ನಿಲ್ದಾಣ ತಲುಪಲಿದೆ.

2 ದಶಕಗಳ ಕನಸು ನನಸು: ದಾಂಡೇಲಿ-ಧಾರವಾಡ ನಡುವೆ ಚುಕುಬುಕು ರೈಲು...

ಕಂಟೋನ್ಮೆಂಟ್‌, ಬೆಂಗಳೂರು ಪೂರ್ವ, ಬೈಯಪ್ಪನಹಳ್ಳಿ, ಚನ್ನಸಂದ್ರ, ಯಲಹಂಕ, ರಾಜಾನುಕುಂಟೆ, ದೊಡ್ಡಬಳ್ಳಾಪುರ, ವಡ್ಡರಹಳ್ಳಿ, ಮಾಕಳಿದುರ್ಗಾ, ತೊಂಡೆಬಾವಿ, ಸೋಮೇಶ್ವರ, ಗೌರಿಬಿದನೂರು, ವಿದುರಾಶ್ವತ್ಥ, ದೇವರಪಲ್ಲೆ ಮಾರ್ಗದಲ್ಲಿ ಹಿಂದೂಪುರ ತಲುಪಲಿದೆ ಎಂದು ನೈಋುತ್ಯ ರೈಲ್ವೆ ತಿಳಿಸಿದೆ.

Follow Us:
Download App:
  • android
  • ios