ವಾಹನ ಖರೀದಿಗೆ ಬ್ಯಾಂಕ್ ಲೋನ್ ಸಿಗುತ್ತಿಲ್ಲ; ಮತ್ತೆ ಸಂಕಷ್ಟಕ್ಕೆ ಸಿಲುಕಿದ ಆಟೋ ಇಂಡಸ್ಟ್ರಿ!
ಸುಪ್ರೀಂ ಕೋರ್ಟ್ ನಿಯಮದಂತೆ ಭಾರತದ ಎಲ್ಲಾ ಆಟೋಮೊಬೈಲ್ ಕಂಪನಿಗಳು ತಮ್ಮ ವಾಹನಗಳನ್ನು BS6ಗೆ ಅಪ್‌ಗ್ರೇಡ್ ಮಾಡುತ್ತಿದೆ. ಇದರ ಜೊತೆಗೆ BS4 ವಾಹನಗಳ ಕ್ಲೀಯರ್‌ಗಾಗಿ ಹರಸಾಹಸ ಪಡುತ್ತಿದೆ. ಭರ್ಜರಿ ಆಫರ್ ಘೋಷಿಸುತ್ತಿದೆ. ಆದರೆ ಆಟೋ ಕಂಪನಿಗಳಿಗೆ ಬ್ಯಾಂಕ್‌ನಿಂದ ಸಮಸ್ಯೆ ಎದುರಾಗಿದೆ.
ಮುಂಬೈ(ಜ.27): ಭಾರತದಲ್ಲಿ ಎಪ್ರಿಲ್1, 2020ರಿಂದ ಮಾರಾಟವಾಗುವ ಎಲ್ಲಾ ಹೊಸ ವಾಹನಗಳು BS6 ಎಂಜಿನ್ ಹೊಂದಿರಬೇಕು. ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಈ ನಿಯಮ ಜಾರಿಗೆ ತಂದಿದೆ. ಸದ್ಯ BS4 ಎಂಜಿನ್ ವಾಹನಗಳು ಸ್ಟಾಕ್ ಕ್ಲೀಯರ್‌ಗಾಗಿ ಡೀಲರ್‌ಗಳು ಶ್ರಮಿಸುತ್ತಿದ್ದಾರೆ. ಆದರೆ ಬ್ಯಾಂಕ್‌ಗಳು BS4 ವಾಹನಗಳಿಗೆ ಲೋನ್ ನೀಡಲು ಹಿಂದೇಟು ಹಾಕುತ್ತಿದೆ.
ಇದನ್ನೂ ಓದಿ: ಕೇಂದ್ರ ಬಜೆಟ್: ಆಟೋಮೊಬೈಲ್ ಕ್ಷೇತ್ರದ ನಿರೀಕ್ಷೆಗಳೇನು?
BS4 ಎಂಜಿನ್ ವಾಹನಗಳಿಗೆ ರೀ ಸೇಲ್ ವಾಲ್ಯೂ ಕಡಿಮೆಯಾಗಿದೆ. ಸುಪ್ರೀಂ ನಿಯಮದ ಪ್ರಕಾರ BS6 ಎಂಜಿನ್ ವಾಹನಗಳು ಮುಂದಿನ ದಿನದಲ್ಲಿ ಭಾರತದಲ್ಲಿ ಓಡಾಡಲಿದೆ. ಹೀಗಾಗಿ ಡೀಲರ್ ಆಫರ್ ನೀಡಿದರೂ ಖರೀದಿದಾರರಿಗೆ ಬ್ಯಾಂಕ್ ಲೋನ್ ನೀಡುತ್ತಿಲ್ಲ. ಶೇಕಡಾ 90 ರಷ್ಟು ಲೋನ್ ನೀಡುತ್ತಿದ್ದ ಬ್ಯಾಂಕ್‌ಗಳು ಇದೀಗ BS4 ವಾಹನಗಳಿಗೆ 40 ರಿಂದ 50 ಶೇಕಡಾಾ ಲೋನ್ ನೀಡುತ್ತಿದೆ.
ಇದನ್ನೂ ಓದಿ: ರೋಡ್ ಟೆಸ್ಟ್ ಯಶಸ್ವಿ; ಫೆಬ್ರವರಿಯಲ್ಲಿ ಟಾಟಾ H2X ಕಾರು ಅನಾವರಣ!
ಕಡಿಮೆ ಲೋನ್‌ನಿಂದ ಹೆಚ್ಚಿನ ಹಣ ಹೊಂದಿಸಬೇಕಾದ ಪರಿಸ್ಥಿತಿ ಖರೀದಿದಾರರಿಗೆ ಎದುರಾಗಿದೆ. ಹೀಗಾಗಿ ಹಲವರು ವಾಹನ ಖರೀದಿ ಉಸಾಬರಿ ಬೇಡ ಎನ್ನುತ್ತಿದ್ದಾರೆ. ಒಂದೆಡೆ ಸ್ಟಾಕ್ ಕ್ಲೀಯರೆನ್ಸ್, ಮತ್ತೊಂದೆಡೆ ವಾಹನಗಳನ್ನು BS6 ಎಂಜಿನ್ ಪರಿವರ್ತನೆಯಲ್ಲಿ ಆಟೋಮೊಬೈಲ್ ಕಂಪನಿಗಳು ಮುಳುಗಿವೆ. ಹೀಗಾಗಿ ಮಾರಾಟದಲ್ಲೂ ಹಿನ್ನಡೆ ಅನುಭವ ಕಾಣುತ್ತಿದೆ.
ಬ್ಯಾಂಕ್ ಸಮಸ್ಯೆ ಹಾಗೂ ಮಾರಾಟ ಕುಸಿತದ ಕುರಿತು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವಾಹನ ಅಧ್ಯಕ್ಷ ಮಯಾಂಕ್ ಪರೀಕ್ ಮಾಹಿತಿ ಬಹಿರಂಗ ಪಡಿಸಿದ್ದಾರೆ. 2019ರಲ್ಲಿ ಹಲವು ಕಾರಣಗಳಿಂದ ಆಟೋಮೊಬೈಲ್ ಇಂಡಸ್ಟ್ರಿ ಪಾತಳಕ್ಕೆ ಕುಸಿದಿತ್ತು. ಇದೀಗ 2020ರಲ್ಲಿ ಹೊಸ ನೀತಿ, ಬ್ಯಾಂಕ್ ಲೋನ್‌ಗಳಿಂದ ಮತ್ತೆ ಸಂಕಷ್ಟ ಎದುರಿಸುತ್ತಿದೆ ಎಂದು ಎಚ್ಚರಿಸಿದ್ದಾರೆ.