Small Screen

ಕಾವ್ಯಾ ಶಾಸ್ತ್ರೀ

ಕನ್ನಡ ಸಿನಿಮಾ, ಕಿರುತೆರೆಯಲ್ಲಿ ಹಲವಾರು ವರ್ಷಗಳಿಂದ ವಿವಿಧ ಪಾತ್ರಗಳಲ್ಲಿ ನಟಿಸುತ್ತಾ, ಜನರನ್ನು ರಂಜಿಸುತ್ತಾ ಬಂದಿರುವ ನಟಿ ಕಾವ್ಯಾ ಶಾಸ್ತ್ರೀ.  (Kavya Shashtry)

Image credits: social media

ಉದಯ ಟಿವಿ ಸೀರಿಯಲ್

ಕಾವ್ಯಾ ಉದಯ ಟಿವಿಯಲ್ಲಿ ಪ್ರಸಾರ ಕಾಣುತ್ತಿರುವ ‘ರಾಧಿಕಾ’ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದರು. ಆದರೆ ಈ ಅವರು ಇತ್ತೀಚೆಗೆ ಸೀರಿಯಲ್‌ನಿಂದ ಹೊರ ಬಂದರು. 

Image credits: social media

ಪ್ರೇಕ್ಷಕರಿಂದ ಪ್ರಶ್ನೆ

ಜನಪ್ರಿಯ ಧಾರವಾಹಿಯ ನಾಯಕಿಯ ಪಾತ್ರ ತೊರೆದಿರುವ ಬಗ್ಗೆ ಅಭಿಮಾನಿಗಳು, ಪ್ರೇಕ್ಷಕರು ಕಾವ್ಯಾ ಅವರನ್ನು ಪ್ರಶ್ನೆ ಮಾಡುತ್ತಿದ್ದು, ಇದೀಗ ಕಾವ್ಯಾ ಅದಕ್ಕೆ ಸೋಶಿಯಲ್ ಮೀಡೀಯಾ (social media) ಮೂಲಕ ಉತ್ತರಿಸಿದ್ದಾರೆ.

Image credits: social media

ಪ್ರೊಡಕ್ಷನ್ ಹೌಸ್ ಬಗ್ಗೆ ತಕರಾರು

ಇದು ಚಾನೆಲ್, ಪ್ರೊಡಕ್ಷನ್ ಹೌಸ್ ಮತ್ತು ನಾನು ಸೇರಿ ತೆಗೆದುಕೊಂಡ ನಿರ್ಧಾರ.  ಪ್ರೊಡಕ್ಷನ್ ಹೌಸ್ ನನ್ನನ್ನು ದುಡಿಸಿಕೊಳ್ಳುವ ಬಗ್ಗೆ, ಸೀರಿಯಲ್ ಟೀಮ್ ಮತ್ತು ಆರ್ಟಿಸ್ಟ್ ಬಗ್ಗೆ ಒಂದಿಷ್ಟು ತಕರಾರು ಇತ್ತೆಂದಿದ್ದಾರೆ. 

Image credits: social media

ರಾಧಿಕಾ ಪಾತ್ರಕ್ಕೆ ನನ್ನ ಅಗತ್ಯ ಇಲ್ಲ

ಎಲ್ಲಾ ಸೇರಿ ರಾಧಿಕಾ ಪಾತ್ರಕ್ಕೆ ನನ್ನ ಅಗತ್ಯ ಮುಗಿದಿದೆ. ಇನ್ಯಾರೋ ಹೊಸಬರು ಆ ಪಾತ್ರಕ್ಕೆ ಜೀವ ತುಂಬಬಲ್ಲರು ಅನ್ನೋ ಅನಿಸಿಕೆ ಎಲ್ಲರಿಗೂ ಬಂತು. ಹಾಗಾಗಿ ನಾನು ಸೀರಿಯಲ್‌ನಿಂದ ಹೊರ ಬಂದೆ ಎಂದ ನಟಿ. 
 

Image credits: social media

ಇನ್ನು ಮುಂದೇನೂ ನೋಡ್ತೀರಿ

ಇರ್ಲಿ ಇನ್ನೊಂದು ಪಾತ್ರ ಬರುತ್ತೆ. ಕಳೆದ ಇಪ್ಪತ್ತು ವರ್ಷಗಳಿಂದ ನನ್ನ ನೋಡ್ತಾ ಇದ್ದೀರಾ… ಇನ್ನು ಮುಂದೇನೂ ನೋಡ್ತೀರಾ ಎಂದು ನಟಿ ಕಾವ್ಯಾ ಶಾಸ್ತ್ರಿ ಅಭಿಮಾನಿಗಳಿಗೆ ಉತ್ತರ ನೀಡಿದ್ದಾರೆ. 

Image credits: social media

ಕನ್ನಡ, ತಮಿಳು ಸೀರಿಯಲ್

ಕನ್ನಡ ಸಿನಿಮಾ ಮತ್ತು ಹಲವಾರು ಸೀರಿಯಲ್‌ಗಳಲ್ಲಿ ನಟಿಸಿದ್ದ ಕಾವ್ಯಾ ಹಲವಾರು ತಮಿಳು ಸೀರಿಯಲ್‌ಗಳಲ್ಲೂ ನಟಿಸಿ, ಅಲ್ಲೂ ಸಹ ಜನಪ್ರಿಯತೆ ಪಡೆದಿದ್ದಾರೆ. 

Image credits: social media
Find Next One