ದೆಹಲಿಯಿಂದ ನೇಪಾಳಕ್ಕೆ ಹೊರಟ ವಿದೇಶಿಗರನ್ನು ಬರೇಲಿ ಸುತ್ತಾಡಿಸಿದ ಗೂಗಲ್ ಮ್ಯಾಪ್
ದೆಹಲಿಯಿಂದ ನೇಪಾಳಕ್ಕೆ ಇಬ್ಬರು ವಿದೇಶಿಗರು ಸೈಕಲ್ ಮೂಲಕ ಹೊರಟಿದ್ದಾರೆ. ಗೂಗಲ್ ಮ್ಯಾಪ್ ಬಳಸಿ ಪ್ರಯಾಣ ಆರಂಭಿಸಿದ್ದಾರೆ. ಆದರೆ ಗೂಗಲ್ ಮ್ಯಾಪ್ ನೇಪಾಳ ದಾರಿ ತೋರಿಸುವ ಬದಲು ಉತ್ತರ ಪ್ರದೇಶ ಬರೇಲಿ ಸುತ್ತಾಡಿಸಿದ ಘಟನೆ ನಡೆದಿದೆ.
ನವದೆಹಲಿ(ಜ.25) ಗೂಗಲ್ ಮ್ಯಾಪ್ ನಂಬಿ ಅನಾಹುತಗಳಾಗಿರವು ಘಟನೆಗಳು ನಡೆದಿದೆ. ಮತ್ತೆ ಕೆಲವರು ಗೂಗಲ್ ಮ್ಯಾಪ್ ತೋರಿಸಿದ ಮಾರ್ಗದಲ್ಲಿ ಸಾಗಿ ನದಿ, ಕಾಡಿನಲ್ಲಿ ಸಂಕಷ್ಟಕ್ಕೆ ಸಿಲುಕಿದ ಘಟನೆಗಳು ನಡೆದಿದೆ. ಇದೀಗ ಗೂಗಲ್ ಮ್ಯಾಪ್ ನಂಬಿದ ಇಬ್ಬರು ವಿದೇಶಿಗರಿಗೆ ನೇಪಾಳ ಎಂದು ಉತ್ತರ ಪ್ರದೇಶದ ಬರೇಲಿ ಸುತ್ತಾಡಿಸಿದ ಘಟನೆ ನಡೆದಿದೆ. ಫ್ರೆಂಚ್‌ನ ಇಬ್ಬರು ಪ್ರವಾಸಿಗರು ಸೈಕಲ್ ಮೂಲಕ ದೆಹಲಿಯಿಂದ ನೇಪಾಳಕ್ಕೆ ಹೊರಟಿದ್ದಾರೆ. ಗೂಗಲ್ ಮ್ಯಾಪ್ ತೋರಿಸಿದ ಮಾರ್ಗದಲ್ಲಿ ಹೊರಟ ಈ ವಿದೇಶಿಗರು ನೇಪಾಳಕ್ಕೆ ತೆರಳುವ ಬದಲು ಉತ್ತರ ಪ್ರದೇಶದ ಬರೇಲಿ ಸುತ್ತಾಡಿದ ಘಟನೆ ನಡೆದಿದೆ.
ಫ್ರಾನ್ಸ್‌ನ ಬ್ರೈನ್ ಜಾಕ್ವೆಸ್ ಗಿಲ್‌ಬರ್ಟ್ ಹಾಗೂ ಸೆಬಾಸ್ಟಿಯನ್ ಫ್ರಾಂಕೋಯಿಸ್ ಗೆಬ್ರಿಯಲ್ ಎಂಬ ಇಬ್ಬರು ಜನವರಿ 7 ರಂದು ದೆಹಲಿಗೆ ಆಗಮಿಸಿದ್ದಾರೆ. ಫ್ರಾನ್ಸ್‌ನಿಂದ ದೆಹಲಿಗೆ ವಿಮಾನದ ಮೂಲಕ ದೆಹಲಿಗೆ ಆಗಮಿಸಿದ ಇಬ್ಬರು ಸೈಕಲ್ ಮೂಲಕ ನೇಪಾಳಕ್ಕೆ ತೆರಳುವ ಪ್ಲಾನ್ ಹಾಕಿಕೊಂಡಿದ್ದಾರೆ. ಇದಕ್ಕಾಗಿ ಫ್ರಾನ್ಸ್‌ನಿಂದ ಸೈಕಲ್ ಜೊತೆಯಲ್ಲೇ ಆಗಮಿಸಿದ್ದಾರೆ. ಸೈಕಲ್ ಮೂಲಕ ದೆಹಲಿಯಿಂದ ನೇಪಾಳ ಪ್ರವಾಸ ಮಾಡಿ ಬಳಿಕ ಕಾಠ್ಮಂಡುವಿನಿಂದ ಫ್ರಾನ್ಸ್‌ಗೆ ತೆರಳಲು ಪ್ಲಾನ್ ಹಾಕಿಕೊಂಡಿದ್ದಾರೆ.
ಗೂಗಲ್ ಮ್ಯಾಪ್ ನಂಬಿ ಆರೋಪಿ ಅರೆಸ್ಟ್ ಮಾಡಲು ಹೋಗಿ ತಾವೇ ಅರೆಸ್ಟ್ ಆದ ಪೊಲೀಸ್
ಎಲ್ಲಾ ತಯಾರಿಯೊಂದಿಗೆ ನವದೆಹಲಿಗೆ ಆಗಮಿಸಿದ ಇಬ್ಬರು ವಿದೇಶಿಗರು ಜನವರಿ 7 ರಂದು ದೆಹಲಿಯಲ್ಲೇ ತಂಗಿದ್ದಾರೆ. ಮರು ದಿನ ಅಂದರೆ ಜನವರಿ 8 ರಂದು ನವದೆಹಲಿಯಿಂದ ಸೈಕಲ್ ಮೂಲಕ ಪ್ರಯಾಣ ಆರಂಭಿಸಿದ್ದಾರೆ. ನೇಪಾಳ ರಾಜಧಾನಿ ಕಾಠ್ಮಂಡುವಿಗೆ ತೆರಳಲು ಗೂಗಲ್ ಮ್ಯಾಪ್ ಹಾಕಿದ್ದಾರೆ. ಸುದೀರ್ಘ ಸೈಕಲ್ ಪ್ರಯಾಣವಾಗಿರುವ ಕಾರಣ ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ. ಗೂಗಲ್ ಮ್ಯಾಪ್ ತೋರಿಸಿದ ಮಾರ್ಗದ ಮೂಲಕ ಪ್ರಯಾಣ ಆರಂಭಿಸಿದ್ದಾರೆ.
ಪಿಲಿಭಿತ್‌ನ ತಂಕಾಪುರ ಮೂಲಕ ನೇಪಾಳಕ್ಕೆ ಈ ವಿದೇಶಿಗರು ತೆರಳಬೇಕಿತ್ತು. ಆದರೆ ಪ್ರವಾಸಿಗರು ಸಾಗುತ್ತಿದ್ದಂತೆ ಗೂಗಲ್ ಮ್ಯಾಪ್ ರಿರೂಟ್ ಮಾಡಿದೆ. ಈ ಮೂಲಕ ಶಾರ್ಟ್ ಕಟ್ ದಾರಿಯೊಂದನ್ನು ತೋರಿಸಿದೆ. ಇದು ಬರೇಲಿಯ ಬೆಹರಿ ಮೂಲಕ ಸಾಗುವ ಮಾರ್ಗವನ್ನು ತೋರಿಸಿದೆ. ಭಾರತದ ಮಾರ್ಗ, ಭೌಗೋಳಿಕ ಪ್ರದೇಶಗಳ ಕುರಿತು ಯಾವುದೇ ಅರಿವಿಲ್ಲದ ಇಬ್ಬರು ವಿದೇಶಿ ಪ್ರವಾಸಿಗರು ಗೂಗಲ್ ಮ್ಯಾಪ್ ತೋರಿಸಿದ ಮಾರ್ಗದ ಮೂಲಕ ಸಾಗಿದ್ದಾರೆ. ಆದರೆ ಇದು ತಪ್ಪಾಗಿದೆ.
ರಾತ್ರಿ 11 ಗಂಟೆಗೆ ಬರೇಲಿಯ ಚುರಾಲಿ ಜಲಾಶದ ಬಳಿ ದಾರಿ ಕಾಣದೇ ಸುತ್ತು ಹಾಕಿದ್ದಾರೆ. ಸ್ಥಳೀಯರು ಇಬ್ಬರು ರಾತ್ರಿ ವೇಳೆ ಪರದಾಡುತ್ತಿರುವುದು ಗಮನಿಸಿದ್ದಾರೆ. ಹೀಗಾಗಿ ಸ್ಥಳೀಯರು ಆಗಮಿಸಿ ಮಾಹಿತಿ ಕೇಳಿದ್ದಾರೆ. ಆದರೆ ಭಾಷೆ ಅರ್ಥವಾಗದ ಕಾರಣ ಸ್ಥಳೀಯರು ಚುರಾಲಿ ಔಟ್‌ಪೋಸ್ಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರು ವಿದೇಶಿ ಪ್ರವಾಸಿಗರಿಂದ ಮಾಹಿತಿ ಪಡೆದಿದ್ದಾರೆ. ಬಳಿಕ ಇಬ್ಬರನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರ ಮನೆಯಲ್ಲಿ ರಾತ್ರಿ ಉಳಿದುಕೊಳ್ಳಲು ಪೊಲೀಸರು ವ್ಯವಸ್ಥೆ ಮಾಡಿದ್ದಾರೆ.
ಮರು ದಿನ ಬೆಳಗ್ಗೆ ಪೊಲೀಸರು ಪಂಚಾಯಿತಿ ಅಧ್ಯಕ್ಷರ ಮನೆಗೆ ಆಗಮಿಸಿ ಇಬ್ಬರು ವಿದೇಶಿಗರಿಗೆ ಸರಿಯಾಗ ದಾರಿ ಕುರಿತು ಮಾರ್ಗದರ್ಶನ ನೀಡಿದ್ದಾರೆ. ಬಳಿಕ ಇಬ್ಬರು ವಿದೇಶಿಗರನ್ನು ನೇಪಾಳ ಪ್ರಯಾಣಕ್ಕೆ ಕಳುಹಿಸಿಕೊಟ್ಟ ಘಟನೆ ನಡೆದಿದೆ. ಗೂಗಲ್ ಮ್ಯಾಪ್ ಮೂಲಕ ದಾರಿ ತಪ್ಪಿದ ಹಲವು ಘಟನೆಗಳು ಈಗಾಗಲೇ ವರದಿಯಾಗಿದೆ. ಇತ್ತೀಚೆಗೆ ಗೂಗಲ್ ಮ್ಯಾಪ್ ನಂಬಿ ಕಾಮಗಾರಿ ನಡೆಯುತ್ತಿದ್ದ ಸೇತುವೆ ಮೂಲಕ ಸಾಗಿದ ಪ್ರಯಾಣಿಕರು ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ನಡೆದಿತ್ತು. ಈ ಘಟನೆ ಸಂಬಂಧ ಗೂಗಲ್ ಮ್ಯಾಪ್ ವಿರುದ್ದವೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಗೂಗಲ್ ಮ್ಯಾಪ್ ನಂಬಿ ಕಾಲುವೆ ಬಿದ್ದ ಕಾರು, ಪ್ರಯಾಣಿಕರ ಜೀವ ಉಳಿಸಿದ ಟಾಟಾ ಟಿಗೋರ್!