ರಚಿತಾ ರಾಮ್ ಮುಂದೆ ಅತ್ತಿದ್ರು ಸುಂದರ್‌ ರಾಜ್; ಆದ್ರೆ ಮ್ಯಾಟರ್ ಮೇಘನಾ ರಾಜ್‌!

ನಟಿಯರಾದ ರಶ್ಮಿಕಾ ಮಂದಣ್ಣ, ಶ್ರೀಲೀಲಾ ಸೇರಿದಂತೆ ಹಲವರು ಪರಭಾಷೆಗಳಲ್ಲೂ ಮಿಂಚುತ್ತಿದ್ದಾರೆ. ಈಗ ಅದೇ ಸಾಲಿಗೆ ಸೇರಲಿರುವ ರಚಿತಾ ರಾಮ್ ರಜನಿಕಾಂತ್ ಮುಂಬರುವ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಾಗಂತ ರಚಿತಾ ರಾಮ್ ಕನ್ನಡ ಸಿನಿಮಾಗಳನ್ನು ಬಿಟ್ಟು ಪರಭಾಷೆಗಳಲ್ಲಿ ಬ್ಯುಸಿ ಆಗಿಲ್ಲ...

Sandalwood actress Rachita Ram talk video viral in social media srb

ನಟಿ ರಚಿತಾ ರಾಮ್ (Rachita Ram) ಕನ್ನಡಿಗರಿಗೆ ಚಿರಪರಿಚಿತ.. ಬರೋಬ್ಬರಿ ದಶಕಗಳ ಕಾಲ ಕನ್ನಡ ಸಿನಿಪ್ರೇಕ್ಷಕರಿಗೆ ತಮ್ಮ ನಟನೆಯ ಸಿನಿಮಾ ಮೂಲಕ ಮನರಂಜನೆ ನೀಡಿದ್ದಾರೆ ನಟಿ ರಚಿತಾ ರಾಮ್. ದರ್ಶನ್ ನಟನೆಯ ಬುಲ್ ಬುಲ್ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಚಿತಾ ಅವರು ಬಳಿಕ ಹಿಂತಿರುಗಿ ನೋಡಿದ್ದೇ ಇಲ್ಲ. ಹತ್ತು ವರ್ಷದ ಬಳಿಕ, ಇಂದಿಗೂ ಕೂಡ ರಚಿತಾ ರಾಮ್ ಅವರು ಬೇಡಿಕೆಯ ನಟಿಯಾಗಿಯೇ ಉಳಿದುಕೊಂಡಿದ್ದಾರೆ. ಅದು ನಿಜವಾಗಿಯೇ ಗ್ರೇಟ್‌!

ಇಂಥ ನಟಿ ರಚಿತಾ ರಾಮ್ ಅವರು ಕಳೆದ ಹತ್ತು ವರ್ಷಗಳಿಂದಲೂ ಕನ್ನಡ ಸಿನಿಮಾಗಳಲ್ಲೇ ಅಭಿನಯಿಸಿದ್ದಾರೆ. ಇತ್ತೀಚೆಗೆ, ಪ್ಯಾನ್ ಇಂಡಿಯಾ ಟ್ರೆಂಡ್ ಸಿನಿಮಾಗಳು ಬರಲು ಶುರುವಾದ ಮೇಲೆ, ಕನ್ನಡದ ಕಲಾವಿದರೆಲ್ಲರೂ ಹೆಚ್ಚುಕಡಿಮೆ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅದು ನಟರಾದ ಶಿವರಾಜ್‌ಕುಮಾರ್ ಅವರಿರಬಹುದು ಅಥವಾ ಡಾಲಿ ಧನಂಜಯ್ ಕೂಡ ಇರಬಹುದು. 

ಸಿಡ್ನೀಲಿ ಬಾಲ್ಯದ ಆಸೆ ಈಡೇರಿಸಿಕೊಂಡ ಚಂದನ್ ಶೆಟ್ಟಿ, ಹೊಡೀತು ಜಾಕ್‌ಪಾಟ್‌ ಎಂದ ನೆಟ್ಟಿಗರು!

ನಟಿಯರಾದ ರಶ್ಮಿಕಾ ಮಂದಣ್ಣ, ಶ್ರೀಲೀಲಾ ಸೇರಿದಂತೆ ಹಲವರು ಪರಭಾಷೆಗಳಲ್ಲೂ ಮಿಂಚುತ್ತಿದ್ದಾರೆ. ಈಗ ಅದೇ ಸಾಲಿಗೆ ಸೇರಲಿರುವ ರಚಿತಾ ರಾಮ್ ರಜನಿಕಾಂತ್ ಮುಂಬರುವ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಾಗಂತ ರಚಿತಾ ರಾಮ್ ಕನ್ನಡ ಸಿನಿಮಾಗಳನ್ನು ಬಿಟ್ಟು ಪರಭಾಷೆಗಳಲ್ಲಿ ಬ್ಯುಸಿ ಆಗಿಲ್ಲ. ಬದಲಿಗೆ ಕನ್ನಡ ಸಿನಿಮಾಗಳಾದ 'ಕಲ್ಟ್, ಅಯೋಗ್ಯ 2, ಸೇರಿದಂತೆ, ತಮಿಳಿನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಕನ್ನಡ ಅವರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹಾಗಿದ್ದರೆ ಅದರಲ್ಲೇನಿದೆ?

'ಇವ್ರು ನಮ್ ತಂದೆ ಪಾತ್ರ ಅವ್ರು ಮಾಡ್ತಾ ಇದ್ರು.. ನಾನು ಮಗ್ಳು, ಅವ್ರು ತಂದೆ ತರನೇ ಇದ್ವಿ.. ಆಗಿನ್ನು ಬಹುಶಃ ಮೇಘನಾ ಮದ್ವೆ ಆಗಿರ್ಲಿಲ್ಲ, ಎರಡು ತಿಂಗಳು ಇತ್ತು ಅನ್ಸುತ್ತೆ.. ಆಗ ಹೆಂಗೆ ನಡಿತಿದೆ ಪ್ರಿಪರೇಶನ್ಸ್ ಅಂತ ಕೇಳ್ತಾ ಇದ್ದೆ, ಆಗ ಅವ್ರ ಕಣ್ಣಲ್ಲಿ ನೀರು ಬರ್ತಾ ಇತ್ತು.. ಲಾಸ್ಟ್ ಕ್ಲೈಮ್ಯಾಕ್ಸ್‌ನಲ್ಲಿ ನಮ್ಮ ಮದ್ವೆ ಆಗುತ್ತೆ.. ಆಗ ನಿಜವಾಗ್ಲೂ ಅವ್ರು ಅತ್ತೇಬಿಟ್ಟಿದ್ದರು.. ಯಾಕಂದ್ರೆ ಅವ್ರ ರಿಯಲ್ ಲೈಫ್ ಮಗಳು, ಅವ್ರದ್ದು ಕೂಡ ಮದ್ವೆ ಆಗ್ತಿತ್ತು ಆವಾಗ' ಎಂದಿದ್ದಾರೆ ರಚಿತಾ ರಾಮ್. 

ರಜನಿಕಾಂತ್: ನೀನು ಹೀಗೆ ಬಂದ್ರೆ ಚಪ್ಪಲಿಯಲ್ಲಿ ಹೊಡಿತೀನಿ ಅಂದಿದ್ರು ನಂಗೆ!

ಈಗ ಬಹುತೇಕ ಎಲ್ಲರಿಗೂ ಅರ್ಥವಾಗಿದೆ, ರಚಿತಾ ಮಾತನಾಡಿದ್ದು ಬೇರಾರ ಬಗ್ಗೆಯೂ ಅಲ್ಲ, ನಟ ಸುಂದರ್‌ ರಾಜ್ ಅವರ ಬಗ್ಗ ಎಂಬುದು. ಏಕೆಂದರೆ, ಮೇಘನಾ ರಾಜ್ ತಂದೆ ಸುಂದರ್‌ ರಾಜ್ ಹಾಗೂ ತಾಯಿ ಪ್ರಮಿಳಾ ಜೊಷಾಯ್ ಎಂಬುದು ಹಲವರಿಗೆ ಗೊತ್ತು. ನಟ ಸುಂದರ್‌ ರಾಜ್ ಹಾಗೂ ನಟಿ ರಚಿತಾ ರಾಮ್ ಅವರು ಒಂದು ಸಿನಿಮಾದಲ್ಲಿ ತಂದೆ-ಮಗಳ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ರಚಿತಾ ರಾಮ್ ಮಾತನ್ನಾಡಿದ್ದಾರೆ. 

 

 

Latest Videos
Follow Us:
Download App:
  • android
  • ios