ಸಿಮ್ ಕಾರ್ಡ್ ವ್ಯಾಲಿಡಿಟಿ ಕುರಿತಾದ ಯಾವುದೇ ನಿಯಮ ಬದಲಾಗಿಲ್ಲ: ಸ್ಪಷ್ಟನೆ ನೀಡಿದ TRAI
ಸಿಮ್ ಕಾರ್ಡ್ ವ್ಯಾಲಿಡಿಟಿ ಬಗ್ಗೆ ಹೊಸ ನಿಯಮಗಳನ್ನು ಜಾರಿಗೊಳಿಸಿಲ್ಲ ಎಂದು ಟ್ರಾಯ್ ಸ್ಪಷ್ಟಪಡಿಸಿದೆ. 90 ದಿನಗಳ ರಿಚಾರ್ಜ್ ಇಲ್ಲದ ಸಿಮ್ ಆಕ್ಟೀವ್ ಇರುತ್ತದೆ ಎಂಬ ಸುದ್ದಿಗಳನ್ನು ಅಲ್ಲಗಳೆಯಲಾಗಿದೆ. 20 ರೂ. ಕನಿಷ್ಠ ಬ್ಯಾಲೆನ್ಸ್ ಇದ್ದರೆ 90 ದಿನಗಳವರೆಗೆ ಸಿಮ್ ನಿಷ್ಕ್ರಿಯಗೊಳ್ಳುವುದಿಲ್ಲ ಎಂಬ ಹಳೆಯ ನಿಯಮವನ್ನೇ ಮುಂದುವರಿಸಲಾಗಿದೆ.
ನವದೆಹಲಿ (ಜ.23): ಸಿಮ್ ಕಾರ್ಡ್ ವ್ಯಾಲಿಡಿಟಿಯ ಬಗ್ಗೆ ಪತ್ರಿಕೆಗಳು, ಸೋಶಿಯಲ್ ಮೀಡಿಯಾ ಹಾಗೂ ಟಿವಿಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಗಳಿಗೆ ಸಂಬಂಧಪಟ್ಟಂತೆ ಭಾರತೀಯ ಟೆಲಿಕಾಂ ಪ್ರಾಧಿಕಾರಿ ಸ್ಒಷ್ಟನೆಯನ್ನು ನೀಡಿದೆ. ಸಿಮ್ ಕಾರ್ಡ್ ವ್ಯಾಲಿಡಿಟಿಯ ಬಗ್ಗೆ ಟ್ರಾಯ್ ಹೊಸ ನಿಮಯವನ್ನು ಜಾರಿ ಮಾಡಿದೆ ಎಂದು ವರದಿಯಾಗಿತ್ತು. ಅದರಂತೆ, ಹೊಸ ನಿಯಮದ ಪ್ರಕಾರ ರಿಚಾರ್ಜ್ ಇಲ್ಲದೇ ಯಾವುದೇ ಸಿಮ್‌ಅನ್ನು 90 ದಿನಗಳ ಕಾಲ ಆಕ್ಟೀವ್ ಆಗಿ ಇಡಬಹುದು ಎನ್ನಲಾಗಿತ್ತು. ಆದರೆ, ಟ್ರಾಯ್ ಈ ಸುದ್ದಿಯನ್ನು ಅಲ್ಲಗಳೆದಿದೆ. ಇದು ಮಿಸ್‌ಲೀಡಿಂಗ್ ಆಗಿದೆ ಎಂದು ತಿಳಿಸಿದೆ. ಸಿಮ್ ಕಾರ್ಡ್‌ನ ವ್ಯಾಲಿಡಿಟಿಯ ಬಗ್ಗೆ ಟ್ರಾಯ್ ಯಾವುದೇ ಹೊಸ ಆದೇಶವನ್ನು ನೀಡಿಲ್ಲ ಎಂದು ತಿಳಿಸಿದೆ.
ಫ್ಯಾಕ್ಟ್ ಚೆಕ್ ಮೂಲಕ ತಪ್ಪು ಮಾಹಿತಿಯ ಬಗ್ಗೆ ತಿಳಿಸಿದ ಟ್ರಾಯ್: ಜನವರಿ 23 ರಂದು ಎಕ್ಸ್‌ನಲ್ಲಿ ಈ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿರುವ ಟ್ರಾಯ್, ಇದು ತಪ್ಪುದಾರಿಗೆ ಎಳೆಯುವ ಮಾಹಿತಿ ಎಂದು ತಿಳಿಸಿದೆ. ಫ್ಯಾಕ್ಟ್‌ಚೆಕ್ ಟೂಲ್ ಬಳಸಿ ವಿವಿಧ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿ ಮಿಸ್‌ಲೀಡಿಂಗ್ ಎಂದು ತಿಳಿಸಿದೆ.
ದೂರಸಂಪರ್ಕ ಗ್ರಾಹಕ ಸಂರಕ್ಷಣಾ ನಿಯಮಗಳು (TCPR), ಆರನೇ ತಿದ್ದುಪಡಿಯ ಅಡಿಯಲ್ಲಿ ಅಸ್ತಿತ್ವದಲ್ಲಿರುವ TRAI ನಿಯಮಗಳ ಪ್ರಕಾರ, ಯಾವುದೇ ಸಿಮ್‌ನಲ್ಲಿ 20 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ನಿರ್ವಹಿಸಿದರೆ, ಇಂಥ ಪ್ರಿಪೇಯ್ಡ್ ಸಿಮ್ ಕಾರ್ಡ್‌ಗಳನ್ನು ಕನಿಷ್ಠ 90 ದಿನಗಳ ಕಾಲ ನಿಷ್ಕ್ರೀಯಗೊಳಿಸಲಾಗುವುದಿಲ್ಲ. 11 ವರ್ಷಗಳ ಹಿಂದೆ ಪರಿಚಯಿಸಲಾದ ಈ ನಿಯಮವು, ಕನಿಷ್ಠ ಬ್ಯಾಲೆನ್ಸ್ ಅಗತ್ಯವನ್ನು ಪೂರೈಸಿದರೆ, ಬಳಕೆಯಾಗದ ಅವಧಿಗಳಲ್ಲಿಯೂ ಸಹ ಸಂಖ್ಯೆಯನ್ನು ಸ್ವಯಂಚಾಲಿತವಾಗಿ ಉಳಿಸಿಕೊಳ್ಳುವುದನ್ನು ಖಚಿತಪಡಿಸುತ್ತದೆ ಎಂದು TRAI ಸ್ಪಷ್ಟಪಡಿಸಿದೆ.
ಕಡಿಮೆ ಬೆಲೆಯ ವಾಯ್ಸ್-ಎಸ್‌ಎಂಎಸ್ ಪ್ಲ್ಯಾನ್ ಲಾಂಚ್ ಮಾಡಿದ ವೊಡಾಫೋನ್ ಐಡಿಯಾ
ಇನ್ನು ಗ್ರಾಹಕರನ್ನು ಮತ್ತಷ್ಟು ಸಬಲೀಕರಣಗೊಳಿಸಲು, TRAI ಸೇವಾ-ನಿರ್ದಿಷ್ಟ ವೋಚರ್‌ಗಳನ್ನು ಪರಿಚಯಿಸುವುದನ್ನು ಕಡ್ಡಾಯಗೊಳಿಸಿದೆ. ಇವು ಬಳಕೆದಾರರಿಗೆ ಅಗತ್ಯವಿರುವ ಸೇವೆಗಳಿಗೆ ಮಾತ್ರ ಪಾವತಿಸಲು ಅನುವು ಮಾಡಿಕೊಡುತ್ತದೆ. ಉದಾಹರಣೆಗೆ, ಕೇವಲ ಧ್ವನಿ ಅಥವಾ SMS ಸೇವೆಗಳ ಅಗತ್ಯವಿರುವ ಗ್ರಾಹಕರು ಆ ವೈಶಿಷ್ಟ್ಯಗಳಿಗೆ ಪ್ರತ್ಯೇಕವಾದ ಪ್ಯಾಕ್‌ಗಳನ್ನು ಆಯ್ಕೆ ಮಾಡಬಹುದು, ಡೇಟಾಗೆ ಅನಗತ್ಯ ಶುಲ್ಕಗಳನ್ನು ತಪ್ಪಿಸಬಹುದು. ಇಂಥ ಪ್ಯಾಕ್‌ಗಳನ್ನು ಈಗಾಗಲೇ ಟೆಲಿಕಾಂ ಆಪರೇಟರ್‌ಗಳು ಪರಿಚಯಿಸಿದ್ದಾರೆ.