15 ಲಕ್ಷಕ್ಕಿಂತ ಕಮ್ಮಿ ಆದಾಯಕ್ಕೆ ತೆರಿಗೆ ವಿನಾಯಿತಿ ಸಾಧ್ಯತೆ

2025ರ ಕೇಂದ್ರ ಬಜೆಟ್‌ನ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ವಾರ್ಷಿಕ 10-15 ಲಕ್ಷ ರು.ಗಿಂತ ಕಡಿಮೆ ಆದಾಯ ಇರುವವರಿಗೆ ತೆರಿಗೆ ವಿನಾಯಿತಿಯ ಸಿಹಿಸುದ್ದಿ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.

Tax Relief For Those Earning Below Rs 15 Lakh Likely In Budget 2025

ನವದೆಹಲಿ (ಜ.25): 2025ರ ಕೇಂದ್ರ ಬಜೆಟ್‌ನ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ವಾರ್ಷಿಕ 10-15 ಲಕ್ಷ ರು.ಗಿಂತ ಕಡಿಮೆ ಆದಾಯ ಇರುವವರಿಗೆ ತೆರಿಗೆ ವಿನಾಯಿತಿಯ ಸಿಹಿಸುದ್ದಿ ಸಿಗಲಿದೆ ಎಂದು ಮೂಲಗಳು ತಿಳಿಸಿವೆ. ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇ) ಹಾಗೂ ಮೂಲಸೌಕರ್ಯಗಳಿಗೆ ಬಜೆಟ್ ಹೆಚ್ಚಿನ ಗಮನ ಹರಿಸಲಿದೆ ಎನ್ನಲಾಗಿದೆ. 

ಮಧ್ಯಮ ವರ್ಗದವರಿಗೆ ತೆರಿಗೆಯಲ್ಲಿ ವಿನಾಯಿತಿ ಸಿಗಲಿದ್ದು, ಇದರಿಂದ ಜನರ ಖರ್ಚಿನ ವೆಚ್ಚ ಹೆಚ್ಚಾಗಿ ಆ ಮೂಲಕ ಆರ್ಥಿಕ ಯಂತ್ರಕ್ಕೆ ಭಾರಿ ಲಾಭವಾಗುವ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಅಲ್ಲದೆ, ಭಾರತೀಯ ಕಂಪನಿಗಳು ಜಾಗತಿಕ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರಲು ಎಐನ ಬಳಕೆಯ ಕುರಿತಾಗಿಯೂ ಬಜೆಟ್ ಗಮನ ಹರಿಸಲಿದೆ. ಎಐನಿಂದ ಉದ್ಯೋಗಾವಕಾಶ ಕ್ಷೀಣಿಸುತ್ತದೆ ಎಂಬ ಕಳವಳದ ನಡುವೆ ಈ ಸಂಗತಿ ಪ್ರಾಮುಖ್ಯತೆ ಪಡೆದಿದೆ.

ಬಜೆಟ್‌ನಲ್ಲಿ ರೈಲು ಟಿಕೆಟ್‌ ದರ ಏರಿಕೆ ಆಗಲಿದ್ಯಾ? ಸರ್ಕಾರ ನೀಡಿರುವ ಸೂಚನೆ ಏನು..

ಹೊಸ ಐಟಿ ಕಾಯ್ದೆ ಮಂಡನೆ ನಿರೀಕ್ಷೆ: ಈ ಬಾರಿಯ ಸಂಸತ್ತಿನ ಬಜೆಟ್‌ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಹೊಸ ಆದಾಯ ತೆರಿಗೆ ಮಸೂದೆಯನ್ನು ಮಂಡಿಸಲು ಸಾಧ್ಯತೆ ಇದ್ದು, ಈ ಮಸೂದೆಯು ಈಗಿರುವ ತೆರಿಗೆ ಕಾನೂನನ್ನು ಸರಳಗೊಳಿಸುವ ಮತ್ತು ಒಟ್ಟಾರೆ ಐಟಿ ಕಾನೂನಿನ ಪುಟಗಳನ್ನು ಶೇ.60ರಷ್ಟು ಕಡಿತಗೊಳಿಸುವ ಗುರಿ ಹೊಂದಿದೆ. ಆರು ದಶಕಗಳಷ್ಟು ಹಳೆಯ 1961ರ ಆದಾಯ ತೆರಿಗೆ ಕಾನೂನನ್ನು ಆರು ತಿಂಗಳೊಳಗೆ ಸಮಗ್ರವಾಗಿ ಪುನರ್‌ ಪರಿಶೀಲನೆ ನಡೆಸುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಈ ಹಿಂದೆ ಹೇಳಿದ್ದರು. 

ಇದು ಸಂಪೂರ್ಣವಾಗಿ ಹೊಸ ಮಸೂದೆಯಾಗಿದ್ದು, ಈಗಾಗಲೇ ಕಾನೂನು ಸಚಿವಾಲಯ ಕರಡು ಮಸೂದೆಯನ್ನು ಅಂತಿಮಗೊಳಿಸಿದೆ. ಇದೇ ಬಜೆಟ್‌ ಅಧಿವೇಶನದ 2ನೇ ಭಾಗದಲ್ಲಿ ಮಸೂದೆ ಮಂಡನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಬಜೆಟ್‌ ಅಧಿವೇಶನ ಜ.31ರಿಂದ ಏಪ್ರಿಲ್‌ 4ರ ವರೆಗೆ ನಡೆಯಲಿದೆ. ಇದರಲ್ಲಿ ಮೊದಲ ಹಂತ ಜ.31ರಿಂದ ಫೆಬ್ರವರಿ 13ರ ವರೆಗೆ ನಡೆಯಲಿದ್ದು, ಫೆ.1ರಂದು ಕೇಂದ್ರ ಬಜೆಟ್‌ ಮಂಡನೆಯಾಗಲಿದೆ. ಆ ಬಳಿಕ ಮಾ.10ರಿಂದ ಏ.4ರ ವರೆಗೆ ಎರಡನೇ ಹಂತದ ಅಧಿವೇಶನ ನಡೆಯಲಿದೆ. ಸಿಬಿಡಿಟಿಯು ಆಂತರಿಕ ಸಮಿತಿಯೊಂದನ್ನು ರಚಿಸಿದ್ದು, ಇದು ಐಟಿ ಕಾಯ್ದೆಯು ಸರಳವಾಗಿರಬೇಕು, ಸಂಕ್ಷಿಪ್ತವಾಗಿರಬೇಕು ಮತ್ತು ಸುಲಭವಾಗಿ ಅರ್ಥವಾಗುವಂತಿರಬೇಕು. 

ಬಜೆಟ್ ಅಧಿವೇಶನದಲ್ಲಿ ಹೊಸ ನೇರ ತೆರಿಗೆ ಮಸೂದೆ ಮಂಡನೆ ಸಾಧ್ಯತೆ, ಇದರಿಂದ ಯಾರಿಗೆ ಲಾಭ?

ಈ ಮೂಲಕ ವಿವಾದಗಳು, ದಾವೆಗಳು ಕಡಿಮೆಯಾಗಿ ಮತ್ತು ತೆರಿಗೆದಾರರಿಗೆ ತೆರಿಗೆ ಕುರಿತು ಖಚಿತತೆ ಬರುವ ರೀತಿಯಲ್ಲಿ ಹೊಸ ಕಾಯ್ದೆ ಇರುವಂತೆ ಮೇಲ್ವಿಚಾರಣೆ ನಡೆಸುತ್ತಿದೆ. 22 ವಿಶೇಷ ಉಪ ಸಮಿತಿಗಳು ಐಟಿ ಕಾಯ್ದೆಯ ವಿವಿಧ ಅಂಶಗಳ ಕುರಿತ ಪುನರ್‌ ಪರಿಶೀಲನೆಗೆಂದೇ ರಚಿಸಲಾಗಿದೆ. ಇನ್ನು ಕಾಯ್ದೆಯಲ್ಲಿ ಬಳಸುವ ಭಾಷೆಯನ್ನು ಸರಳಗೊಳಿಸುವಿಕೆ, ವಿವಾದಗಳ ಕಡಿತ ಮತ್ತು ಅನಗತ್ಯ ಅಂಶಗಳನ್ನು ಕಾಯ್ದೆಯಿಂದ ತೆಗೆದುಹಾಕುವುದು ಸೇರಿ ನಾಲ್ಕು ವಿಭಾಗಗಳಲ್ಲಿ ಸುಧಾರಣೆಗೆ ಸಾರ್ವಜನಿಕರಿಂದ ಅಭಿಪ್ರಾಯಗಳನ್ನೂ ಆಹ್ವಾನಿಸಲಾಗಿತ್ತು. ಅದರಂತೆ ಆದಾಯ ತೆರಿಗೆ ಇಲಾಖೆಯು 6,500 ಸಲಹೆಗಳನ್ನು ಸ್ವೀಕರಿಸಿದೆ. ಇದನ್ನು ಆಧರಿಸಿ ಕೆಲ ನಿಬಂಧನೆಗಳು ಮತ್ತು ಪರಿಚ್ಛೇದಗಳನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ.

Latest Videos
Follow Us:
Download App:
  • android
  • ios