ತೈವಾನ್‌ ಸ್ವಾತಂತ್ರ್ಯವನ್ನು ಘೋಷಿಸಿಕೊಂಡರೆ ಅಥವಾ ಪ್ರತ್ಯೇಕಿಸುವ ಯತ್ನ ನಡೆದರೆ ಅದರ ವಿರುದ್ಧ ಯುದ್ಧ ಸಾರಲು ಚೀನಾ ಹಿಂಜರೆಯುವುದಿಲ್ಲ ಎಂದು ಚೀನಾದ ರಕ್ಷಣಾ ಸಚಿವರು ಎಚ್ಚರಿಕೆ ನೀಡಿದ್ದಾರೆ.

ವಾಷಿಂಗ್ಟನ್‌ (ಜೂ.11): ತೈವಾನ್‌ ಸ್ವಾತಂತ್ರ್ಯವನ್ನು ಘೋಷಿಸಿಕೊಂಡರೆ ಅಥವಾ ಪ್ರತ್ಯೇಕಿಸುವ ಯತ್ನ ನಡೆದರೆ ಅದರ ವಿರುದ್ಧ ಯುದ್ಧ ಸಾರಲು ಚೀನಾ ಹಿಂಜರೆಯುವುದಿಲ್ಲ ಎಂದು ಚೀನಾದ ರಕ್ಷಣಾ ಸಚಿವರು ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ತೈವಾನ್‌ ಸ್ವಾತಂತ್ರ್ಯಕ್ಕಾಗಿ ಬ್ಯಾಟ್‌ ಬೀಸುತ್ತಿರುವ ಅಮೆರಿಕದ ವಿರುದ್ಧ ಗುಡುಗಿದ್ದಾರೆ. ಅಮೆರಿಕದ ರಕ್ಷಣಾ ಸಚಿವ ಲೊಯ್ಡ್‌ ಆಸ್ಟಿನ್‌ ಅವರೊಂದಿಗೆ ಮುಖಾಮುಖಿ ಮಾತುಕತೆ ನಡೆಸಿದ ಚೀನಾದ ರಕ್ಷಣಾ ಸಚಿವ ವೈ ಫೆಂಗೇ, ‘ಚೀನಾದಿಂದ ತೈವಾನ್‌ ಅನ್ನು ಪ್ರತ್ಯೇಕಗೊಳಿಸುವ ಸಾಹಸಕ್ಕೆ ಯಾರಾದರೂ ಕೈ ಹಾಕಿದರೆ, ಚೀನಾ ಸೇನೆ ಯಾವುದೇ ಕಾರಣಕ್ಕೂ ಯುದ್ಧ ಸಾರಲು ಹಿಂಜರೆಯುವುದಿಲ್ಲ’ ಎಂದು ಹೇಳಿದ್ದಾರೆ.

ತೈವಾನ್‌ ಸ್ವತಂತ್ರ ದೇಶವಾಗಿದ್ದು, ಚೀನಾ ಈ ದ್ವೀಪದ ಮೇಲೆ ಸತತ ದಾಳಿ ನಡೆಸಿ ಸಂಪೂರ್ಣವಾಗಿ ತನ್ನ ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅಮೆರಿಕದ ಸಚಿವರು ತೈವಾನ್‌ ವಿರುದ್ಧ ಆಕ್ರಮಣವನ್ನು ನಿಲ್ಲಿಸಬೇಕು ಎಂದು ಚರ್ಚೆಯಲ್ಲಿ ಪ್ರಸ್ತಾಪ ಮಾಡಿದ್ದರು. ಆಗ ಫೆಂಗೇ, ‘ತೈವಾನ್‌ ಚೀನಾದ ಭಾಗ. ಚೀನಾ ತನ್ನ ದೇಶದ ಏಕತೆ ಕಾಪಾಡಿಕೊಳ್ಳಲು ಬದ್ಧವಾಗಿದೆ. ಚೀನಾದಿಂದ ತೈವಾನ್‌ ಅನ್ನು ಪ್ರತ್ಯೇಕಿಸುವ ಯಾವುದೇ ಸಂಚು ಸಫಲವಾಗಲು ಬಿಡುವುದಿಲ್ಲ’ ಎಂದರು.

4G in Pangong Lake ಲಡಾಖ್ ಪ್ಯಾಂಗಾಂಗ್ ಸರೋವರದ ಬಳಿ ಜಿಯೋ 4ಜಿ ಸೇವೆ ಆರಂಭ!

ಲಡಾಖ್‌ನಲ್ಲಿ ಚೀನಾ ನಿರ್ಮಾಣ ಬಗ್ಗೆ ಭಾರತಕ್ಕೆ ಅಮೆರಿಕ ಎಚ್ಚರಿಕೆ: ಲಡಾಖ್‌ ಭಾಗದಲ್ಲಿ ಚೀನಾ ಮೂಲಸೌಕರ್ಯಗಳನ್ನು ನಿರ್ಮಾಣ ಮಾಡುತ್ತಿರುವ ವಿಷಯವನ್ನು ಭಾರತವು ಗಂಭೀರವಾಗಿ ಪರಿಗಣಿಸಬೇಕು ಎಂದು ಅಮೆರಿಕದ ಹಿರಿಯ ಸೇನಾಧಿಕಾರಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ. ‘ಹಿಮಾಲಯದ ಗಡಿಭಾಗದಲ್ಲಿ ಮೂಲಸೌಕರ್ಯಗಳ ನಿರ್ಮಾಣ ಮಾಡುವ ಮೂಲಕ ಚೀನಾ, ಗಡಿಭಾಗದಲ್ಲಿ ಅಸ್ಥಿರತೆ ತರುವ ವಿನಾಶಕಾರಿ ಚಟುವಟಿಕೆ ನಡೆಸುತ್ತಿದೆ. ಇದು ಆತಂಕಕಾರಿ ಬೆಳವಣಿಗೆಯಾಗಿದ್ದು, ಭಾರತವು ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಅಮೆರಿಕ ಸೇನೆಯ ಜನರಲ್‌ ಚಾರ್ಲ್ಸ್ ಫ್ಲೈನ್‌ ಹೇಳಿದ್ದಾರೆ.

ಬಾಹ್ಯಾಕಾಶ ಕೇಂದ್ರ ನಿರ್ಮಾಣ ಪೂರ್ಣಕ್ಕೆ 3 ಯಾತ್ರಿಗಳ ಕಳಿಸಿದ ಚೀನಾ

‘ಲಡಾಖ್‌ ವಲಯದಲ್ಲಿ ಚೀನಾ ಸೇನಾ ಶಸ್ತ್ರಾಗಾರವನ್ನೇ ನಿರ್ಮಿಸುವಂತೆ ಕಂಡುಬರುತ್ತಿದೆ.ಚೀನಾ ಆಕ್ರಮಣಕಾರಿ ಪ್ರವೃತ್ತಿ ನಿಗ್ರಹಕ್ಕಾಗಿ ದೇಶಗಳು ಒಗ್ಗೂಡಿ ಮಾತುಕತೆ ನಡೆಸಬೇಕು’ ಎಂದಿದ್ದಾರೆ. ‘ಈ ಹಿನ್ನೆಲೆಯಲ್ಲಿ ಭಾರತ ಹಾಗೂ ಅಮೆರಿಕ ಎತ್ತರದ ಪ್ರದೇಶಗಳಲ್ಲಿ ಯುದ್ಧ ಮಾಡಲು ಸೇನಾ ತರಬೇತಿ ಯೋಜನೆ ಹಮ್ಮಿಕೊಳ್ಳಲಿದೆ. ಯೋಜನೆಯ ಭಾಗವಾಗಿ ಅಕ್ಟೋಬರ್‌ ತಿಂಗಳಲ್ಲಿ ಹಿಮಾಲಯದ 9,000-10,000 ಅಡಿ ಎತ್ತರದ ಪ್ರದೇಶದಲ್ಲಿ ಯೋಧರು ಯುದ್ಧಾಭ್ಯಾಸ ನಡೆಸಲಿದ್ದಾರೆ. ಈ ತರಬೇತಿ ವೈಮಾನಿಕ ದಾಳಿ, ಲಾಜಿಸ್ಟಿಕ್‌ ಹಾಗೂ ನೈಜ ಸಮಯದ ಆಧಾರದ ಮೇಲೆ ಮಾಹಿತಿ ರವಾನೆ ಮೊದಲಾದ ಅಂಶಗಳನ್ನೊಳಗೊಳ್ಳಲಿದೆ’ ಎಂದು ಫ್ಲೈನ್‌ ತಿಳಿಸಿದ್ದಾರೆ.