ಟ್ರಂಪ್ ಹತ್ಯೆಯ ಯತ್ನ.. ಯುಎಸ್ ರಾಜಕೀಯ ಅದಲು-ಬದಲು.!
ಅಮೆರಿಕದ ಸ್ಥಳೀಯ ಮಾಧ್ಯಮಗಳ ಸರ್ವೇಗಳಲ್ಲೂ ಡೊನಾಲ್ಡ್ ಟ್ರಂಪ್ ಹವಾ ಜೋರಾಗಿದ್ದು.. ಗುಂಡಿನ ದಾಳಿ ಬಳಿಕ ಟ್ರಂಪ್ ಗೆಲ್ಲುವ ಸಾಧ್ಯತೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ.. ಅಲ್ಲದೆ ಅಧ್ಯಕ್ಷ ಜೋ ಬಿಡೆನ್ಗೆ ವಯಸ್ಸು ಕೂಡ ಅವರ ಗೆಲುವಿಗೆ ಮುಳುವಾಗುವ ಸಾಧ್ಯತೆ ಇದ್ದು.. ಇಂತಹ ಸಮಯದಲ್ಲಿ ಟ್ರಂಪ್ ಈ ಅವಕಾಶವನ್ನು ಬಳಸಿಕೊಂಡು ಬರುವ ಚುನಾವಣೆಯಲ್ಲಿ ಯುಎಸ್ ಅಧಿಕಾರದ ಚುಕ್ಕಾಣಿ ಹಿಡಿಯಲು ಹಾತೊರೆಯುತ್ತಿದ್ದಾರೆ. ಟ್ರಂಪ್ ಮೇಲಿನ ದಾಳಿಯ ಅನುಕಂಪದಿಂದಲೇ ಅವರು ಚುನಾವಣೆಯಲ್ಲಿ ಗೆದ್ದರು ಗೆಲ್ಲಬಹುದು ಎನ್ನಲಾಗುತ್ತಿದೆ.
ಕಳೆದ ಐದು ದಿನಗಳ ಹಿಂದೆ ನಡೆದ ಡೋನಾಲ್ಡ್ ಟ್ರಂಪ್ ಹತ್ಯೆ ಯತ್ನ.. ಅಮೆರಿಕ ಚುನಾವಣಾ ರಾಜಕೀಯವನ್ನೇ ಅದಲು-ಬದಲು ಮಾಡಿದೆ. ಸದ್ಯ ಅಮೆರಿಕದ ಗಲ್ಲಿ ಗಲ್ಲಿಗಳಲ್ಲೂ ಡೊನಾಲ್ಡ್ ಟ್ರಂಪ್ನದ್ದೆ ಸುದ್ದಿ. ಅಮೆರಿಕ ಚುನಾವಣೆಗೆ ಇನ್ನೇನು 5 ತಿಂಗಳು ಮಾತ್ರ ಬಾಕಿ ಇದೆ. ಇಂತಹ ಸಮಯದಲ್ಲಿ ಟ್ರಂಪ್ ಮೇಲಿನ ದಾಳಿ ಅಮೆರಿಕನ್ನರ ಮೇಲೆ ಭಾರೀ ಪರಿಣಾಮ ಬೀರಿದೆ.
ಅಮೆರಿಕದ ಸ್ಥಳೀಯ ಮಾಧ್ಯಮಗಳ ಸರ್ವೇಗಳಲ್ಲೂ ಡೊನಾಲ್ಡ್ ಟ್ರಂಪ್ ಹವಾ ಜೋರಾಗಿದ್ದು.. ಗುಂಡಿನ ದಾಳಿ ಬಳಿಕ ಟ್ರಂಪ್ ಗೆಲ್ಲುವ ಸಾಧ್ಯತೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ.. ಅಲ್ಲದೆ ಅಧ್ಯಕ್ಷ ಜೋ ಬಿಡೆನ್ಗೆ ವಯಸ್ಸು ಕೂಡ ಅವರ ಗೆಲುವಿಗೆ ಮುಳುವಾಗುವ ಸಾಧ್ಯತೆ ಇದ್ದು.. ಇಂತಹ ಸಮಯದಲ್ಲಿ ಟ್ರಂಪ್ ಈ ಅವಕಾಶವನ್ನು ಬಳಸಿಕೊಂಡು ಬರುವ ಚುನಾವಣೆಯಲ್ಲಿ ಯುಎಸ್ ಅಧಿಕಾರದ ಚುಕ್ಕಾಣಿ ಹಿಡಿಯಲು ಹಾತೊರೆಯುತ್ತಿದ್ದಾರೆ. ಟ್ರಂಪ್ ಮೇಲಿನ ದಾಳಿಯ ಅನುಕಂಪದಿಂದಲೇ ಅವರು ಚುನಾವಣೆಯಲ್ಲಿ ಗೆದ್ದರು ಗೆಲ್ಲಬಹುದು ಎನ್ನಲಾಗುತ್ತಿದೆ.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ್‍ಯಾಲಿ ವೇಳೆ ಗುಂಡಿನ ದಾಳಿ..!
ದಾಳಿ ಮುಂದಿಟ್ಟು.. ಚುನಾವಣಾ ಅಖಾಡಕ್ಕೆ ಟ್ರಂಪ್.!
ಹೌದು ಗುಂಡಿನ ದಾಳಿ ಮುದ್ದಿಟ್ಟುಕೊಂಡು ಟ್ರಂಪ್ ಚುನಾವಣಾ ಪ್ರಚಾರಕ್ಕೆ ಹೋಗ್ತಿದ್ದಾರೆ. ನಿನ್ನೆ ರಿಪಬ್ಲಿಕ್ ರಾಷ್ಟ್ರೀಯ ಸಮಾವೇಶದಲ್ಲೂ ಘಟನೆ ನೆನಪಿಸಿಕೊಂಡ ಟ್ರಂಪ್, ಅಮೇರಿಕ ಚುನಾವಣೆಯಲ್ಲಿ ನನ್ನನ್ನು ಟಾರ್ಗೆಟ್ ಮಾಡಿ ದಾಳಿ ಮಾಡಿದ್ದಾರೆಂದು ಕಿಡಿ ಕಾರಿದರು. ಇದೇ ವೇಳೆ ತಮ್ಮ ಪಕ್ಷದಿಂದ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಭಾರತೀಯ ಅಳಿಯ ಜೆ.ಡಿ ವ್ಯಾನ್ಸ್ ಹೆಸರನ್ನು ಸಹ ಘೋಷಣೆ ಮಾಡಿದರು.
ದಾಳಿ ಬಳಿಕ ಡೊನಾಲ್ಡ್ ಟ್ರಂಪ್ ಸುದೀರ್ಘ ಭಾಷಣ.!
ರಿಪಬ್ಲಿಕ್ ರಾಷ್ಟ್ರೀಯ ಸಮಾವೇಶದಲ್ಲಿ ಅಮೇರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬರೋಬ್ಬರಿ 92 ನಿಮಿಷಗಳ ಕಾಲ ಸುದೀರ್ಘ ಭಾಷಣ ಮಾಡಿದರು. ಭಾಷಣ ವೇಳೆ ತಮ್ಮ ಹತ್ಯೆಯ ಯತ್ನ ಘಟನೆಯನ್ನು ನೆನಪಿಸಿಕೊಂಡು ವಿವರಿಸಿದರು. ಚುನಾವಣೆಯಲ್ಲಿ ಗೆಲುವು ಪಡೆದ ಬಳಿಕ ತಮ್ಮ ದೂರ ದೃಷ್ಟಿ ಬಗ್ಗೆ ಮಾತನಾಡಿದರು.
ಭಾಷಣದಲ್ಲಿ ಹೇಳಿದ್ದೇನು?
ಭಾಷಣದಲ್ಲಿ ಡೆಮಾಕ್ರಟಿಕ್ ಅಧ್ಯಕ್ಷ ಜೋ ಬಿಡೇನ್ ಅಮೆರಿಕಾ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಅಧ್ಯಕ್ಷ ಎಂದು ತೀವ್ರ ವಾಗ್ದಾಳಿ ಮಾಡಿದರು. ನಮ್ಮ ದೇಶದ ಪ್ರಜಾಪ್ರಭುತ್ವವನ್ನು ಉಳಿಸಿವವನು ನಾನು. ನಾನು ಅಧ್ಯಕ್ಷನಾದರೆ ಪ್ರಪಂಚದ ವಿವಿಧ ಯುದ್ಧಗಳನ್ನು ತಡೆಹಿಡಿಯುತ್ತೇನೆ ಎಂದು ಭರವಸೆ ನೀಡಿದರು. ದೇವರು ನನ್ನ ಕಡೆ ಇದ್ದಾನೆ ಅದಕ್ಕೆ ನಾನು ದಾಳಿಯ ಸಮಯದಲ್ಲಿ ನಾನು ಸುರಕ್ಷಿತನಾಗಿರುತ್ತೇನೆ ಎಂದು ಡೋನಾಲ್ಡ್ ಟ್ರಂಪ್ ಹೇಳಿದರು. ವಿಶ್ವದ ಶಾಂತಿಯನ್ನು ನಾನು ಬಯಸುತ್ತೇನೆ. ದೇಶದ ಅಭಿವೃದ್ಧಿಗಾಗಿ ನಾನು ನಿರಂತರವಾಗಿ ಕೆಲಸ ಮಾಡುತ್ತೇನೆ ನಿರಂತರವಾಗಿ ಹೇಳಿದರು. ತಮ್ಮ ಇಡೀ ಭಾಷಣದಲ್ಲಿ 2 ಭಾರೀ ಅಮೆರಿಕಾ ಅಧ್ಯಕ್ಷ ಜೋ ಬಿಡೇನ್ ಹೆಸರು ಬಳಸಿದರು.
ಟ್ರಂಪ್ ಹತ್ಯೆಗೆ ಯತ್ನಿಸಿದ್ಯಾಕೆ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಥಾಮಸ್? ಯಾರು ಈ ಶೂಟರ್?
ಭಾರತೀಯ ಅಳಿಯ US ಉಪಾಧ್ಯಕ್ಷ ಅಭ್ಯರ್ಥಿ!
ನವೆಂಬರ್ನಲ್ಲಿ ನಡೆಯಲಿರುವ ಅಮೆರಿಕ ಚುನಾವಣೆಗೆ ರಿಪಬ್ಲಿಕ್ ಪಕ್ಷದಿಂದ ಭಾರತೀಯ ಅಳಿಯನಿಗೆ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಡೊನಾಲ್ಡ್ ಟ್ರಂಪ್ ಘೊಷಣೆ ಮಾಡಿದ್ದಾರೆ. ಭಾರತದ ಉಷಾ ಚಿಲಕುರಿ ಪತಿಯೇ ಜೇಮ್ಸ್ ಡೊನಾಲ್ಡ್ ವ್ಯಾನ್ಸ್.. ಉಷಾ ಪೋಷಕರು 1970ರ ದಶಕದಲ್ಲಿ ಭಾರತದಿಂದ ಅಮೆರಿಕಗೆ ವಲಸೆ ಹೋಗಿದ್ದರು. 96 ವರ್ಷದ ಉಷಾ ಅತ್ತೆ ಆಂಧ್ರ ಪ್ರದೇಶದಲ್ಲಿದ್ದಾರೆ. ಉಷಾ ವ್ಯಾನ್ಸ್ ಕುಟುಂಬ ಅಮೆರಿಕದ ಡಿಯಾಗೋದಲ್ಲಿ ವಾಸವಿದ್ದಾರೆ.
ವರದಿ: ಪ್ರಕಾಶ್ಗೌಡ್ ಪಾಟೀಲ್, ಏಷ್ಯಾನೆಟ್ ಸುವರ್ಣ ನ್ಯೂಸ್