ಬಾಲ್ಯದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಥಾಮಸ್ ಟ್ರಂಪ್ ಹತ್ಯೆಗೆ ಯತ್ನಿಸಿದ್ದನು .ಈ ಬಗ್ಗೆ ಥಾಮಸ್ ತಂದೆ ಸಹ ಪ್ರತಿಕ್ರಿಯೆ ನೀಡಿದ್ದಾರೆ.

ವಾಷಿಂಗ್ಟನ್: ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೇಲೆ ಗುಂಡು ಹಾರಿಸಿ ಸೀಕ್ರೆಟ್‌ ಸರ್ವೀಸ್‌ ಏಜೆಂಟರ ಗುಂಡಿಗೆ ಬಲಿಯಾದ ಯುವಕನನ್ನು 20 ವರ್ಷದ ಥಾಮಸ್‌ ಮ್ಯಾಥ್ಯೂ ಕ್ರೂಕ್ಸ್‌ ಎಂದು ಗುರುತಿಸಲಾಗಿದೆ. ಈತ ಟ್ರಂಪ್‌ ಅವರ ರಿಪಬ್ಲಿಕನ್‌ ಪಕ್ಷದ ಮತದಾರ ಎಂದು ನೋಂದಾಯಿಸಿಕೊಂಡಿದ್ದ. ನ.5ರಂದು ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಮೊದಲ ಬಾರಿ ಮತದಾನ ಮಾಡುವವನಾಗಿದ್ದ ಎಂದು ಭದ್ರತಾ ಪಡೆಗಳು ಹೇಳಿವೆ. ಈತ ಟ್ರಂಪ್‌ ಪಕ್ಷದ ಮತದಾರ ಎಂದು ನೋಂದಾಯಿಸಿಕೊಂಡಿದ್ದನಾದರೂ ತನ್ನ ನಾಯಕನನ್ನೇ ಈತ ಏಕೆ ಹತ್ಯೆ ಮಾಡಿದ ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಅಮೆರಿಕ ಪೊಲೀಸರು ಹೇಳಿದ್ದಾರೆ.

ಥಾಮಸ್‌ ಪಿಟ್ಸ್‌ಬರ್ಗ್‌ನ ಬೆತೆಲ್ ಪಾರ್ಕ್‌ನ ನಿವಾಸಿಯಾಗಿದ್ದಾನೆ. ಅವನ ಊರು ಟ್ರಂಪ್‌ ಹತ್ಯೆಗೆ ಯತ್ನ ನಡೆದ ಸ್ಥಳದಿಂದ 55 ಕಿ.ಮೀ. ದೂರದಲ್ಲಿದೆ. ಅವನು ಈ ಹಿಂದೆ ಡೆಮಾಕ್ರೆಟಿಕ್‌ ಪಕ್ಷದ ಬೆಂಬಲಿಗ ಗುಂಪಿಗೆ 15 ಡಾಲರ್‌ನಷ್ಟು ಸಣ್ಣ ಪ್ರಮಾಣದ ದೇಣಿಗೆ ನೀಡಿದ್ದ ಎಂಬುದು ತಿಳಿದುಬಂದಿದೆ.

ವಿಶ್ವ ನಾಯಕ ಮೋದಿಗೆ 10 ಕೋಟಿ ‘ಎಕ್ಸ್‌’ ಫಾಲೋವರ್ಸ್‌: ಮೈಲಿಗಲ್ಲು!

ತಿಭಾವಂತ ವಿದ್ಯಾರ್ಥಿಯಾಗಿದ್ದ ಶೂಟರ್!

ಥಾಮಸ್‌ 2022ರಲ್ಲಿ ಬೆತೆಲ್‌ ಪಾರ್ಕ್‌ ಹೈಸ್ಕೂಲ್‌ನಲ್ಲಿ ಪ್ರೌಢಶಿಕ್ಷಣ ಪೂರೈಸಿದ್ದಾನೆ. ಹೈಸ್ಕೂಲ್‌ನಲ್ಲಿದ್ದಾಗ 500 ಡಾಲರ್‌ ‘ಸ್ಟಾರ್‌ ಅವಾರ್ಡ್‌’ ಪಡೆದಿದ್ದ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಆತನ ತಂದೆ 53 ವರ್ಷದ ಮ್ಯಾಥ್ಯೂ ಕ್ರುಕ್ಸ್‌ ‘ಏನು ನಡೆದಿದೆ ಎಂಬುದೇ ನನಗೆ ತಿಳಿಯುತ್ತಿಲ್ಲ’ ಎಂದು ಆಘಾತ ವ್ಯಕ್ತಪಡಿಸಿದ್ದಾರೆ.

ದಾಳಿಕೋರನ ಮನೆಯಲ್ಲಿ ಸ್ಫೋಟಕ ವಸ್ತುಗಳು ಪತ್ತೆ 

ಡೊನಾಲ್ಡ್‌ ಟ್ರಂಪ್‌ ಹತ್ಯೆಗೆ ವಿಫಲ ಯತ್ನ ನಡೆಸಿ ಹತ್ಯೆಗೀಡಾದ ಥಾಮಸ್‌ ಕ್ರೂಕ್ಸ್‌ಗೆ ಸೇರಿದ್ದು ಎನ್ನಲಾದ ವಾಹನ ಮತ್ತು ಆತನ ಮನೆಯಲ್ಲಿ ಬಾಂಬ್‌ ತಯಾರಿಕೆಗೆ ಅಗತ್ಯವಾದ ವಸ್ತುಗಳು ಪತ್ತೆಯಾಗಿವೆ. ಇದು ಆತನ ಅಪರಾಧ ಹಿನ್ನೆಲೆಯ ಕುರಿತು ಇನ್ನಷ್ಟು ಅನುಮಾನಗಳಿಗೆ ಕಾರಣವಾಗಿದೆ. ಜೊತೆಗೆ, ಒಂದು ವೇಳೆ ಗುಂಡಿನ ದಾಳಿಯ ಮೂಲಕ ಟ್ರಂಪ್ ಹತ್ಯೆ ಸಾಧ್ಯವಾಗದೇ ಹೋದಲ್ಲಿ ಬಾಂಬ್‌ ದಾಳಿಗೂ ಆತ ಚಿಂತಿಸಿದ್ದಿರಬಹುದು ಎಂಬ ಶಂಕೆಗೆ ಕಾರಣವಾಗಿದೆ.

ಪುರಿ ಜಗನ್ನಾಥನಿಂದಲೇ ಬದುಕುಳಿದ ಡೊನಾಲ್ಡ್ ಟ್ರಂಪ್! ಇದು 48 ವರ್ಷದ ಹಿಂದಿನ ಸಂಬಂಧ!

Scroll to load tweet…
Scroll to load tweet…