ಸಿಂಗಿಂಗ್ ಕ್ಯಾಟ್ ಎಂದೇ ಜನಪ್ರಿಯವಾಗಿದ್ದ ಕಾಲಾ ಇನ್ನಿಲ್ಲ, ಮುದ್ದಿನ ಬೆಕ್ಕಿಗೆ ಕಣ್ಣೀರ ವಿದಾಯ!

ಐ ಗೋ ಮಿಯಾಂವ್ ಹಾಡು ಹಾಡಿ ಜಗತನ್ನೇ ಚಕಿತಗೊಳಿಸಿದ್ದ ಸಿಂಗಿಂಗ್ ಬೆಕ್ಕು ಇನ್ನಿಲ್ಲ. ಈ ಮಾಹಿತಿ ತಿಳಿಯುತ್ತಿದ್ದಂತೆ ಹಲವರು ಕಣ್ಣೀರ ವಿದಾಯ ಹೇಳಿದ್ದಾರೆ. ಅಷ್ಟಕ್ಕೂ ಕಾಲಾ  ಬೆಕ್ಕು ಹಾಡಿದ ಹಾಡು ಯಾವುದು? ಸಾಮಾಜಿಕ ಮಾಧ್ಯಮದಲ್ಲಿ ಬಹತೇಕರು ಕಾಲಾಗೆ ವಿದಾಯ ಹೇಳಿದ್ದಾರೆ.
 

Singing Cat Cala passed away at 12 netizens pay tribute to Pet Singer ckm

ಕಾಲಾ ಬೆಕ್ಕು ಮಾಡಿದ ಮೋಡಿಗೆ ಜಗತ್ತೆ ನಿಬ್ಬೆರಗಾಗಿತ್ತು. ಐ ಗೋ ಮಿಯಾಂವ್ ಹಾಡನ್ನು ಹಾಡುವ ಮೂಲಕ ಜನರನ್ನು ಅಚ್ಚರಿಗೊಳಿಸಿತ್ತು. ಇದೇ ವೇಳೆ ಕಾಲಾ ಹಾಡಿದ ಹಾಡು ಭಾರಿ ವೈರಲ್ ಆಗಿತ್ತು. ಆದರೆ ಇದೀಗ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಈ ಕಾಲಾ ಬೆಕ್ಕು ಮೃತಪಟ್ಟಿದೆ. 12 ವರ್ಷದ ಕಾಲಾ ಮೃತಪಟ್ಟಿರುವ ಮಾಹಿತಿಯನ್ನು ಮುದ್ದಾಗಿ ಸಾಕಿ ಸಲಹಿದ್ದ ಎಲಿಜಬೆತ್ ಬಹಿರಂಗಪಡಿಸಿದ್ದಾರೆ. ರಿಪ್ ಕಾಲಾ ಎಂದು ಪೋಸ್ಟ್ ಹಾಕಿ ಭಾವುಕರಾಗಿದ್ದಾರೆ. 

ಎಜಿಜಬೆತ್ ಪ್ರೀತಿಯಿಂದ ಸಾಕಿದ ಕಾಲಾ ಬೆಕ್ಕು ಹಾಡಿಗೆ ತಕ್ಕಂತೆ ಮಿಯಾಂವ್ ಮಿಯಾಂವ್ ಹೇಳುತ್ತಿದ್ದು. ಹೀಗಿರುವಾಗಿ ಐ ಗೋ ಮಿಯಾಂವ್ ಹಾಡನ್ನು ಕಾಲಾ ಬೆಕ್ಕು ಹಾಡಿತ್ತು. ಇದು ಎಲಿಜಬೆತ್ ಅಚ್ಚರಿಗೆ ಕಾರಣವಾಗಿತ್ತು. ಹೀಗೆ ಕೆಲವು ಬಾರಿ ಈ ಹಾಡನ್ನು ಹಾಡಿದಾಗ ಎಲಿಜಬೆತ್ ವಿಡಿಯೋ ರೆಕಾರ್ಡ್ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.

ಬೆಕ್ಕಿಗೆ ಚಲ್ಲಾಟ, ಇಲಿಗೆ ಪ್ರಾಣ ಸಂಕಟ ಅಂತಾರಲ್ಲ ಹಾಗೆ ಮಾರ್ಜಾಲ ಚೇಷ್ಟೆಗೆ 11 ಲಕ್ಷ ನಷ್ಟ!

ಕಾಲಾ ಬೆಕ್ಕಿನ ಐ ಗೋ ಮಿಯಾಂವ್, ಗೋ ಮಿಯಾಂವ್, ಐ ಡೋಂಟ್ ನೋ ಹಾಡು ಭಾರಿ ವೈರಲ್ ಆಗಿತ್ತು. ಈ ಹಾಡಿನ ಸಾಲನ್ನು ತನ್ನದೇ ರೀತಿಯಲ್ಲಿ ಹೇಳಿದ್ದ ಕಾಲಾ ದಿನ ಬೆಳಗಾಗುವುದರೊಳಗೆ ಜನಪ್ರಿಯತೆ ಪಡೆದುಕೊಂಡಿತ್ತು. ಈ ವಿಡಿಯೋ ಭಾರಿ ಲೈಕ್ಸ್ ಹಾಗೂ ಕಮೆಂಟ್ಸ್ ವ್ಯಕ್ತವಾಗಿತ್ತು. ಇದೇ ವೇಳೆ ಕಾಲಾಗೆ ಪ್ರೀತಿಯ ಶುಭಹಾರೈಕೆಗಳು ವ್ಯಕ್ತವಾಗಿತ್ತು.

 

 

ಹಾಡಿನ ವಿಡಿಯೋ ಬಳಿಕ ಕಾಲಾ ಬೆಕ್ಕಿನ ಇತರ ಕೆಲ ವಿಡಿಯೋಗಳು ವೈರಲ್ ಆಗಿತ್ತು. ಇದೀಗ ಎಲಿಜಬೆತ್ ಕಾಲಾ ಇನ್ನಿಲ್ಲ ಎಂಬ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ. ಕಾಲಾ ವಯೋಸಹಜ ಸಮಸ್ಯೆಯಿಂದ ಬಳಲುತ್ತಿತ್ತು. ಕಾಲಾಗೆ ಉತ್ತಮ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ವೇಳೆ ಕಾಲಾಗೆ 12 ವಯಸ್ಸಾಗಿದೆ ಎಂದು ವೈದ್ಯರು ಖಚಿತಡಿಸಿದ್ದರು. ಕಾಲಾ ಆರೋಗ್ಯ ಸಮಸ್ಯೆ, ವಯಸ್ಸಿನ ನಡುವೆಯೂ ಚಿಕಿತ್ಸೆಗೆ ಸ್ಪಂದಿಸಿತ್ತು. ಆರೋಗ್ಯ ಸುಧಾರಿಸಲು ಎಲ್ಲಾ ಪ್ರಯತ್ನ ಮಾಡಲಾಗಿತ್ತು. ಇತ್ತ ಕಾಲಾ ಪ್ರತಿ ದಿನ ಹೋರಾಟದ ಬದುಕನ್ನು ದೂಡಿತ್ತು. ಆರೋಗ್ಯ ಸುಧಾರಿಸಿ ಮತ್ತೆ ಎಂದಿನಂತೆ ಆಗಲಿದೆ ಅನ್ನೋ ವಿಶ್ವಾಸಕ್ಕೆ ಧಕ್ಕೆಯಾಗಿದೆ ಎಂದು ಎಲಿಜಬೆತ್ ಹೇಳಿಕೊಂಡಿದ್ದಾರೆ.

ಈ ಬಣ್ಣದ ಬೆಕ್ಕು ಮನೆಗೆ ಬಂದರೆ ಅದೃಷ್ಟ.. ಸಂಪತ್ತು ವೃದ್ಧಿ

ಕಾಲಾ ಕ್ಷೀಣಿಸಿದ ಆರೋಗ್ಯದ ವಿರುದ್ದ ಹೋರಾಟ ಮಾಡಿತ್ತು. ಆದರೆ ಆರೋಗ್ಯ ಸುಧಾರಿಸಲಿಲ್ಲ. ನನ್ನ ಕೈಯಲ್ಲಿ ಕಾಲಾ ಕೊನೆಯುಸಿರೆಳೆದಿದೆ. ಈ ನೋವು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನೀವೆಲ್ಲಾ ಕಾಲಾ ಚಿರವಾಗಿರುವಂತೆ ಮಾಡಿದ್ದೀರಿ. ಕಾಲಾ ಹಾಡು ಈಗಲೂ ಗುನುಗುತ್ತಿದೆ. ಎಲ್ಲರಿಗೂ ಧನ್ಯವಾದ ಎಂದು ಎಲಿಜಬೆತ್ ಹೇಳಿದ್ದಾರೆ.

Latest Videos
Follow Us:
Download App:
  • android
  • ios