ಮೋದಿಗೆ ನೀಡಿದ್ದಂತೆ ಸೌದಿ ರಾಜಗೂ ತನಿಖೆಯಿಂದ ರಕ್ಷಣೆ: ಅಮೆರಿಕ ವಿದೇಶಾಂಗ ಇಲಾಖೆ ವಿವಾದಿತ ಹೇಳಿಕೆ

ಪತ್ರಕರ್ತನ ಹತ್ಯೆ ಪ್ರಕರಣದಲ್ಲಿ ಸೌದಿ ಅರೇಬಿಯಾದ ರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರಿಗೆ ಅಮೆರಿಕದಲ್ಲಿ ತನಿಖೆಗೆ ಒಳಪಡಿಸುವುದರಿಂದ ವಿನಾಯ್ತಿ ನೀಡಿರುವುದು ಈ ಹಿಂದೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಿದ್ದಂತಹ ರಾಜತಾಂತ್ರಿಕ ರಕ್ಷಣೆಯಾಗಿದೆ ಎಂದು ಅಮೆರಿಕ ಸರ್ಕಾರ ಹೇಳಿದೆ. ಗುಜರಾತ್‌ ಹತ್ಯಾಕಾಂಡದ ಎಲ್ಲ ಪ್ರಕರಣಗಳಲ್ಲೂ ಖುಲಾಸೆಯಾಗಿರುವ ಮೋದಿ ಕುರಿತ ಹಳೆಯ ಆರೋಪವನ್ನು ಅಮೆರಿಕ ಮತ್ತೆ ಕೆದಕಿರುವುದು ವಿವಾದಕ್ಕೆ ಕಾರಣವಾಗಿದೆ.

Saudi King also get Exception from investigation as before given to Modi US State Departments controversial statement akb

ನವದೆಹಲಿ: ಪತ್ರಕರ್ತನ ಹತ್ಯೆ ಪ್ರಕರಣದಲ್ಲಿ ಸೌದಿ ಅರೇಬಿಯಾದ ರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರಿಗೆ ಅಮೆರಿಕದಲ್ಲಿ ತನಿಖೆಗೆ ಒಳಪಡಿಸುವುದರಿಂದ ವಿನಾಯ್ತಿ ನೀಡಿರುವುದು ಈ ಹಿಂದೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಿದ್ದಂತಹ ರಾಜತಾಂತ್ರಿಕ ರಕ್ಷಣೆಯಾಗಿದೆ ಎಂದು ಅಮೆರಿಕ ಸರ್ಕಾರ ಹೇಳಿದೆ. ಗುಜರಾತ್‌ ಹತ್ಯಾಕಾಂಡದ ಎಲ್ಲ ಪ್ರಕರಣಗಳಲ್ಲೂ ಖುಲಾಸೆಯಾಗಿರುವ ಮೋದಿ ಕುರಿತ ಹಳೆಯ ಆರೋಪವನ್ನು ಅಮೆರಿಕ ಮತ್ತೆ ಕೆದಕಿರುವುದು ವಿವಾದಕ್ಕೆ ಕಾರಣವಾಗಿದೆ.

ಅಮೆರಿಕದ ಪ್ರಜೆಯಾಗಿದ್ದ (American citizen) ಸೌದಿ ಪತ್ರಕರ್ತ ಜಮಾಲ್‌ ಖಾಶೋಗ್ಗಿ (Jamal Khashoggi) ಹತ್ಯೆ ಪ್ರಕರಣದಲ್ಲಿ ಸೌದಿ ದೊರೆ (Saudi King) ಮೊಹಮ್ಮದ್‌ ಬಿನ್‌ ಸಲ್ಮಾನ್‌ (Mohammed bin Salman) ಆರೋಪಿಯಾಗಿದ್ದಾರೆ. ಅವರ ವಿರುದ್ಧ ಅಮೆರಿಕದಲ್ಲಿ ಪ್ರಕರಣಗಳು ದಾಖಲಾಗಿವೆ. ಆದರೆ, ಅಮೆರಿಕದಲ್ಲಿ ಸಲ್ಮಾನ್‌ರನ್ನು ತನಿಖೆಗೆ ಒಳಪಡಿಸುವುದರಿಂದ ಅಲ್ಲಿನ ಸರ್ಕಾರ ಇತ್ತೀಚೆಗೆ ವಿನಾಯ್ತಿ ನೀಡಿ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದೆ. ಅದು ವಿವಾದ ಸೃಷ್ಟಿಸಿದೆ. ಆ ಕುರಿತು ಸ್ಪಷ್ಟನೆ ನೀಡಿರುವ ಅಮೆರಿಕದ ವಿದೇಶಾಂಗ ಇಲಾಖೆ (US State Department) ವಕ್ತಾರ ವೇದಾಂತ್‌ ಪಟೇಲ್‌ (Vedant Patel), ‘ಈ ರೀತಿ ದೇಶಗಳ ಮುಖ್ಯಸ್ಥರಿಗೆ ಅಮೆರಿಕದಲ್ಲಿ ತನಿಖೆಯಿಂದ ರಾಜತಾಂತ್ರಿಕ ರಕ್ಷಣೆ ನೀಡುವುದು ಹೊಸತಲ್ಲ. 2014ರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi)ಅಮೆರಿಕಕ್ಕೆ ಬಂದಾಗಲೂ ಅವರಿಗೆ ರಾಜತಾಂತ್ರಿಕ ರಕ್ಷಣೆ ನೀಡಲಾಗಿತ್ತು. 1993ರಲ್ಲಿ ಹೈಟಿ ಅಧ್ಯಕ್ಷ, 2001ರಲ್ಲಿ ಜಿಂಬಾಬ್ವೆ ಅಧ್ಯಕ್ಷ (President of Zimbabwe) ಮುಂತಾದವರಿಗೂ ರಕ್ಷಣೆ ನೀಡಲಾಗಿತ್ತು’ ಎಂದು ಹೇಳಿದ್ದಾರೆ.

ಅಮೆರಿಕದ ಈ ಹೇಳಿಕೆಗೆ ಭಾರತ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಗುಜರಾತ್‌ ಗಲಭೆಗೆ ಸಂಬಂಧಿಸಿದಂತೆ ನರೇಂದ್ರ ಮೋದಿ ಅವರಿಗೆ ಅಮೆರಿಕ ಸರ್ಕಾರ 2005ರಿಂದ ವೀಸಾ ನಿಷೇಧ ಹೇರಿತ್ತು. 2014ರಲ್ಲಿ ಅದನ್ನು ತೆರವುಗೊಳಿಸಿತ್ತು.

ವಿಶ್ವನಾಯಕರು C/O ಭಾರತ! ನಾನಾ ದೇಶಗಳ ಗದ್ದುಗೆ ಮೇಲೆ ಭಾರತ ಮೂಲದವರ ಸವಾರಿ!

ಅಮೆರಿಕಾ ಅಧ್ಯಕ್ಷರ ಕೈಯಲ್ಲಿ 24 ಗಂಟೆಯೂ ಇರತ್ತೆ ಜಗತ್ತನ್ನೇ ಧ್ವಂಸ ಮಾಡಬಲ್ಲ ಫುಟ್‌ಬಾಲ್‌
ಎಲ್ಲೆಲ್ಲೂ ಭಾರತೀಯರದ್ದೇ ಹವಾ: ಅಮೆರಿಕಾ ಸಂಸತ್‌ಗೆ ಬೆಳಗಾವಿಯ ಥಾಣೆದಾರ್‌ ಆಯ್ಕೆ

Latest Videos
Follow Us:
Download App:
  • android
  • ios