ಪಾಕಿಸ್ತಾನ ರಾಜಧಾನಿಗೆ ಇದೀಗ ಅಪರಿಚಿತ ಲಗ್ಗೆ ಇಟ್ಟಿದ್ದಾನೆ. ಸದಾ ಭಾರತ ವಿರೋಧಿ ಹೇಳಿಕೆ ನೀಡುತ್ತಾ ಪ್ರಚೋದಿಸುತ್ತಿದ್ದ, ಇಸ್ಲಾಂ ಮೂಲಭೂತವಾದಿ ಮೌಲಾನಾ ಮಸೂದ್ ಯುಆರ್ ರೆಹಮಾನ್ ಉಸ್ಮಾನಿ ಹತ್ಯೆಯಾಗಿದ್ದಾನೆ. ಅಪರಿಚಿತನ ದಾಳಿಗೆ ಉಸ್ಮಾನಿ ಹತ್ಯೆ ಪಾಕಿಸ್ತಾನವನ್ನೇ ಬೆಚ್ಚಿ ಬೀಳಿಸಿದೆ.
ಇಸ್ಲಾಮಾಬಾದ್(ಜ.05) ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಡ್ ಉಗ್ರರು ವಿದೇಶಿ ನೆಲದಲ್ಲಿ ಅಪರಿಚಿತನ ದಾಳಿಗೆ ಹತ್ಯೆಯಾಗುತ್ತಿದ್ದಾರೆ. ಪಾಕಿಸ್ತಾನದ ಬಿಲದಲ್ಲಿ ಅಡಗಿರುವ ಉಗ್ರರಿಗೂ ಇದೀಗ ಅಪರಿಚಿತ ಅನ್ನೋ ಹೆಸರು ಕೇಳಿದರೆ ಬೆಚ್ಚಿ ಬೀಳುತ್ತಿದ್ದಾರೆ. ಪಾಕಿಸ್ತಾನದ ಕೆಲ ಪ್ರಾಂತ್ಯದಲ್ಲಿ ಅಪರಿಚಿತನ ದಾಳಿಗೆ ಹಲವರು ಬಲಿಯಾಗಿದ್ದಾರೆ. ಇದೀಗ ಈ ಅಪರಿಚಿತ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಭಾರತ ವಿರೋಧಿ ಹೇಳಿಕೆ ಮೂಲಕ ಪ್ರಚೋದನೆ ನೀಡುತ್ತಿದ್ದ ಇಸ್ಲಾಮ್ ಮೂಲಭೂತವಾದಿ, ಸುನ್ನಿ ಉಲೆಮಾ ಕೌನ್ಸಿಲ್ ನಾಯಕ ಮೌಲನಾ ಮಸೂದ್ ಯುಆರ್ ರೆಹಮಾನ್ ಉಸ್ಮಾನಿ ಹತ್ಯೆಯಾಗಿದ್ದಾನೆ.
ಇಸ್ಲಾಮಾಬಾದ್‌ನ ಗೌರಿ ಪಟ್ಟಣದ ಕಡೆ ಡ್ರೈವರ್ ಜೊತೆ ಕಾರಿನಲ್ಲಿ ತೆರಳುತ್ತಿದ್ದ ಯುಆರ್ ರೆಹಮಾನ್ ಉಸ್ಮಾನಿ ಮೇಲೆ ಅಪರಿಚಿತನ ಗುಂಡಿನ ದಾಳಿಯಾಗಿದೆ. ಸತತ ಗುಂಡಿನ ದಾಳಿ ಮೂಲಕ ಉಸ್ಮಾನಿಯನ್ನು ಹತ್ಯೆ ಮಾಡಲಾಗಿದೆ. ಈ ದಾಳಿ ಕುರಿತು ಯಾವುದೇ ಸಂಘಟನೆಗಳು ಹೊತ್ತುಕೊಂಡಿಲ್ಲ. ಮುಸುಕುಧಾರಿಯಾದ ಅಪರಿಚಿತ ಈ ಗುಂಡಿನ ದಾಳಿ ನಡೆಸಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.
ಪಾಕ್‌ನಲ್ಲಿ ಕಂದಹಾರ್ ವಿಮಾನ ಹೈಜಾಕ್ ರೂವಾರಿ, ಉಗ್ರ ಮಸೂದ್ ಅಜರ್ ಹತ್ಯೆ: ದಟ್ಟ ವದಂತಿ
ಡ್ರೈವರ್ ಜೊತೆ ಕಾರಿನಲ್ಲಿ ಸಾಗುತ್ತಿದ್ದಂತೆ ದಾಳಿಯಾಗಿದೆ. ಈ ದಾಳಿಯಲ್ಲಿ ಉಸ್ಮಾನಿ ಡ್ರೈವರ್ ತೀವ್ರವಾಗಿ ಗಾಯಗೊಂಡಿದ್ದಾನೆ. ಇತ್ತ ಹಲವು ಗುಂಡುಗಳು ಉಸ್ಮಾನಿ ದೇಹ ಹೊಕ್ಕಿದೆ. ರಕ್ತದ ಮಡುವಿನಲ್ಲಿ ಕಾರಿನಲ್ಲಿದ್ದ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಸ್ಮಾನಿ ಆಸ್ಪತ್ರೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾನೆ. ಇತ್ತ ಉಸ್ಮಾನಿ ಡ್ರೈವರ್ ಪರಿಸ್ಥಿತಿ ಗಂಭೀರವಾಗಿದೆ.
ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಡ್ ಉಗ್ರರು ಇದೇ ಅಪರಿಚಿತರ ಗುಂಡಿನ ದಾಳಿಗೆ ಹತ್ಯೆಯಾಗುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ 26/11 ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್‌ನ ಆಪ್ತ, ಲಷ್ಕರ್-ಎ-ತೊಯ್ಬಾಉಗ್ರ ಹನ್‌ಜ್ಲಾ ಅದ್ನಾನ್ ಪಾಕಿಸ್ತಾನದ ಕರಾಚಿಯಲ್ಲಿ ಅನಾಮಧೇಯ ದಾಳಿಕೋರರ ಗುಂಡಿಗೆ ಬಲಿಯಾಗಿದ್ದ. ಈತ 2015ರಲ್ಲಿ ಜಮ್ಮು-ಕಾಶ್ಮೀರದ ಉಧಮ್‌ಪುರದಲ್ಲಿ ಬಿಎಸ್‌ಎಫ್ ಯೋಧರ ವಾಹನದ ಮೇಲೆ ನಡೆದಿದ್ದ ಭಯೋತ್ಪಾದಕ ದಾಳಿಯ ಮಾಸ್ಟರ್‌ಮೈಂಡ್ ಆಗಿದ್ದ. ಈತನ ಹತ್ಯೆಯೊಂದಿಗೆ ಇತ್ತೀಚಿನ ತಿಂಗಳಲ್ಲಿ ದೇಶ- ವಿದೇಶಗಳಲ್ಲಿ ನಿಗೂಢವಾಗಿ ಸಾವನ್ನಪ್ಪಿದ, ಭಾರತದ ಮೋಸ್ಟ್ ವಾಂಟೆಡ್ ಉಗ್ರರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ.
ಭಾರತದ ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಸಾವಿನ ವದಂತಿ: ಗುಪ್ತಚರ ಇಲಾಖೆ ಹೇಳಿದ್ದೇನು, ಅಸಲಿಯತ್ತು ಹೀಗಿದೆ..