ನೀರಿನಲ್ಲಿ ಮುಳುಗುತ್ತಿದ್ದ ಕಾರಿನಿಂದ ಮಹಿಳೆ -ನಾಯಿ ಮರಿ ರಕ್ಷಣೆ, ಮೈಜುಮ್ಮೆನಿಸುವ ವಿಡಿಯೋ!
ಕಾರು ನೀರಿಗೆ ಬಿದ್ದಿದೆ. ಕಾರಿನಲ್ಲಿದ್ದ ಹಿರಿಯ ಮಹಿಳೆ ಹೊರಬರಲು ಪ್ರಯತ್ನಿಸುತ್ತಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಇತ್ತ ಕಾರು ನೀರಿನೊಳಗೆ ಮುಳುಗುತ್ತಿದೆ. ತಕ್ಷಣವೇ ನೀರಿಗೆ ಹಾರಿದ ರಕ್ಷಕ, ಕಾರಿನ ಬಾಗಿಲು ಹಿಡಿದೆಳುದು ಮುಳುಗಿದ ಕಾರಿನಿಂದ ಮಹಿಳೆ ಹಾಗೂ ನಾಯಿ ಮರಿ ರಕ್ಷಿಸಿದ ರೋಚಕ ವಿಡಿಯೋ ವೈರಲ್ ಆಗಿದೆ.
ಮಳೆಗಾಲ ಸಮೀಪಿಸುತ್ತಿದೆ. ಈಗಾಗಲೇ ಕೆಲೆವಡೆ ಭಾರಿ ಮಳೆಗೆ ಅನಾಹುತಗಳು ಸಂಭವಿಸಿದೆ. ಜಲಪಾತಗಳಲ್ಲಿ ದಿಢೀರ್ ಪ್ರವಾಸ ಸಂದರ್ಭ ಪರಿಸ್ಥಿತಿ ಎದುರಾಗುತ್ತಿದೆ. ಇದೀಗ ಹೀಗೆ ನೀರಿನಲ್ಲಿ ಮುಳುಗುತ್ತಿದ್ದ ಕಾರಿನೊಳಗಿದ್ದ ಹಿರಿಯ ಮಹಿಳೆ ಹಾಗೂ ಆಕೆಯ ನಾಯಿ ಮರಿಯನ್ನು ಸತತ ಹೋರಾಟದ ಮೂಲಕ ರಕ್ಷಿಸಿದ ರೋಚಕ ವಿಡಿಯೋ ವೈರಲ್ ಆಗಿದೆ. ನೋಡ ನೋಡುತ್ತಿದ್ದಂತೆ ಕಾರು ಮುಳುಗಡೆಯಾಗಿತ್ತು. ಕಾರಿನೊಳಗಿನಿಂದ ಮಹಿಳೆ ಹಾಗೂ ನಾಯಿ ಮರಿ ರಕ್ಷಿಸಿ ಹೊರತಗೆಯಲಾಗಿದೆ.
ಈ ವಿಡಿಯೋದ ಸ್ಥಳ ಸ್ಪಷ್ಟವಾಗಿಲ್ಲ. ಆದರೆ ಮೈಜುಮ್ಮೆನಿಸುವ ವಿಡಿಯೋ ಇದೀಗ ವೈರಲ್ ಆಗಿದೆ. ನೀರು ತುಂಬಿದ ಹಳ್ಳಕ್ಕೆ ಹಿರಿಯ ಮಹಿಳೆ ಡ್ರೈವಿಂಗ್ ಮಾಡುತ್ತಾ ತೆರಳುತ್ತಿದ್ದ ಕಾರು ಬಿದ್ದಿದೆ. ತಕ್ಷಣೇ ಕಾರು ನೀರಿನಲ್ಲಿ ಮುಳುಗಲು ಆರಂಭಿಸಿದೆ. ಇತ್ತ ಕಾರಿನ ಎಂಜಿನ ಆಫ್ ಆಗಿದೆ. ಬಾಗಿಲುಗಳು ಲಾಕ್ ಆಗಿದೆ. ತೆರೆಯುವ ಪ್ರಯತ್ನ ಮಾಡಿದರೂ ಸಾಧ್ಯವಾಗಿಲ್ಲ. ಆತಂಕಗೊಂಡ ಮಹಿಳೆ ಸಹಾಯಕ್ಕಾಗಿ ಅಂಗಲಾಚಿದ್ದಾಳೆ.
ಗೋವಾದಲ್ಲಿ ಸಮುದ್ರದ ಮಧ್ಯೆ ಸಿಲುಕಿದ್ದ ಕನ್ನಡಿಗರ ರಕ್ಷಣೆ: ನೆರವಾದ ಶಿವಮೊಗ್ಗ ಶಾಸಕ ಚನ್ನಬಸಪ್ಪ
ಅಷ್ಟರೊಳಗೆ ಕಾರಿನ ಬಹುತೇಕ ಭಾಗ ಮುಳುಗಿದೆ. ತಕ್ಷಣವೇ ನೀರಿಗೆ ಹಾರಿದ ರಕ್ಷಕ, ಕಾರಿನ ಬಾಗಿಲು ಹಿಡಿದೆಳೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ಬಾಗಿಲು ತೆರೆದುಕೊಂಡಿಲ್ಲ. ಅಷ್ಟರಲ್ಲಿ ಕಾರು ಮುಳುಗಿದೆ. ಇತ್ತ ಡೋರ್ ಕೊಂಚ ತೆರೆದುಕೊಂಡಿದೆ. ಈ ಮೂಲಕ ನೀರಿನಲ್ಲಿ ಮುಳುಗಿದ್ದ ಕಾರಿನಿಂದ ಮಹಿಳೆಯನ್ನು ಹೊರಗೆಳೆದಿದ್ದಾನೆ. ಸತತ ಪ್ರಯತ್ನದ ಮೂಲಕ ಕಾರಿನೊಳಗಿನ ಮಹಿಳೆಯನ್ನು ಹಿಡಿದು ಮೆಲಕ್ಕೆ ಎತ್ತಿ ರಕ್ಷಿಸಿದ್ದಾನೆ.
ಇತ್ತ ನೀರಿನಿಂದ ಹೊರಬಂದ ಮಹಿಳೆ ನನ್ನ ನಾಯಿ ಮರಿ ಎಂದು ಕೂಗಿಕೊಂಡಿದ್ದಾಳೆ. ಮತ್ತೊಂದು ಸುತ್ತಿನ ಕಾರ್ಯಾಚರಣೆ ಮಾಡಿದ ರಕ್ಷಕ, ನಾಯಿ ಮರಿಯನ್ನೂ ರಕ್ಷಿಸಿದ್ದಾರೆ. ಈ ರೋಚಕ ಕಾರ್ಯಾಚರಣೆಯಲ್ಲಿ ಎರಡು ಜೀವಗಳನ್ನು ಉಳಿಸಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ.
Man saves women and her dog before car sinks👏
— CCTV IDIOTS (@cctvidiots) May 26, 2023
pic.twitter.com/FkI7xlkGvI
ಮಹಿಳೆ ಹಾಗೂ ನಾಯಿ ಮರಿಯನ್ನು ನೀರಿನಿಂದ ರಕ್ಷಿಸಲಾಗಿದೆ. ಇಬ್ಬರು ಸುರಕ್ಷಿತವಾಗಿದ್ದಾರೆ. ತಕ್ಕ ಸಮಯಕ್ಕ ನೀರಿಗೆ ಹಾರಿ ಎರಡು ಜೀವಗಳನ್ನು ಉಳಿಸಿದ ಯುವಕನಿಗೆ ಬಾರಿ ಮಚ್ಚುಗೆ ವ್ಯಕ್ತವಾಗಿದೆ. ಸೂಪರ್ ಹೀರೋ ಎಂದು ಎಲ್ಲರೂ ಕಮೆಂಟ್ ಮಾಡಿದ್ದಾರೆ. ಯವಕನಿಗೆ ಹೆಚ್ಚಿನ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ.
ರೈಲಿನ ಚಕ್ರಗಳ ನಡುವೆ ಕುಳಿತು 100 ಕಿಲೋ ಮೀಟರ್ ಪ್ರಯಾಣಿಸಿದ ಬಾಲಕನ ರಕ್ಷಣೆ
ಮಳೆಗಾಲ ಆರಂಭವಾಗಿರುವ ಕಾರಣ ರಸ್ತೆಗಳು, ತಗ್ಗು ಪ್ರದೇಶಗಳು, ಹಳ್ಳ ಕೊಳ್ಳಲು ತುಂಬಿ ಹರಿಯಲಿದೆ. ಈ ವೇಳೆ ಪ್ರಯಾಣ ಮಾಡುವಾಗ ಹೆಚ್ಚು ಮುಂಚಾಗ್ರತೆ ವಹಿಸುವುದು ಉತ್ತಮ. ವಿಶೇಷವಾಗಿ ನೀರು ತುಂಬಿದ ಅಂಡರ್ ಪಾಸ್, ತುಂಬಿ ಹರಿಯುತ್ತಿರುವ ಸೇತುವೆಯಲ್ಲಿ ಪ್ರಯಾಣ ಅಪಾಯಕ್ಕೆ ಆಹ್ವಾನ ನೀಡಿದಂತೆ. ಹೀಗಾಗಿ ಸೂಚನೆಗಳನ್ನು ಪಾಲಿಸುವುದು ಅತ್ಯಗತ್ಯ.