ಇಂಡೋನೇಷ್ಯಾದ ವಿಮಾನ ನಿಲ್ದಾಣದಲ್ಲಿ ಮೆಟ್ಟಿಲು ತೆಗೆದ ಕಾರಣ ವಿಮಾನದ ಸಿಬ್ಬಂದಿ ಕೆಳಗೆ ಬಿದ್ದಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೇ ರೀತಿಯ ಘಟನೆಗಳು ಭಾರತದಲ್ಲಿಯೂ ನಡೆದಿವೆ.
ವಿಮಾನದಿಂದ ಹೊರ ಬರೋವಷ್ಟರಲ್ಲಿಯೇ ಮೆಟ್ಟಿಲು ತೆಗೆದ್ರು; ಆಯತಪ್ಪಿ ಕೆಳಗೆ ಬಿದ್ದ ವ್ಯಕ್ತಿ, ವಿಡಿಯೋ ವೈರಲ್
ನವದಹೆಲಿ: ಕಜಕಸ್ತಾನ ಮತ್ತು ದಕ್ಷಿಣ ಕೊರಿಯಾದ ಪ್ರಯಾಣಿಕರ ವಿಮಾನ ಪತನ ಕಂಡು ಇಡೀ ವಿಶ್ವವೇ ಕಣ್ಣೀರು ಹಾಕಿತ್ತು. ಎರಡು ದಿನಗಳ ಹಿಂದೆಯಷ್ಟೇ ಗುಜರಾತಿನಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡು ಮೂವರು ಪೈಲಟ್‌ಗಳು ಮೃತರಾಗಿದ್ದರು. ಸಾಲು ಸಾಲು ವಿಮಾನ ದುರಂತಗಳು ನಡೆಯುತ್ತಿರೋದರಿಂದ ಸೋಶಿಯಲ್ ಮೀಡಿಯಾದಲ್ಲಿಯೂ ಇವುಗಳಿಗೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗುತ್ತಿವೆ. ಇದೀಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೋರ್ವ ವಿಮಾನದಿಂದ ಕೆಳಗೆ ಬಿದ್ದಿದ್ದಾರೆ. ಮೆಟ್ಟಿಲುಗಳಿವೆ ಎಂದು ತಿಳಿದು ಹೊರ ಬಂದ ವ್ಯಕ್ತಿ ಆಯತಪ್ಪಿ ಬಿದ್ದಿರೋ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಮೆಟ್ಟಿಲುಗಳ ಏಣಿ ವಿಮಾನದಿಂದ ದೂರ ಸರಿಸಿದ ಕಾರಣಕ್ಕೆ ಸಿಬ್ಬಂದಿ ಹೊರ ಬರುವಾಗ ಬಿದ್ದಿದ್ದಾರೆ. ಈ ಘಟನೆ ಇಂಡೋನೇಷಿಯಾ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ವಿಮಾನದ ಮೇಲೆ Transnusa airlines ಮತ್ತು ಮೆಟ್ಟಿಲು ಮೇಏಲೆ Jas Airport service ಎಂದು ಬರೆಯಲಾಗಿದೆ. 2023ರಲ್ಲಿ ಇದೇ ರೀತಿಯ ಘಟನೆಯೊಂದು ಭಾರತದಲ್ಲಿಯೂ ನಡೆದಿತ್ತು.
ಕಳೆದ ವರ್ಷ ಎಪ್ರಿಲ್‌ನಲ್ಲಿ, ಏರ್‌ಲೈನ್ಸ್ AIX ಕನೆಕ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯುರಿಟಿ ಏಜೆಂಟ್, ಹಿಂದೆ ಏರ್ ಏಷ್ಯಾ ಎಂದು ಕರೆಯಲಾಗುತ್ತಿತ್ತು, ಪುಣೆ ವಿಮಾನ ನಿಲ್ದಾಣದಲ್ಲಿ ಅದರ ಹಿಂದಿನ ಬಾಗಿಲಿನಿಂದ ವಿಮಾನವನ್ನು ಡಿಬೋರ್ಡಿಂಗ್ ಮಾಡುವಾಗ ಬಿದ್ದು ಸಾವನ್ನಪ್ಪಿದರು. ಪುಣೆಯ ಲೋಹೇಗಾಂವ್ ನಿವಾಸಿ 34 ವರ್ಷದ ವಿವಿನ್ ಆಂಥೋನಿ ಡೊಮಿನಿಕ್ ಎಂಬವರು ವಿಮಾನದ ಬಾಗಿಲಿನಿಂದ ಕೆಳಗೆ ಬಿದ್ದಿದ್ದರು. ಸಿಬ್ಬಂದಿಯ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿತ್ತು ಎಂದು ವರದಿಯಾಗಿತ್ತು. ಕೆಳಗೆ ಬಿದ್ದಿದ್ದ ವಿವಿನ್ ಮೃತರಾಗಿದ್ದರು. 2023ರ ಸೆಪ್ಟೆಂಬರ್‌ನಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ವಿಮಾನದ ಮೆಟ್ಟಿಲಿನಿಂದ ಕೆಳಗೆ ಬಿದ್ದ ಕಾಲು ಮುರಿದುಕೊಂಡಿದ್ದರು.
ಇದನ್ನೂ ಓದಿ: ರನ್‌ವೇಯಿಂದ ಕೆಳಗಿಳಿದು ಸ್ಪೋಟವಾದ 181 ಜನರಿದ್ದ ವಿಮಾನ; ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆ
ಬಿದ್ದು ಗಾಯಗೊಂಡಿದ್ದ ಗಗನಸಖಿ
ಈಸ್ಟ್ ಮಿಡ್‌ಲ್ಯಾಂಡ್ಸ್ ವಿಮಾನ ನಿಲ್ದಾಣದಲ್ಲಿ ಟೇಕಾಫ್‌ಗೆ ಸಿದ್ಧವಾಗಿದ್ದ ವಿಮಾನದಿಂದ ಗಗನಸಖಿಯೊಬ್ಬರು ಕೆಳಗೆ ಬಿದ್ದು ಗಾಯಗೊಂಡಿದ್ದರು. ಟಿಯುಐ ವಿಮಾನ ಟೇಕಾಫ್ ಆಗಲು ಸಿದ್ಧವಾಗಿತ್ತು. ವಿಮಾನಕ್ಕೆ ಜೋಡಿಸಲಾದ ಮೆಟ್ಟಿಲುಗಳನ್ನು ಅಲ್ಲಿಂದ ತೆಗೆಯಲಾಗಿತ್ತು. ಆದ್ರೆ ಸಿಬ್ಬಂದಿ ಇನ್ನು ಮೆಟ್ಟಿಲುಗಳಿವೆ ಎಂದು ತಿಳಿದು ಬಂದಿದ್ದರಿಂದ ವಿಮಾನದ ಸಿಬ್ಬಂದಿಗೆ ಕೆಳಗೆ ಬಿದ್ದಿದ್ದಾರೆ. ಮೆಟ್ಟಿಲು ತೆಗೆದಿರುವ ವಿಷಯ ತಿಳಿಯದ ಸಿಬ್ಬಂದಿ ಬಾಗಿಲು ತೆಗೆದು ಹೊರಗೆ ಬಂದಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಘಟನೆ ಡಿಸೆಂಬರ್ 16, 2024ರಂದು ನಡೆದಿತ್ತು.
ಇದನ್ನೂ ಓದಿ: ಟೇಕಾಫ್ ಆಗುವಾಗ ವಿಮಾನದಿಂದ ಕೆಳಗೆ ಬಿದ್ದ ಗಗನಸಖಿ; ಆಸ್ಪತ್ರೆಗೆ ದಾಖಲು
