ಅಮೆರಿಕ ಅಧ್ಯಕ್ಷರ ಹಳೇ ವಿಡಿಯೋ ಒಂದು ಮತ್ತೆ ಸಂಚಲನ ಮೂಡಿಸಿದೆ. ತನ್ನ ಪತ್ನಿ ಎಂದು ಭಾವಿಸಿದ ಜೋ ಬೈಡೆನ್ ಬೇರೊಬ್ಬ ಮಹಿಳೆಗೆ ಮುತ್ತಿಕ್ಕಲು ಪ್ರಯತ್ನಿಸಿದ್ದಾರೆ. ತಕ್ಷಣವೇ ಓಡೋಡಿ ಬಂದ ಜಿಲ್ ಬೈಡನ್ ಚುಂಬನ ತಪ್ಪಿಸಿದ್ದಾರೆ.  

ವಾಷಿಂಗ್ಟನ್(ಜು.19) ಅಮೆರಿಕ ಅಧ್ಯಕ್ಷ ಜೋ ಬೈಡನ್ ವಯಸ್ಸು ಹಾಗೂ ಆರೋಗ್ಯದ ಕುರಿತು ಹಲವು ಟೀಕೆಗಳು, ಮೀಮ್ಸ್ ಹಾಗೂ ಟ್ರೋಲ್‌ಗಳು ಹರಿದಾಡುತ್ತಲೇ ಇದೆ. ಬೈಡೆನ್‌ಗೆ ಸರಿಯಾಗಿ ಕಣ್ಣು ಕಾಣುತ್ತಿಲ್ಲ, ನೆನಪಿನ ಶಕ್ತಿ ಕುಂದಿದೆ ಅನ್ನೋ ಆರೋಪಗಳು ಪದೇ ಪದೇ ಕೇಳಿಬರುತ್ತಿದೆ. ಇದೀಗ ಹಳೇ ವಿಡಿಯೋ ಒಂದು ಬೈಡೆನ್ ಪಜೀತಿ ಸಿಲುಕಿದ ಘಟನೆ ವಿವರಿಸುತ್ತಿದೆ. ಕಾರ್ಯಕ್ರಮದ ವೇದಿಕೆಯಲ್ಲಿ ಜೋ ಬೈಡೆನ್ ತನ್ನ ಪತ್ನಿ ಜಿಲ್ ಬೈಡೆನ್ ಎಂದು ಮುತ್ತಿಕ್ಕಲು ಮುಂದಾಗಿದ್ದಾರೆ. ವಿಶೇಷ ಅಂದರೆ ಬೈಡೆನ್ ಎದರು ನಿಂತಿದ್ದ ಮಹಿಳೆ ತುಟಿಗೆ ತುಟಿ ತಾಗಿಸಲು ಸಜ್ಜಾಗಿದ್ದಾರೆ. ವೇದಿಕೆಯಲ್ಲೇ ಇನ್ನೇನು ಅನಾಹುತ ನಡೆದೋ ಹೋಗಲಿದೆ ಅನ್ನುವಷ್ಟರಲ್ಲೇ ದೂರದಲ್ಲಿ ಕುಳಿತಿದ್ದ ಬೈಡನ್ ಪತ್ನಿ ಜಿಲ್ ಬೈಡನ್ ಓಡೋಡಿ ಬಂದು ಮುತ್ತು ತಪ್ಪಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಅಮೆರಿಕದ ಶ್ವೇತಭವನದಲ್ಲಿ ಆಯೋಜಿಸಿದ ಮಹಿಳಾ ಇತಿಹಾಸ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಕಾರ್ಯಕ್ರಮದ ವೇದಿಕೆಯಲ್ಲಿ ಜೋ ಬೈಡೆನ್ ಹಾಗೂ ಇತರ ಕೆಲ ಗಣ್ಯರು ನಿಂತಿದ್ದಾರೆ. ಇತ್ತ ಜೋ ಬೈಡೆನ್ ಪಕ್ಕದಲ್ಲೇ ಮಹಿಳೆಯೊಬ್ಬರು ನಿಂತಿದ್ದರು. ಇದು ಮಹಿಳಾ ಪ್ರಧಾನ ಕಾರ್ಯಕ್ರಮವಾದ ಕಾರಣ ಹಲವು ಕ್ಷೇತ್ರಗಳ ಮಹಿಳಾ ಸಾಧಕಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಟ್ರಂಪ್ ಹತ್ಯೆಗೆ ಪಕ್ಕಾ ಗುರಿಯಿಟ್ಟಿದ್ದ ಥಾಮಸ್ ಟಾರ್ಗೆಟ್ ವಿಡಿಯೋ ರಿಲೀಸ್, ಪ್ರಾಣ ಉಳಿಸಿದ ಸ್ಟೈಲ್!

ಜೋ ಬೈಡೆನ್ ಪಕ್ಕದಲ್ಲಿದ್ದ ಮಹಿಳೆ ಕಡು ನೀಲಿ ಬಣ್ಣದ ಸ್ಯೂಟ್ ಧರಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜಿಲ್ ಬೈಡನ್ ಆಕಾಶ ನೀಲಿ ಬಣ್ಣದ ಸ್ಯೂಟ್ ಧರಿಸಿದ್ದರು. ಇನ್ನು ಕೂದಲಿನ ಬಣ್ಣ ಹೆಚ್ಚು ಕಡಿಮೆ ಒಂದೆ. ಎತ್ತರ ಕೂಡ ಒಂದೆ. ನೀಲಿ ಸ್ಯೂಟ್ ಧರಿಸಿದ್ದ ಈ ಮಹಿಳೆ ತನ್ನ ಪತ್ನಿ ಎಂದು ಜೋ ಬೈಡೆನ್ ಮುತ್ತಿಕ್ಕಲು ಮುಂದಾಗಿದ್ದಾರೆ. ಮಹಿಳೆಗೆ ಜೋ ಬೈಡೆನ್ ಪ್ರಯತ್ನ ಅರ್ಥವಾಗಿಲ್ಲ. ಹೀಗಾಗಿ ಬೈಡೆನ್ ಮುಖ ನೋಡಿ ನಿಂತುಕೊಂಡಿದ್ದಾರೆ.

Scroll to load tweet…

ಬೈಡೆನ್ ಮುತ್ತಿಕ್ಕಲು ತಲೆ ಬಾಗಿಸುತ್ತಿದ್ದಂತೆ ದೂರದಲ್ಲಿ ಕುಳಿತಿದ್ದ ಜಿಲ್ ಬೈಡೆನ್ ಓಡೋಡಿ ಬಂದಿದ್ದಾರೆ. ಬೈಡೆನ್ ಬಳಿ ಆಗಮಿಸಿದ ಜಿಲ್, ಕೈ ಹಿಡಿದು ನಾನು ಇಲ್ಲಿದ್ದೇನೆ ಎಂದಿದ್ದಾರೆ. ಈ ವೇಳೆ ಬೈಡೆನ್ ಎಚ್ಚೆತ್ತುಕೊಂಡಿದ್ದಾರೆ. ಬೈಡೆನ್ ಒಂದೇ ಬಾರಿ ನಕ್ಕು ಹಿಂದೆ ಸರಿದಿದ್ದಾರೆ. ಇತ್ತ ಮಹಿಳೆ ಕೂಡ ವೇದಿಕೆಯಿಂದ ತೆರಳಿದ್ದಾರೆ. ಈ ಮೂಲ ಜಿಲ್ ಬೈಡನ್ ಆಗಮನದಿಂದ ಇರಿಸು ಮುರಿಸು ತಪ್ಪಿದೆ. ಈ ವಿಡಿಯೋ ಮತ್ತೆ ಹರಿದಾಡುತ್ತಿದೆ. 

ಸಂಜೆ 4ರ ಬಳಿಕ ಅಮೆರಿಕ ಅಧ್ಯಕ್ಷ ಬೈಡೆನ್‌ಗೆ ಕೆಲಸ ಮಾಡಲಾಗದ ಸ್ಥಿತಿ: ಮಿಚೆಲ್‌ ಒಬಾಮಗೆ ಸಿಗುತ್ತಾ ಚಾನ್ಸ್‌?

ಜೋ ಬೈಡೆನ್‌ಗೆ ಮರೆವು ಮಾತ್ರವಲ್ಲ, ತಮ್ಮ ಪತ್ನಿ ಯಾರೆಂದು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಬೈಡೆನ್‌ಗೆ ವಿಶ್ರಾಂತಿ ಅಗತ್ಯವಿದೆ ಎಂದಿದ್ದಾರೆ. ಆದರೆ ಕೆಲವರು ಈ ವಿಡಿಯೋ ನೋಡಿದ ಬಳಿಕ ಜೋ ಬೈಡೆನ್‌ಗೆ ನೆನಪಿನ ಶಕ್ತಿ ಕೊರತೆ, ದೃಷ್ಟಿ ಸಮಸ್ಯೆ ಕಾಣುತ್ತಿಲ್ಲ. ಏನೋ ಒಂದು ಪ್ರಯತ್ನದಲ್ಲಿದ್ದರೂ ಅದನ್ನೂ ತಪ್ಪಿಸಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.