ಟ್ರಂಪ್ ಹತ್ಯೆಗೆ ಪಕ್ಕಾ ಗುರಿಯಿಟ್ಟಿದ್ದ ಥಾಮಸ್ ಟಾರ್ಗೆಟ್ ವಿಡಿಯೋ ರಿಲೀಸ್, ಪ್ರಾಣ ಉಳಿಸಿದ ಸ್ಟೈಲ್!

ಅಮೆರಿಕ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹತ್ಯೆ ಪ್ರಯತ್ನದ ಕುರಿತು ಹಲವು ಚರ್ಚೆಗಳು ನಡೆಯುತ್ತಿದೆ. ಥಾಮಸ್ ಕ್ರೂಕ್ ವೃತ್ತಿಪರ ಶೂಟರ್ ಅಲ್ಲ, ಆತನ ಗುರಿಗಳು ವಿಫಲ ಅನ್ನೋ ಚರ್ಚೆ ನಡೆದಿದೆ. ಆದರೆ ಥಾಮಸ್ ಕ್ರೂಕ್ಸ್ ಇಟ್ಟ ಗುರಿ ಪಕ್ಕಾ ಆಗಿತ್ತು. ಟ್ರಂಪ್ ತಲೆಗೆ ಪಕ್ಕಾ ಗುರಿಯಿಟ್ಟಿದ್ದ ಥಾಮಸ್ ಕ್ರೂಕ್ಸ್  ಟ್ರಿಗರ್ ಒತ್ತಿದ್ದ. ಈ ಕುರಿತ ಭಯಾನಕ ವಿಡಿಯೋ ಬಹಿರಂಗವಾಗಿದೆ. 
 

Donald trump assassination attempt Thomas Crooks shot target middle of head video reveals ckm

ವಾಷಿಂಗ್ಟನ್(ಜು.18) ಅಮೆರಿಕ ಮಾಜಿ ಅಧ್ಯಕ್ಷ  ಡೋನಾಲ್ಡ್ ಟ್ರಂಪ್ ಹತ್ಯೆ ಯತ್ನದ ಹಲವು ಸ್ಪೋಟಕ ಮಾಹಿತಿಗಳು ಬಹಿರಂಗವಾಗಿದೆ. ಟ್ರಂಪ್ ಹತ್ಯೆಗೆ ಇಟ್ಟ ಗುರಿ ಕುರಿತು ವಿಡಿಯೋ ಬಹಿರಂಗವಾಗಿದ್ದು, ಥಾಮಸ್ ಕ್ರೂಕ್ಸ್ ಎಂತಾ ಪಂಟರ್ ಆಗಿದ್ದ ಅನ್ನೋದು ಈ ವಿಡಿಯೋ ಬಹಿರಂಗಪಡಿಸುತ್ತಿದೆ. ಇಲ್ಲಿ ಡೋನಾಲ್ಡ್ ಟ್ರಂಪ್ ಜೀವ ಉಳಿಸಿದ್ದ ಟ್ರಂಪ್ ಸ್ಟೈಲ್ ಅನ್ನೋದು ವಿಶೇಷ. ಥಾಮಸ್ ಕ್ರೂಕ್ಸ್ ಬಾರಿ ಪ್ಲಾನ್ ಮಾಡಿ ಟ್ರಂಪ್ ಹತ್ಯೆಗೆ ಆಗಮಿಸಿದ್ದ. ಟ್ರಂಪ್ ತಲೆಗೆ ಇಟ್ಟ ಗುರಿ ಕೂದಲೆಳೆ ಅಂತರದಲ್ಲಿ ಮಿಸ್ ಆಗಿದೆ. ಇದರಿಂದ ಟ್ರಂಪ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

 C3Pಮೀಮ್ಸ್ ಈ ಘಟನೆಯ ವಿಡಿಯೋ ಒಂದನ್ನು ಬಹಿರಂಗಪಡಿಸಿದೆ. ಗುಂಡು ಟ್ರಂಪ್ ತಳೆ ಸೀಳಿ ಹೋಗುವಂತೆ ಹಾಗೂ ಒಂದೇ ಗುಂಡಿನ ಹೊಡೆತಕ್ಕೆ ಟ್ರಂಪ್ ಬಾರದ ಲೋಕಕ್ಕೆ ಪಯಣಿಸುವಂತೆ ಮಾಡಲು ಥಾಮಸ್ ಕ್ರೂಕ್ಸ್ ಗುರಿ ಇಟ್ಟಿದ್ದ. ಥಾಮಸ್ ಕ್ರೂಕ್ಸ್ ಇಟ್ಟ ಗುರಿ, ಕ್ರೂಕ್ಸ್ ಕುಳಿತಿದ್ದ ಸ್ಥಳ, ಗಂಡು ಹಾದು ಹೋದ ಅಂತರ, ವೇಗ ಎಲ್ಲವನ್ನೂ ವೈಜ್ಞಾನಿಕವಾಗಿ ಲೆಕ್ಕ ಹಾಕಿ ಈ ವಿಡಿಯೋ ರಿಲೀಸ್ ಮಾಡಲಾಗಿದೆ. 

ಟ್ರಂಪ್ ಪ್ರಾಣ ಉಳಿಸಿದ ಭಗವಾನ್ ಜಗನ್ನಾಥ, ಮಾಜಿ ಅಧ್ಯಕ್ಷನಿಗೆ ನೆರವಾದ 1976ರ ರಥ ಯಾತ್ರೆ!

ಈ ವಿಡಿಯೋದಲ್ಲಿ ಥಾಮಸ್ ಕ್ರೂಕ್ಸ್ ಇಟ್ಟ ಗುರಿ ಸ್ಪಷ್ಟತೆ ತಿಳಿಯಲಿದೆ. ಈ ಮೂಲಕ ಥಾಮಸ್ ಕ್ರೂಕ್ಸ್ ವೃತ್ತಿಪರನಲ್ಲ ಅನ್ನೋ ವಾದಕ್ಕೆ ಮನ್ನಣೆ ಸಿಗುತ್ತಿಲ್ಲ. ಇಷ್ಟೇ ಅಲ್ಲ ಥಾಮಸ್ ಪಕ್ಕಾ ಕ್ರಿಮಿನಲ್ ಅನ್ನೋದು ಈ ವಿಡಿಯೋ ಸಾಬೀತುಪಡಿಸಿದೆ. ಆದರೆ ಟ್ರಂಪ್ ವಿಶೇಷ ಶೈಲಿಯ ಭಾಷಣ ಅವರನ್ನು ಕಾಪಾಡಿದೆ. ಡೋನಾಲ್ಡ್ ಟ್ರಂಪ್ ಭಾಷಣ ಹಾಗೂ ಹಾಲಿ ಅಧ್ಯಕ್ಷ ಜೋ ಬೈಡನ್ ಭಾಷಣಕ್ಕೆ ಅಜಗಜಾಂತರ ವ್ಯತ್ಯಾಸವಿದೆ. ಟ್ರಂಪ್ ತಾವು ಭಾಷಣ ಮಾಡುತ್ತಾ ಸಭಾಂಗಣದ ಮೂಲೆ ಮೂಲೆಗೆ ತಿರುಗತ್ತದೆ. ಅದೂ ಕೂಡ ಒಮ್ಮೆಲೆ ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ ತಿರುಗಿಸುತ್ತಾರೆ. ಇದು ಟ್ರಂಪ್ ಸ್ಟೈಲ್. ಮಾತನಾಡುತ್ತಾ ಒಮ್ಮೆ ತಿರುಗುತ್ತಾರೆ, ಮತ್ತೆ ತಲೆ ಕೆಳಮುಖವಾಗಿ, ಮೇಲ್ಮುಖವಾಗಿ ಎತುತ್ತಾರೆ. ಈ ವಿಭಿನ್ನ ಶೈಲಿಯಿಂದ ಟ್ರಂಪ್‌ಗೆ ಇಟ್ಟಿದ್ದ ಗುರಿ ಕಿವಿಯನ್ನು ಸೀಳಿಕೊಂಡು ಸಾಗಿ ಪ್ರಾಣ ಉಳಿದಿದೆ.

 

 

ಇಸ್ರೇಲ್ ನಿವೃತ್ತ ಆಪೇರೇಶನ್ ಕಮಾಂಡರ್ ಆ್ಯರೋನ್ ಕೊಹೇನ್ ಈ ಕುರಿತು ಹತ್ಯೆ ಪ್ರಯತ್ನ ನಡೆದ ಬೆನ್ನಲ್ಲೇ ಮಾಹಿತಿ ನೀಡಿದ್ದರು. ಟ್ರಂಪ್ ತರೆಯ ಮಧ್ಯಭಾಗಕ್ಕೆ ಗುರಿ ಇಡಲಾಗಿದೆ. ಆದರೆ ತಪ್ಪಿದೆ ಎಂದಿದ್ದರು. ಇದೀಗ ಈ ವಿಡಿಯೋ ಸಾಕ್ಷ್ಯ ನೀಡಿದೆ. 

ಟ್ರಂಪ್ ಹತ್ಯೆಗೆ ಯತ್ನಿಸಿದ ಕ್ರೂಕ್ಸ್‌ಗೆ ಸರಿಯಾಗಿ ಗುಂಡು ಹಾರಿಸಲು ಬರುತ್ತಿರಲಿಲ್ಲ, ಈ ಕಾರದಿಂದಲೇ ಶೂಟಿಂಗ್ ಕ್ಲಬ್‌ನಿಂದ ತಿರಸ್ಕೃತಗೊಂಡಿದ್ದ ಅನ್ನೋ ಮಾಹಿತಿಗಳು ಚರ್ಚೆಯಾಗುತ್ತಿದೆ. ಆದರೆ ಶಾಲೆಯಲ್ಲಿ ತಿರಸ್ಕೃತಗೊಂಡಿದ್ದ ಕ್ರೂಕ್ಸ್  ಇದೀಗ ತನ್ನ ಗುರಿ ಕುರಿತು ಜಗತ್ತಿಗೆ ತಿಳಿಸಿದ್ದಾನೆ. ಅದೃಷ್ಟವಶಾತ್ ಟ್ರಂಪ್ ಪಾಣ ಉಳಿದಿದೆ.  

ಟ್ರಂಪ್ ತಲೆಗೆ ಗುರಿ ಇಟ್ಟವನೇ ಕ್ಷಣದಲ್ಲಿ ಹೆಣವಾದ: ಅಮೆರಿಕಾ ಮಾಜಿ ಅಧ್ಯಕ್ಷರ ಮೇಲೆ ನಡೆದ ದಾಳಿ ಹಿಂದಿನ ಕಾರಣವೇನು ?
 

Latest Videos
Follow Us:
Download App:
  • android
  • ios