ಮುಂಬೈನಿಂದ ಮ್ಯಾಂಚೆಸ್ಟರ್‌ಗೆ ತೆರಳುತ್ತಿದ್ದ ಭಾರತೀಯ ಪ್ರಯಾಣಿಕರು ಎಂಜಿನ್‌ನಲ್ಲಿ ತೊಂದರೆಯಾದ ಕಾರಣ ಕುವೈತ್‌ನಲ್ಲಿ 23 ತಾಸು ಸಿಲುಕಿದ್ದಾರೆ. ಊಟ-ತಿಂಡಿ ಸೌಲಭ್ಯವಿಲ್ಲದೆ ಪ್ರಯಾಣಿಕರು ಬಳಲಿದ್ದಾರೆ. ಗಲ್ಫ್ ಏರ್ ಭಾರತೀಯರಿಗೆ ಸೌಲಭ್ಯ ನಿರಾಕರಿಸಿದೆ ಎಂಬ ಆರೋಪ ಕೇಳಿಬಂದಿದೆ.
ಕುವೈತ್: ಮುಂಬೈನಿಂದ ಬ್ರಿಟನ್‌ನ ಮ್ಯಾಂಚೆಸ್ಟರ್‌ಗೆ ತೆರಳುತ್ತಿದ್ದ ಭಾರತೀಯರು 23 ತಾಸು ಕಾಲ ಕುವೈತ್‌ನಲ್ಲಿ ಸಿಲುಕಿದ್ದು, ಊಟ-ತಿಂಡಿ ಇಲ್ಲದೇ ಬಳಲಿದ್ದಾರೆ. ಭಾರತೀಯರು ಗಲ್ಫ್ ಏರ್ ಮೂಲಕ ಬಹ್ರೇನ್‌ಗೆ ತೆರಳಿ ಅಲ್ಲಿಂದ ಅದೇ ಸಂಸ್ಥೆಯ ವಿಮಾನದಲ್ಲಿ ಮ್ಯಾಂಚೆಸ್ಟರ್‌ಗೆ ಹೊರಟಿದ್ದರು. ಬಹ್ರೇನ್‌ನಿಂದ ಟೇಕಾಫ್ ಆದ 20 ನಿಮಿಷದಲ್ಲಿ ಎಂಜಿನ್‌ನಲ್ಲಿ ತೊಂದರೆ ಕಾಣಿಸಿಕೊಂಡ ಕಾರಣ ವಿಮಾನವನ್ನು ಕುವೈತ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ.
‘ಆದರೆ ವಿಮಾನ ನಿಲ್ದಾಣದಲ್ಲಿ ಐರೋಪ್ಯ ಒಕ್ಕೂಟ, ಬ್ರಿಟನ್ ಮತ್ತು ಅಮೆರಿಕ ಪ್ರಜೆಗಳಿಗೆ ಮಾತ್ರ ವಸತಿ, ಊಟ ಕೊಟ್ಟು ಭಾರತೀಯರನ್ನು ಗಲ್ಫ್ ಏರ್ ಸಿಬ್ಬಂದಿ ಮತ್ತು ವಿಮಾನ ನಿಲ್ದಾಣ ಕಡೆಗಣಿಸಿದೆ. ಏಕೆಂದರೆ ಭಾರತೀಯ ಪ್ರಯಾಣಿಕರು ಈ ಸವಲತ್ತಿಗೆ ನಿಯಮಾನುಸಾರ ಅರ್ಹರಲ್ಲ ಎಂದು ಗಲ್ಫ್ ಏರ್ ಹೇಳಿದೆ’ ಎಂದು ಸಂಕಷ್ಟಕ್ಕೆ ಸಿಲುಕಿರುವ ಪ್ರಯಾಣಿಕರು ಎಕ್ಸ್‌ನಲ್ಲಿ ಗಲ್ಫ್ ಏರ್ ಮತ್ತು ಏರ್ಪೋರ್ಟ್‌ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ನಡುವೆ ಈ ವಿಷಯವನ್ನು ಗಲ್ಫ್ ಏರ್ ಮುಂದೆ ಪ್ರಸ್ತಾಪಿಸಿ, ಸಮಸ್ಯೆ ಬಗೆಹರಿಸುವಂತೆ ಭಾರತ ಸರ್ಕಾರ ಕೋರಿಕೆ ಸಲ್ಲಿಸಿದೆ.
ಇದನ್ನೂ ಓದಿ: ಪ್ರತಿ ದಂಪತಿ ಕನಿಷ್ಠ 3 ಮಕ್ಕಳ ಹೆರಬೇಕು : ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
