Asianet Suvarna News Asianet Suvarna News

Russia Ukraine War: ಉಕ್ರೇನ್‌ನಿಂದ ಮರಳಿದ  ವಿದ್ಯಾರ್ಥಿಗಳಿಗೆ ನೆರೆಯ ದೇಶಗಳಲ್ಲೇ ಶಿಕ್ಷಣ ಚಾನ್ಸ್

* ಉಕ್ರೇನ್‌ನಿಂದ ಮರಳಿದ  ವಿದ್ಯಾರ್ಥಿಗಳಿಗೆ ನೆರೆಯ ದೇಶಗಳಲ್ಲೇ ಶಿಕ್ಷಣ ಚಾನ್ಸ್‌
* ಹಂಗೇರಿ, ಪೋಲೆಂಡ್‌, ಕಜಕಿಸ್ತಾನದ ಜೊತೆ ಚರ್ಚೆ
* ಕರ್ನಾಟಕ ಸಹ ವಿದ್ಯಾರ್ಥಿಗಳ ಪರವಾಗಿ ನಿಂತಿತ್ತು
* ಜೊತೆಗೆ ಮೂರರಿಂದ ನಾಲ್ಕನೇ ವರ್ಷಕ್ಕೆ ಬಡ್ತಿ ನೀಡುವುದರಲ್ಲೂ ಕೆಲವೊಂದು ವಿನಾಯ್ತಿ 

India in talks with Ukraine s neighbours for continuing education of evacuated student S  Jaishankar mah
Author
Bengaluru, First Published Apr 7, 2022, 3:15 AM IST | Last Updated Apr 7, 2022, 3:15 AM IST

ನವದೆಹಲಿ(ಏ. 07)  ಯುದ್ಧ ಪೀಡಿತ ಉಕ್ರೇನಿನಿಂದ (Russia Ukraine War) ವಿದ್ಯಾಭ್ಯಾಸವನ್ನು ಅರ್ಧಕ್ಕೇ ಮೊಟಕುಗೊಳಿಸಿ ಭಾರತಕ್ಕೆ ಸ್ಥಳಾಂತರಗೊಂಡಿರುವ ವಿದ್ಯಾರ್ಥಿಗಳ (Students) ಶಿಕ್ಷಣವನ್ನು ಮುಂದುವರೆಸಲು ನೆರವು ನೀಡುವಂತೆ ಹಂಗೇರಿ, ರೊಮೇನಿಯಾ, ಕಜಕಿಸ್ತಾನ ಮತ್ತು ಪೋಲೆಂಡ್‌ ಬಳಿ ಭಾರತ (India) ಮಾತುಕತೆ ನಡೆಸುತ್ತಿದೆ ಎಂದು ವಿದೇಶಾಂಗ (Union Minister) ಸಚಿವ ಎಸ್‌.ಜೈಶಂಕರ್‌ (S. Jaishankar) ಬುಧವಾರ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಉಕ್ರೇನ್‌ ಪರಿಸ್ಥಿತಿ ಕುರಿತ ಚರ್ಚೆ ವೇಳೆ ಮಾತನಾಡಿದ ಅವರು ‘ಉಕ್ರೇನಿಂದ ಸ್ಥಳಾಂತರಗೊಂಡ ವೈದ್ಯ ವಿದ್ಯಾರ್ಥಿಗಳು ಹಂಗೇರಿ ವಿಶ್ವವಿದ್ಯಾಲಯಗಳಲ್ಲಿ ಕೋರ್ಸ್‌ ಪೂರ್ಣಗೊಳಿಸಲು ಆ ದೇಶವು ಅನುಮತಿ ನೀಡಿದೆ. ಬೇರೆ ದೇಶಗಳೂ ಇಂಥದ್ದೇ ಪ್ರಸ್ತಾಪ ಮುಂದಿಟ್ಟಿವೆ. ಹಂಗೇರಿ, ರೊಮೇನಿಯಾ, ಕಜಕಿಸ್ತಾನ ಮತ್ತು ಪೋಲೆಂಡ್‌ ದೇಶಗಳಲ್ಲೂ ಉಕ್ರೇನ್‌ ರೀತಿಯ ಶಿಕ್ಷಣ ವ್ಯವಸ್ಥೆ ಇರುವ ಕಾರಣ ಭಾರತದ ಅತಂತ್ರ ವಿದ್ಯಾರ್ಥಿಗಳಿಗೆ ನೆರವು ನೀಡುವಂತೆ ಭಾರತ ಸರ್ಕಾರ ಮಾತುಕತೆ ನಡೆಸುತ್ತಿದೆ ಎಂದು ತಿಳಿಸಿದರು.

ಇದೇ ವೇಳೆ , ವೈದ್ಯ ಪದವಿಯ ಪ್ರಮುಖ 2 ಪರೀಕ್ಷೆಗಳನ್ನು ಬರೆಯುವುದರಿಂದ ಉಕ್ರೇನ್‌ ಸರ್ಕಾರ ಕೂಡಾ ವಿನಾಯಿತಿ ನೀಡಿದೆ. ಜೊತೆಗೆ ಮೂರರಿಂದ ನಾಲ್ಕನೇ ವರ್ಷಕ್ಕೆ ಬಡ್ತಿ ನೀಡುವುದರಲ್ಲೂ ಕೆಲವೊಂದು ವಿನಾಯ್ತಿ ಪ್ರಕಟಿಸಿದೆ. 6ನೇ ವರ್ಷದ ವಿದ್ಯಾರ್ಥಿಗಳಿಗೆ ಕಡ್ಡಾಯ ಸಿಆರ್‌ಒಸಿ ಪರೀಕ್ಷೆಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದರು.

Ukraine Crisis 3 ದಿನಕ್ಕೆ ಮುಗಿಸಲು ಬಂದ್ರು, 36 ದಿನವಾದರೂ ಗಟ್ಟಿಯಾಗಿ ನಿಂತಿದ್ದೇವೆ, ರಷ್ಯಾಗೆ ಝೆಲೆನ್ಸ್ಕಿ ತಿರುಗೇಟು!

ಉಕ್ರೇನ್‌-ರಷ್ಯಾ ಬಿಕ್ಕಟ್ಟಿನಲ್ಲಿ ಭಾರತ ಶಾಂತಿ ಪರ:   ಉಕ್ರೇನ್‌ ಹಾಗೂ ರಷ್ಯಾದ ನಡುವಿನ ಬಿಕ್ಕಟ್ಟಿನಲ್ಲಿ ಭಾರತವು ಶಾಂತಿಯ ಪರವಾಗಿದೆ ಹಾಗೂ ಭೀಕರ ಯುದ್ಧವನ್ನು ಕೂಡಲೇ ನಿಲ್ಲಿಸಲು ಕರೆ ನೀಡುತ್ತದೆ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಹೇಳಿದ್ದಾರೆ.

ಲೋಕಸಭೆಯಲ್ಲಿ ಉಕ್ರೇನಿನ ಬಿಕ್ಕಟ್ಟಿನ ವಿಚಾರವಾಗಿ ಮಾತನಾಡಿದ ಅವರು, ‘ಭಾರತವು ಆಧ್ಯಕ್ಷೀಯ ಮಟ್ಟದಲ್ಲಿ ಉಕ್ರೇನ್‌ ಹಾಗೂ ರಷ್ಯಾ ನಡುವೆ ಶಾಂತಿ ಮಾತುಕತೆ ಬಯಸುತ್ತದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ಉಭಯ ದೇಶಗಳ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ್ದಾರೆ. ರಷ್ಯಾದ ವಿದೇಶಾಂಗ ಸಚಿವ ಸರ್ಗೇಯ್‌ ಲಾವ್ರೊವ್‌ ದೆಹಲಿಗೆ ಭೇಟಿ ನೀಡಿದಾಗಲೂ ಈ ವಿಷಯವನ್ನು ಚರ್ಚಿಸಲಾಗಿದೆ. ಯುದ್ಧ ಕೊನೆಗೊಳಿಸಿ ಶಾಂತಿ ಮಾತುಕತೆ ಆರಂಭಿಸುವ ನಿಟ್ಟಿನಲ್ಲಿ ಯಾವುದೇ ರೀತಿಯ ಸಹಾಯ ಒದಗಿಸಲು ಭಾರತ ಸಿದ್ಧವಾಗಿದೆ’ ಎಂದರು.

ಇದೇ ವೇಳೆ ಉಕ್ರೇನಿನಲ್ಲಿ ನಡೆದ ಸಾಮೂಹಿಕ ಹತ್ಯಾಕಾಂಡವನ್ನು ಭಾರತವು ವಿರೋಧಿಸುತ್ತದೆ. ಅಲ್ಲದೇ ಈ ಕುರಿತು ಸ್ವತಂತ್ಯ ತನಿಖೆಗೆ ಆಗ್ರಹಿಸುತ್ತದೆ ಎಂದು ಹೇಳಿದರು.

ಉಕ್ರೇನಿನಲ್ಲಿ ಸಿಲುಕಿದ ಭಾರತೀಯರನ್ನು ಸುರಕ್ಷಿತವಾಗಿ ದೇಶಕ್ಕೆ ಮರಳಿ ತರುವ ಆಪರೇಶನ್‌ ಗಂಗಾ ಕಾರ್ಯಾಚರಣೆಯ ಬಗ್ಗೆ ಮಾತನಾಡಿದ ಜೈಶಂಕರ್‌, ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನದಿಂದಲೇ ಆಪರೇಶನ್‌ ಗಂಗಾ ಸಫಲವಾಯಿತು ಎಂದು ಶ್ಲಾಘಿಸಿದರು. ‘ಮೋದಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಹಾಗೂ ಉಕ್ರೇನಿನ ಅಧ್ಯಕ್ಷ ಜೆಲೆನ್‌ಸ್ಕಿ ಅವರೊಂದಿಗೆ ಮಾತುಕತೆ ನಡೆಸಿದರು. ಕದನ ವಿರಾಮದ ಸತತ ಉಲ್ಲಂಘನೆ ನಡುವೆಯೂ ಸಂಘರ್ಷ ವಲಯವಾದ ಸುಮಿ ಹಾಗೂ ಖಾರ್ಕೀವ್‌ನಲ್ಲಿ ಸಿಲುಕಿರುವ ಭಾರತೀಯರಿಗೆ ರಷ್ಯಾದ ಯೋಧರೇ ಸುರಕ್ಷಿತವಾಗಿ ಸ್ಥಳಾಂತರವಾಗಲು ನೆರವು ನೀಡಿದರು. ಇದು ಪ್ರಧಾನಿಯ ಮಾತುಕತೆಯಿಂದ ಸಾಧ್ಯವಾಯಿತು’ ಎಂದರು.

‘ಭಾರತವು ಯುದ್ಧಪೀಡಿತ ಉಕ್ರೇನಿನಿಂದ ತನ್ನ ನಾಗರಿಕರನ್ನು ಸ್ಥಳಾಂತರಿಸಿದ ಮೊದಲ ದೇಶವಾಗಿದೆ. ಹಲವಾರು ದೇಶಗಳು ಭಾರತದಿಂದ ಪ್ರೇರಣೆ ಪಡೆದು ಇಂತಹ ಕಾರ್ಯಾಚರಣೆಯನ್ನು ಆರಂಭಿಸಿದವು. ಭಾರತವು ಆಪರೇಶನ್‌ ಗಂಗಾದಡಿಯಲ್ಲಿ 90 ವಿಮಾನಗಳ ಮೂಲಕ ದೇಶದ ನಾಗರಿಕರನ್ನು ಮರಳಿ ಕರೆತಂದಿದ್ದ ಪ್ರೇರಣೆಯಿಂದಾಗಿ ಇನ್ನೊಂದು ದೇಶದ ವಿದೇಶಾಂಗ ಸಚಿವರು ಕೂಡಾ ಅವರ ಸರ್ಕಾರದ ನೆರವಿನೊಂದಿಗೆ 2 ವಿಮಾನಗಳಲ್ಲಿ ನಾಗರಿಕರನ್ನು ಮರಳಿ ತಂದರು ಎಂದು ಹೇಳಿದ್ದಾರೆ. ಭಾರತವು ಕೇವಲ ಆರ್ಥಿಕವಾಗಿ ಆತ್ಮನಿರ್ಭರವೆನಿಸಿಲ್ಲ. ಆಪರೇಶನ್‌ ಗಂಗಾದಂತಹ ಕ್ಲಿಷ್ಟಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿಭಾಯಿಸಿಯೂ ಜಗತ್ತು ತನ್ನತ್ತ ತಿರುಗಿ ನೀಡುವಂತೆ ಮಾಡಿದೆ’ ಎಂದರು.

Latest Videos
Follow Us:
Download App:
  • android
  • ios