Asianet Suvarna News Asianet Suvarna News

ಸ್ವಿಸ್ ಕಂಪನಿ ಮೇಲೆ ಸೈಬರ್‌ ದಾಳಿಗೆ 3 ಮಿಲಿಯನ್ ಟೂತ್‌ಬ್ರಷ್ ಬಳಸಿದ್ದ ಹ್ಯಾಕರ್‌ಗಳು


ಸ್ವಿಸ್ ಕಂಪನಿ ಮೇಲೆ ಸೈಬರ್ ದಾಳಿ ನಡೆಸಲು ಹ್ಯಾಕರ್‌ಗಳು 3 ಮಿಲಿಯನ್‌ ಸ್ಮಾರ್ಟ್‌ ಟೂತ್‌ಬ್ರಷ್‌ಗಳನ್ನೇ ಸೈಬರ್ ಆಯುಧಗಳನ್ನಾಗಿ ಬಳಸಿದ್ದರು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. 

Did you using smart phone to control tv, fan ac then you must read this story Hackers used 3 million toothbrushes in cyber attack on Swiss company akb
Author
First Published Feb 8, 2024, 12:19 PM IST | Last Updated Feb 8, 2024, 12:19 PM IST

ಸ್ವಿಸ್ ಕಂಪನಿ ಮೇಲೆ ಸೈಬರ್ ದಾಳಿ ನಡೆಸಲು ಹ್ಯಾಕರ್‌ಗಳು 3 ಮಿಲಿಯನ್‌ ಸ್ಮಾರ್ಟ್‌ ಟೂತ್‌ಬ್ರಷ್‌ಗಳನ್ನೇ ಸೈಬರ್ ಆಯುಧಗಳನ್ನಾಗಿ ಬಳಸಿದ್ದರು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಹ್ಯಾಕರ್‌ಗಳು ಮಾಲ್‌ವೇರ್ ಸೋಂಕಿತ 3 ಮಿಲಿಯನ್‌ ಸ್ಮಾರ್ಟ್‌ ಟೂತ್‌ ಬ್ರಷ್‌ಗಳನ್ನು ಬಳಸಿಕೊಂಡು ಡಿಡಿಒಎಸ್‌ ದಾಳಿ ಅಂದರೆ ಸೇವೆ ನಿರಾಕರಿಸುವ ವಿತರಣ ದಾಳಿ (Distributed Denial of Service)ಯ ಯೋಜನೆ ರೂಪಿಸಿದ್ದರು. ಇದು ಸ್ವಿಸ್ ಸಂಸ್ಥೆಗ ಭಾರಿ ಪ್ರಮಾಣದ ಆರ್ಥಿಕ ಹಾನಿಗೆ ಕಾರಣವಾಯ್ತು ಎಂದು ತಿಳಿದು ಬಂದಿದೆ. ಇದು ಇಂಟರ್‌ನೆಟ್‌ನಲ್ಲಿರುವ ಸಾಧನಗಳ (Internet of Things) ಲೋಪದೋಷವನ್ನು ಎತ್ತಿ ತೋರಿಸುತ್ತದೆ ಹಾಗೂ ಡಿಜಿಟಲ್ ಸ್ವಚ್ಛತೆಯ ಮಹತ್ವವನ್ನು ಒತ್ತಿ ಹೇಳುತ್ತದೆ.

ಇನ್ನು ಇಂಟರ್‌ನೆಟ್‌ನಲ್ಲಿ ಅಜ್ಞಾತ ಸ್ಥಳದಿಂದ ಕಾರ್ಯ ನಿರ್ವಹಿಸುವ ಹ್ಯಾಕರ್‌ಗಳು ಸದಾ ಸ್ಮಾರ್ಟ್ ಸಾಧನಗಳಾದ ಟೂತ್‌ ಬ್ರಷ್ ಸ್ವಿಚ್ ಬಲ್ಬ್  ಸ್ಮಾರ್ಟ್ ರಿಮೋಟ್, ಸ್ಮಾರ್ಟ್ ಫೋನ್, ಮುಂತಾದ ಸ್ಮಾರ್ಟ್ ಸಾಧನಗಳತ್ತ ತಮ್ಮನ್ನು ಕೇಂದ್ರಿಕರಿಸಿಕೊಂಡಿದ್ದು, ಮನುಷ್ಯರ ಕೆಲಸ ಸುಲಭ ಮಾಡುವ ಇವುಗಳೆಲ್ಲವೂ ಇಂದು ಇಂಟರ್‌ನೆಟ್‌ಗೆ ನೇರ ಸಂಪರ್ಕವನ್ನು ಹೊಂದಿರುತ್ತವೆ. ಸಾಮಾನ್ಯವಾಗಿ ಮನೆಗಳಲ್ಲಿ ನಾವು ಕುಳಿತಲ್ಲಿಂದ ಎದ್ದು ಹೋಗಬೇಕಲ್ಲಾ ಎಂಬ ಕಾರಣಕ್ಕೆ ನಮ್ಮ ಮನೆಯ ಎಲ್ಲಾ ಎಲೆಕ್ಟ್ರಿಕ್ ಉಪಕರಣಗಳ ನಿಯಂತ್ರಣವನ್ನು ಸ್ಮಾರ್ಟ್‌ಫೋನ್ ಮೂಲಕ ಬಳಸಲು ಬಯಸುತ್ತವೆ. ಆದರೆ ಹೀಗೆ ಆರಾಮವಾಗಿ ಕೂರಲು ಹೋಗಿ ಹ್ಯಾಕರ್‌ಗಳಿಗೆ ಸುಲಭ ತುತ್ತಾಗುತ್ತೇವೆ .

ಏಮ್ಸ್‌ ಬಳಿಕ ಕೋವಿಡ್‌ ಲಸಿಕೆಯ ‘ಕೋವಿನ್‌’ ವೆಬ್‌ ಮಾಹಿತಿ ಹ್ಯಾಕ್‌..!

ಅದೇ ರೀತಿ ಇಲ್ಲಿ ಸ್ವಿಸ್ ಕಂಪನಿ ನಿರೀಕ್ಷಿಸಿದ ಈ ಸೈಬರ್ ದಾಳಿಯಲ್ಲಿ ಅಂದಾಜು ಮೂರು ಮಿಲಿಯನ್‌ ಸ್ಮಾರ್ಟ್ ಟೂತ್ ಬ್ರಷ್‌ಗಳನ್ನು ಹ್ಯಾಕರ್‌ಗಳು ಸ್ವಿಸ್ ಕಂಪನಿ ವಿರುದ್ಧ ಡಿಸ್ಟ್ರಿಬ್ಯೂಟೆಡ್ ಡಿನೈಯಲ್ ಆಫ್ ಸರ್ವಿಸ್ ದಾಳಿಗೆ ಬಳಸಿದ್ದರು ಎಂದು ತಿಳಿದು ಬಂದಿದೆ.  ಇದರಿಂದ ಲಕ್ಷಾಂತರ ಯುರೋ( ಯುರೋಪಿಯನ್ ಕರೆನ್ಸಿ) ಮೊತ್ತದ ಹಾನಿ ಸಂಭವಿಸಿದೆ. ಇದು ಸೈಬರ್ ಬೆದರಿಕೆಯ ಹೊಸ ಸ್ವರೂಪವನ್ನು ಗುರುತಿಸಿದೆ. ಜೊತೆಗೆ ಇಂಟರ್‌ನೆಟ್ ಆಫ್ ಥಿಂಗ್ಸ್ ಎಂದು ಕರೆಯಲ್ಪಡುವ ಇಂಟರ್‌ನೆಟ್‌ನ ಸಾಧನಗಳಲ್ಲಿಒಂದಾಗಿರುವ ಈ ಸ್ಮಾರ್ಟ್ ಟೂಥ್ ಬ್ರಶ್‌ನಲ್ಲಿ ಅಡಗಿರುವ ಲೋಪದೋಷಗಳನ್ನು ಎತ್ತಿ ತೋರಿಸುತ್ತಿದೆ.

ಮೂಲತಃ ಈ ಸ್ಮಾರ್ಟ್ ಟೂತ್ ಬ್ರಷ್‌ಗಳನ್ನು ಇಂಟರ್‌ನೆಟ್ ಬಳಕೆದಾರರ ಅನುಕೂಲತೆಯನ್ನು ಹೆಚ್ಚಿಸಲು ಸೃಷ್ಟಿಸಲಾಯ್ತು. ಸಂಪರ್ಕ ವೈಶಿಷ್ಟ್ಯಗಳ ಜೊತೆ ಉತ್ತಮವಾದ ಇಂಟರ್‌ನೆಟ್ ಸ್ವಚ್ಛತೆಯನ್ನು ಉತ್ತೇಜಿಸಲು ವಿನ್ಯಾಸಗಳೊಳಿಸಲಾಗಿತ್ತು. ಆದರೆ ಇದರ ಈ ವೈಶಿಷ್ಟ್ಯತೆಯೇ ಸೈಬರ್‌ ಕ್ರಿಮಿನಲ್‌ಗಳನ್ನು ಇದು ಸುಲಭವಾಗಿ ಸೆಳೆಯುವಂತೆ ಮಾಡಿದೆ. ಜಾವಾ ಆಧರಿತ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಈ ಟೂತ್‌ಬ್ರಶ್‌ಗಳು ಮಾಲ್‌ವೇರ್ ವೈರಸ್ ಸೋಂಕಿಗೆ ಒಳಗಾಗಿದ್ದವು. ಅಲ್ಲದೇ ಇವು ಸ್ವಿಸ್ ಕಂಪನಿಯ ವೆಬ್‌ಸೈಟ್‌ನ್ನು ನಕಲಿ ಇಂಟರ್‌ನೆಟ್ ಟ್ರಾಫಿಕ್‌ನಿಂದ ತುಂಬಿ ವೆಬ್‌ಸೈಟ್‌ನ್ನು ಆಫ್‌ ಲೈನ್‌ಗ ಇಳಿಸಿ ಬಿಡುತ್ತಿದ್ದವು.

Cyber Attack: ಒಟಿಪಿನೂ ಇಲ್ಲ, ಮೆಸೇಜೂ ಇಲ್ಲ..ಬರೀ ಮಿಸ್‌ ಕಾಲ್‌ಗೆ ಮಿಸ್‌ ಆಯ್ತು ಅಕೌಂಟ್‌ನಲ್ಲಿದ್ದ 50 ಲಕ್ಷ!

ಈ ಸೈಬರ್ ದಾಳಿಯೂ ಹೆಸರಿಸದ ಸ್ವಿಸ್ ಸಂಸ್ಥೆಯನ್ನು ಗುರಿಯಾಗಿಸಿ  ವೆಬ್‌ಸೈಟ್ ಕುಸಿಯುವಂತೆ ಮಾಡಿತ್ತು, ಇದರಿಂದ ತುಂಬಾ ಮಹತ್ವದ ಆರ್ಥಿಕ ಕಾರ್ಯಾಚರಣೆಯ ಅಡ್ಡಿಗೆ ಕಾರಣವಾಗಿತ್ತು. ಇದು ಸೈಬರ್ ಲೋಕದಲ್ಲಿ ನಮ್ಮ ದಾಖಲೆಗಳು ಎಷ್ಟು ಸುರಕ್ಷಿತ ಎಂಬುದನ್ನು ಪ್ರಶ್ನೆ ಮಾಡುವುದರ ಜೊತೆಗೆ ಎಂತಹ ತೊಂದರೆ ಇಲ್ಲದ ಸಾಧನಗಳನ್ನು ಕೂಡ ಸೈಬರ್ ದಾಳಿಗೆ ಸುಲಭವಾಗಿ ಸಾಧನಗಳನ್ನಾಗಿಸಬಹುದು ಎಂಬುದನ್ನು ತೋರಿಸುತ್ತದೆ. 

ಮನೆಯ ಪ್ರತಿಯೊಂದಕ್ಕೂ ಕೆನಕ್ಟ್ ಆಗಿರುವ ಈ  ಸಾಧನಗಳು ಎಲ್ಲಾ ಸಮಯದಲ್ಲೂ ಆನ್ ಆಗಿಯೇ ಇರುವುದರಿಂದ ದಿನದ 24 ಗಂಟೆ ವಾರದ 7 ದಿನವೂ ನಾವು ಅವುಗಳ ಭದ್ರತೆ ಭೇದಿಸಲು ಪ್ರಯತ್ನಿಸುವ ಹ್ಯಾಕರ್‌ಗಳಿಗೆ ಸುಲಭವಾಗಿ ತೆರೆದುಕೊಂಡಿರುತ್ತೇವೆ. ಹೀಗಾಗಿ ಟಿವಿ ಆಫ್ ಮಾಡೋದಿಕೆ ಎದ್ದು ಹೋಗಬೇಕು ಲೈಟ್ ಆಫ್ ಮಾಡೋಕೆ ಮತ್ತೆ ಹೋಗಬೇಕು ಆದರೆ ಈ ಸ್ಮಾರ್ಟ್ ರಿಮೋಟ್‌ ಇದ್ರೆ  ಎಲ್ಲವನ್ನೂ ಕುಳಿತಲ್ಲಿಂದಲೇ ಮಾಡಬಹುದು ಎಂದು ಎಲ್ಲದಕ್ಕೂ ಇಂಟರ್‌ನೆಟ್ ಕನೆಕ್ಷನ್ ನೀಡಿದರೆ ನಿಮ್ಮ ಬ್ಯಾಂಕ್‌ ಖಾತೆಗೆ ನೀವೇ ಕನ್ನ ಹಾಕಿದಂತೆ.!

Latest Videos
Follow Us:
Download App:
  • android
  • ios