ಬೀಜಿಂಗ್‌[ಫೆ.04]: ಸಾಹಸಗಳಿಗೆ ಖ್ಯಾತಿ ಹೊಂದಿರುವ ಚೀನಾ, ಇದೀಗ ವುಹಾನ್‌ನಲ್ಲಿ ಕೇವಲ 10 ದಿನದಲ್ಲಿ ಅತ್ಯಾಧುನಿಕ ಆಸ್ಪತ್ರೆಯೊಂದನ್ನು ನಿರ್ಮಿಸಿದ್ದು, ಸೋಮವಾರ ಉದ್ಘಾಟನೆಯಾಗಿದೆ. 1000 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಲ್ಲಿ ಸೋಮವಾರ ಮೊದಲ ಹಂತದಲ್ಲಿ ನೂರಾರು ಕೊರೋನಾ ವೈರಸ್‌ ಪೀಡಿತರನ್ನು ದಾಖಲು ಮಾಡಿಕೊಳ್ಳಲಾಗಿದೆ.

ಕೊರೋನಾ ವೈರಸ್‌ಗೆ ಸಿಕ್ತು ಔಷಧಿ!: 48 ಗಂಟೆಯಲ್ಲಿ ರೋಗಿ ಗುಣಮುಖ?

ಈ ಆಸ್ಪತ್ರೆಗೆ ಸೇನೆಯ 1400ಕ್ಕೂ ಹೆಚ್ಚು ವೈದ್ಯರು, ದಾದಿಯರು ಮತ್ತು ಇತರೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 7000ಕ್ಕೂ ಹೆಚ್ಚು ಕಾರ್ಮಿಕರು ದಿನದ ಮೂರು ಪಾಳಿಯಲ್ಲಿ ಕೆಲಸ ಮಾಡಿ ಈ ಆಸ್ಪತ್ರೆ ನಿರ್ಮಿಸಿದ್ದಾರೆ. ಇಲ್ಲಿ ಎಲ್ಲಾ ರೀತಿಯ ಅತ್ಯಾಧುನಿಕ ಸೌಲಭ್ಯಗಳು ಲಭ್ಯವಿರಲಿದೆ.

ಇದೇ ವೇಳೆ ಹುಬೇ ಪ್ರಾಂತ್ಯದಲ್ಲಿ 1500 ಹಾಸಿಗೆ ಸಾಮರ್ಥ್ಯ ಇನ್ನೊಂದು ಆಸ್ಪತ್ರೆ ಕೂಡಾ ಬಹುತೇಕ ಪೂರ್ಣಗೊಂಡಿದ್ದು, ಬುಧವಾರ ಉದ್ಘಾಟನೆಗೊಳ್ಳಲಿದೆ.

ಕೊರೋನಾ ಸೋಂಕಿತರಿಗಾಗಿ 10 ದಿನದಲ್ಲಿ ಆಸ್ಪತ್ರೆ ಕಟ್ಟಲಾರಂಭಿಸಿದ ಚೀನಾ!