Asianet Suvarna News Asianet Suvarna News

ವೃದ್ಧಾಪ್ಯದಲ್ಲಿದ್ದ ಅಪ್ಪ ಅಮ್ಮ, ಸಾಕು ನಾಯಿಯ ತಲೆ ಕಡಿದು ಕೊಂದ ಪಾಪಿ

ತನ್ನಿಬ್ಬರು ಪೋಷಕರು ಹಾಗೂ ಅವರ ಸಾಕುನಾಯಿಯ ತಲೆ ಕಡಿದು ಹತ್ಯೆ ಮಾಡಿ ಬಳಿಕ ಪೊಲೀಸರ ಮೇಲೂ ದಾಳಿಗೆ ಮುಂದಾದ ವ್ಯಕ್ತಿಯೊಬ್ಬನಿಗೆ ಪೊಲೀಸರು ಗುಂಡಿಕ್ಕಿದ್ದಾರೆ.  ಜುಲೈ 9 ರಂದು ಈ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

California police shot the culprit who beheaded an elderly father, mother and a pet dog akb
Author
First Published Aug 27, 2024, 10:02 AM IST | Last Updated Aug 27, 2024, 10:05 AM IST

ತನ್ನಿಬ್ಬರು ಪೋಷಕರು ಹಾಗೂ ಅವರ ಸಾಕುನಾಯಿಯ ತಲೆ ಕಡಿದು ಹತ್ಯೆ ಮಾಡಿ ಬಳಿಕ ಪೊಲೀಸರ ಮೇಲೂ ದಾಳಿಗೆ ಮುಂದಾದ ವ್ಯಕ್ತಿಯೊಬ್ಬನಿಗೆ ಪೊಲೀಸರು ಗುಂಡಿಕ್ಕಿದ್ದಾರೆ.  ಜುಲೈ 9 ರಂದು ಈ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸರ ಬಾಡಿ ಕ್ಯಾಮರಾದಲ್ಲಿ ಈ ದೃಶ್ಯಾವಳಿ ಸೆರೆ ಆಗಿದೆ. ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಈ  ಆಘಾತಕಾರಿ ಘಟನೆ ನಡೆದಿದೆ. 

ಜುಲೈ 9 ರ ಬೆಳಗ್ಗೆ 7.30ರ ಸುಮಾರಿಗೆ ಪೊಲೀಸರ 911ಗೆ ತುರ್ತು ಕರೆ ಬಂದಿದ್ದು, ಮಹಿಳೆಯೊಬ್ಬರು ಕರೆ ಮಾಡಿದ್ದರು, ಮಹಿಳೆ ನೀಡಿದ ಮಾಹಿತಿ ಪ್ರಕಾರ, ಆಕೆಯ ಮೊಬೈಲ್‌ಗೆ ಸಂದೇಶವೊಂದು ಬಂದಿದ್ದು, ಅದರಲ್ಲಿ ಆಕೆಯ ದೂರದಲ್ಲಿರುವ ಹತ್ತಿರದ ಸಂಬಂಧಿಕರು ಗಾಯಗೊಂಡು ರಕ್ತಸಿಕ್ತವಾಗಿರುವ ಫೋಟೋ ಬಂದಿತ್ತು. ಹೀಗಾಗಿ ಸ್ಯಾನ್ ಜುವಾನ್ ಮೊಬೈಲ್ ಎಸ್ಟೇಟ್‌ ಒಳಗೆ ವಾಸ ಮಾಡುವ ತನ್ನ ವಯಸ್ಸಾದ ಸಂಬಂಧಿಕರ ಯೋಗಕ್ಷೇಮವನ್ನು ವಿಚಾರಿಸುವಂತೆ ಮಹಿಳೆ ಪೊಲೀಸರಿಗೆ ಮನವಿ ಮಾಡಿದರು. ಪೊಲೀಸರ ಮನವಿ ಮೇರೆಗೆ ಸ್ಥಳಕ್ಕೆ ತೆರಳಿದ್ದ ಪೊಲೀಸರಿಗೆ ಅಲ್ಲಿ ಶಾಕ್ ಕಾದಿತ್ತು.

ಪತ್ನಿ ತಲೆ ಕಡಿದು ಪೊಲೀಸ್ ಠಾಣೆಗೆ ಆಗಮಿಸಿದ ಕ್ರೂರಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್!

41 ವರ್ಷದ ಪುತ್ರ ತನ್ನ 79 ವರ್ಷದ ತಂದೆ ಆಂಟೊನೆಟ್ ಗೆರ್ಡ್ವಿಲ್ ಹಾಗೂ  77 ವರ್ಷದ ತಾಯಿ ರೊನಾಲ್ಡ್ ವಾಲ್ಟರ್ ಗೆರ್ಡ್ವಿಲ್  ಹಾಗೂ ಅವರ ಸಾಕುನಾಯಿಯ ತಲೆ ಕಡಿದು ಭೀಕರವಾಗಿ ಹತ್ಯೆ ಮಾಡಿದ್ದ. ಪೊಲೀಸರು ಮನೆಯೊಳಗೆ ಬರುತ್ತಿದ್ದಂತೆ ತಲೆ ಇಲ್ಲದ ದೇಹಗಳು ಅಲ್ಲಿ ಬಿದ್ದಿದ್ದವು. ಕೊಲೆ ಮಾಡಿದ ವ್ಯಕ್ತಿಯನ್ನು ಜೋಸೆಫ್ ಬ್ರಾಂಡನ್ ಗೆರ್ಡ್ವಿಲ್ ಎಂದು ಗುರುತಿಸಲಾಗಿದ್ದು, ಈತ ತನ್ನ ತಂದೆ ತಾಯಿ ಹಾಗೂ ಶ್ವಾನವನ್ನು ಹತ್ಯೆ ಮಾಡಿದ ನಂತರ ಗಾಲ್ಫ್‌ ಕಾರ್ಟ್‌ ಅನ್ನು ಓಡಿಸುತ್ತಿದ್ದ. ಈ ವೇಳೆ ಸ್ಥಳಕ್ಕೆ ಬಂದ ಅಧಿಕಾರಿಗಳ ಮೇಲೂ ಆತ ಹಲ್ಲೆಗೆ ಮುಂದಾಗಿದ್ದಾನೆ. ಲೋಹದ ವಸ್ತುವೊಂದರಿಂದ ಅವರ ಮೇಲೆ ಆತ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಆತ ಪೊಲೀಸರಿಗೆ ನಾನು ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಹೇಳಿದ್ದಾನೆ.

ಈತನಿಗೆ ಗುಂಡು ಹಾರಿಸುವ ಮೊದಲು ಪೊಲೀಸರು ಆತನಿಗೆ ಶರಣಾಗುವಂತೆ ಹೇಳಿ ಹಲವು ಬಾರಿ ನೆಲಕ್ಕೆ ಗುಂಡು ಹಾರಿಸಿದ್ದಾರೆ. ಆದರೆ ಆತ ಕೇಳದೇ ಇದ್ದಾಗ ಆತನಿಗೆ ಗುಂಡು ಹಾರಿಸಿದ್ದಾರೆ. ಗುಂಡೇಟಿನ ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದಾದ ನಂತರ ಅಲ್ಲಿನ ನಿರ್ವಹಣಾ ಕೆಲಸಗಾರನೊಬ್ಬ ಅಲ್ಲಿಗೆ ಬಂದಿದ್ದು, ರಕ್ತಸಿಕ್ತವಾಗಿದ್ದ ವ್ಯಕ್ತಿ ನನ್ನ ಮೇಲೆ ಹಲ್ಲೆ ಮಾಡಿ ನನ್ನ ಗಾಲ್ಫ್‌ ಕಾರ್ಟ್‌ನ್ನು ಕಿತ್ತುಕೊಂಡಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆದರೆ ಈತನ ಕೃತ್ಯಕ್ಕೆ ಏನು ಕಾರಣ ಎಂಬುದಿನ್ನು ಸಾಬೀತಾಗಿಲ್ಲ, ಅಲ್ಲದೇ ಈತ ಪೋಷಕರ ಹತ್ಯೆಗೆ ಯಾವ ಆಯುಧವನ್ನು ಬಳಸಿದ್ದಾನೆ ಎಂಬುದು ಕೂಡ ಖಚಿತವಾಗಿಲ್ಲ.

ಕೊಡಗು ಅಪ್ತಾಪ್ತೆಯ ಭೀಕರ ಹತ್ಯೆ ಪ್ರಕರಣ, ಮೃತ ವಿದ್ಯಾರ್ಥಿನಿಯ ರುಂಡ ಪತ್ತೆ

 

Latest Videos
Follow Us:
Download App:
  • android
  • ios