Asianet Suvarna News Asianet Suvarna News

ಕೋವಿಡ್ ಎದುರಿಸಿದವರಲ್ಲಿ ಪುರುಷರಿಗಿಂತ ಮಹಿಳಾ ಲೀಡರ್ಸೇ ಸ್ಟ್ರಾಂಗ್!

ಪುರುಷ ನಾಯಕರು ಇರುವ ದೇಶಗಳಿಗಿಂತಲೂ, ಮಹಿಳಾ ನಾಯಕಿಯರು ಇರುವ ದೇಶಗಳೇ ಕೋವಿಡ್ ಸಾಂಕ್ರಾಮಿಕವನ್ನು ಹೆಚ್ಚು ಪರಿಣಾಮಕಾರಿಯಾಗಿ ಎದುರಿಸಿವೆ! ಅದು ಹೇಗೆ?

 

women leaders are stronger than men while facing covid-19 situation
Author
Bengaluru, First Published Jun 25, 2022, 11:06 AM IST

ವಿಚಿತ್ರ ಅಧ್ಯಯನವೊಂದರಲ್ಲಿ ಗೊತ್ತಾಗಿರುವ ಸಂಗತಿಯಿದು- ಅದೇನು ಅಂದರೆ, ಪುರುಷ ನಾಯಕರು ಇರುವ ದೇಶಗಳಿಗಿಂತಲೂ, ಮಹಿಳಾ ನಾಯಕಿಯರು ಇರುವ ದೇಶಗಳೇ ಕೋವಿಡ್ ಸಾಂಕ್ರಾಮಿಕವನ್ನು ಹೆಚ್ಚು ಪರಿಣಾಮಕಾರಿಯಾಗಿ ಎದುರಿಸಿವೆ!

ಹೌದು, ಜನವರಿ ಮತ್ತು ಡಿಸೆಂಬರ್ 2020ರ ನಡುವೆ 91 ರಾಷ್ಟ್ರಗಳ ಕೋವಿಡ್ ಸಾಂಕ್ರಾಮಿಕ ಸ್ಥಿತಿಗತಿಯನ್ನು ಹೊಸದೊಂದು ಸಂಶೋಧನಾ ಅಧ್ಯಯನ ವಿಶ್ಲೇಷಿಸಿದೆ. 

ಜಗತ್ತಿನಾದ್ಯಂತ COVID-19 ವೈಫಲ್ಯವನ್ನು ಒಮ್ಮೆ ನೆನಪಿಸಿಕೊಳ್ಳಿ. ಡೊನಾಲ್ಡ್ ಟ್ರಂಪ್‌ ಲಸಿಕೆ ನಡೆಯೋಲ್ಲ, ನಾನು ತೆಗೆದುಕೊಳ್ಳೋಲ್ಲ ಎಂದೆಲ್ಲಾ ಗಳುಹಿದರು. ಚೀನಾದಲ್ಲಿ ಏನಾಗ್ತಾ ಇದೆ ಅನ್ನುವುದು ಗೊತ್ತೇ ಆಗದ ಹಾಗೆ ಕ್ಸಿ ಜಿನ್‌ಪಿಂಗ್ ನೋಡಿಕೊಂಡರು. ಭಾರತದಲ್ಲಿ ನರೇಂದ್ರ ಮೋದಿ ಆಡಳಿತವೂ ಕೋವಿಡ್ ನಿರ್ವಹಣೆಯಲ್ಲಿ ವೈಫಲ್ಯ ಕಂಡು ಲಕ್ಷಾಂತರ ಸಾವುಗಳಾದವು. ಕೋವಿಡ್ ನಿಯಮಗಳನ್ನು ಬ್ರಿಟನ್ ಅಧ್ಯಕ್ಷ ಬೋರಿಸ್ ಜಾನ್ಸನ್ ಕಡೆಗಣಿಸಿದರು, ಸೋಂಕಿಗೆ ತುತ್ತಾದರು. ಇವರೆಲ್ಲ ಬಲಿಷ್ಠ ನಾಯಕರು ಎನಿಸಿಕೊಂಡವರು! 

ಹಾಗಾದರೆ ಬಲವಾದ ಮಹಿಳಾ ನಾಯಕರು ಇದ್ದಲ್ಲಿ COVID-19 ಸಾಂಕ್ರಾಮಿಕವನ್ನು ಹೇಗೆ ನಿಭಾಯಿಸಿದರು? 

Personal Finance: ವ್ಯಾಪಾರಸ್ಥ ಮಹಿಳೆಯರಿಗೆ ಆರ್ಥಿಕ ಸಾಕ್ಷರತೆ ಬೇಕು!

ನೇಚರ್ ಪೋರ್ಟ್‌ಫೋಲಿಯೊ ಮಾಧ್ಯಮದ ವೈಜ್ಞಾನಿಕ ವರದಿಗಳು ಇದನ್ನು ಹೇಳಿವೆ. ಮಹಿಳಾ ನಾಯಕರನ್ನು ಹೊಂದಿರುವ ದೇಶಗಳು ಪುರುಷ ಆಡಳಿತದ ರಾಷ್ಟ್ರಗಳಿಗಿಂತ ಶೇಕಡಾ 40ರಷ್ಟು ಕಡಿಮೆ COVID-19 ಸಾವುಗಳನ್ನು ದಾಖಲಿಸಿದವು. ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾನಿಲಯದ ಸಂಶೋಧಕರು ಪ್ರಕಟಿಸಿದ ಈ ಪ್ರಬಂಧದ ಪ್ರಕಾರ, ವ್ಯತ್ಯಾಸವು ಸ್ಪಷ್ಟವಾಗಿದೆ. ಮಹಿಳಾ ನಾಯಕರು ಬಹಳಷ್ಟು ದೃಢವಾಗಿ ಕೋವಿಡ್‌ ಅನ್ನು ಎದುರಿಸಿದರು. 

ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾನಿಲಯದ ಬಿಸಿನೆಸ್ ಸ್ಕೂಲ್‌ನ ಅಸೋಸಿಯೇಟ್ ಪ್ರೊಫೆಸರ್ ಕೆಲ್ವಿನ್ ಟ್ಯಾನ್ ಹೇಳುವಂತೆ ಈ ಅಂಕಿಅಂಶವು COVID-19 ಸೋಂಕು ಮತ್ತು ಸಾವಿನ ದರಗಳ ಮೇಲೆ ಮಾಡಿದ ಪ್ರಮುಖ ಸಂಶೋಧನೆ. "ಮಹಿಳೆಯರು ಸರ್ಕಾರದ ಮುಖ್ಯಸ್ಥರಾಗಿರುವ ದೇಶಗಳು ಪುರುಷ ನಾಯಕತ್ವವನ್ನು ಹೊಂದಿರುವ ದೇಶಗಳನ್ನು ಮೀರಿಸಿವೆ. ಸರಾಸರಿ 39.9ರಷ್ಟು ಕಡಿಮೆ ಕೋವಿಡ್ ಸಾವುಗಳು ಅಲ್ಲಿ ಸಂಭವಿಸಿವೆ" ಎಂದು ಟಾನ್ ಹೇಳುತ್ತಾರೆ.

ಸರ್ಜರಿ ಮಾಡಿಸಿಕೊಂಡ ನಂತರ ಹೃದಯಾಘಾತದಿಂದ ಸಾವನ್ನಪ್ಪಿದ ಬ್ರೆಜಿಲ್ ಸುಂದರಿ

ಇದಕ್ಕೆ ಕಾರಣಗಳೇನಿರಬಹುದು? 
ತಜ್ಞರು ಹೇಳಿರುವ ಪ್ರಕಾರ, ಮಹಿಳಾ ನಾಯಕರು ಹೆಚ್ಚು ತ್ವರಿತ ಮತ್ತು ನಿರ್ಣಾಯಕ ಕ್ರಮವನ್ನು ತೆಗೆದುಕೊಂಡುದು ಮೊದಲನೆಯ ಕಾರಣ. ಸಮಾಜದ ಮೇಲೆ ವ್ಯಾಪಕವಾದ ಪ್ರಭಾವ ಬೀರುವ ನಿರ್ಣಯಗಳ ಬಗ್ಗೆ ಅವರಿಗೆ ವಿಶಾಲ ದೃಷ್ಟಿಕೋನವಿತ್ತು ಮತ್ತು ನವೀನ ಚಿಂತನೆಯನ್ನು ಸ್ವೀಕರಿಸಿದ್ದರು. 

ನಾಯಕಿಯರು ಮಾನವ ಜೀವನದ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದಾರೆ. ಸಾವು ನೋವುಗಳ ಬಗ್ಗೆ ಸೆನ್ಸಿಟಿವ್ ಆಗಿದ್ದಾರೆ. ಇದು ಇದು ಸಾಂಕ್ರಾಮಿಕ ತಡೆಗಟ್ಟುವಿಕೆ ಮತ್ತು ಫಲಿತಾಂಶದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕೋವಿಡ್ ಹರಡುವುದನ್ನು ತಡೆಯಲು ಅನೇಕ ದೇಶಗಳು ಅನೇಕ ವಿಧಾನಗಳನ್ನು ಅಳವಡಿಸಿಕೊಂಡಿವೆ. ಆದರೆ ಸಾಮಾಜಿಕ- ಆರ್ಥಿಕ ಪರಿಸ್ಥಿತಿಗಳಲ್ಲಿ ವ್ಯತ್ಯಾಸಗಳಿವೆ. ಅಕ್ಕಪಕ್ಕದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ಗಳಲ್ಲಿಯೂ ಅನಾರೋಗ್ಯ ಮತ್ತು ಮರಣದಲ್ಲಿ ತೀವ್ರ ವ್ಯತ್ಯಾಸಗಳಿವೆ.

ಆಸ್ಟ್ರೇಲಿಯಾದ ಜನಸಂಖ್ಯೆಯು ನ್ಯೂಜಿಲ್ಯಾಂಡ್‌ಗಿಂತ 5 ಪಟ್ಟು ಹೆಚ್ಚು. ಆಸ್ಟ್ರೇಲಿಯಾವು ನ್ಯೂಜಿಲೆಂಡ್ನಲ್ಲಿ ಆದುದಕ್ಕಿಂತ ಸುಮಾರು 13 ಪಟ್ಟು ಹೆಚ್ಚು ಸೋಂಕುಗಳು ಮತ್ತು 36 ಪಟ್ಟು ಹೆಚ್ಚು ಸಾವನ್ನು ಕಂಡಿದೆ. ನ್ಯೂಜಿಲ್ಯಾಂಡ್‌ನ ಜೆಸಿಂಡಾ ಆರ್ಡೆನ್, ಜರ್ಮನಿಯ ಏಂಜೆಲಾ ಮರ್ಕೆಲ್, ಫಿನ್ಲೆಂಡ್‌ನ ಸನ್ನಾ ಮರಿನ್ ಇವರೆಲ್ಲ ಈ ಸಂದರ್ಭದಲ್ಲಿ ತಮ್ಮ ದೇಶಗಳಿಗೆ ದೃಢ ನಾಯಕತ್ವ ನೀಡಿದರು. 

ಲಿಂಗ ಅನುಪಾತ, ಜನಸಂಖ್ಯಾ ಸಾಂದ್ರತೆ, ನಗರೀಕರಣ, ರಾಜಕೀಯ ಭ್ರಷ್ಟಾಚಾರ ಇವೆಲ್ಲವೂ ಆಯಾ ದೇಶಗಳ ಸಾಂಕ್ರಾಮಿಕದ ಅನುಭವವನ್ನು ಬದಲಾಯಿಸಿವೆ. ಆದರೆ ಸ್ತ್ರೀ ನಾಯಕತ್ವ, ಹೆಚ್ಚು ಶಿಕ್ಷಣ, ಧಾರ್ಮಿಕ ವೈವಿಧ್ಯತೆ ಮತ್ತು ಸರ್ಕಾರದ ಮೇಲಿನ ಸಾರ್ವಜನಿಕ ನಂಬಿಕೆ ಹೆಚ್ಚು ಇದ್ದಲ್ಲಿ ಸೋಂಕು ಮತ್ತು ಸಾವಿನ ಪ್ರಮಾಣ ಕಡಿಮೆ ಇದೆ.

37 ವರ್ಷದ ಬಳಿಕ 10ನೇ ತರಗತಿ ಪರೀಕ್ಷೆ ಪಾಸ್ ಮಾಡಿದ ಅಮ್ಮ
 

Follow Us:
Download App:
  • android
  • ios