ನಮ್ಮ ಕಾಲದಲ್ಲಿ ಇರುತ್ತಿದ್ದ ಕೆಲಸದ ಹೊರೆ ಅಂದ್ರೆ ಎಷ್ಟು ಮಾಡಿದ್ರೂ ಮುಗೀತಿರ್ಲಿಲ್ಲ. ಈಗಿನವ್ರಿಗೇನು ಮಜವಾಗಿದ್ದಾರೆ ಎಂಬುದು ಹಲವು ಅತ್ತೆಯರ ಕೊಂಕು, ಬೇಸರ... ಆದರೆ, ನಿಜವೆಂದರೆ ಇಂದಿನ ಮಹಿಳೆಯರು ಮಾಡುವಷ್ಟು ಕೆಲಸವನ್ನು ಇದುವರೆಗಿನ ಯಾವ ತಲೆಮಾರು ಕೂಡಾ ಮಾಡುತ್ತಿರಲಿಲ್ಲ. ಇದೇನು ಸುಮ್ಮನೆ ಹೇಳಿದ್ದಲ್ಲ, ಅಧ್ಯಯನ ವರದಿ ಸ್ವಾಮಿ ಇದು. 

ಹೌದು, ಹಿಂದಿನವರು ನೀರು ಹೊರಬೇಕಿತ್ತು, ರಾಗಿ ಬೀಸಬೇಕಿತ್ತು, ಹಿಟ್ಟು ರುಬ್ಬಬೇಕಿತ್ತು, ಮನೆ ತುಂಬಾ ಮಕ್ಕಳು ಬೇರೆ... ಅವರಿಗೆ ಮುಗಿಯದಷ್ಟು ಕೆಲಸವೇ. ಆದರೆ, ಇಂದಿನ ಮಹಿಳೆ ಕಚೇರಿ ಕೆಲಸವನ್ನೂ ಮಾಡಿ, ಮನೆಗೆಲಸವನ್ನೂ ನಿಭಾಯಿಸಿ ಮಕ್ಕಳನ್ನೂ ನೋಡಿಕೊಳ್ಳುತ್ತಾಳೆ. ಮನೆಯಲ್ಲಿ ಹಿರಿಯರಿಗೆ ಅನಾರೋಗ್ಯವಿದ್ದರೆ ಅವರನ್ನೂ ನೋಡಿಕೊಳ್ಳುತ್ತಾರೆ. ಹೆಚ್ಚಿನ ಹಿರಿಯ ವಯಸ್ಸಿನ ಹೆಂಗಸರಿಗೆ ಕಚೇರಿ ಕೆಲಸವೇನು ಶ್ರಮದ್ದಲ್ಲ ಎಂಬ ತಾತ್ಸಾರ. ಆದರೆ, ಅದಕ್ಕೆ ಕೂಡಾ ಎನರ್ಜಿ ಹಾಕಬೇಕು, ಮಾನಸಿಕ, ಬೌದ್ಧಿಕ ಶ್ರಮ ಕೂಡಾ ಶ್ರಮವೇ ಅಲ್ಲವೇ? 

ಈ ಕುಟುಂಬದಲ್ಲಿ ಅಣ್ಣಂದಿರೇ ಮಾಡ್ತಿದ್ರು ತಂಗಿಯರ ರೇಪ್!

ಮದುವೆಯವರೆಗೆ ಮಜವಾಗಿ ಬೆಳೆವ ಇಂದಿನ ಹೆಣ್ಮಕ್ಕಳು, ನಂತರದಲ್ಲಿ ಕಚೇರಿ, ಮನೆ, ಮಕ್ಕಳು ಎಲ್ಲ ಜವಾಬ್ದಾರಿಯನ್ನು ನಿಭಾಯಿಸುವ ಕಲೆ ಕಲಿಯುವುದು ಒಂದು ಪವಾಡವೇ. ಶಿಕ್ಷಣ ಹಾಗೂ ತಂತ್ರಜ್ಞಾನ ಆಕೆಗೆ ಬೆನ್ನೆಲುಬಾಗುತ್ತವೆ. ಹಾಗಿದ್ದರೂ, ಕಚೇರಿಯಲ್ಲಿ ಲಿಂಗ ತಾರತಮ್ಯ, ಲೈಂಗಿಕ ದೌರ್ಜನ್ಯ, ಮಾನಸಿಕ ದೌರ್ಜನ್ಯ, ಸಂಬಳದಲ್ಲಿ ತಾರತಮ್ಯ ಎದುರಿಸಬೇಕಾಗುತ್ತದೆ. ಮನೆಯಲ್ಲಿ ಕೂಡಾ ಪ್ರೋತ್ಸಾಹಕ್ಕಿಂತ ಕೊಂಕು ಮಾತುಗಳು ಕುಟುಕುವುದೇ ಹೆಚ್ಚು. ಅವೆಲ್ಲವನ್ನೂ ಎದುರಿಸುತ್ತಲೇ ಎಲ್ಲವನ್ನೂ ನಿಭಾಯಿಸುತ್ತಾಳೆ ಆಕೆ. 

ಪುರುಷರಿಗಿಲ್ಲದ ಜವಾಬ್ದಾರಿ
ಖುಷಿಯ ವಿಚಾರವೆಂದರೆ ಹೆಚ್ಚು ಮಹಿಳೆಯರು ಸುಶಿಕ್ಷಿತರಾಗಿ ಉದ್ಯೋಗಕ್ಕೆ ಹೊರಳುತ್ತಿರುವುದು. ಆದರೆ, ಹಾಗಂಥ ಮನೆ ಹಾಗೂ ಮನೆಗೆಲಸಗಳಿಂದ ಮಾತ್ರ ಅವರಿಗೆ ರಿಯಾಯಿತಿ ಸಿಕ್ಕದಿರುವುದು ದುರಂತ. ವರದಿಯ ಪ್ರಕಾರ, ವೃತ್ತಿನಿರತ ಮಹಿಳೆಯರು ಹೆಚ್ಚು ಸಮಯವನ್ನು ಕಚೇರಿಯಲ್ಲೇ ಕಳೆಯುತ್ತಿದ್ದರೂ ಮಗು ನೋಡಿಕೊಳ್ಳುವುದು ಹಾಗೂ ಮನೆಗೆಲಸಗಳಲ್ಲಿ ಅವರ ಪಾತ್ರವೇ ಇರುವುದು. ಅವರ ಪತಿಯಾಗಲೀ, ಕುಟುಂಬದ ಇತರೆ ಪುರುಷರಾಗಲೀ ಈ ಜವಾಬ್ದಾರಿ ನಿರ್ವಹಿಸುವುದು ಬಹಳ ಅಪರೂಪವೇ. ಕೆಲವೊಮ್ಮೆ ಮಾಡಿದರೂ ಸಹಾಯದ ರೂಪದಲ್ಲಿರುತ್ತದೆಯೇ ಹೊರತು, ತಮ್ಮದೂ ಜವಾಬ್ದಾರಿ ಎಂಬ ಮನೋಭಾವ ಅವರದಾಗಿರುವುದಿಲ್ಲ. 

ವಿಶೇಷ ಪಾಲಿಸಿಯಿಲ್ಲ
ಮಹಿಳೆಯರು ಪುರುಷರಿಗಿಂತಾ ಮನೆಯ ಜವಾಬ್ದಾರಿಯನ್ನು ಹೆಚ್ಚಾಗಿ ವಹಿಸಿಕೊಂಡರೂ, ಅವರಿಗಾಗಿ ಕಚೇರಿಯಲ್ಲಿ ವಿಶೇಷ ಪಾಲಿಸಿಗಳೇನೂ ಇಲ್ಲ. ಅವರಿಗೆ ಪುರುಷರಿಗಿರುವಷ್ಟೇ ಮೆಡಿಕಲ್ ಲೀವ್, ಸಿಕ್ ಲೀವ್, ವರ್ಕಿಂಗ್ ಅವರ್ಸ್ ಇರುವುದು. ಒಂದೇ ಒಂದು ಅನಿವಾರ್ಯ ರಜೆ ಎಂದರೆ ಮೆಟರ್ನಿಟಿ ಲೀವ್ ಸಿಗುತ್ತದೆ. ಅದಕ್ಕೂ ಕಚೇರಿಯ ಪುರುಷರ ಅಸೂಯೆ ಎದುರಿಸಬೇಕು. ಮೆಟರ್ನಿಟಿ ಲೀವ್ ಕೊಡಬೇಕೆಂಬ ಕಾರಣಕ್ಕೇ ಕೆಲಸದಿಂದ ತೆಗೆದು ಹಾಕುವ ಕಂಪನಿಗಳೂ ಇವೆ. 

ನಾನೆಷ್ಟು ಹಣ ವ್ಯರ್ಥ ಮಾಡುತ್ತಿದ್ದೇನೆಂದು ತಿಳಿಯಲು ಲಾಕ್‌ಡೌನ್ ಹೇರಬೇ ...

ಹೆಚ್ಚಿನ ಜವಾಬ್ದಾರಿಗಳ ಪರಿಣಾಮ
ಶೇ.54ರಷ್ಟು  ಮಹಿಳೆಯರು ಮೊದಲ ಬಾರಿ ಮಗುವಾದಾಗ ಕೆಲಸದಿಂದ ಹೆಚ್ಚಿನ ರಜೆ ತೆಗೆದುಕೊಳ್ಳುತ್ತಾರೆ. ಜೊತೆಗೆ, ಮಗುವಾದ ನಂತರ ಹೆಚ್ಚು ಫ್ಲೆಕ್ಸಿಬಲ್ ಆದ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಾರೆ. ಸಂಬಳ ಕಡಿಮೆಯಾದರೂ ಸರಿ ಎಂದು ಕಾಂಪ್ರಮೈಸ್ ಆಗುವುದು ಇಲ್ಲವೇ ಉದ್ಯೋಗ ಬಿಡುವುದು ಈ ಸಂದರ್ಭದಲ್ಲೇ. ಮಕ್ಕಳ ಹೆಚ್ಚಿನ ಇಲ್ಲವೇ ಸಂಪೂರ್ಣ ಜವಾಬ್ದಾರಿಯನ್ನು ಅವರೇ  ವಹಿಸಿಕೊಳ್ಳಬೇಕಾದುದು ಇದಕ್ಕೆ ಕಾರಣ.  ಇನ್ನು ಮನೆಯಲ್ಲಿ ಹಿರಿಯರಿಗೆ ಅನಾರೋಗ್ಯವಿದ್ದು ಅವರನ್ನು ನೋಡಿಕೊಳ್ಳಬೇಕೆಂದರೂ ಮಹಿಳೆಯೇ ಉದ್ಯೋಗ ಬಿಟ್ಟು ನೋಡಿಕೊಳ್ಳುತ್ತಾಳೆ. ಇವೆಲ್ಲವೂ ಧೀರ್ಘಕಾಲದಲ್ಲಿ ಆಕೆ ಆರ್ಥಿಕ ಸಮಸ್ಯೆ ಎದುರಿಸುವಂತೆ ಮಾಡುತ್ತದೆ. ಇದೇ ಕಾರಣಕ್ಕೆ ನಿವೃತ್ತಿಯ ಬಳಿಕ ಪುರುಷರಿಗಿಂತ ಕಡಿಮೆ ಸೇವಿಂಗ್ಸ್ ಮಹಿಳೆಯರದಾಗಿರುತ್ತದೆ. ಹೆಚ್ಚಿನ ಜವಾಬ್ದಾರಿಗಳು ಆಕೆಯನ್ನು ಒತ್ತಡಕ್ಕೆ ತಳ್ಳುವ ಜೊತೆಗೆ ಸೆಲ್ಫ್ ಕೇರ್‌ಗೆ  ಕೂಡಾ ಆಕೆಯಲ್ಲಿ ಸಮಯವಿಲ್ಲದ ಹಾಗೆ ಮಾಡಿವೆ.