ಹವ್ಯಾಸವನ್ನೇ ಉದ್ಯಮ ಮಾಡಿ ಗೆದ್ದು ತೋರಿಸಿದ ದೀಪ್ತಿ
ನಮ್ಮ ಹವ್ಯಾಸವೇ ನಮ್ಮ ಗಳಿಕೆಗೆ ದಾರಿಯಾಗ್ಬಹುದು. ಕಲೆಯನ್ನು ಪ್ರೋತ್ಸಾಹಿಸಿ, ಮುನ್ನುಗ್ಗುವ ಶಕ್ತಿ ನಮಗೆ ಬೇಕು. ಯಾವುದೇ ಉದ್ಯಮದಲ್ಲೂ ಆರಂಭದಲ್ಲಿಯೇ ಲಾಭ ಸಾಧ್ಯವಿಲ್ಲ. ನಿಧಾನವಾಗಿ ಪಡೆಯುವ ಪ್ರಗತಿ ಶಾಶ್ವತ. ನಮ್ಮ ದೇಶದಲ್ಲಿ ಅನೇಕ ಮಹಿಳೆಯರು ವ್ಯಾಪಾರದ ಕನಸು ಹೊಂದಿದ್ದಾರೆ. ಅವರೆಲ್ಲರಿಗೆ ನೋಯ್ಡಾದ ಮಹಿಳೆ ಸ್ಪೂರ್ತಿಯಾಗ್ಬಹುದು.
ಯಾವುದೇ ಕೆಲಸ (Work) ವೂ ದೊಡ್ಡದಲ್ಲ, ಯಾವುದೇ ಕೆಲಸವು ಚಿಕ್ಕದಲ್ಲ. ಉತ್ಸಾಹದಿಂದ ಮಾಡಿದ್ರೆ ಎಲ್ಲ ಕೆಲಸಗಳಲ್ಲೂ ಯಶಸ್ಸು (Success) ಸಾಧಿಸಬಹುದು. ದೈನಂದಿನ ಕೆಲಸಗಳನ್ನು ವ್ಯಾಪಾರವಾಗಿ ಪರಿವರ್ತಿಸಿಕೊಂಡು ಸಾಕಷ್ಟು ಹಣ (Money) ಸಂಪಾದನೆ ಮಾಡ್ಬಹುದು. ಎಲ್ಲ ವಸ್ತುಗಳಿಗೂ ಈಗ ಬೇಡಿಕೆಯಿದೆ. ಮನೆಯಲ್ಲಿ ಮಾಡಿದ ಅಡುಗೆ, ಉಪ್ಪಿನಕಾಯಿ, ಹಪ್ಪಳದಿಂದ ಹಿಡಿದು ಅಡುಗೆ ಮಾಡುವವರು, ಬಟ್ಟೆ ಒಗೆಯುವವರು ಸೇರಿದಂತೆ ಮಕ್ಕಳ ಕಲಿಕೆಗೆ ನೆರವಾಗುವ ಶಿಕ್ಷಕರಿಗೂ ಸಾಕಷ್ಟು ಬೇಡಿಕೆಯಿದೆ. ಯಾವ ಕ್ಷೇತ್ರದಲ್ಲಿ ನಿಮಗೆ ಆಸಕ್ತಿಯಿದೆ, ಅದ್ರ ಬಗ್ಗೆ ತಿಳಿದಿದೆ, ಆ ಕ್ಷೇತ್ರದಲ್ಲಿ ನೀವು ಮುನ್ನಡೆ ಸಾಧಿಸಬಹುದು. ಸಾಧನೆ ಮಾಡಲು ಛಲ, ಉತ್ಸಾಹ ಅತ್ಯಗತ್ಯ. ಇದಕ್ಕೆ ನೋಯ್ಡಾದ ಮಹಿಳೆ ಉತ್ತಮ ನಿದರ್ಶನ. ಹವ್ಯಾಸವನ್ನು ಉದ್ಯಮ ಮಾಡಿಕೊಂಡ ಮಹಿಳೆ ಅನೇಕ ಮಹಿಳೆಯರಿಗೆ ಪ್ರೇರಣೆಯಾಗಿದ್ದಾರೆ.
ವ್ಯಾಪಾರಕ್ಕೆ ದಾರಿಯಾಯ್ತು ಮಕ್ಕಳಿಗಾಗಿ ಮಾಡ್ತಿದ್ದ ಕೇಕ್ : ಹವ್ಯಾಸವನ್ನು ವ್ಯಾಪಾರ ಮಾಡಿಕೊಂಡ ಮಹಿಳೆ ಹೆಸರು ದೀಪ್ತಿ. ನೋಯ್ಡಾದ ನಿವಾಸಿ ದೀಪ್ತಿ ತನ್ನ ಮಕ್ಕಳ ಹುಟ್ಟುಹಬ್ಬಕ್ಕೆ ತಾವೇ ಕೇಕ್ ತಯಾರಿಸುತ್ತಿದ್ದರಂತೆ. ದೀಪ್ತಿ ಮಾಡ್ತಿದ್ದ ಕೇಕ್ ಎಲ್ಲರಿಗೂ ಇಷ್ಟವಾಗ್ತಿತ್ತು. ಕ್ರಮೇಣ ಗೆಳೆಯರು, ಸಂಬಂಧಿಕರ ಮಕ್ಕಳ ಹುಟ್ಟುಹಬ್ಬಕ್ಕೆ ದೀಪ್ತಿ ಕೇಕ್ ಸಿದ್ಧಪಡಿಸಿ ಉಡುಗೊರೆ ನೀಡ್ತಿದ್ದರಂತೆ. ಕೇಕ್ ಗುಣಮಟ್ಟ ಮತ್ತು ದೀಪ್ತಿ ಶ್ರಮ ಮತ್ತು ಪ್ರೀತಿಯನ್ನು ನೋಡಿದ ನೆರೆಹೊರೆಯವರು ಕೇಕ್ ಗೆ ಆರ್ಡರ್ ನೀಡಲು ಶುರು ಮಾಡಿದ್ರಂತೆ.
WOMEN AND PREGNANCY: ತೂಕ ಕಳೆದುಕೊಳ್ಳೋದ್ರಿಂದ ಗರ್ಭಿಣಿಯಾಗೋ ಸಾಧ್ಯತೆ ಹೆಚ್ಚುತ್ತಾ ?
300 ರೂಪಾಯಿಗೆ ಸಿದ್ಧವಾಗಿತ್ತು ಕೇಕ್ : ಸುಮಾರು 11 ವರ್ಷಗಳ ಹಿಂದೆ 300 ರೂಪಾಯಿಗೆ ದೀಪ್ತಿ ಮೊದಲ ಕೇಕ್ ತಯಾರಿಸಿದ್ದರಂತೆ. ಅದನ್ನು ಮಾರುಕಟ್ಟೆ ಬೆಲೆಗೆ ಮಾರಾಟ ಮಾಡಿದ್ದರಂತೆ. ಕೇಕ್ ಗೆ ಸಿಕ್ಕ ಹಣವನ್ನು ದೇವರ ಮುಂದಿಟ್ಟಿದ್ದರಂತೆ. ದೇವರ ಆಶೀರ್ವಾದವಿರಬೇಕು, ಅಲ್ಲಿಂದ ನನ್ನ ವ್ಯಾಪಾರ ಬೆಳೆಯುತ್ತಾ ಹೋಯ್ತು ಎನ್ನುತ್ತಾರೆ ದೀಪ್ತಿ. ಇದಾದ ಬಳಿಕ ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಿ ಸಂಬಂಧಿಕರು, ನೆರೆಹೊರೆಯವರು, ಸ್ನೇಹಿತರಿಗೆ ದೀಪ್ತಿ ಕೇಕ್ ಮಾರಾಟ ಮಾಡ್ತಿದ್ದರಂತೆ.
ಕೇಕ್ ಜೊತೆ ಸೇರ್ತು ಈ ಐಟಂ : ಕೇಕ್ ಜೊತೆ ದೀಪ್ತಿ ಬ್ರೌನಿ, ಚಾಕೊಲೇಟ್, ಬಿಸ್ಕತ್, ಕುಕೀಗಳಂತಹ ಉತ್ಪನ್ನಗಳನ್ನು ಸೇರಿಸಿಕೊಂಡ್ರು. ಆರಂಭದಲ್ಲಿ ನೆರೆ ಹೊರೆಯವರಿಗೆ ಮಾರಾಟ ಮಾಡ್ತಿದ್ದ ದೀಪ್ತಿ ಈಗ ತಮ್ಮ ಉತ್ಪನ್ನಗಳನ್ನು ಅಂಚೆ ಮೂಲಕ ಕಳುಹಿಸಿಕೊಡ್ತಾರೆ. ದೀಪ್ತಿ ಕೇಕ್ ದೇಶದ ಮೂಲೆ ಮೂಲೆ ತಲುಪಿದೆ. ನೋಯ್ಡಾದಲ್ಲಿ ಹೋಮ್ ಬೇಕಿಂಗ್ ಆರಂಭಿಸಿದ ಕೆಲವೇ ಜನರಲ್ಲಿ ನಾನೂ ಒಬ್ಬಳು ಎನ್ನುತ್ತಾರೆ ದೀಪ್ತಿ. ದೀಪ್ತಿ ತಮ್ಮ ಉತ್ಪನ್ನಕ್ಕೆ 'ಈಟ್ ಕೇಕ್ ವಿತ್ ದೀಪ್ತಿ' ಎಂದು ಹೆಸರಿಟ್ಟಿದ್ದಾರೆ.
ಕೊರೊನಾ ಸಂದರ್ಭದಲ್ಲಿ ಹೆಚ್ಚಾಯ್ತು ಮಾರಾಟ : ಕೊರೊನಾ ಆರಂಭದಲ್ಲಿ ದೀಪ್ತಿ ಕೇಕ್ ಗೆ ಬೇಡಿಕೆಯಿರಲಿಲ್ಲವಂತೆ. ಲಾಕ್ ಡೌನ್ ನಲ್ಲಿ ಮನೆಯಲ್ಲಿ ಬಂಧಿಯಾಗಿದ್ದ ಜನರು ನಿಧಾನವಾಗಿ ದೀಪ್ತಿ ಕೇಕ್ ಕಡೆ ಗಮನ ಹರಿಸಿದ್ದರಂತೆ. ಸುತ್ತಮುತ್ತಲಿನ ಜನರು ಕೇಕ್ ನೀಡುವಂತೆ ಬೇಡಿಕೆಯಿಟ್ಟಿದ್ದರಂತೆ. ಜನರಿಗೆ ಸುರಕ್ಷಿತವಾಗಿ ಕೇಕ್ ತಲುಪಿಸುವುದು ಹೇಗೆ ಎಂಬ ಪ್ರಶ್ನೆ ದೀಪ್ತಿಗೆ ಕಾಡಿತ್ತಂತೆ. ಆದ್ರೆ ಜನರ ಪ್ರೀತಿಯಿಂದ ದೀಪ್ತಿ ಗೆದ್ದಿದ್ದರಂತೆ. ಅವರ ಮನೆ ಮುಂದಿದ್ದ ಟೇಬಲ್ ಮಹತ್ವದ ಪಾತ್ರ ವಹಿಸಿತ್ತಂತೆ. ಕಂಟೈನ್‌ಮೆಂಟ್ ಝೋನ್‌ನಲ್ಲಿದ್ದ ಜನರು ದೀಪ್ತಿಗೆ ಕೇಕ್ ಆರ್ಡರ್ ನೀಡ್ತಿದ್ದರಂತೆ. ಕೇಕ್ ತಯಾರಿಸಿ ಟೇಬಲ್ ಮೇಲಿಡ್ತಿದ್ದರಂತೆ ದೀಪ್ತಿ. ಜನರು ಅದನ್ನು ತೆಗೆದುಕೊಂಡು ಅಲ್ಲಿ ಹಣವಿಟ್ಟು ಹೋಗ್ತಿದ್ದರಂತೆ.
Grandma Radhamani: ವಯಸ್ಸು 71, ಕೈಯಲ್ಲಿದೆ 11 ರೀತಿಯ ಗಾಡಿ ಓಡಿಸೋ ಲೈಸೆನ್ಸ್ !
ಲಕ್ಷಕ್ಕೇರಿದ 300ರ ವಹಿವಾಟು : ಕೇವಲ ಲಾಭ ಗಳಿಸಲು ಯಾವುದೇ ವ್ಯವಹಾರ ಮಾಡಬಾರದು ಎನ್ನುತ್ತಾರೆ ದೀಪ್ತಿ. ನಮ್ಮ ಕೆಲಸ ಜನರಿಗೆ ಸಂತೋಷ ನೀಡಬೇಕು ಎಂಬುದು ಅವರ ಉದ್ದೇಶ. ಯಾವುದೇ ಪ್ರಚಾರ, ದೊಡ್ಡ ಹೂಡಿಕೆ ಮತ್ತು ಅಲಂಕಾರಗಳಿಲ್ಲದೆ 300 ರೂಪಾಯಿಯಲ್ಲಿ ಶುರುವಾದ ಕೇಕ್ ವ್ಯವಹಾರ ದಶಕದಲ್ಲಿ 15 ಲಕ್ಷ ದಾಟಿದೆ. ಇದು ಸಣ್ಣ ಸಾಧನೆಯಲ್ಲ ಎನ್ನುವ ದೀಪ್ತಿ ತಮ್ಮ ಕೆಲಸದಲ್ಲಿ ತೃಪ್ತಿ ಹೊಂದಿದ್ದಾರೆ.
ನೆರವಾಯ್ತು ಇಂಟರ್ನೆಟ್ : ದೆಹಲಿ ವಿಶ್ವವಿದ್ಯಾನಿಲಯದ ಮಿರಾಂಡಾ ಹೌಸ್‌ನಲ್ಲಿ ಪದವಿ ಪಡೆದ ದೀಪ್ತಿ ಉದ್ಯಮ ಶುರು ಮಾಡಲು ಬಯಸಿದ್ದರು. ಆದ್ರೆ ಮದುವೆ, ಮಕ್ಕಳಿಂದಾಗಿ ಇದು ಆಗಿರಲಿಲ್ಲ. ಅಡುಗೆ ಮಾಡುವುದು ಕೇವಲ ಕೌಶಲ್ಯವಲ್ಲ. ಅದರಲ್ಲಿ ಕಲೆ ಮತ್ತು ವಿಜ್ಞಾನ ಎರಡೂ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುತ್ತಾರೆ ದೀಪ್ತಿ.