ಕೇರಳದ 'ಕುಂಬಳಂಗಿ' ದೇಶದ ಮೊದಲ ನ್ಯಾಪ್ಕಿನ್ ಮುಕ್ತ ಗ್ರಾಮವೆಂದು ಘೋಷಣೆ
ಮಾರುಕಟ್ಟೆಯಲ್ಲಿ ಮುಟ್ಟಿ (Menstruation))ನ ಸಂದರ್ಭದಲ್ಲಿ ಬಳಸುವ ಅನೇಕ ಉತ್ಪನ್ನಗಳನ್ನು ನಾವು ನೋಡ್ಬಹುದು. ಸ್ಯಾನಿಟರಿ ಪ್ಯಾಡ್ (Sanitary pad)ಪರಿಸರ ನಾಶ ಮಾಡ್ತಿದೆ ಎಂಬ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಮುಟ್ಟಿನ ಕಪ್ ((Menstrual cup))ಗಳ ಜನಪ್ರಿಯತೆ ಹೆಚ್ಚಾಗಿದೆ. ಸದ್ಯ ಕೇರಳದ (Kerala) ಎರ್ನಾಕುಲಂ ಜಿಲ್ಲೆಯ ಕುಂಬಳಂಗಿ ಎಂಬ ಗ್ರಾಮವನ್ನು ದೇಶದ ಮೊದಲ ನ್ಯಾಪ್ಕಿನ್ ಮುಕ್ತ ಗ್ರಾಮವೆಂದು ಘೋಷಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಮುಟ್ಟಿನ ಕಪ್ ((Menstrual cup))ಗಳ ಜನಪ್ರಿಯತೆ ಹೆಚ್ಚಾಗಿದೆ. ಹೆಚ್ಚಿನ ಸಂಖ್ಯೆಯ ಮಹಿಳೆಯರು (Woman) ಇದರತ್ತ ಮುಖ ಮಾಡುತ್ತಿದ್ದಾರೆ. ಮುಟ್ಟಿನ ಸಂದರ್ಭದಲ್ಲಿ ಇದು ಆರಾಮದಾಯಕವಾಗಿದೆ. ಪದೇ ಪದೇ ಪ್ಯಾಡ್ (Pad) ಬದಲಿಸುವ ಚಿಂತೆ ಇರುವುದಿಲ್ಲ. ಲೀಕ್ ಆಗುವ ಭಯ ಕಾಡುವುದಿಲ್ಲ. ದೂರದ ಪ್ರಯಾಣ ಸೇರಿದಂತೆ ಬಹಳ ಸಮಯ ನಿರಂತರವಾಗಿ ಕೆಲಸ ಮಾಡುವ ಮಹಿಳೆಯರಿಗೆ ಇದು ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ. ಸದ್ಯ ಕೇರಳದ (Kerala) ಎರ್ನಾಕುಲಂ ಜಿಲ್ಲೆಯ ಕುಂಬಳಂಗಿ (Kumbalangi) ಎಂಬ ಗ್ರಾಮವನ್ನು ದೇಶದ ಮೊದಲ ನ್ಯಾಪ್ಕಿನ್ ಮುಕ್ತ ಗ್ರಾಮ (Napking free vilage)ವೆಂದು ಘೋಷಿಸಲಾಗಿದೆ.
ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಎರ್ನಾಕುಲಂ ಜಿಲ್ಲೆಯ ಕುಂಬಳಂಗಿ ಎಂಬ ಪುಟ್ಟ ಗ್ರಾಮವನ್ನು ದೇಶದ ಮೊದಲ ನ್ಯಾಪ್ಕಿನ್ ಮುಕ್ತ ಗ್ರಾಮ ಎಂದು ಘೋಷಿಸಿದ್ದಾರೆ. ಗ್ರಾಮದಲ್ಲಿ ಹುಡುಗಿಯರು ಮತ್ತು ಮಹಿಳೆಯರಿಗೆ 5,000ಕ್ಕೂ ಹೆಚ್ಚು ಮುಟ್ಟಿನ ಕಪ್‌ಗಳನ್ನು ವಿತರಿಸಲಾಗಿದೆ ಮತ್ತು ಅವುಗಳ ಬಳಕೆ ಮತ್ತು ಅನುಕೂಲಗಳ ಬಗ್ಗೆ ಮೂರು ತಿಂಗಳ ಕಾಲ ಸ್ವಯಂಸೇವಕರಿಂದ ತರಬೇತಿಯನ್ನು ನೀಡಲಾಗಿದೆ ಎಂದು ಅವಳ್ಕಾಯಿ (ಅವಳಿಗಾಗಿ) ಅಭಿಯಾನದ ಸಂಘಟಕರು ಹೇಳಿದ್ದಾರೆ.
World Menstrual hygiene day : ಈ ದಿನದ ಮಹತ್ವ ಹಾಗೂ ಪ್ರಾಮುಖ್ಯತೆ ಏನು ಗೊತ್ತಾ?
ಅವಳ್ಕಾಯಿ (ಅವಳಿಗಾಗಿ) ಅಭಿಯಾನದ ಮೂಲಕ ಮುಟ್ಟಿನ ಕಪ್ ವಿತರಣೆ
ಸುಂದರ ಗ್ರಾಮ ಕುಂಬಳಂಗಿ ಇತರರಿಗೆ ಮಾದರಿಯಾಗಲಿದೆ. ಇಂತಹ ಯೋಜನೆಗಳು ಮಹಿಳೆಯರನ್ನು ಸಬಲೀಕರಣಗೊಳಿಸುತ್ತವೆ. ಗ್ರಾಮಗಳು ಅಭಿವೃದ್ಧಿಯಾದರೆ, ನಮ್ಮ ದೇಶವು ಅಭಿವೃದ್ಧಿ ಹೊಂದುತ್ತದೆ ಎಂದು ರಾಜ್ಯಪಾಲರು ತಮ್ಮ ಉದ್ಘಾಟನಾ ಭಾಷಣದಲ್ಲಿ ಹೇಳಿದರು. ಎರ್ನಾಕುಲಂ ಸಂಸದ ಹಿಬಿ ಈಡನ್ ಅವರು ಪ್ರದಾನ ಮಂತ್ರಿ ಸಂಸದ್ ಆದರ್ಶ ಗ್ರಾಮ ಯೋಗದ ಅಡಿಯಲ್ಲಿ 'ಅವಳ್ಕಾಯಿ' (ಅವಳಿಗಾಗಿ) ಅಭಿಯಾನವನ್ನು ಪ್ರಾರಂಭಿಸಿದರು.
ನಾವು ಹಲವು ತಿಂಗಳುಗಳಿಂದ ಅದರ ಮೇಲೆ ಕೆಲಸ ಮಾಡುತ್ತಿದ್ದೇವೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮತ್ತು ಹಿಂದೂಸ್ತಾನ್ ಲೈಫ್‌ಕೇರ್ ಲಿಮಿಟೆಡ್ ಮ್ಯಾನೇಜ್‌ಮೆಂಟ್ ಅಕಾಡೆಮಿ ಇದರ ಪಾಲುದಾರಿಕೆ ಹೊಂದಿದೆ ಎಂದು ಸಂಸದರು ಹೇಳಿದರು. ಮಹಿಳೆಯರಿಗೆ ಮುಟ್ಟಿನ ಕಪ್‌ಗಳ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಅವರ ಭಯವನ್ನು ಹೋಗಲಾಡಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದು ತಿಳಿಸಿದರು.
ಪಿರಿಯಡ್ಸ್ ಸಮಯದಲ್ಲಿ ಸ್ವಚ್ಛತೆಗೆ ಗಮನ ಕೊಡಿ, ಇಲ್ಲಾಂದ್ರೆ ಅಪಾಯ ಕಟ್ಟಿಟ್ಟ ಬುತ್ತಿ !
ಮಹಿಳೆಯರ ಆರೋಗ್ಯಕ್ಕೆ ಉತ್ತಮ ಮುಟ್ಟಿನ ಕಪ್
ಇತ್ತೀಚಿನ ಉಪಕ್ರಮವು ಸಿಂಥೆಟಿಕ್ ನ್ಯಾಪ್‌ಕಿನ್‌ಗಳಿಂದ ಉಂಟಾಗುವ ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಕೆಲಸ ಮಾಡುವ ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗೆ ವೈಯಕ್ತಿಕ ನೈರ್ಮಲ್ಯವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಈಡನ್ ಹೇಳಿದರು. ಈ ಯೋಜನೆಗೆ ನಟಿ ಪಾರ್ವತಿ ಸೇರಿದಂತೆ ಹಲವರು ಸಹಕರಿಸಿದ್ದಾರೆ ಎಂದರು. ನಾವು ಅನೇಕ ಶಾಲೆಗಳಲ್ಲಿ ನ್ಯಾಪ್‌ಕಿನ್ ವಿತರಣಾ ಯಂತ್ರಗಳನ್ನು ಸ್ಥಾಪಿಸಿದ್ದೇವೆ. ಆದರೆ ಅವು ಆಗಾಗ ಅವು ಸಮಸ್ಯೆಗಳನ್ನು ಸೃಷ್ಟಿಸುತ್ತವೆ. ನಂತರ ಈ ಆಲೋಚನೆ ಬಂತು. ಮತ್ತು ನಾವು ಅದನ್ನು ವಿವರವಾಗಿ ಅಧ್ಯಯನ ಮಾಡಿದ್ದೇವೆ ಮತ್ತು ತಜ್ಞರ ಸಲಹೆಯನ್ನು ಕೇಳಿದ್ದೇವೆ. ತಜ್ಞರು ಕಪ್ ಅನ್ನು ಹಲವು ವರ್ಷಗಳವರೆಗೆ ಮರುಬಳಕೆ ಮಾಡಬಹುದು ಮತ್ತು ಇದು ಹೆಚ್ಚು ಆರೋಗ್ಯಕರವಾಗಿದೆ ಎಂದು ತಿಳಿಸಿದ್ದಾಗಿ ಸಂಸದರು ಹೇಳಿದರು.
ಮುಟ್ಟಿನ ನೈರ್ಮಲ್ಯಕ್ಕೆ ಹೋಲಿಸಿದರೆ ಮುಟ್ಟಿನ ಕಪ್‌ಗಳು ಸುರಕ್ಷಿತ ಆಯ್ಕೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ. ವೈದ್ಯಕೀಯ ದರ್ಜೆಯ ಸಿಲಿಕಾನ್ ಮತ್ತು ಲ್ಯಾಟೆಕ್ಸ್‌ನಿಂದ ಮಾಡಿದ ಒಂದು ಕಪ್ 10 ವರ್ಷಗಳವರೆಗೆ ಬಾಳಿಕೆ ಬರಬಹುದು ಮತ್ತು ವಿವಿಧ ಋತುಚಕ್ರ ಉತ್ಪನ್ನಗಳಿಗೆ ಹೋಲಿಸಿದರೆ ಇದು ವೆಚ್ಚ-ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿಯಾಗಿದೆ ಎಂದು ಅವರು ಹೇಳಿದರು. ನಾವು ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಕುಂಬಳಂಗಿ ನಂತರ ಕೊಚ್ಚಿಯ ಕರಾವಳಿ ಪ್ರದೇಶಗಳಲ್ಲಿ ಮೆನ್‌ಸ್ಟ್ರುವಲ್ ಕಪ್ ವಿತರಿಸಿ ತರಬೇತಿ ನೀಡುತ್ತೇವೆ ಎಂದು ಸಂಸದರು ತಿಳಿಸಿದರು.
Menstruation: ಕೀಲುನೋವಿನ ಸಮಸ್ಯೆಗೆ ಪರಿಹಾರ ಹೀಗಿವೆ ನೋಡಿ..!
ದೇಶದ ಮೊದಲ ಪ್ರವಾಸೋದ್ಯಮ ಗ್ರಾಮ ಈಗ ದೇಶದ ಮೊದಲ ನ್ಯಾಪ್ಕಿನ್ ಮುಕ್ತ ಗ್ರಾಮ
ಕುಂಬಳಂಗಿ, ಕೊಚ್ಚಿಯ ಹೊರವಲಯದಲ್ಲಿರುವ ಒಂದು ದ್ವೀಪ ಗ್ರಾಮವಾಗಿದ್ದು, ಹಿನ್ನೀರಿನಿಂದ ಆವೃತವಾಗಿದೆ, ಇದು ದೇಶದ ಮೊದಲ ಪರಿಸರ-ಪ್ರವಾಸೋದ್ಯಮ ಗ್ರಾಮವಾಗಿದೆ ಮತ್ತು ಸಾಂಪ್ರದಾಯಿಕ ಚೀನೀ ಬಲೆಗಳಿಗೆ ಹೆಸರುವಾಸಿಯಾಗಿದೆ. ಸದ್ಯ ಈ ಪುಟ್ಟ ಗ್ರಾಮ ದೇಶದ ಮೊದಲ ನ್ಯಾಪ್ಕಿನ್ ಮುಕ್ತ ಗ್ರಾಮ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ದಿ ಲ್ಯಾನ್ಸೆಟ್ ಪಬ್ಲಿಕ್ ಹೆಲ್ತ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಮುಟ್ಟಿನ ಕಪ್‌ಗಳನ್ನು ಪ್ರಯತ್ನಿಸಿದ ಶೇಕಡಾ 70 ರಷ್ಟು ಮಹಿಳೆಯರು ತಾವು ಅವುಗಳನ್ನು ಬಳಸುವುದನ್ನು ಮುಂದುವರಿಸಲು ಬಯಸುತ್ತಾರೆ ಎಂದು ಹೇಳುತ್ತಾರೆ. ಮಾಸಿಕ ರಕ್ತಸ್ರಾವವು ಅನೇಕ ಹುಡುಗಿಯರು ಮತ್ತು ಮಹಿಳೆಯರನ್ನು ಶಾಲೆ ಅಥವಾ ಕೆಲಸದಿಂದ ಹೊರಗಿಡುತ್ತದೆ ಮತ್ತು ಮೂತ್ರನಾಳದ ಸೋಂಕಿನ ಅಪಾಯವನ್ನುಂಟುಮಾಡುತ್ತದೆ. ಹೀಗಾಗಿ, ಪ್ಯಾಡ್‌ಗಳು ಮತ್ತು ಟ್ಯಾಂಪೂನ್‌ಗಳಿಗೆ ಸುರಕ್ಷಿತ, ಕೈಗೆಟುಕುವ ಮತ್ತು ದೀರ್ಘಕಾಲೀನ ಪರ್ಯಾಯ, ಮುಟ್ಟಿನ ಕಪ್‌ಗಳು ಲಕ್ಷಾಂತರ ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ.