Asianet Suvarna News Asianet Suvarna News

ಫಸ್ಟ್​ ನೈಟ್​ನಲ್ಲಿ ಗಂಡನಿಗೆ ಡೌಟ್​ ಬರಬಾರದೆಂದು ಹೀಗೆ ಮಾಡ್ತಿರೋ ಯುವತಿಯರು! ಶಾಕಿಂಗ್​ ವರದಿ ಬಿಡುಗಡೆ

 ಫಸ್ಟ್​ ನೈಟ್​ನಲ್ಲಿ ಗಂಡನಿಗೆ ಡೌಟ್​ ಬರಬಾರದಂತ ಇಂಥದ್ದೊಂದು ಭಯಾನಕ ಆಪರೇಷನ್​ಗೆ ಮುಂದಾಗ್ತಿದ್ದಾರಂತೆ ಯುವತಿಯರು! ಭಾರತದಲ್ಲಿಯೂ ಹೆಚ್ಚುತ್ತಿರುವ ಇದರ ಬಗ್ಗೆ  ಶಾಕಿಂಗ್​ ವರದಿ ಇಲ್ಲಿದೆ ನೋಡಿ..
 

India has witnessed the rise of hymenoplasty reconstructs the hymenby 20 to 30 per cent suc
Author
First Published Sep 11, 2024, 2:14 PM IST | Last Updated Sep 11, 2024, 5:35 PM IST

 ಇತ್ತೀಚಿನ ವರ್ಷಗಳಲ್ಲಿ, 20 ರಿಂದ 30 ವರ್ಷದ ಯುವತಿಯರು  ಹೈಮನೋಪ್ಲ್ಯಾಸ್ಟಿ (Hymenoplasty) ಎಂಬ ಶಸ್ತ್ರಚಿಕಿತ್ಸೆಗೆ ಒಳಗಾಗುವ ಯುವತಿಯರ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುವ ಶಾಕಿಂಗ್​ ನ್ಯೂಸ್​ ಈಗ ಬಹಿರಂಗಗೊಂಡಿದೆ. ಅಷ್ಟಕ್ಕೂ ಹೈಮನೋಪ್ಲ್ಯಾಸ್ಟಿ ಅನ್ನು ಕನ್ನಡದಲ್ಲಿ ಹೇಳುವುದಾದರೆ ಕನ್ಯತ್ವ ಶಸ್ತ್ರಚಿಕಿತ್ಸೆ. ಅಂದರೆ ಮದುವೆಯಾಗುವ ಮೊದಲು ಯಾರ ಜೊತೆಗಾದರೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರೆ, ಗಂಡನಾಗುವವನಿಗೆ ಆ ಬಗ್ಗೆ ತಿಳಿಯಬಾರದು ಎಂದು ಮಾಡಿಸಿಕೊಳ್ಳುವ ಶಸ್ತ್ರಚಿಕಿತ್ಸೆ ಇದಾಗಿದೆ. ಸೆಕ್ಸ್​ ಮಾಡಿದ ಸಂದರ್ಭಗಳಲ್ಲಿ ಯೋನಿ ಪೊರೆ ಹರಿದು ಹೋಗುತ್ತದೆ. ನೃತ್ಯಗಾರರು, ಯಕ್ಷಗಾನ ಕಲಾವಿದರ, ಕ್ರೀಡಾಪಟುಗಳು... ಹೀಗೆ ಕೆಲವು ಕ್ಷೇತ್ರಗಳಲ್ಲಿ ಇರುವ ಯುವತಿಯರಿಗೆ ಸಹಜವಾಗಿಯೇ ಈ ಪೊರೆ ಹರಿದು ಹೋಗುವ ಸಾಧ್ಯತೆ ಇರುತ್ತದೆ. ಆದರೆ ಸಾಮಾನ್ಯವಾಗಿ ಯುವತಿಯೊಬ್ಬಳು ಕನ್ಯೆ ಅಂದರೆ ಲೈಂಗಿಕ ಸಂಪರ್ಕ ಹೊಂದಿಲ್ಲ ಎಂದು ಸಾಬೀತು ಮಾಡುವುದೇ ಈ ಕನ್ಯಾಪೊರೆ.

ಕನ್ಯಾ ಪೊರೆ ಹರಿದು ಹೋದರೆ ಮೊದಲ ರಾತ್ರಿಯಲ್ಲಿಯೇ ಗಂಡನಿಗೆ ತನ್ನ ಗುಟ್ಟು ರಟ್ಟಾಗಬಹುದು ಎನ್ನುವ ಕಾರಣಕ್ಕೆ, ಯೋನಿ ಶಸ್ತ್ರಚಿಕಿತ್ಸೆಗೆ ಮೊರೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಆತಂಕದ ವರದಿ ಬಂದಿದೆ. ಅಷ್ಟಕ್ಕೂ ಈ ಆಪರೇಷನ್​ ಮಾಡಿಸಿಕೊಳ್ಳುವುದು ಬಹಳ ವರ್ಷಗಳಿಂದಲೂ ನಡೆದಿದೆ. ವಿದೇಶಗಳಲ್ಲಿ ಈ ಸಂಸ್ಕೃತಿ ಹೆಚ್ಚಾಗಿತ್ತು. ಸಂಪ್ರದಾಯಸ್ಥರ ದೇಶ ಎಂದು ಎನ್ನಿಸಿಕೊಳ್ಳುವ ಭಾರತದಲ್ಲಿ ವಿವಾಹಪೂರ್ವ ಲೈಂಗಿಕತೆ ಅಷ್ಟಾಗಿ ಇರಲಿಲ್ಲ. ಆದರೆ ಬರುಬರುತ್ತಾ ಇಂಥ ಯುವತಿಯರ ಸಂಖ್ಯೆ ಹೆಚ್ಚಾಗುತ್ತಿದೆ ಎಂದಿದೆ ಈ ವರದಿ. ಭಾರತದಲ್ಲಿಯೂ ಇತ್ತೀಚಿನ ದಿನಗಳಲ್ಲಿ  20 ರಿಂದ 30 ಪ್ರತಿಶತದಷ್ಟು ಹೈಮನೋಪ್ಲ್ಯಾಸ್ಟಿ ಹೆಚ್ಚಳಕ್ಕೆ ಸಾಕ್ಷಿಯಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. 

KBC 16: ಮದುವೆಯಾಗದ ಮಹಿಳೆಯರು ಸಂಸಾರಕ್ಕೆ ಭಾರ ಎಂದ ಸ್ಪರ್ಧಿಗೆ ಅಮಿತಾಭ್ ಬಚ್ಚನ್​ ಕ್ಲಾಸ್​! ​

ಇದಕ್ಕೆ ಹಲವಾರು ಕಾರಣಗಳನ್ನು ನೀಡಲಾಗುತ್ತಿದೆ. ಸಿನಿಮಾಗಳಲ್ಲಿ ವಿಜೃಂಭಿಸುತ್ತಿರುವ ಲೈಂಗಿಕತೆ ಯುವ ಮನಸ್ಸಿನ ಮೇಲೆ ಸಾಕಷ್ಟ ಪ್ರಭಾವ ಬೀರುತ್ತಿದೆ. ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಹೈಸ್ಕೂಲ್​ ವಿದ್ಯಾರ್ಥಿಗಳೂ ಇಂಥದ್ದೊಂದು ಕ್ರಿಯೆಗೆ ಇಳಿಯುತ್ತಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ, ಆಧುನಿಕತೆಯ ಪ್ರಪಂಚ, ಕೈಯಲ್ಲಿ ಬೇಕಾಬಿಟ್ಟೆಯಾಗಿ ಓಡಾಡುವ ದುಡ್ಡು ಕೂಡ ಇದಕ್ಕೆ ಮುಖ್ಯ ಕಾರಣ. ಇದು ಒಂದೆಡೆಯಾದರೆ, ಇತ್ತೀಚಿನ ದಿನಗಳಲ್ಲಿ ಬಾಲಕಿಯರು ಅಥವಾ ಯುವತಿಯನ್ನು ಹೇಗೆ ಪಳಗಿಸಬೇಕು ಎನ್ನುವ ಬಗ್ಗೆ ಬಹುತೇಕ ಯುವಕರು ಅರ್ಥಮಾಡಿಕೊಂಡು ಬಿಟ್ಟಿದ್ದಾರೆ. ಸ್ಟೈಲ್​ ಮಾಡುತ್ತಾ ದುಬಾರಿ ಬೈಕು, ಕಾರಿನಲ್ಲಿ ಬಂದು, ಯಾವುದೋ ಒಬ್ಬ ಹೀರೋ ಥರ ಹೇರ್​ಸ್ಟೈಲ್​  ಮಾಡಿಕೊಂಡು ಅವನದ್ದೇ ರೀತಿಯಲ್ಲಿ ಪೋಸ್ ಕೊಟ್ಟರೆ ಸಾಕು ಹುಡುಗಿಯರು ಅವರ ಹಿಂದೆ ಬರುತ್ತಾರೆ ಎನ್ನುವ ಬಹುದೊಡ್ಡ ಆರೋಪವೂ ಇದೆ.  ಇದೇ ಕಾರಣಕ್ಕೆ ಹುಡುಗರು ಸುಲಭದಲ್ಲಿ ಹುಡುಗಿಯರನ್ನು ಬಳಸಿಕೊಳ್ಳುತ್ತಿದ್ದಾರೆ.

ಹುಚ್ಚು ಕೋಡಿ ಮನಸ್ಸು... ಎನ್ನುವಂತೆ ಆ ಕ್ಷಣದಲ್ಲಿ ಸೆಕ್ಸ್​ಗೆ ಒಪ್ಪಿಗೆ ಕೊಡುವಾಗ  ಭವಿಷ್ಯದ ಚಿಂತೆ ಇರುವುದಿಲ್ಲ. ಯುವಕರಿಗೆ ಏನು, ಇಂದು ಒಬ್ಬಳು ನಾಳೆ ಮತ್ತೊಬ್ಬಳು.. ಆದರೆ ಒಮ್ಮೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಯುವತಿಯರು ಶಾರೀರಿಕವಾಗಿ ಮಾತ್ರವಲ್ಲದೇ ಮಾನಸಿಕವಾಗಿಯೂ ಕುಗ್ಗಿ ಹೋಗುತ್ತಾರೆ. ಆಕೆಗೆ ಮದುವೆ ಮಾಡಲು ಮನೆಯಲ್ಲಿ ಮುಂದಾದಾಗ ತನ್ನ ಈ ಗುಟ್ಟು ಎಲ್ಲಿ ರಟ್ಟಾಗುವುದೋ ಎಂಬ ಭಯದಿಂದ ಇಂಥ ಶಸ್ತ್ರಚಿಕಿತ್ಸೆಗೆ ಮೊರೆ ಹೋಗಲಾಗುತ್ತಿದೆ ಎನ್ನಲಾಗಿದೆ. ಹರಿದು ಹೋಗಿರುವ ಕನ್ಯಾಪೊರೆಯನ್ನು ಸರಿಮಾಡುತ್ತದಂತೆ ಈ ಆಪರೇಷನ್. ಮೊದಲ ರಾತ್ರಿಯಲ್ಲಿ ಸೆಕ್ಸ್​ನಲ್ಲಿ ತೊಡಗಿದಾಗ ಗಂಡನಿಗೆ ಯಾವುದೇ ರೀತಿಯ ಸಂಶಯ ಬರಬಾರದು ಎನ್ನುವ ಕಾರಣಕ್ಕೆ ಇಂಥದ್ದೊಂದು ಭಯಾನಕ ಆಪರೇಷನ್​ಗೆ ಪ್ರಾಣ ಪಣಕ್ಕಿಟ್ಟು ಹೋಗುತ್ತಿದ್ದಾರೆ ಯುವತಿಯರು. ಆದರೆ ಮದುವೆಗೆ ಮುನ್ನ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡರೂ ಪುರುಷರು ಸಾಚಾತನವನ್ನು ಸಾಬೀತು ಮಾಡುವ ಪ್ರಸಂಗವೇ ಇರುವುದಿಲ್ಲ!  

ಬಾಹ್ಯಾಕಾಶದ ಜೀವನ ಹೇಗಿರುತ್ತೆ? ಅಲ್ಲೇ ಹುಟ್ಟುಹಬ್ಬ ಆಚರಿಸಿಕೊಳ್ತಿರೋ ಸುನೀತಾ ವಿವರಿಸಿರೋ ವಿಡಿಯೋ ವೈರಲ್​

Latest Videos
Follow Us:
Download App:
  • android
  • ios