Asianet Suvarna News Asianet Suvarna News

Bra Secrets: ಇಂಥಹಾ ಬ್ರಾ ಹಾಕಿದ್ರೆ ಹುಡುಗರು ನಿಮ್ಮನ್ನೇ ನೋಡ್ತಾರೆ..!

ಹುಡುಗಿಯರು ಶಾಪಿಂಗ್ (Shopping) ಮಾಡಲು ಗಂಟೆಗಟ್ಟಲೆ ಸಮಯ (Time) ತೆಗೆದುಕೊಳ್ಳುತ್ತಾರ. ಆದರೆ ಒಳಉಡುಪುಗಳ ಖರೀದಿ ಮಾತ್ರ ಕೆಲವೇ ನಿಮಿಷಗಳಲ್ಲಿ ಆಗಿ ಬಿಡುತ್ತದೆ. ಅಂದ್ರೆ ಅದೆಷ್ಟೋ ಮಂದಿಗೆ ಯಾವ ರೀತಿಯ ಒಳಉಡುಪು ತಮಗೆ ಸೂಕ್ತ, ಯಾವ ರೀತಿಯ ಉಡುಪು ಧರಿಸಿದರೆ ಕಂಫರ್ಟೆಬಲ್ ಎಂಬುದು ತಿಳಿದಿಲ್ಲ. ಯಾವಾಗ, ಯಾವ ರೀತಿಯ ಬ್ರಾ (Bra) ಧರಿಸುವುದು ಬೆಸ್ಟ್..?

Bra Secrets that Every Woman Should Know
Author
Bengaluru, First Published Dec 18, 2021, 5:37 PM IST
  • Facebook
  • Twitter
  • Whatsapp

ಮನುಷ್ಯರಿಗೆ ಮಾನ ಮುಚ್ಚಲು ಬಟ್ಟೆ ಬೇಕು. ಅದೇ ರೀತಿ ಒಳಉಡುಪು ಅನ್ನೋದು ಪುರುಷರು ಮತ್ತು ಮಹಿಳೆಯರಿಗೆ ಅಗತ್ಯವಾಗಿದೆ. ಹೀಗಾಗಿ ಒಳಉಡುಪುಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಹೆಚ್ಚು ಗಮನಹರಿಸಬೇಕಾಗುತ್ತದೆ. ಮಹಿಳೆಯರಿಗೆ ಡಿಫರೆಂಟ್ ಹಾಗೂ ಸ್ಟೈಲಿಶ್ ಪ್ಯಾಂಟಿ ಹಾಗೂ ಬ್ರಾ ಅಂಗಡಿಗಳಲ್ಲಿ ಲಭ್ಯವಿದೆ. ಆದರೆ ಅನೇಕ ಮಹಿಳೆಯರಿಗೆ ಯಾವ ರೀತಿಯ ಒಳಉಡುಪು ನಮಗೆ ಸೂಕ್ತ, ಯಾವ ರೀತಿಯ ಉಡುಪು ಧರಿಸಿದರೆ ಕಂಫರ್ಟೆಬಲ್, ಯಾವ ಸೀಸನ್‌ಗೆ ಯಾವ ರೀತಿಯ ಒಳಉಡುಪು ಸೂಕ್ತ ಅನ್ನೋದು ತಿಳಿದಿಲ್ಲ. ಅದರಲ್ಲೂ ಕೆಲವು ಇಂಥಹದ್ದೇ ಬ್ರಾಗಳನ್ನು ಧರಿಸಿದರೆ ಹುಡುಗರ ಲುಕ್ ನಿಮ್ಮತ್ತ ಬೀಳುತ್ತದೆ. ಇಂಥದ್ದೇ ಬ್ರಾ ಹಾಕಿದರೆ ಹುಡುಗರಿಗೆ ಇಷ್ಟವಾಗುತ್ತದೆ ಅನ್ನೋದು ನಿಮಗೆ ಗೊತ್ತಾ..?

ಇಂದಿಗೂ ನಮ್ಮ ಸಮಾಜದಲ್ಲಿ ಅನೇಕ ಮಹಿಳೆಯರು ಅಂಗಡಿಗಳಿಗೆ ಹೋಗಿ ಒಳಉಡುಪುಗಳನ್ನು ತರಲು ಹಿಂಜರಿಯುತ್ತಾರೆ. ಮನೆಯಲ್ಲಿರುವ ಪುರುಷರ ಕೈಯಲ್ಲಿ ತರಿಸಿ ಸೈಜ್ ಸರಿ ಆಗದಿದ್ದರೂ ಕಷ್ಟಪಟ್ಟು ಹಾಕಿಕೊಳ್ಳುತ್ತಾರೆ. ಹೀಗಾಗಿಯೇ ಇವತ್ತಿಗೂ ಹಲವು ಮಹಿಳೆಯರಿಗೆ ಮಾರುಕಟ್ಟೆಯಲ್ಲಿ ವಿವಿಧ ರೀತಿಯ, ಧರಿಸಲು ಅನುಕೂಲವೆನಿಸುವ ಒಳಉಡುಪುಗಳಿವೆ ಅನ್ನೋದು ಗೊತ್ತಿಲ್ಲ. ಹೀಗಾಗಿಯೇ ಒಳಉಡುಪುಗಳನ್ನು ಖರೀದಿಸುವಾಗ ಯಾವ ವಿಚಾರಗಳನ್ನೆಲ್ಲಾ ಗಮನಿಸಿಕೊಳ್ಳಬೇಕು ಎಂಬುದರ ಬಗ್ಗೆಯೂ ತಿಳಿದಿಲ್ಲ. 

Actresses spotted in braless : ಪಬ್ಲಿಕ್‌ನಲ್ಲಿ ಬ್ರಾಲೆಸ್ ಆಗಿ ಎದೆಗಾರಿಕೆ ಪ್ರದರ್ಶಿಸಿದ ನಟಿಯರು!

ಹೀಗಾಗಿಯೇ ಬ್ರಾ ಖರೀದಿಸುವಾಗ ಹಲವು ಮಹಿಳೆಯರ ಆಯ್ಕೆ ತಪ್ಪುತ್ತದೆ. ಸುಮ್ಮನೆ ಹಾಕಿದರಾಯಿತು ಎಂದು ಹಲವರು ಅಂದುಕೊಳ್ಳುತ್ತಾರೆ. ಆದ್ರೆ ಧರಿಸುವ ಬ್ರಾದ ಶೇಪ್, ಸೈಜ್ ಎಲ್ಲವೂ ಸಹ ಗಣನೆಗೆ ಬರುತ್ತದೆ. ಹೀಗಾಗಿ ದೇಹದ ಆಕಾರಕ್ಕೆ ಹೊಂದಿಕೊಳ್ಳುವ, ಸ್ತನಗಳಿಗೆ ಆರಾಮದಾಯಕವೆನಿಸುವ ಬ್ರಾಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

ಹುಡುಗರು ಹುಡುಗಿಯರನ್ನು ನೋಡಿ ಸೌಂದರ್ಯದ ಬಗ್ಗೆ ಕಮೆಂಟ್ ಮಾಡುತ್ತಾರೆ. ಹಾಗೆಯೇ ಹುಡುಗಿಯರು ಧರಿಸುವ ಒಳಉಡುಪು (Lingerie)ಗಳ ಬಗ್ಗೆಯೂ ಗಮನಿಸಿಕೊಳ್ಳುತ್ತಾರೆ. ಅದರ ಬಗ್ಗೆ ಮಾತನಾಡಿಕೊಳ್ಳುತ್ತಾರೆ. ಹೀಗಾಗಿ ಹುಡುಗಿಯರು ಬ್ರಾ (Bra)ಗಳನ್ನು ಧರಿಸುವಾಗ ಈ ರೀತಿಯ ಬ್ರಾ ತಮಗೆ ಹೊಂದುತ್ತದೆಯೇ ಎಂದು ಪರಿಶೀಲಿಸಿಕೊಳ್ಳಬೇಕು. ತಾವು ಧರಿಸಿದ ಬ್ರಾದಿಂದ ತಮ್ಮ ಸಂಪೂರ್ಣ ಲುಕ್ ಹಾಳಾಗದಂತೆ ಗಮನಿಸಿಕೊಳ್ಳಬೇಕು. ಹಾಗಿದ್ರೆ ಯಾವುದೆಲ್ಲಾ ರೀತಿಯ ಬ್ರಾ ಲಭ್ಯವಿದೆ. ಯಾವ ರೀತಿಯ ದೇಹಕ್ಕೆ ಯಾವ ರೀತಿಯ ಬ್ರಾ ಹೊಂದುತ್ತದೆ, ಯಾವ ಸಂದರ್ಭದಕ್ಕೆ ಯಾವ ರೀತಿಯ ಬ್ರಾ ಆರಾಮದಾಯಕವಾಗಿರುತ್ತದೆ ಎಂಬುದನ್ನು ತಿಳಿಯೋಣ.. 

ಡೆಮಿ ಕಪ್ ಬ್ರಾ (The demi cup)

ಡೆಮಿ ಕಪ್ ಬ್ರಾ ಯಾವುದೇ ರೀತಿಯ ಉಡುಪಿನೊಂದಿಗೂ ಸೂಕ್ತವಾಗಿ ಹೊಂದುತ್ತದೆ. ಮತ್ತು ಇದನ್ನು ಧರಿಸುವುದರಿಂದ ಸ್ತನಗಳ ಗಾತ್ರ ಎದ್ದು ಕಾಣುವುದಿಲ್ಲ ಬದಲಾಗಿ ಸಾಮಾನ್ಯವಾಗಿ ಕಾಣುತ್ತದೆ. ಹೀಗಾಗಿ ಯಾವುದೇ ಅಳುಕಿಲ್ಲದೆ ಇಂಥಹಾ ಬ್ರಾಗಳನ್ನು ಧರಿಸಬಹುದು. ದಿನನಿತ್ಯ ಹಾಕಿಕೊಳ್ಳಲು ಡೆಮಿ ಕಪ್ ಬ್ರಾ ಉತ್ತಮ ಆಯ್ಕೆಯಾಗಿದೆ.

ಬಿಗಿಯಾಗಿರಲಿ ಎಂದು 24 ಗಂಟೆ ಬ್ರಾ ಧರಿಸಿದ್ದರೂ ಸ್ತನ ಸಡಿಲವಾಗುತ್ತೆ..!

ನ್ಯೂಡ್ ಕಲರ್ ಬ್ರಾ (Basic nude coloured bra)

ನ್ಯೂಡ್ ಕಲರ್ ಬ್ರಾಗಳನ್ನು ಧರಿಸುವುದರಿಂದ ಇದು ಯಾವುದೇ ಬಣ್ಣದ ಬಟ್ಟೆ ಹಾಕಿದರೂ ಹೊರಗಡೆ ಎದ್ದು ಕಾಣುವುದಿಲ್ಲ. ಸ್ತನದ ಆಕಾರವೂ ಸುಂದರವಾಗಿ ಕಾಣುತ್ತದೆ. ತೆಳುವಾದ ಬಟ್ಟೆ ಅಥವಾ ಸೀ ತ್ರೂ ಬಟ್ಟೆಗಳನ್ನು ಧರಿಸುವವರು ನ್ಯೂಡ್ ಕಲರ್ ಒಳಉಡುಪುಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಮೃದು ಮತ್ತು ಪಾರದರ್ಶಕ ಬ್ರಾ (Soft and sheer)

ಔದ್ಯೋಗಿಕವಾಗಿ ವ್ಯವಹಾರದಲ್ಲಿ ತೊಡಗಿಕೊಳ್ಳುವ ಮಹಿಳೆಯರಿಗೆ ಇದು ಹೇಳಿ ಮಾಡಿಸಿದ ಬ್ರಾ ಆಗಿದೆ. ಪಾರದರ್ಶಕವಾಗಿರುವ ಈ ಬ್ರಾ ಮಹಿಳೆಯ ಗ್ಲಾಮರಸ್ (Glamorous) ಸೈಡ್‌ನ್ನು ತೋರಿಸುತ್ತದೆ. 

ರಚನಾತ್ಮಕ ಲೇಸ್ ಬ್ರಾ (Structured lace)

ಲೇಸ್ ಬ್ರಾ ನೋಡಲು ತುಂಬಾ ಅಟ್ರ್ಯಾಕ್ಟಿವ್ ಆಗಿರುವ ಕಾರಣ ಹುಡುಗಿಯರು ಇದನ್ನು ಹಾಕಲು ಇಷ್ಟಪಡುತ್ತಾರೆ. ಆದರೆ, ಇದು ಹೆಚ್ಚು ಎಕ್ಸ್ ಪೋಸಿಂಗ್ ಆಗಿರುವ ಕಾರಣ ಧರಿಸಲು ನಾಚಿಕೆ ಪಡುತ್ತಾರೆ. ಹುಡುಗಿಯರು ಇಂತಹಾ ಲೇಸ್ ಬ್ರಾ ಧರಿಸುವಾಗ ಸ್ತನಗಳು ಕಾಣುವುದರಿಂದ ಹೆಚ್ಚು ಸೆಕ್ಸೀಯಾಗಿ ಕಾಣುತ್ತಾರೆ, ಹುಡುಗರು ಇಂಥಹಾ ಬ್ರಾಗಳಲ್ಲಿ ಹುಡುಗಿಯರನ್ನು ನೋಡಲು ಹೆಚ್ಚು ಇಷ್ಟಪಡುತ್ತಾರೆ. ಗಂಡ (Husband)ನ ಜತೆ ಏಕಾಂತವಾಗಿರುವಾಗ, ಹನಿಮೂನ್ ಸಂದರ್ಭದಲ್ಲಿ ಮಹಿಳೆಯರು ಇದನ್ನು ಹೆಚ್ಚು ಬಳಸಲು ಇಷ್ಟಪಡುತ್ತಾರೆ.

ಬೋಹೊ ಲುಕ್ ಬ್ರಾ (Boho look)

ಇದು ಕಲರ್‌ಫುಲ್ ಪ್ರಿಂಟ್ ಇರುವ ಬ್ರಾ ಆಗಿದೆ. ಸ್ತನಗಳನ್ನಷ್ಟೇ ತಬ್ಬಿ ನಿಲ್ಲುವ ಈ ಬ್ರಾ ಧರಿಸುವಾಗ ತೆಳುವಾದ ಬಟ್ಟೆ ಧರಿಸದಂತೆ ನೋಡಿಕೊಳ್ಳಬೇಕು. ತೆಳು ಬಟ್ಟೆಗಳಲ್ಲಿ ಈ ಬ್ರಾ ನೋಡುವವರಿಗೆ ಎದ್ದು ಕಾಣುತ್ತದೆ. ಪಾರ್ಟಿ, ಸ್ಪೋರ್ಟ್ಸ್‌ಗಳಲ್ಲಿ ಮಹಿಳೆಯರು ಹೆಚ್ಚಾಗಿ ಈ ಬ್ರಾ ಧರಿಸಲು ಇಷ್ಟಪಡುತ್ತಾರೆ.

ಮುಂಭಾಗದ ಹುಕ್ ಬ್ರಾಗಳು (Front hook bras)

ಮುಂಭಾಗದಲ್ಲಿ ಹುಕ್ ಇರುವ ಬ್ರಾಗಳು ಧರಿಸಲು ಮತ್ತು ತೆಗೆಯಲು ತುಂಬಾ ಕಂಫರ್ಟೆಬಲ್ ಆಗಿದೆ. ಹೀಗಾಗಿ ವರ್ಕಿಂಗ್ ವುಮೆನ್ಸ್ ಇಂಥಹಾ ಬ್ರಾಗಳನ್ನು ಹೆಚ್ಚು ಇಷ್ಟ ಪಡುತ್ತಾರೆ. .

ಸ್ಟ್ರಾಪ್‌ಲೆಸ್ ಬ್ರಾ (Strapless bra)

ಇದು ಬರೀ ಸ್ತನಗಳನ್ನಪ್ಪಿ ನಿಲ್ಲುವ ಬ್ರಾ ಆಗಿದೆ. ಇದಕ್ಕೆ ಎಲ್ಲಾ ಬ್ರಾಗಳಲ್ಲಿ ಇರುವಂತೆ ಹೆಗಲಿಗೆ ಜೋಡಿಸಿಟ್ಟಂತಹಾ ಕೈಗಳಿರುವುದಿಲ್ಲ. ಜಸ್ಟ್ ಇಲ್ಯಾಸ್ಟಿಕ್ ಬಲದಲ್ಲಿ ಈ ಬ್ರಾ ನಿಲ್ಲುತ್ತದೆ. ಭಯವಿಲ್ಲದೆ ಕಂಫರ್ಟೆಬಲ್ ಎನಿಸುವವರು ಮಾತ್ರ ಈ ಬ್ರಾ ಧರಿಸಬಹುದು..

Follow Us:
Download App:
  • android
  • ios