Banana Storage Tips : ಬಾಳೆ ಹಣ್ಣು ಕಪ್ಪಾಗ್ತಿದ್ಯಾ? ಈ ಟಿಪ್ಸ್ ಫಾಲೋ ಮಾಡಿ

ಒಂದೇ ಬಾರಿ ಬಾಳೆಕಾಯಿ ಎಲ್ಲ ಹಣ್ಣಾದ್ರೆ ತಿನ್ನೋರು ಯಾರು? ಬಾಳೆ ಹಣ್ಣು ಫಟಾಫಟ್ ಹಣ್ಣಾಗೋ ಜೊತೆಗೆ ಕೊಳೆಯಲು ಶುರುವಾಗುತ್ತೆ. ಹಾಗಾಗ್ಬಾರದು ಅಂದ್ರೆ ಕೆಲ ಟ್ರಿಕ್ಸ್ ನೀವು ಪಾಲಿಸಬೇಕು. 
 

Banana Freshness Unpeeled: Top Storage Tips

ಎಲ್ಲ ಋತುವಿನಲ್ಲಿ ಸಿಗುವ ಹಣ್ಣು ಬಾಳೆ. ಪ್ರತಿ ಹಬ್ಬದಲ್ಲೂ ಬಾಳೆ ಹಣ್ಣಿಗೆ ಮಹತ್ವದ ಸ್ಥಾನವಿದೆ. ಇನ್ನೇನು ಹಬ್ಬದ ಸರದಿ ಶುರುವಾಗಲಿದೆ. ಬಾಳೆ ಹಣ್ಣಿನ ಬೆಲೆ ಸ್ವಲ್ಪ ಮಟ್ಟಿಗೆ ಏರಿಕೆ ಕಾಣಲಿದೆ. ಬರೀ ಹಬ್ಬ- ಸಮಾರಂಭಕ್ಕೆ ಮಾತ್ರ ಬಾಳೆ ಹಣ್ಣು ಬಳಕೆ ಆಗೋದಿಲ್ಲ. ಪ್ರತಿ ದಿನ ಬಾಳೆ ಹಣ್ಣು ತಿನ್ನುವ ಜನರಿದ್ದಾರೆ. ಹಸಿದಾಗ ಹೊಟ್ಟೆ ತುಂಬಿಸುವ ಕೆಲಸವನ್ನು ಬಾಳೆ ಹಣ್ಣು ಮಾಡುತ್ತೆ. ಇದು ಆರೋಗ್ಯಕ್ಕೆ ಒಳ್ಳೆಯದು. ಇದೇ ಕಾರಣಕ್ಕೆ ಅನೇಕರು ಬಾಳೆ ಹಣ್ಣನ್ನು ಖರೀದಿ ಮಾಡಿ ತಿನ್ನುತ್ತಾರೆ. ನಿತ್ಯ ಹಣ್ಣು ಖರೀದಿ ಬಹುತೇಕರಿಗೆ ಸಾಧ್ಯವಾಗದ ಮಾತು. ವಾರಕ್ಕೆ ಅಗತ್ಯವಿರುಷ್ಟು ದಿನಸಿ ಮನೆಗೆ ಬಂದಂತೆ ಹಣ್ಣುಗಳು ಮನೆಗೆ ಬರುತ್ವೆ. ಬಾಳೆ ಹಣ್ಣನ್ನು ಕೂಡ ವಾರಕ್ಕಾಗುವಷ್ಟು ನಾವು ಖರೀದಿ ಮಾಡಿರ್ತೇವೆ. ಅಂಗಡಿಯಲ್ಲಿ ಸ್ವಲ್ಪ ಕಾಯಿಯಂತೆ ಇದ್ದ ಬಾಳೆಹಣ್ಣು ಮನೆಗೆ ಬಂದ ಒಂದೇ ದಿನದಲ್ಲಿ ಹಣ್ಣಾಗಿ ಕಪ್ಪಾಗಲು ಶುರುವಾಗಿರುತ್ತೆ. ನಾವು ವಾರಕ್ಕೆ ಅಂತ ತಂದ ಹಣ್ಣನ್ನು ಒಂದೆರಡು ದಿನದಲ್ಲಿ ಖಾಲಿ ಮಾಡ್ಬೇಕು. ಇಲ್ಲವೆ ಅದನ್ನು ಕಸಕ್ಕೆ ಎಸೆಯಬೇಕಾಗುತ್ತದೆ. ಬಾಳೆ ಹಣ್ಣನ್ನು ಕಪ್ಪಾಗದಂತೆ ಇಡೋದು ಒಂದು ಸವಾಲು ಎನ್ನುವವರಿಗೆ ಒಂದಿಷ್ಟು ಸಲಹೆ ಇಲ್ಲಿದೆ.

ಬಾಳೆ ಹಣ್ಣು (Banana) ಕಪ್ಪಾಗದಂತೆ ಏನು ಮಾಡ್ಬೇಕು? : 

1. ಬಾಳೆ ಹಣ್ಣು ಬೇಗ ಕಪ್ಪಾಗಬಾರದು ಅಂದ್ರೆ ನಿಮ್ಮ ಮೊದಲ ಸ್ಟೆಪ್ ಖರೀದಿಯಲ್ಲಿ ಎಚ್ಚರಿಕೆ. ನೀವು ಬಾಳೆ ಹಣ್ಣನ್ನು ಖರೀದಿ (Purchase) ಮಾಡುವ ಸಮಯದಲ್ಲಿ ಸರಿಯಾಗಿ ಗಮನಿಸಿ. ಹೆಚ್ಚು ಬಲಿತ ಹಣ್ಣನ್ನು ಖರೀದಿ ಮಾಡಬೇಡಿ. ಒಂದ್ವೇಳೆ ಅಲ್ಲಲ್ಲಿ ಸಣ್ಣಗೆ ಕಪ್ಪಾ (Black) ಗಿದ್ದಲ್ಲಿ ಅದನ್ನು ಮನೆಗೆ ತರುವ ಪ್ರಯತ್ನಕ್ಕೆ ಕೈ ಹಾಕ್ಬೇಡಿ. 

ಐಐಐಟಿ ಹೈದರಾಬಾದ್‌ ಹಾಸ್ಟೆಲ್ ಮೆಸ್ ಊಟದ ತುಂಬಾ ಜಿರಳೆ, ನೊಣ; ಮಾಜಿ ವಿದ್ಯಾರ್ಥಿ ಪೋಸ್ಟ್ ವೈರಲ್

2. ಅನೇಕರು ಪ್ಲಾಸ್ಟಿಕ್ (Plastic)  ಚೀಲದಲ್ಲಿ ಬಾಳೆ ಹಣ್ಣನ್ನು ಮನೆಗೆ ತಂದು ಅದ್ರೊಳಗೆ ಹಣ್ಣನ್ನು ಇಡ್ತಾರೆ. ಇದು ತಪ್ಪು ವಿಧಾನ. ಮನೆಗೆ ಬಂದ ತಕ್ಷಣ ಪ್ಲಾಸ್ಟಿಕ್ ಕವರ್ ನಿಂದ ಬಾಳೆ ಹಣ್ಣನ್ನು ಹೊರತೆಗೆದು ಇಡಬೇಕು. 

3. ಬಾಳೆ ಕಾಂಡವನ್ನು ಪ್ಲಾಸ್ಟಿಕ್‌ನಿಂದ ಮುಚ್ಚುವ ಮೂಲಕ ದೀರ್ಘಕಾಲ ತಾಜಾವಾಗಿಡಬಹುದು. ಇದ್ರಿಂದ ಬಾಳೆ  ಬೇಗ ಹಣ್ಣಾಗುವುದಿಲ್ಲ.  ಒಂದು ಇಡೀ ಬಾಳೆಗೊನೆ ಅಥವಾ ಒಂದು ಗುಚ್ಚವನ್ನು ಪ್ಲಾಸ್ಟಿಕ್ ನಲ್ಲಿ ಮುಚ್ಚುವ ಬದಲು, ಒಂದೊಂದೇ ಬಾಳೆ ಹಣ್ಣಿನ ಕಾಂಡವನ್ನು ಪ್ರತ್ಯೇಕವಾಗಿ ಪ್ಲಾಸ್ಟಿಕ್ ನಲ್ಲಿ ಸುತ್ತಬೇಕು. ಹೀಗೆ ಮಾಡಿದ್ರೆ ಬಾಳೆ ಹಣ್ಣು ನಿಧಾನವಾಗಿ ಬಲಿಯುತ್ತದೆ. 

4. ಹಣ್ಣುಗಳು ಎಥಿಲೀನ್ ಬಿಡುಗಡೆ ಮಾಡುತ್ತವೆ. ಇದು ಹಣ್ಣಾಗಲು ಕಾರಣವಾಗುತ್ತದೆ. ಹಾಗಾಗಿ ಯಾವುದೇ ಬಲಿತ ಹಣ್ಣಿನ ಜೊತೆ ಬಾಳೆ ಹಣ್ಣನ್ನು ಇಡಬೇಡಿ. ಅದು ಬೇಗ ಹಣ್ಣಾಗುವ ಸಾಧ್ಯತೆ ಹೆಚ್ಚಿರುತ್ತದೆ. 

5. ಬಾಳೆ ಹಣ್ಣನ್ನು ನೀವು ಫ್ರಿಜ್ ನಲ್ಲಿ ಇಡಬೇಡಿ. ಅದನ್ನು ಸಾಮಾನ್ಯ ಉಷ್ಣಾಂಶದಲ್ಲಿ ಇಡಿ. ಬಾಳೆ ಹಣ್ಣನ್ನು ತಲೆಕೆಳಗಾಗಿ ಇಡುವುದರಿಂದ ಅದು ಬೇಗ ಹಣ್ಣಾಗುವುದಿಲ್ಲ. ಅದನ್ನು ಒಂದ್ಕಡೆ ಒತ್ತಿಡಬೇಡಿ. 

6. ನೀವು ಇಡೀ ಬಾಳೆ ಹಣ್ಣಿನ ಗೊನೆಯನ್ನು ಮನೆಗೆ ತಂದಿದ್ದಲ್ಲಿ ಅದನ್ನು ನೇತು ಹಾಕುವುದು ಒಳ್ಳೆಯ ಮಾರ್ಗ. ಅಲ್ಲದೆ ಅದಕ್ಕೆ ನೀವು ಒಂದು ತೆಳುವಾದ ಬಟ್ಟೆಯನ್ನು ಮುಚ್ಚಬೇಕು.

ಜ್ಯೂಸ್ ಪ್ಯಾಕೆಟ್ ಮೇಲೆ ಇನ್ಮುಂದೆ ಕಾಣಲ್ಲ ಶೇ.100ರಷ್ಟು ಹಣ್ಣಿನ ರಸ, FSSAI ಹೊಸ ರೂಲ್ಸ್

7. ನೀವು ಮನೆಗೆ ತಂದ ಬಾಳೆ ಹಣ್ಣೆಲ್ಲವೂ ಕೊಳೆಯಲು ಶುರುವಾದ್ರೆ ಅದಕ್ಕಿಂತ ಮೊದಲು ಫ್ರಿಜ್ ನಲ್ಲಿಡಿ. ಇಲ್ಲವೆ ಬಾಳೆ ಹಣ್ಣಿನ ಸಿಪ್ಪೆ ತೆಗೆದು, ಹಣ್ಣನ್ನು ಮಿಕ್ಸಿಗೆ ಹಾಕಿ ರುಬ್ಬಿ ಅದನ್ನು ಫ್ರೀಜರ್ ನಲ್ಲಿ ಇಡಬಹುದು. ರೊಟ್ಟಿ, ದೋಸೆ, ಕಡುಬು ಸೇರಿದಂತೆ ಬೇರೆ ಸಿಹಿ ಖಾದ್ಯ ಮಾಡುವಾಗ ಇದನ್ನು ಬಳಸಬಹುದು. 

Latest Videos
Follow Us:
Download App:
  • android
  • ios