Asianet Suvarna News Asianet Suvarna News

ಮನೆಯಲ್ಲೇ ಬೆಳೆಯಿರಿ ತರಕಾರಿ, 84ರ ಹರೆಯದ ಅಜ್ಜಿಗೆ 100 ಕುಟುಂಬದ ಸಾಥ್!

ರಾಸಾಯನಿಕ ಮುಕ್ತ ತರಕಾರಿ, ಹಣ್ಣು ಸೇರಿದಂತೆ ಯಾವುದೇ ಆಹಾರ ಪದಾರ್ಥಗಳು ಸಿಗುವುದು ತೀರಾ ವಿರಳ. ಹೀಗಾಗಿ ಆರ್ಗಾನಿಕ್ ತರಕಾರಿ, ಹಣ್ಣುಗಳಿಗೆ ಭಾರಿ ಬೇಡಿಕೆ ಇದೆ. ಇಷ್ಟೇ ಅಲ್ಲ ಬೆಲೆಯೂ ಕೂಜ ದುಬಾರಿ. ಇದೀಗ 84 ವರ್ಷದ ಅಜ್ಜಿಯೊಬ್ಬರು ಮನೆಯಲ್ಲೇ ತರಕಾರಿ ಬೆಳೆದು ಮಾದರಿಯಾಗಿದ್ದಾರೆ. ಇಷ್ಟೇ ಅಲ್ಲ ಇತರಿಗೂ ಮನೆಯಲ್ಲೇ ತರಕಾರಿ ಬೆಳೆಯಲು ಸ್ಪೂರ್ತಿಯಾಗಿದ್ದಾರೆ.

84 year old women grows vegetables in her kitchen garden at Coimbatore
Author
Bengaluru, First Published Jun 13, 2020, 4:03 PM IST

ಕೊಯಂಬತ್ತೂರ್(ಜೂ.13):  ರಾಸಾಯನಿಕ ವಸ್ತು ಸಿಂಪಡಿಸಿದ ಆರ್ಗಾನಿಕ್ ಆಹಾರ ಪದಾರ್ಥಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ದುಬಾರಿಯಾಗಿರುವ ಈ ಆಹಾರ ಪದಾರ್ಥಗಳ ಖರೀದಿ ಜನಸಾಮಾನ್ಯರಿಗೆ ಕೈಗೆಟುಕುವುದಿಲ್ಲ. ಇತ್ತ ಆರೋಗ್ಯಕ್ಕಾಗಿ ಈ ಆರ್ಗಾನಿಕ್ ವಸ್ತುಗಳ ಖರೀದಿಸಿದರೆ ಇದು ನಿಜವಾಗಿಯೂ ಆರ್ಗಾನಿಕ್ ಆಗಿದೆಯೇ ಅನ್ನೋ ಅನುಮಾನ ಬೇರೆ. ಈ ಸಮಸ್ಯೆಗಳಿಗೆ ಮುಕ್ತಿ ನೀಡಲು ಕೊಯಂಬತ್ತೂರಿನ ನಂಜಮ್ಮಾಲ್ ಅನ್ನೋ 84ರ ಹರೆಯದ ವೃದ್ಧೆ ಕಿಚನ್ ಗಾರ್ಡನ್ ಸಂಸ್ಕೃತಿಯನ್ನು ಜನಪ್ರಿಯಗೊಳಿಸಿದ್ದಾರೆ.

ಇಮ್ಯೂನಿಟಿ ಹೆಚ್ಚಿಸಲು ಹಸಿ ಅರಿಶಿನ; ನೀವು ತಿಳಿದುಕೊಳ್ಳಲೇ ಬೇಕು!.

ತೊಪ್ಪಂಬಟ್ಟಿ ಗ್ರಾಮದ ನಂಜಮ್ಮಾಲ್ ಕೃಷಿ ಕುಟುಂಬದಲ್ಲಿ ಬೆಳೆದವರು. ತಮ್ಮ ಮನೆಯಲ್ಲೇ ಎಲ್ಲಾ ರೀತಿಯ ತರಕಾರಿಗಳು, ಸೊಪ್ಪು ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಇಷ್ಟೇ ಅಲ್ಲ, ಈ ಗ್ರಾಮದ ನಿವಾಸಿಗಳಿಗೆ ಉಚಿತವಾಗಿ ತರಕಾರಿ ಗಿಡಗಳನ್ನು, ಬೀಜಗಳನ್ನು ನೀಡುತ್ತಿದ್ದಾರೆ. ಇವರಿಂದ ಸ್ಪೂರ್ತಿ ಪಡೆದ ತೊಪ್ಪಂಬಟ್ಟಿ ಗ್ರಾಮದ 100ಕ್ಕೂ ಹೆಚ್ಚು ಕುಟುಂಬಗಳು ನಂಜಮ್ಮಾಲ್ ಮಾದರಿಯನ್ನು ಅನುಸರಿಸುತ್ತಿದ್ದಾರೆ.

ಕ್ಯಾಲ್ಸಿಯಂ ಮಾತ್ರೆ ತೆಗೆದುಕೊಂಡರೆ ಹಾರ್ಟ್ ಅಟ್ಯಾಕ್ ಸಾಧ್ಯತೆ ಹೆಚ್ಚು!

ಯಾವುದೇ ರಾಸಾಯನಿಕ ಸಂಪಡಿಸದ ಆರ್ಗಾನಿಕ್ ತರಕಾರಿಗಳನ್ನು ಮನಯೆಲ್ಲೇ ಬೆಳೆಯುತ್ತಿದ್ದಾರೆ. ತರಕಾರಿ ಬೆಳೆಯಲು ನಿವಾಸಿಗಳಿಗೆ ಸೂಕ್ತ ಸಲಹೆ, ಮಾರ್ಗದರ್ಶನವನ್ನು ನಂಜಮ್ಮಾಲ್ ನೀಡುತ್ತಿದ್ದಾರೆ. ತರಕಾರಿಗಳ ಬೆಲೆ ಗಗನಕ್ಕೇರುತ್ತಿದೆ. ಕೃಷಿಯಲ್ಲೇ ಜೀವನ ಸಾಗಿಸಿದ ನನಗೆ ಮನೆಯಲ್ಲೇ ತರಕಾರಿ ಬೆಳೆದು, ಇತರರಿಗೆ ಈ ಕುರಿತು ತಿಳುವಳಿಕೆ ನೀಡಲು ನಿರ್ಧರಿಸಿದೆ. ಇದೀಗ ಈ ಗ್ರಾಮದ ಬಹುತೇಕ ಎಲ್ಲಾ ಕುಟುಂಬಗಳು ತಮಗೆ ಬೇಕಾದಷ್ಟು ತರಕಾರಿಗಳನ್ನು ಮನೆಯಲ್ಲೇ ಬೆಳೆಯುತ್ತಿದ್ದಾರೆ ಎಂದು ನಂಜಮ್ಮಾಲ್ ಹೇಳಿದ್ದಾರೆ.

ಕೊರೋನಾ ವೈರಸ್ ಹಾವಳಿ ವೇಳೆ ಆರ್ಗಾನಿಕ್ ತರಾಕರಿಗಳ ಅವಶ್ಯಕತೆ ಕುರಿತು ಗ್ರಾಮದ ಜನರಿಗೆ ಅರಿವು ಮೂಡಿಸಲಾಗಿದೆ. ಅತ್ಯಂತ ಸಣ್ಣ ಹಾಗೂ ಬಡ ಕುಟುಂಬ ಮನೆಯಲ್ಲೇ ತರಕಾರಿ ಬೆಳೆದರೆ ವಾರ್ಷಿಕವಾಗಿ 6,000 ರೂಪಾಯಿ ಉಳಿಸಬಹುದು. ಮೊತ್ತ ಕಡಿಮೆ ಎನಿಸಬಹುದು. ಆದರೆ ಇದರ ಹಿಂದಿರುವ ಉತ್ತಮ ಆರೋಗ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ನಂಜಮ್ಮಾಲ್ ಹೇಳಿದ್ದಾರೆ.

84ರ ಇಳಿ ವಯಸ್ಸಿನಲ್ಲಿ ಯುವಕರನ್ನೇ ನಾಚಿಸುವ ರೀತಿಯಲ್ಲಿ ತರಕಾರಿ ಬೆಳೆಯುತ್ತಿದ್ದಾರೆ ನಂಜಮ್ಮಾಲ್. ಗ್ರಾಮದ ಜನರಿಗೆ ಮಾರ್ಗದರ್ಶಿಯಾಗಿದ್ದಾರೆ. ಇದು ಕೊಯಂಬತ್ತೂರಿನಲ್ಲಿ ಮಾತ್ರ ಸಾಧ್ಯವಲ್ಲ. ಎಲ್ಲರ ಮನೆಯಲ್ಲೂ ಸಾಧ್ಯ. ಉತ್ತಮ ಆರೋಗ್ಯಕ್ಕೆ ಕಿಚನ್ ಗಾರ್ಡನ್ ಸಂಸ್ಕೃತಿ ಅತ್ಯುತ್ತಮ.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

Follow Us:
Download App:
  • android
  • ios