ಫೋನ್‌ನಲ್ಲಿರುವ ಡೇಟಾ, ಮಾಹಿತಿ ಕದಿಯುವಿಕೆ ಪ್ರಕರಣ ಹೆಚ್ಚಳ ಇದೀಗ ಹಿಟ್‌ಲಿಸ್ಟ್‌ನಲ್ಲಿ ವ್ಯಾಟ್ಸ್ಆ್ಯಪ್ ಬಳಕೆದಾರರು ನೀವು ಸಂಪಾದಿಸಿದ ಹಣ, ನಿಮ್ಮ ಡೇಟಾ ಕದಿಯುತ್ತಿದೆ ಬಹುದೊಡ್ಡ ಜಾಲ

ನವದೆಹಲಿ(ಆ.09): ಜಗತ್ತು ಸಂಪೂರ್ಣವಾಗಿ ಡಿಜಿಟಲೀಕರಣಗೊಂಡಿದೆ. ಎಲ್ಲವೂ ಒಂದು ಫೋನ್ ಮೂಲಕವೇ ನಡೆಯುತ್ತಿದೆ. ಸ್ಮಾರ್ಟ್ ಫೋನ್ ಕೈಯಲ್ಲಿದ್ದರೆ ಕುಳಿತಲ್ಲಿಂದಲೇ ಎಲ್ಲವೂ ಸಾಧ್ಯ ಅನ್ನೋ ಕಾಲದಲ್ಲಿ ನಾವಿದ್ದೇವೆ. ಆದರೆ ಇದೀಗ ಇದೇ ಫೋನ್ ಬಳಕೆಯೇ ಹೆಚ್ಚು ಅಪಾಯ ತರುತ್ತಿದೆ. ಇದೇ ಫೋನ್ ಹ್ಯಾಕರ್ಸ್‌‌ಗಳಿಗೆ ಕಳ್ಳತನಕ್ಕೆ ದಾರಿ ಮಾಡಿಕೊಡುತ್ತಿದೆ. ಇದೀಗ ವ್ಯಾಟ್ಸ್ಆ್ಯಪ್ ಬಳಕೆದಾರರು ಸಂಪಾದಿಸಿದ ಹಣ, ಅವರ ಡೇಟಾ, ಮಾಹಿತಿಗಳು ಕದಿಯುವ ವ್ಯವಸ್ಥಿತ ಜಾಲವೊಂದು ಕಾರ್ಯನಿರ್ವಹಿಸುತ್ತಿದೆ.

15 ವರ್ಷದ ಪಂಟರ್ ಹ್ಯಾಕರ್... ಚೀನಿ ಆ್ಯಪ್ ಬಳಸಿ ಪೋರ್ನ್ ತೋರಿಸುತ್ತಿದ್ದ

ವಿಶ್ವದ 100 ರಾಷ್ಟ್ರಗಳು ವ್ಯಾಟ್ಸ್ಆ್ಯಪ್ ಬಳಕೆ ಮಾಡುತ್ತಿದೆ. ಸುಮಾರು 2.5 ಮಿಲಿಯನ್ ಸಕ್ರೀಯ ಬಳಕೆದಾರರು ಹಾಗೂ 5 ಮಿಲಿಯನ್ ಡೌನ್ಲೋಡ್ ಕಂಡಿರುವ ಜಗತ್ತಿನ ಅತ್ಯಂತ ಜನಪ್ರಿಯ ಆ್ಯಪ್ ವ್ಯಾಟ್ಸ್ಆ್ಯಪ್. ಹೀಗಾಗಿ ಸಂಶೋಧಕರು ಹಾಗೂ ತಜ್ಞರ ಪ್ರಕಾರ ವ್ಯಾಟ್ಸ್ಆ್ಯಪ್ ದಾಳಿಕೋರರಿಗೆ ಅತಿದೊಡ್ಡ ಹಾಗೂ ಅತಿ ಸುಲಭದ ಪ್ಲಾಟ್‌ಫಾರ್ಮ್ ಆಗಿದೆ. 

ಡಿಜಿಟಲ್ ಕಳ್ಳರ ಮೋಸದ ದಾಳಿ:
ಮೋಸದ ದಾಳಿ(Phishing attacks)ಇತ್ತೀಚಗೆ ಹೆಚ್ಚಾಗುತ್ತಿದೆ. ಲಿಂಕ್ ಒಂದನ್ನು ಕಳುಹಿಸಿ ಅದನ್ನು ಕ್ಲಿಕ್ ಮಾಡಲು ಸೂಚಿಸುತ್ತಾರೆ. ಮೊದಲ ನೋಟಕ್ಕೆ ಈ ಲಿಂಕ್ ಮೋಸಗಾರರು ತಿಳಿಸುವ ಕಾರಣಗಳಂತೆ ಕಂಡರೂ, ಕ್ಲಿಕ್ ಮಾಡಿದ ಅಂತಿಮ ಹಂತದಲ್ಲಿ ನಾವು ಮೋಸ ಹೋಗಿದ್ದೇವೆ ಎಂಬುದು ಅರಿವಾಗುತ್ತದೆ. ಅಷ್ಟರಲ್ಲಿ ನಿಮ್ಮಲ್ಲಿರುವ ಹಣ, ಮಾಹಿತಿಗಳು ಕಳ್ಳರ ಜೇಬು ಸೇರಿರುತ್ತದೆ. ಕ್ರೆಡಿಟ್ ಕಾರ್ಡ್ ಮತ್ತು ಲಾಗಿನ್ ಮಾಹಿತಿಯಂತಹ ಸೂಕ್ಷ್ಮ ಡೇಟಾವನ್ನು ಕದಿಯುವುದು ಅಥವಾ ಮಾಲ್‌ವೇರ್ ಅನ್ನು ಬಲಿಪಶುವಿನ ಯಂತ್ರದಲ್ಲಿ ಇನ್‌ಸ್ಟಾಲ್ ಮಾಡುವುದು ಈ ಜಾಲದ ಗುರಿಯಾಗಿದೆ ಎಂದು Cisco ಹೇಳುತ್ತದೆ.

ಪಿಂಕ್ ವಾಟ್ಸಾಪ್ ಬಳಸೋ ಮುನ್ನ ವಹಿಸಿ ಎಚ್ಚರ

ಬಳಕೆ ಮೇಲೆ ಉಪಯೋಗ, ಅಪಾಯ:
ಸ್ಮಾರ್ಟ್ ಫೋನ್ ಬಳಕೆ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ. ಸರಿಯಾಗಿ ಬಳಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಇಷ್ಟೇ ಅಲ್ಲ ಎಚ್ಚರ ತಪ್ಪಿದರೂ ಸಂಕಷ್ಟ ತಪ್ಪಿದ್ದಲ್ಲ. ವಿವಿಧ ಮಾಲ್‌ವೇರ್‌ಗಳು ಮೊಬೈಲ್ ಒಳಗೆ ಸೇರಿಕೊಳ್ಳುತ್ತದೆ. ಇದಕ್ಕೆ ವ್ಯಾಟ್ಸ್ಆ್ಯಪ್ ರಹದಾರಿಯಾಗಲಿದೆ. ವ್ಯಾಟ್ಸ್ಆ್ಯಪ್ ಮೂಲಕ ಲಿಂಕ್ ಕಳುಹಿಸುವುದು, ಬಂದ ಲಿಂಕ್ ಅಥವಾ ಮಾಲ್‍‌ವೇಕ್ ಕ್ಲಿಕ್ ಮಾಡುವುದು ಅತ್ಯಂತ ಸುಲಭ. ಇದು ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆಯಾಗಲು ಅಥವಾ ತಪ್ಪುದಾರಿಗೆಳೆಯುವ ವೆಬ್‌ಸೈಟ್‌‌ಗೆ ಕೊಂಡೊಯ್ಯುತ್ತದೆ. 

ಕ್ಯಾಸ್ಪರ್ಸ್ಕಿ(Kaspersky ) ಸಂಶೋಧರ ಪ್ರಕಾರ ವ್ಯಾಟ್ಸ್ಆ್ಯಪ್ ಬಳೆಕೆದಾರರು ಮೋಸದ ಲಿಂಕ್‌ಗಳಿಗೆ ಗುರಿಯಾಗತ್ತಿದ್ದಾರೆ ಎಂದು ವರದಿ ನೀಡಿದ್ದಾರೆ. ಭರ್ಜರಿ ಕೊಡುಗೆ, ಬಹುಮಾನದ ಭರವಸೆಗಳ ಮೂಲಕ ವ್ಯಾಟ್ಸ್ಆ್ಯಪ್ ಬಳಕೆದಾರರನ್ನು ಸುಲಭವಾಗಿ ಮೋಸಗೊಳಿಸಲಾಗುತ್ತದೆ. ಸ್ವಲ್ಪ ಹಣ ಇತ್ತ ವರ್ಗಾಯಿಸಿದರೆ ಸಂಪೂರ್ಣ ಹಣ ನೀಡುವುದಾಗಿ ಭರವಸೆ ನೀಡಿ, ನಿಮ್ಮ ಅಕೌಂಟ್ ಮಾಹಿತಿ, ಕ್ರೆಡಿಟ್ ಕಾರ್ಡ್ ಮಾಹಿತಿ ಜೊತೆಗೆ ಖಾತೆಯಲ್ಲಿದ್ದ ಹಣವೂ ಖಾಲಿಯಾಗುತ್ತದೆ.

ಈ ರೀತಿಯ ಮೋಸಗಳು ಸಾಮಾನ್ಯವಾಗಿ ನಡೆಯುತ್ತಲೇ ಇದೆ. ಇದೀಗ ಹೊಸ ರೀತಿಯ ಮೋಸ ನಡೆಯುತ್ತಿದೆ. Kaspersky ಸಂಶೋಧರ ಪ್ರಕಾರ, ಸುಂದರ ಯುವತಿಯರ ಜೊತೆ ಚಾಟ್ ಮಾಡಲು ಅವಕಾಶ ನೀಡಲಾಗುತ್ತದೆ. ಬಳಿಕ ಫೇಕ್ ಫೇಸ್‌ಬುಕ್ ಪೇಜ್ ಐಡಿ ನೀಡಲಾಗುತ್ತದೆ. ಈ ಮೂಲಕ ಮೋಸಗಾರರು ತಮ್ಮ ಕಂಪ್ಯೂಟರ್ ಅಥವಾ ಫೋನ್‌ಗೆ ಮಾಲ್‌ವೇರ್ ಡೌನ್‌ಲೋಡ್ ಮಾಡುವ WhatsApp "ಧ್ವನಿಮೇಲ್" ಲಿಂಕ್‌ಗಳೊಂದಿಗೆ ಬಳಕೆದಾರರಿಗೆ ನಕಲಿ ಇಮೇಲ್‌ಗಳನ್ನು ಕಳುಹಿಸಲಾಗುತ್ತದೆ. 

ಈ ರೀತಿಯ ಮೋಸದಿಂದ ಸುರಕ್ಷಿತವಾಗಲು, ಎಲ್ಲಾ ಲಿಂಕ್ ಕ್ಲಿಕ್ ಮಾಡುವ ಪರಿಪಾಠದಿಂದ ದೂರ ಉಳಿಯಬೇಕು. ನಕಲಿ ಲಿಂಕ್‌ಗಳಿಂದ ಸಂಪೂರ್ಣ ದೂರವಿರಬೇಕು. ಅವಶ್ಯಕತೆ ಹೆಚ್ಚಾಗಿ, ಅನಾವಶ್ಯಕವಾಗಿ, ಬಹುಮಾನದ ಆಸೆಗಾಗಿ, ಹಣ ಡಬಲ್ ಮಾಡುವ, ತ್ವರಿತವಾಗಿ ಹಣ ಪಡೆಯುವ ಅಸೆಗೆ ಬೀಳದೆ ಫೋನ್ ಬಳಕೆ ಮಾಡಬೇಕು. ಇದರಿಂದ ಈ ರೀತಯ ಮೋಸಗಳಿಂದ ದೂರವಿರಬಹುದು.