Asianet Suvarna News Asianet Suvarna News

ಭಾರತದ 100 ಡೆವಲಪರ್ಸ್‌ಗೆ XROS ಫೆಲೋಶಿಪ್ ಪ್ರೊಗ್ರಾಮ್‍ ಘೋಷಿಸಿದ ಮೆಟಾ!

100 ಭಾರತೀಯ ಡೆವಲಪರ್ಸ್‌ಗೆ ನೆರವಾಗಲು XROS ಫೆಲೋಶಿಪ್ ಪ್ರೊಗ್ರಾಮ್‍ಗೆ ಮೆಟಾ ಬೆಂಬಲ ನೀಡಿದೆ. ಇದಕ್ಕಾಗಿ 1 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತ ಘೋಷಿಸಿದೆ. 

Meta supports FICCI XR Open Source Fellowship Program NeGD joins as technical partner ckm
Author
First Published Dec 2, 2022, 9:28 PM IST

ಬೆಂಗಳೂರು(ಡಿ.02) : XR ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ  ಮೆಟಾ ಇದೀಗ ಮತ್ತೊಂದು ಹೆಜ್ಜೆ ಇಟ್ಟಿದೆ. ಭಾರತೀಯ ವಾಣಿಜ್ಯ ಹಾಗೂ ಕೈಗಾರಿಕಾ ಮಹಾಮಂಡಳಿ(FICCI), XR ಓಪನ್ ಸೋರ್ಸ್(XROS) ಫೆಲೋಶಿಪ್ ಪ್ರೊಗ್ರಾಮ್‍ಗಾಗಿ  1 ಮಿಲಿಯನ್ ಅಮೆರಿಕ ಡಾಲರ್ ಮೊತ್ತ ಬೆಂಬಲ ಒದಗಿಸುವುದಾಗಿ ಘೋಷಿಸಿದೆ.  FICCI ನಡೆಸಿಕೊಡುವ XROS, 100 ಭಾರತೀಯ ಡೆವಲಪ್ಪರ್ಸ್‌ಗೆ ಸ್ಟೈಪಂಡ್ ಮತ್ತು ಮಾರ್ಗದರ್ಶನ ಒಳಗೊಂಡಂತೆ, ಫೆಲೋಶಿಪ್ ಒದಗಿಸುವ ಮೂಲಕ ವಿಸ್ತರಿತ ವಾಸ್ತವತೆ(XR)ತಂತ್ರಜ್ಞಾನಗಳ ಮೇಲೆ ಕಾರ್ಯನಿರ್ವಹಿಸಲು ಬೆಂಬಲ ಒದಗಿಸಲಿದೆ. ವಿದ್ಯುನ್ಮಾನ ಮತ್ತು ಮಾಹಿತಿತಂತ್ರಜ್ಞಾನ ಸಚಿವಾಲಯದ(MeitY) ಉಪಕ್ರಮವಾದ ರಾಷ್ಟ್ರೀಯ ಇ-ಆಡಳಿತ ವಿಭಾಗವು ಈ ಕಾರ್ಯಕ್ರಮದ ತಾಂತ್ರಿಕ ಭಾಗೀದಾರನಾಗಿರಲಿದೆ.

ಈ ಪ್ರೊಗ್ರಾಮ್, XR ತಂತ್ರಜ್ಞಾನಕ್ಕೆ ಸಂಬಂಧಿಸಿದ ಮುಕ್ತ ಮೂಲದ ಯೋಜನೆಗಳಿಗೆ ಕೊಡುಗೆ ಸಲ್ಲಿಸುವುದಕ್ಕೆ ಡೆವಲಪರ್ಸ್‌ಗೆ ಬೆಂಬಲ ನೀಡಿ ಕೈಗೆಟುಕುವಂತಹ, ಸೂಕ್ತವಾದ ಹಾಗು ಭಾರತೀಯ ಭಾಷೆಗಳಿಗೆ ಸ್ಥಳೀಕರಿಸಲಾದ ಭಾರತ ನಿರ್ದಿಷ್ಟ ಪರಿಹಾರಗಳಿಗೆ ಅಡಿಪಾಯ ಹಾಕಲಿದೆ. XR- ಪ್ರೊಗ್ರಾಮ್, ಮೆಟಾದಜಾಗತಿಕ XR ಪ್ರೊಗ್ರಾಮ್‍ಗಳು ಹಾಗು ಸಂಶೋಧನಾ ನಿಧಿಯ ಭಾಗವಾಗಿದ್ದು ಇದಕ್ಕಾಗಿ ಈ ವರ್ಷದ ಆರಂಭದಲ್ಲಿ ಸಂಸ್ಥೆಯು, MeitY ಯೊಂದಿಗೆ XR ಸ್ಟಾರ್ಟ್‍ಅಪ್ ಪ್ರೊಗ್ರಾಮ್‍ಗಾಗಿ $2 ಮಿಲಿಯನ್ ಘೋಷಿಸಿದೆ. ಮುಂದುವರಿದು XROS, ಡಿಜಿಟಲ್ ಸಾರ್ವಜನಿಕ ವಸ್ತುಗಳನ್ನು ಸೃಷ್ಟಿಸಲು ಮತ್ತು XR ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಸಂಭಾವ್ಯ ಉದ್ಯೋಗಾವಕಾಶಗಳನ್ನು ಉತ್ಪತ್ತಿ ಮಾಡಲು ಅಗತ್ಯವಾದ ಸಂಪನ್ಮೂಲಗಳನ್ನು ಡೆವಲಪರ್‍ಗಳಿಗೆ ಒದಗಿಸುವ ಗುರಿ ಹೊಂದಿದೆ.

ಏಷ್ಯಾನೆಟ್‌ ಸುವರ್ಣನ್ಯೂಸ್‌ ಡಿಜಿಟಲ್‌ನ ನಿರುಪಮಾ ಕೆಎಸ್‌ಗೆ ಮೆಟಾ ಫೆಲೋಶಿಪ್

ಮೆಟಾವರ್ಸ್ ಒಂದು ಸಂಸ್ಥೆಯಿಂದ ನಿರ್ಮಾಣಗೊಳ್ಳುವುದಿಲ್ಲ. XR ಓಪನ್ ಸೋರ್ಸ್‍ನಂತಹ ಪ್ರೊಗ್ರಾಮ್‍ಗಳ ಮೂಲಕ ಈ ಕೌತುಕಮಯವಾದ ತಂತ್ರಜ್ಞಾನಗಳ ಮೇಲೆ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಡೆವಲಪರ್ ಗಳಿಗೆ ನಾವು ಬೆಂಬಲ ಒದಗಿಸುತ್ತೇವೆ. ಅವರ ಪ್ರತಿಭೆ, ಅಂತದೃಷ್ಟಿ ಹಾಗು ಶ್ರಮದೊಂದಿಗೆ, ಮುಕ್ತವಾದ, ಸಹಯೋಗಾತ್ಮಕವಾದ ಮತ್ತು ಪ್ರವೇಶಾವಕಾಶ ಇರುವ ರೀತಿಯಲ್ಲಿ ನಿರ್ಮಾಣಗೊಂಡಿರುವ ಇಂಟರ್ ನೆಟ್ ತಂತ್ರಜ್ಞಾನಗಳ ಮುಂದಿನ ಪೀಳಿಗೆಯನ್ನು ಖಾತರಿಪಡಿಸುವ ಆಶಯ ನಮ್ಮದು ಎಂದು ಮೆಟಾ ಜಾಗತಿಕ ವ್ಯವಹಾರಗಳ ವಿಭಾಗದ ಅಧ್ಯಕ್ಷ ನಿಕ್ ಕ್ಲೆಗ್ ಹೇಳಿದ್ದಾರೆ.

2ನೆ ಮತ್ತು 3ನೆ ದರ್ಜೆ ನಗರಗಳೂ ಒಳಗೊಂಡಂತೆ ಯುವ ಡೆವಲಪರ್ ಗಳು ಮತ್ತು ಸ್ಟಾರ್ಟ್‍ಅಪ್‍ಗಳು ಮೆಟಾವರ್ಸ್‍ನಲ್ಲಿರುವ XR ನಂತಹ ಭವಿಷ್ಯತ್ತಿನ ತಂತ್ರಜ್ಞಾನಗಳಿಗೆ ನೆರವು ಒದಗಿಸಿದರೆ ಮಾತ್ರ ಭಾರತದ ತಂತ್ರಜ್ಞಾನ ದಶಕದ(ಟೆಕೇಡ್)ಕನಸು ನನಸಾಗುತ್ತದೆ. ಡೆವಲಪರ್ ಗಳಿಗೆ ಆರ್ಥಿಕ ಮುನ್ನಡೆ ಮಾತ್ರವಲ್ಲದೆ ತೊಡಗಿಕೊಳ್ಳುವಂತಹ ತಂತ್ರಜ್ಞಾಗಳನ್ನು ನಿರ್ಮಾಣ ಮಾಡಲು ಅವರಿಗೆ ಸರಿಯಾದ ಮಾರ್ಗದರ್ಶನದ ಬೆಂಬಲ ಕೂಡ ಒದಗಿಸುವುದರ ಮೇಲೂ ಗಮನ ಕೇಂದ್ರೀಕರಿಸುತ್ತಿರುವ ಈ ಉಪಕ್ರಮವನ್ನು ಎಫ್‍ಐಸಿಸಿಐ ಮತ್ತು ಮೆಟಾ ಪ್ರಾರಂಭಿಸುತ್ತಿರುವುದು ನನಗೆ ಸಂತೋಷದ ವಿಷಯವಾಗಿದೆ ಎಂದು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹಾಗಾರರಾದ ಪ್ರೊ.ಅಜಯ್‍ ಕುಮಾರ್ ಸೂದ್ ಹೇಳಿದ್ದಾರೆ.

ಫೇಸ್‌ಬುಕ್ ಭಾರತದ ವ್ಯವಹಾರಕ್ಕೆ ಹೊಸ ಮುಖ್ಯಸ್ಥೆ: ಸಂಧ್ಯಾ ದೇವನಾಥನ್ ನೇಮಕ

ಮುಕ್ತಮೂಲ ತಂತ್ರಜ್ಞಾನಚಾಲಿತ ಪರಿಸರವ್ಯವಸ್ಥೆಗಳು, ಪರಸ್ಪರ ಕಾರ್ಯಚರಣೀಯವಾದ ಮತ್ತು ಸಂಯೋಜಿತ ಆರ್ಕಿಟೆಕ್ಚರ್ ಅನುಸರಿಸುವ ಪ್ರಬಲವಾದ ಸಾರ್ವಜನಿಕ ವಸ್ತುಗಳ ನಿರ್ಮಾಣದಲ್ಲಿ ದೊಡ್ಡ ಪಾತ್ರ ವಹಿಸಬಲ್ಲದು. ಭಾರತೀಯ ಡೆವಲಪರ್‍ಗಳು, ಅದರಲ್ಲೂ ವಿಶೇಷವಾಗಿ 2ನೆ ಮತ್ತು 3ನೆ ದರ್ಜೆ ನಗರಗಳಿಂದ ಬಂದ ಡೆವಲಪರ್‍ಗಳು, ಭಾರತದ ಹಾಗು ವಿಶ್ವಕ್ಕಾಗಿ ವಿಕಸನಗೊಳ್ಳುತ್ತಿರುವ ತಂತ್ರಜ್ಞಾನ ಮತ್ತು ಮೆಟಾವರ್ಸ್‍ನ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸಲಿದ್ದಾರೆ. XROS ಉಪಕ್ರಮಕ್ಕೆ ಬೆಂಬಲ ಒದಗಿಸುತ್ತಿರುವುದಕ್ಕೆ ನಮಗೆ ಬಹಳ ಸಂತೋಷವಾಗುತ್ತಿದೆ ಮತ್ತು ಭಾರತದ ತೊಡಗಿಕೊಳ್ಳುವ ತಂತ್ರಜ್ಞಾನ ಡೆವಲಪರ್ ಪರಿಸರವ್ಯವಸ್ಥೆ ಮತ್ತು ಓಪನ್ ಸೋರ್ಸ್ ಸಮುದಾಯವನ್ ಪೋಷಿಸುವಲ್ಲಿ ಈ ಕಾರ್ಯಕ್ರಮವು ವೇಗವರ್ಧಕವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಆಶಿಸುತ್ತೇವೆ. ಈ ದಶಕವನ್ನು ಭಾರತದ ತಂತ್ರಜ್ಞಾನದಶಕ(ಟೆಕೇಡ್) ಆಗಿ ಮಾಡುವಲ್ಲಿಇದು ಒಂದು ಹೆಜ್ಜೆಯಾಗಿರುತ್ತದೆ ಎಂದು ಭಾವಿಸಿದ್ದೇವೆ ಎಂದು NeGD ಅಧ್ಯಕ್ಷ ಅಭಿಷೇಕ್ ಸಿಂಗ್ ಹೇಳಿದ್ದಾರೆ.

XROS ಫೆಲೋಶಿಪ್ ಪ್ರೊಗ್ರಾಮ್,  ವಿಸ್ತರಿತ ವಾಸ್ತವತೆ(XR)ತಂತ್ರಜ್ಞಾನಗಳಿಗೆ ಸಂಬಂಧಿಸಿದ ಓಪನ್ ಸೋರ್ಸ್ ಯೋಜನೆಗಳಿಗೆ ಮಹತ್ತರವಾದ ಕೊಡುಗೆ ಸಲ್ಲಿಸುವುದಕ್ಕಾಗಿ ಭಾರತೀಯ ಡೆವಲಪರ್ ಗಳಿಗೆ ಬೆಂಬಲ ಒದಗಿಸುವ ಗುರಿಯಿರಿಸಿಕೊಂಡಿರುವ ಉಪಕ್ರಮವಾಗಿದೆ. 2025ರ ವೇಳೆಗೆ ಭಾರತವನ್ನು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡಬೇಕೆನ್ನುವ ಸರ್ಕಾರದ ದೂರದೃಷ್ಟಿಗೆ ಅನುಗುಣವಾಗಿ ಭವಿಷ್ಯತ್ತಿನ ತಂತ್ರಜ್ಞಾನಗಳಲ್ಲಿ ಹೂಡಿಕೆಗಳ ಬೆಳವಣಿಗೆಯನ್ನು ವರ್ದಿಸುವೆಡೆ ಇದು ಅಗತ್ಯವಾದ ಒತ್ತು ನೀಡುತ್ತದೆ. ಈ ಕಾರ್ಯಕ್ರಮಕ್ಕೆ ಬೆಂಬಲ ಒದಗಿಸುತ್ತಿರುವುದಕ್ಕಾಗಿ ಮೆಟಾಗೆ ಮತ್ತು ಈ ಕಾರ್ಯಕ್ರಮದ ಭಾಗೀದಾರನಾಗಿರುವುದಕ್ಕಾಗಿ NeGD ಗೆ ನಾವು ಧನ್ಯವಾದ ಅರ್ಪಿಸುತ್ತೇವೆ ಎಂದು ಎಫ್‍ಐಸಿಸಿಐದ ಸಮಿತಿ ಸದಸ್ಯ ದೇವಿ ನಾರಂಗ್ ಹೇಳಿದ್ದಾರೆ.

 XR ಓಪನ್ ಸೋರ್ಸ್ ಪ್ರೊಗ್ರಾಮ್ ಭಾರತದಲ್ಲಿ ಎರಡನೇ ಕಾರ್ಯಕ್ರಮವಾಗಿದ್ದು, ಇದರ ಮೂಲಕ ಮೆಟಾ ತೊಡಗಿಕೊಳ್ಳುವಂತಹ ತಂತ್ರಜ್ಞಾನಗಳ ಸುತ್ತ ಡೆವಲಪರ್ ಪರಿಸರವ್ಯವಸ್ಥೆಯನ್ನು ವರ್ಧಿಸಿ ಮೆಟಾವರ್ಸ್ ನಿರ್ಮಾಣಕ್ಕಾಗಿ ಮುಕ್ತ ಪರಿಸರವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದೆ. ಆರಂಭದಿಂದಲೇ ಮೆಟಾ, ನೋ ಲಾಂಗ್ವೇಜ್ ಲೆಫ್ಟ್ ಬಿಹೈಂಡ್(NLLB), 25 ಭಾರತೀಯ ಭಾಷೆಗಳೂ ಒಳಗೊಂಡಂತೆ, 200 ಕಡಿಮೆ ಸಂಪನ್ಮೂಲ ಭಾಷೆಗಳಿಗೆ ಬೆಂಬಲ ಒದಗಿಸುವ ಒಂದೇ ಬಹುಭಾಷಾ ಎಐ ಮಾಡಲ್ ಒದಗಿಸುವಿಕೆ ಮುಂತಾದ ಹಲವಾರು ಉಪಕ್ರಮಗಳಿಗೆ ಬೆಂಬಲ ಒದಗಿಸಿ ಆರಂಭಿಸಿದೆ.

ಕಳೆದ ವರ್ಷ ಮೆಟಾ, ಮುಂದಿನ 3 ವರ್ಷಗಳಲ್ಲಿ 10 ದಶಲಕ್ಷಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಮತ್ತು 1 ದಶಲಕ್ಷಕ್ಕಿಂತ ಹೆಚ್ಚಿನ ಶಿಕ್ಷಕರಿಗೆ ತೊಡಗಿಕೊಳ್ಳುವ ತಂತ್ರಜ್ಞಾನಗಳನ್ನು ತರಲು ಪ್ರೌಢಶಾಲಾ ಶಿಕ್ಷಣದ ಕೇಂದ್ರೀಯ ಮಂಡಳಿ(ಸಿಬಿಎಸ್‍ಇ)ಯೊಂದಿಗೆ ಸಹಭಾಗಿತ್ವ ಏರ್ಪಡಿಸಿಕೊಂಡಿತ್ತು. ಸಿಬಿಎಸ್‍ಇದೊಂದಿಗಿನ ಈ ಸಹಭಾಗಿತ್ವವು ಭಾರತಕ್ಕೆ ಮೆಟಾದ ಬದ್ಧತೆಯನ್ನು ಪುನರುಚ್ಚರಿಸುವುದಲ್ಲದೆ, ಭಾರತದಾದ್ಯಂತ ಇರುವ ವಿದ್ಯಾರ್ಥಿಗಳು ಗುಣಮಟ್ಟದ ಶೈಕ್ಷಣಿಕ ಕಂಟೆಂಟ್‍ಗೆ ಸಮಾನ ಪ್ರವೇಶಾವಕಾಶ ಪಡೆದುಕೊಂಡು ಡಿಜಿಟಲ್ ರೂಪದ ಶಕ್ತಿಪಡೆದುಕೊಂಡಿರುವ ಆರ್ಥಕತೆಯಲ್ಲಿ ಭವಿಷ್ಯತ್ತಿನ ಕೆಲಸಕ್ಕಾಗಿ ಸಿದ್ಧವಾಗಿರುವುದನ್ನು ಖಾತರಿ ಪಡಿಸುವಮೂಲಕ STEM ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸುವ ಜಂಟಿ ಮಹತ್ವಾಕಾಂಕ್ಷೆಯನ್ನೂ ಪ್ರತಿಬಿಂಬಿಸುತ್ತದೆ. ಜೂನ್ 2022ರಲ್ಲಿ ಮೆಟಾವರ್ಸ್‍ನಲ್ಲಿ 40,000 ವಿದ್ಯಾರ್ಥಿಗಳಿಗೆ ತರಬೇತಿಒದಗಿಸಲು LeARn Program  ಪ್ರಾರಂಭಿಸಿತ್ತು ಮತ್ತು ಮೆಟಾಸ್ಪಾರ್ಕ್‍ನಲ್ಲಿ ಆಧುನಿಕ ಸಾಮಥ್ರ್ಯಗಳ ಮೇಲೆ ಕಾರ್ಯನಿರ್ವಹಿಸಲು 1000 ಡೆವಲಪರ್‍ಗಳ ಕೌಶಲ್ಯವರ್ಧನೆ ಮಾಡುವಂತಹ ಸ್ಕೂಲ್ ಆಫ್ ಎಆರ್ ಎಂಬ ಪ್ರಮುಖ ಪ್ರೊಗ್ರಾಮ್ ಅನ್ನೂ ಪ್ರಾರಂಭಿಸಿತ್ತು. ಮೆಟಾದ XR ಪ್ರೊಗ್ರಾಮ್‍ಗಳು ಮತ್ತು ಸಂಶೋಧನಾ ನಿಧಿಯು, ಕೈಗಾರಿಕಾ ಭಾಗೀದಾರರು, ನಾಗರಿಕ ಹಕ್ಕುಗಳ ಗುಂಪುಗಳು, ಸರ್ಕಾರಗಳು, ಲಾಬಕ್ಕಾಗಿಯಲ್ಲದ  ಮತ್ತು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಪ್ರೊಗ್ರಾಮ್ ಮತ್ತು ಬಾಹ್ಯ ಸಂಶೋಧನಾ ಪ್ರೊಗ್ರಾಮ್‍ಗಳಲ್ಲಿ ಮಾಡಿರುವ ಎರಡು ವರ್ಷಗಳ $50 ಮಿಲಿಯನ್ ಹೂಡಿಕೆಯಾಗಿದೆ (two-year $50 million investment).

Follow Us:
Download App:
  • android
  • ios