Hindustan-228 Aircraft: Made in India ವಿಮಾನ ಕನಸು ಶೀಘ್ರ ನನಸು: HALನಿಂದ ಅಭಿವೃದ್ಧಿ!

*ಎಚ್‌ಎಎಲ್‌ನಿಂದ ಹಿಂದೂಸ್ತಾನ್‌-228 ವಿಮಾನ ಅಭಿವೃದ್ಧಿ
*ಗ್ರೌಂಡ್‌ ರನ್‌ ಮತ್ತು ಲೋ ಸ್ಪೀಡ್‌ ಟ್ಯಾಕ್ಸಿ ಸಂಚಾರ ಯಶಸ್ವಿ
*ಅತಿ ವೇಗವಾಗಿ ಟೇಕ್‌ಆಫ್‌ ಮತ್ತು ಲ್ಯಾಂಡಿಂಗ್‌ ಸಾಮರ್ಥ್ಯ!

Hindustan Aironautics Limited carries ground run of prototype Hindustan 228 aircraft mnj

ನವದೆಹಲಿ (ಡಿ. 07): ಸ್ವದೇಶಿ ನಿರ್ಮಿತ ಪ್ರಯಾಣಿಕ ವಿಮಾನದಲ್ಲಿ (Made in India Aircraft) ಸಂಚರಿಸುವ ಭಾರತೀಯರ ಕನಸು ಶೀಘ್ರದಲ್ಲೇ ನನಸಾಗಲಿದೆ ಎಂದು ಕೇಂದ್ರ ಸರ್ಕಾರ (Union Government) ಮಾಹಿತಿ ನೀಡಿದೆ. ಬೆಂಗಳೂರು ಮೂಲದ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (HAL)‘ಹಿಂದೂಸ್ತಾನ್‌-228’ (Hindustan-228) ಹೆಸರಿನ ಭಾರತದ ಮೊಟ್ಟಮೊದಲ 2 ವಾಣಿಜ್ಯ ವಿಮಾನವನ್ನು ಅಭಿವೃದ್ಧಿಪಡಿಸಿದೆ. ಇವು ಈಗಾಗಲೇ ಗ್ರೌಂಡ್‌ ರನ್‌ ಮತ್ತು ಲೋ ಸ್ಪೀಡ್‌ ಟ್ಯಾಕ್ಸಿ (ವಿಮಾನವೊಂದು ಟೇಕ್‌ಆಫ್‌ಗೂ ಮುನ್ನ ತನ್ನದೇ ಬಲದಲ್ಲಿ ದೂರಕ್ಕೆ ಸಾಗುವುದು) ಸಂಚಾರವನ್ನ ಯಶಸ್ವಿಯಾಗಿ ಪೂರ್ಣಗೊಳಿಸಿವೆ. 

ಈ ವಿಮಾನವು ಅತಿ ವೇಗವಾಗಿ ಟೇಕ್‌ಆಫ್‌ ಮತ್ತು ಲ್ಯಾಂಡಿಂಗ್‌ (Take off and Landing) ಆಗುವ ಸಾಮರ್ಥ್ಯ ಹೊಂದಿದೆ. 19 ಆಸನಗಳ ಈ ವಿಮಾನವು ವಿಐಪಿ ಸಾರಿಗೆ (VIP) , ಪ್ರಯಾಣಿಕರ ಸಾರಿಗೆ, ಏರ್‌ ಆಂಬ್ಯುಲೆನ್ಸ್‌ (Air Ambulance) ಮತ್ತು ಪ್ಯಾರಾ ಜಂಪಿಂಗ್‌, ವೈಮಾನಿಕ ಕಣ್ಗಾವಲು, ಛಾಯಾಗ್ರಹಣ ಮತ್ತು ಸರಕು ಸಾಗಣೆಯಂತಹ ವಿವಿಧ ಉದ್ದೇಶಗಳ ಬಳಕೆಗೆ ನಿರ್ಮಿಸಲಾಗಿದೆ ಎಂದು ಕೇಂದ್ರ ರಕ್ಷಣಾ ಇಲಾಖೆ ರಾಜ್ಯ ಖಾತೆ ಸಚಿವ ಅಜಯ್‌ ಭಟ್‌ (Ajay Bhat) ಸೋಮವಾರ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.

Pilot lands plane in Antarctica: ಮೊದಲ ಬಾರಿಗೆ ಮಂಜುಗಡ್ಡೆ ಮೇಲಿಳಿದ ಕಮರ್ಷಿಯಲ್ ವಿಮಾನ

ದೇಶೀಯವಾಗಿ ನಿರ್ಮಿಸಲಾದ ಈ ವಿಮಾನಗಳನ್ನು ಅರುಣಾಚಲ ಪ್ರದೇಶದಲ್ಲಿ (Arunachal Pradesh) ನಿಯೋಜಿಸಲು ನಾಗರಿಕ ವಿಮಾನಯಾನ ಸಚಿವಾಲಯದ ಅಡಿಯಲ್ಲಿ ಕಾರ‍್ಯನಿರ್ವಹಿಸುವ ಅಲಯನ್ಸ್‌ ಏರ್‌ನೊಂದಿಗೆ ಎಚ್‌ಎಎಲ್‌ ಭೋಗ್ಯಕ್ಕೆ ನೀಡುವ ಒಪ್ಪಂದ ಮಾಡಿಕೊಂಡಿದೆ. ನಂತರದಲ್ಲಿ ವಿಮಾನವು ಕೇಂದ್ರ ಸರ್ಕಾರದ ಉಡಾನ್‌ ಯೋಜನೆಯಡಿಯಲ್ಲಿ ಪ್ರಾದೇಶಿಕವಾಗಿ ಸಂಪರ್ಕ ಒದಗಿಸಲು ನಿಯೋಜನೆಗೊಳ್ಳಲಿದೆ.

ಚೀನಾ ಮೇಲೆ ಕಣ್ಣಿಡಲು ಇಸ್ರೇಲ್‌ ಡ್ರೋನ್‌ ಆಗಮನ!

ಗಡಿಯಲ್ಲಿ ತಂಟೆ ಮಾಡುವ ಚೀನಾದ (India China Border dispute) ಮೇಲೆ ಕಣ್ಣಿಡಲು ಭಾರತೀಯ ಸೇನೆಗೆ ಇದೀಗ ಇಸ್ರೇಲ್‌ನ (Israeli)  ಅತ್ಯಾಧುನಿಕ ಡ್ರೋನ್‌ಗಳ ಬಲ ಬಂದಿದೆ. ಕೇಂದ್ರ ಸರ್ಕಾರ ನೀಡಿದ ‘ತುರ್ತು ಖರೀದಿ’ ಅಧಿಕಾರ ಬಳಸಿಕೊಂಡು ಸೇನಾಪಡೆಯು ಇಸ್ರೇಲ್‌ನಿಂದ ಹೆರಾನ್‌ ಡ್ರೋನ್‌ಗಳನ್ನು (Heron drones)  ಖರೀದಿಸಿದ್ದು, ಕೋವಿಡ್‌ ಕಾರಣದಿಂದ ಕೊಂಚ ವಿಳಂಬವಾಗಿ ಅವು ಭಾರತಕ್ಕೆ ಆಗಮಿಸಿವೆ. ಶೀಘ್ರದಲ್ಲೇ ಈ ಡ್ರೋನ್‌ಗಳು ಪೂರ್ವ ಲಡಾಖ್‌ ಸೆಕ್ಟರ್‌ನಲ್ಲಿ (Ladakh Sector) ನಿಯೋಜನೆಯಾಗಲಿದ್ದು, ಅಲ್ಲಿ ಚೀನಾದ ಚಟುವಟಿಕೆಗಳ ಮೇಲೆ ಕಣ್ಣಿಡಲಿವೆ ಎಂದು ಸರ್ಕಾರದ ಮೂಲಗಳು ಹೇಳಿವೆ. 

ಈಗಾಗಲೇ ಈ ಡ್ರೋನ್‌ಗಳು ಕಾರ್ಯಸನ್ನದ್ಧ ಸ್ಥಿತಿಯಲ್ಲಿವೆ. ಹಿಂದಿನಿಂದಲೂ ಭಾರತೀಯ ಸೇನೆಯಲ್ಲಿರುವ ಹೆರಾನ್‌ ಡ್ರೋನ್‌ಗಳಿಗಿಂತ ಇವು ಹೆಚ್ಚು ಆಧುನಿಕವಾಗಿದ್ದು, ಇವುಗಳ ಆ್ಯಂಟಿ-ಜಾಮಿಂಗ್‌  ಸಾಮರ್ಥ್ಯ (anti-jamming capability) ಗರಿಷ್ಠ ಮಟ್ಟದ್ದಾಗಿದೆ ಎಂದು ಹೇಳಲಾಗಿದೆ. ಈ ಡ್ರೋನ್‌ಗಳು ಸತತ 52 ಗಂಟೆ ಹಾರಾಡುವ, ಗರಿಷ್ಠ 35000 ಅಡಿ ಎತ್ತರದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿವೆ. ಇಂಥ 4 ಡ್ರೋನ್‌ಗಳನ್ನು ಖರೀದಿಸಲು ಭಾರತ 1500 ಕೋಟಿ ರು. ಮೊತ್ತದ ಒಪ್ಪಂದ ಮಾಡಿಕೊಂಡಿತ್ತು. ಲಡಾಖ್‌ ಗಡಿಗೆ ರಷ್ಯಾ ನಿರ್ಮಿತ ಟ್ರಯಂಫ ಕ್ಷಿಪಣಿ ವ್ಯವಸ್ಥೆ ಅಣಿಗೊಳಿಸಲು ಭಾರತ ಸಜ್ಜಾಗಿರುವ ಹೊತ್ತಿನಲ್ಲೇ ಈ ಹೊಸ ಅಸ್ತ್ರವೂ ಲಭ್ಯವಾಗಿದೆ.

INS Visakhapatnam| ಕ್ಷಿಪಣಿ ದಾಳಿ ಸಾಮರ್ಥ್ಯ ಯುದ್ಧ ನೌಕೆ ನೌಕಾಪಡೆಗೆ!

ಕ್ಷಿಪಣಿಗಳನ್ನು (Missile) ಉಡ್ಡಯನ ಮಾಡಬಲ್ಲ ಹಾಗೂ ಧ್ವಂಸ ಮಾಡಬಲ್ಲ ಸಾಮರ್ಥ್ಯ ಸೇರಿದಂತೆ ಎಲ್ಲಾ ರೀತಿಯ ಆಧುನಿಕ ಯುದ್ಧ ಕೌಶಲ್ಯಗಳನ್ನು ಒಳಗೊಂಡಿರುವ ಅತ್ಯಾಧುನಿಕ ದಾಳಿ ಯುದ್ಧ ನೌಕೆಯಾದ ಐಎನ್‌ಎಸ್‌ ವಿಶಾಖಪಟ್ಟಣಂ (INS Visakhapatnam), ಭಾನುವಾರ ಭಾರತೀಯ ನೌಕಾಪಡೆಗೆ (Indian Navy) ಸೇರ್ಪಡೆಯಾಗಲಿದೆ. ಇದು ದೇಶ ಇದುವರೆಗೆ ನಿರ್ಮಿಸಿರುವ ಅತ್ಯಾಧುನಿನಿಕ, ಮೊದಲ ಸ್ವದೇಶಿ ನಿರ್ಮಿತ ಕ್ಷಿಪಣಿ ದಾಳಿ ಯುದ್ಧ ನೌಕೆಯಾಗಿದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಈ ಯುದ್ಧ ನೌಕೆಯನ್ನು ನೌಕಾಪಡೆಗೆ ಹಸ್ತಾಂತರಿಸಿದ್ದಾರೆ.

Latest Videos
Follow Us:
Download App:
  • android
  • ios