ಬೆಂಗಳೂರು(ಜೂ.25): : ಭಾರತದ ದೇಸೀಯ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್, ತನ್ನ ಪ್ಲಾಟ್ ಫಾರ್ಮ್‌ಗೆ ಕನ್ನಡ ಸೇರಿದಂತೆ 3 ಪ್ರಾದೇಶಿ ಭಾಷೆ ಸೇರಿಸಲಾಗಿದೆ. ಕನ್ನಡ, ತಮಿಳು ಹಾಗೂ ತೆಲುಗು ನೂತನವಾಗಿ ಫ್ಲಿಪ್‌ಕಾರ್ಟ್‌ನಲ್ಲಿ ಸೇರಿಕೊಂಡಿದೆ. ಈ ಮೂಲಕ ಆನ್ ಲೈನ್ ಕಾಮರ್ಸ್ ನಲ್ಲಿ ಭಾರತೀಯ ಭಾಷೆ ಬಳಕೆದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶವನ್ನು ಹೊಂದಿದೆ. ಇ-ಕಾಮರ್ಸ್ ನಲ್ಲಿ ಸ್ಥಳೀಯ ಭಾಷೆ ಮಾತನಾಡುವವರಿಗೆ ಇದ್ದ ಅಡೆತಡೆಗಳನ್ನು ಈ ವ್ಯವಸ್ಥೆ ತೊಡೆದುಹಾಕಲಿದೆ. ಕಳೆದ ವರ್ಷ ಹಿಂದಿ ಭಾಷೆಯನ್ನು ಅಳವಡಿಸಲಾಗಿದೆ.

ಫ್ಲಿಫ್‌ಕಾರ್ಟ್-ಬಜಾಜ್ ಅಲಾಯನ್ಸ್ ಸಹಯೋಗದಲ್ಲಿ ಗ್ರಾಹಕರಿಗೆ ಮೋಟಾರ್ ಇನ್ಶುರೆನ್ಸ್!

ಇ-ಕಾಮರ್ಸ್ ವ್ಯವಸ್ಥೆಯಲ್ಲಿ ಗ್ರಾಹಕರು ಎದುರಿಸುತ್ತಿರುವ ವಿವಿಧ ತೊಂದರೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಈ ಸ್ಟೇಟ್-ಆಫ್-ಆರ್ಟ್ ಆವಿಷ್ಕಾರಗಳನ್ನು ಅಭಿವೃದ್ಧಿಪಡಿಸಿ ಮೂರು ಪ್ರಾದೇಶಿಕ ಭಾಷೆಗಳನ್ನು ಪರಿಚಯಿಸಲಾಗಿದೆ. ಉದ್ಯಮದ ವರದಿಗಳ ಪ್ರಕಾರ, 2021 ರ ವೇಳೆಗೆ ಭಾರತೀಯ ಭಾಷೆಯ ಇಂಟರ್ನೆಟ್ ಬಳಕೆದಾರರ ಪ್ರಮಾಣ ಶೇ.75 ರಷ್ಟಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಭಾಷೆಗಳ ಬಳಕೆದಾರರ ಪ್ರಮಾಣ ಹೆಚ್ಚುತ್ತಿದ್ದು, ವಿಶೇಷವಾಗಿ ಸಣ್ಣ ಸಣ್ಣ ಪಟ್ಟಣಗಳಲ್ಲಿ ಇದರ ಪ್ರಮಾಣ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಾದೇಶೀಕ ಭಾಷೆಗಳಲ್ಲಿ ಇ-ಕಾಮರ್ಸ್ ಅನ್ನು ಲಭ್ಯವಾಗುವಂತೆ ಮಾಡುವ ಮೂಲಕ ಗ್ರಾಹಕರಿಗೆ ವೈಯಕ್ತಿಕ ಅನುಭವವನ್ನು ಹೆಚ್ಚಿಸುವುದು ಪ್ರಮುಖವಾಗಿದೆ. ಇದು ದೇಶದಲ್ಲಿ ಲಕ್ಷಾಂತರ ಗ್ರಾಹಕರು ತಮ್ಮದೇ ಭಾಷೆಗಳಲ್ಲಿ ಆನ್ ಲೈನ್ ಶಾಪಿಂಗ್ ಅನುಭವವನ್ನು ಪಡೆಯಲು ಸಾಧ್ಯವಾಗುತ್ತದೆ. ದಕ್ಷಿಣ ರಾಜ್ಯಗಳು ಫ್ಲಿಪ್ ಕಾರ್ಟ್ ಗೆ ಒಂದು ಪ್ರಮುಖವಾದ ಮಾರುಕಟ್ಟೆಯಾಗಿವೆ. ಇಲ್ಲಿ ಪ್ರಾದೇಶಿಕ ಭಾಷೆಯನ್ನು ಅಳವಡಿಸಿಕೊಂಡರೆ ಇ-ಕಾಮರ್ಸ್ ವೇದಿಕೆಗೆ ಮತ್ತಷ್ಟು ಗ್ರಾಹಕರನ್ನು ಸೇರ್ಪಡೆ ಮಾಡಲು ಅನುಕೂಲವಾಗುತ್ತದೆ.

ಬಳಕೆದಾರ ಸಂಶೋಧನೆ
ಹೊಸ ಭಾಷಾ ಸಂಪರ್ಕ ಸಾಧನಗಳು ಗ್ರಾಹಕರಿಗೆ ಶಾಪಿಂಗ್ ಅನ್ನು ಆಕರ್ಷಕವಾಗಿ ಮಾಡಲು ಪದಗಳ ಭಾಷಾಂತರ ಮತ್ತು ಲಿಪ್ಯಂತರದ ನ್ಯಾಯಯುತವಾದ ಮಿಶ್ರಣವನ್ನು ಬಳಸುತ್ತದೆ. ಇದು ತಮ್ಮದೇ ಆದ ಭಾಷೆಯಲ್ಲಿ ವೇದಿಕೆಯೊಂದಿಗೆ ಸಂವಹನ ನಡೆಸಲು ಮತ್ತು ಖರೀದಿ ನಿರ್ಧಾರಗಳ ಸ್ವಾತಂತ್ರ್ಯವನ್ನು ಉತ್ತೇಜಿಸುತ್ತದೆ. ಇದಕ್ಕೆ ಪೂರಕವಾಗಿ ವೇದಿಕೆಯನ್ನು ಅಭಿವೃದ್ಧಿಪಡಿಸಲು ತಂಡಕ್ಕೆ ನೆರವಾಗುವಂತಹ ಸಂಬಂಧಪಟ್ಟ ಒಳನೋಟಗಳನ್ನು ಪಡೆಯಲು ಹಲವಾರು ತಿಂಗಳ ಕಾಲ ಅಧ್ಯಯನ ನಡೆಸಿ ಅನುಷ್ಠಾನಕ್ಕೆ ತರಲಾಗಿದೆ.

ಭಾಷಿಕರ ಅಧ್ಯಯನದಲ್ಲಿ ಸೇಲಂ, ವಿಶಾಖಪಟ್ಟಣ ಮತ್ತು ಮೈಸೂರು ನಗರಗಳ ಜನರನ್ನು ಭಾಗಿದಾರರನ್ನಾಗಿಸಲಾಗಿತ್ತು. ಇಂತಹ ಸಭೆಗಳಲ್ಲಿ ಭಾಷೆ ಬಳಕೆ ಬಗ್ಗೆ ವ್ಯಕ್ತವಾದ ವೈವಿಧ್ಯಮಯ ಅಭಿಪ್ರಾಯಗಳನ್ನು ಸಂಗ್ರಹಿಸಿ ಕಾರ್ಯರೂಪಕ್ಕೆ ತರಲು ನೆರವಾದವು. ಉತ್ಪನ್ನಗಳ ವಿಶೇಷಣಗಳು, ಬ್ಯಾನರ್ ಗಳು ಮತ್ತು ಪಾವತಿ ಪುಟಗಳು ಸೇರಿದಂತೆ ಇನ್ನಿತರೆ ವಿಚಾರಗಳಿಗೆ ಸಂಬಂಧಿಸಿದಂತೆ ಮೂರು ಭಾಷೆಗಳಲ್ಲಿ 5.4 ದಶಲಕ್ಷಕ್ಕೂ ಅಧಿಕ ಪದಗಳನ್ನು ಭಾಷಾಂತರ ಮಾಡಲಾಗಿದೆ.

ಈ ಹಿಂದಿನ ವರ್ಷದಲ್ಲಿ ನಾವು ಲಕ್ಷಾಂತರ ಗ್ರಾಹಕರನ್ನು ಇ-ಕಾಮರ್ಸ್ ಸೇರ್ಪಡೆಗೆಂದು ವಾಯ್ಸ್, ವಿಡಿಯೋ ಮತ್ತು ಸರಳ ಭಾಷೆಗೆ ಸಂಬಂಧಿಸಿದ ಬಹು ಪರಿಹಾರಗಳನ್ನು ಪರಿಚಯಿಸಿದ್ದೇವೆ. ಭಾಷೆಯ ತೊಡಕನ್ನು ಉತ್ತಮ ರೀತಿಯಲ್ಲಿ ನಿವಾರಣೆ ಮಾಡಿದಲ್ಲಿ ತಲುಪದೇ ಇರುವ ಲಕ್ಷಾಂತರ ಗ್ರಾಹಕರನ್ನು ತಲುಪಲು ಸಾಕಷ್ಟು ಅವಕಾಶವನ್ನು ಹೊಂದಬಹುದೆಂಬ ವಿಶ್ವಾಸವನ್ನು ಹೊಂದಿದ್ದೇವೆ. ದೇಸೀಯ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ನಾವು ಭಾರತ ಮತ್ತು ಇದರ ವೈವಿಧ್ಯತೆನ್ನು ಅರ್ಥ ಮಾಡಿಕೊಂಡಿದ್ದೇವೆ. ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳ ಜತೆಯಲ್ಲಿ ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳನ್ನು ಪರಿಚಯಿಸುತ್ತಿರುವುದು ಒಂದು ಉತ್ತಮ ಹೆಜ್ಜೆಯಾಗಿದೆ. ಈ ಮೂಲಕ ಇ-ಕಾಮರ್ಸ್ ಅನ್ನು ಪ್ರಜಾಸತ್ತಾತ್ಮಕದೆಡೆಗೆ ಕೊಂಡೊಯ್ಯುವ ಗುರಿಯನ್ನು ಹೊಂದಿದ್ದೇವೆ ಎಂದು ಫ್ಲಿಪ್ ಕಾರ್ಟ್ ಗ್ರೂಪ್  ಮುಖ್ಯಕಾರ್ಯನಿರ್ವಹಣಾಧಿಕಾರಿ ಕಲ್ಯಾಣ್ ಕೃಷ್ಣಮೂರ್ತಿ ಹೇಳಿದ್ದಾರೆ.

`ದೇಸೀಯ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್, ನಮ್ಮ ಭಾರತ್ ಬಳಕೆದಾರರನ್ನು ಸಬಲರನ್ನಾಗಿ ಮಾಡುವಲ್ಲಿ ಸರಳ ಭಾಷೆಗಳು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂಬುದನ್ನು ಅರಿತ್ತಿದ್ದೇವೆ. ಅದೇ ರೀತಿ ಇ-ಕಾಮರ್ಸ್ ನಲ್ಲಿ ಹೊಸ ಬಳಕೆದಾರರ ಸೇರ್ಪಡೆಗೆ ನೆರವಾಗುತ್ತವೆ ಎಂಬುದನ್ನು ತಿಳಿದಿದ್ದೇವೆ. ಇಂದು ಶೇ.58 ರಷ್ಟು ನಮ್ಮ ಗ್ರಾಹಕರು 2 ನೇ ಹಂತದ ನಗರಗಳಿಗೆ ಸೇರಿದವರಾಗಿದ್ದಾರೆ. ತಮಿಳು, ತೆಲುಗು ಮತ್ತು ಕನ್ನಡವನ್ನು ಹೊಸದಾಗಿ ಸೇರ್ಪಡೆ ಮಾಡಿರುವುದರಿಂದ ಸರಳ ಮತ್ತು ಹೆಚ್ಚು ವೈಯಕ್ತಿಕಗೊಳಿಸುವುದರೊಂದಿಗೆ ಬಳಕೆದಾರರ ಇ-ಕಾಮರ್ಸ್ ಜರ್ನಿಯನ್ನು ಸುಧಾರಣೆ ಮಾಡಲಿದೆ ಎಂದು ಫ್ಲಿಪ್ ಕಾರ್ಟ್ ನ ಚೀಫ್ ಪ್ರಾಡಕ್ಟ್ ಅಂಡ್ ಟೆಕ್ನಾಲಜಿ ಆಫೀಸರ್ ಜಯೇಂದ್ರನ್ ವೇಣುಗೋಪಾಲ್ ಹೇಳಿದರು.