Woman

ಎಲಾನ್ ಮಸ್ಕ್ ಅವರ ತಾಯಿ 76 ರ್ಷದ ಮೇಯ್ ಮಸ್ಕ್

ಅಮೆರಿಕದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್‌ ತಾಯಿ ಬಗ್ಗೆ ನಿಮಗೆ ಗೊತ್ತಾ? 76ರ ಹರೆಯದಲ್ಲೂ ಮಾಡೆಲ್ ರೀತಿ ಮಿಂಚ್ತಿರುವ ಈಕೆ ವಿಶ್ವದ ಅತ್ಯಂತ ಶ್ರೀಮಂತ ತಾಯಿ ಎನಿಸಿದ್ದಾರೆ.

ವಿಶ್ವದ ಅತ್ಯಂತ ಶ್ರೀಮಂತ ತಾಯಿ ಮೇಯ್ ಮಸ್ಕ್

ಅಮೆರಿಕದ ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್ ಅವರ ತಾಯಿ ಮೇಯ್ ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ ತಾಯಿ. 76 ವರ್ಷ ವಯಸ್ಸಿನಲ್ಲೂ ಅವರು ತುಂಬಾ ಗ್ಲಾಮರಸ್ ಆಗಿ ಕಾಣುತ್ತಾರೆ.

ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ ಮೇಯ್ ಮಸ್ಕ್

ಮೇಯ್ ಮಸ್ಕ್ 1948 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಜನಿಸಿದರು. ಅವರು ಮಾಡೆಲ್ ಮತ್ತು ಆಹಾರ ತಜ್ಞರು ಆಗಿದ್ದಾರೆ. 50 ವರ್ಷಗಳಿಂದ ಮಾಡೆಲಿಂಗ್ ಮಾಡುತ್ತಿದ್ದಾರೆ.

50 ರ ದಶಕದಲ್ಲಿ ಮಾಡೆಲಿಂಗ್ ಆರಂಭಿಸಿದರು

ಮೇಯ್ ಮಸ್ಕ್ ಟೈಮ್ ಮ್ಯಾಗಜೀನ್, ವೋಗ್ ಮತ್ತು ಸ್ಪೋರ್ಟ್ಸ್ ಇಲ್ಲಸ್ಟ್ರೇಟೆಡ್ ಸೇರಿದಂತೆ ಹಲವು ದೊಡ್ಡ ನಿಯತಕಾಲಿಕೆಗಳ ಮುಖಪುಟದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು 50 ರ ದಶಕದಲ್ಲಿ ಮಾಡೆಲ್ ಆಗಿ ಕೆಲಸ ಆರಂಭಿಸಿದರು.

8 ನೇ ವಯಸ್ಸಿನಲ್ಲಿ ಕೆಲಸ ಆರಂಭಿಸಿದ ಮೇಯ್

ಮೇಯ್ ಮಸ್ಕ್ 8 ನೇ ವಯಸ್ಸಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರು ಮಾಸಿಕ ಬುಲೆಟಿನ್ ಮತ್ತು ಫೋಟೊಕಾಪಿ ಸುದ್ದಿಪತ್ರಗಳನ್ನು ತಯಾರಿಸುತ್ತಿದ್ದರು. ಲಕೋಟೆಗಳ ಮೇಲೆ ಸ್ಟಾಂಪ್‌ಗಳನ್ನು ಅಂಟಿಸುತ್ತಿದ್ದರು.

22 ನೇ ವಯಸ್ಸಿನಲ್ಲಿ ಮದುವೆಯಾದ ಮೇಯ್

ಮೇಯ್ 12 ನೇ ವಯಸ್ಸಿನಲ್ಲಿ ತನ್ನ ಅವಳಿ ಸಹೋದರಿಯರ ಜೊತೆ ತಂದೆಗೆ ರಿಸೆಪ್ಷನಿಸ್ಟ್‌ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. 22 ನೇ ವಯಸ್ಸಿನಲ್ಲಿ ಅವರು ದಕ್ಷಿಣ ಆಫ್ರಿಕಾದ ಎಂಜಿನಿಯರ್ ಎರೋಲ್ ಮಸ್ಕ್ ಅವರನ್ನು ಮದ್ವೆ ಆದ್ರು.

ಮೇಯ್ ಅವರ ಹಿರಿಯ ಮಗ ಎಲಾನ್ ಮಸ್ಕ್

ಮೇಯ್ ಮಸ್ಕ್ ಅವರಿಗೆ ಮೂವರು ಮಕ್ಕಳಿದ್ದಾರೆ. ಅವರ ಹಿರಿಯ ಮಗ ಎಲಾನ್ ಮಸ್ಕ್ ಟೆಸ್ಲಾ, ಸ್ಪೇಸ್‌ಎಕ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಟಾರ್ಟ್‌ಅಪ್ xAI ಸೇರಿದಂತೆ ಏಳು ಕಂಪನಿಗಳ ಸಹ-ಸ್ಥಾಪಕರಾಗಿದ್ದಾರೆ.

ಷೆಫ್ ಕಿಂಬಲ್ ಮಸ್ಕ್

ಮೇಯ್ ಅವರ ಎರಡನೇ ಮಗ ಕಿಂಬಲ್ ಮಸ್ಕ್ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನಲ್ಲಿ ಆಡಳಿತ ಮಂಡಳಿ ಸದಸ್ಯರಾಗಿದ್ದಾರೆ ಮತ್ತು ಷೆಫ್ ಕೂಡ. ಅವರು ದಿ ಕಿಚನ್ ಎಂಬ ರೆಸ್ಟೋರೆಂಟ್ ಸರಣಿಯನ್ನು ಸ್ಥಾಪಿಸಿದ್ದಾರೆ.

ಪ್ಯಾಶನ್‌ಫ್ಲಿಕ್ಸ್‌ನ ಸಹ-ಸ್ಥಾಪಕಿ

ಮೇಯ್ ಅವರ ಮಗಳು ಟೋಸ್ಕಾ ಪ್ಯಾಶನ್‌ಫ್ಲಿಕ್ಸ್ ಎಂಬ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನ ಸಹ-ಸ್ಥಾಪಕಿ. ಇದು ಪ್ರಣಯ ಕಾದಂಬರಿಗಳನ್ನು ಚಲನಚಿತ್ರಗಳಾಗಿ ಪರಿವರ್ತಿಸುತ್ತದೆ.

290.3 ಬಿಲಿಯನ್ ಡಾಲರ್ ಎಲಾನ್ ಮಸ್ಕ್ ಆಸ್ತಿ

ಎಲಾನ್ ಮಸ್ಕ್ ಆಸ್ತಿ 290.3 ಬಿಲಿಯನ್ ಡಾಲರ್, ಕಿಂಬಲ್ ಮಸ್ಕ್  ಆಸ್ತಿ 700 ಮಿಲಿಯನ್ ಡಾಲರ್ ಮತ್ತು ಟೋಸ್ಕಾ ಅವರ ಆಸ್ತಿ 170 ಮಿಲಿಯನ್ ಡಾಲರ್. ಮೂವರದ್ದು ಸೇರಿಸಿ ಮೇಯ್ ವಿಶ್ವದ ಅತ್ಯಂತ ಶ್ರೀಮಂತ ತಾಯಿ ಎನಿಸಿದ್ದಾರೆ

ಚಳಿಗಾಲದಲ್ಲಿ ಆಫೀಸ್‌ಗೆ ಹೋಗೋ ಹುಡುಗಿಯರಿಗಾಗಿ ಪುಲ್‌ ಕೈ ಕುರ್ತಾಗಳು

ಚಳಿಗಾಲದ ಮದುವೆಗೆ 5 ಬೆಚ್ಚಗಿನ ಸೀರೆ

ರೆಡಿಮೇಡ್ ಅಜ್ರಕ್ ಬ್ಲೌಸ್ ಡಿಸೈನ್ಸ್, ಬೆಲೆ ಮಾತ್ರ ಕೇವಲ 500 ರೂ!

ಸಿಂಪಲ್ ಕುರ್ತಾಗೆ ಟ್ರೆಂಡಿ ಲುಕ್ ನೀಡುವ ಲೆಟೇಸ್ಟ್ ನೆಕ್‌ಲೈನ್‌ ಡಿಸೈನ್ಸ್‌