Woman
ಅಪ್ಪನನ್ನೇ ಹೋಲುವ ಪ್ರಿಯಾಂಕಾ ಗಾಂಧಿ ಮಗಳಿಗೆ ರಾಜಕೀಯಕ್ಕೆ ಬರಲು ಒಲವಿದ್ಯಾ?
ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಬರ್ಟ್ ವಾದ್ರಾ ಪುತ್ರಿ ಮಿರಯಾ ವಾದ್ರಾ ಗಾಂಧಿ ಕುಟುಂಬದ ಕುಡಿಯಾಗಿದ್ದರೂ, ತಾಯಿ ಮತ್ತು ಅಜ್ಜಿ ಸೋನಿಯಾ ಗಾಂಧಿಗಿಂತ ಭಿನ್ನ. ಸಾರ್ವಜನಿಕ ಜೀವನದಿಂದ ದೂರವೇ ಉಳಿದಿದ್ದಾರೆ.
ಮಿರಯಾ 2003ರಲ್ಲಿ ಜನಿಸಿದರು. ಅಣ್ಣನ ಹೆಸರು ರೆಹಾನ್ ವಾದ್ರಾ. ಮನೆಯಲ್ಲಿ ಎಲ್ಲರೂ ರಾಜಕಾರಣಿಗಳಾದ್ರಿಂದ ಇವರೂ ಅದೇ ವಾತಾವರಣದಲ್ಲಿ ಬೆಳೆದಿದ್ದಾರೆ.
ಮಿರಯಾ ದೆಹಲಿಯ ಪ್ರತಿಷ್ಠಿತ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದ್ದಾರೆ. ನಂತರ ಅವರು ಡೆಹ್ರಾಡೂನ್‌ನ ವೆಲ್ಹ್ಯಾಮ್ ಬಾಲಕಿಯರ ಶಾಲೆಯಲ್ಲಿ ಮುಂದಿನ ಶಿಕ್ಷಣ ಪಡೆದರು.
ಮಿರಯಾ ಬ್ಯಾಸ್ಕೆಟ್‌ಬಾಲ್‌ನಲ್ಲಿ ಆಸಕ್ತಿ ಹೊಂದಿದ್ದಾರೆ. ಅವರು ಶಾಲೆ ಮತ್ತು ಇತರ ದೊಡ್ಡ ಮಟ್ಟದ ಬ್ಯಾಸ್ಕೆಟ್‌ಬಾಲ್ ಪಂದ್ಯಗಳಲ್ಲಿ ಹಲವು ಬಾರಿ ಭಾಗವಹಿಸಿದ್ದಾರೆ. ಇದಕ್ಕೆ ಕುಟುಂಬ ಬೆಂಬಲಿಸುತ್ತದೆ.
ಮಿರಯಾ ಸಾರ್ವಜನಿಕವಾಗಿ ಬಹಳ ವಿರಳವಾಗಿ ಕಾಣಿಸಿಕೊಳ್ಳುತ್ತಾರೆ. 2022ರಲ್ಲಿ ಮೊದಲಿಗೆ ಅವರು ತಮ್ಮ ಕುಟುಂಬದೊಂದಿಗೆ ರಾಹುಲ್ ಗಾಂಧಿಯ 'ಭಾರತ್ ಜೋಡೋ ಯಾತ್ರೆ'ಯಲ್ಲಿ ಭಾಗವಹಿಸಿದರು, ಅದು ವಿಶೇಷ ಕ್ಷಣವಾಗಿತ್ತು.
ಭಾರತ್ ಜೋಡೋ ಯಾತ್ರೆಯಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಮಿರಯಾ ಮಾಧ್ಯಮಗಳ ಗಮನ ಸೆಳೆದಿದ್ದಳು. ಆಗಿನಿಂದಾ ಅವರ ರಾಜಕೀಯ ಪ್ರವೇಶದ ಬಗ್ಗೆ ಹಲವು ಊಹಾಪೋಹಗಳಿವೆ. ಕೈ ನಾಯಕರು ಈಕೆಗೆ ನಾಯಕಿಯಾಗಬಲ್ಲಳು ಎನ್ನುತ್ತಾರೆ.
ಮಾಜಿ ಕಾಂಗ್ರೆಸ್ ಸಂಸದ ಜನಾರ್ದನ ಪೂಜಾರಿ ಮಿರಯಾ ಒಂದು ದಿನ ತಮ್ಮ ಮುತ್ತಜ್ಜಿ ಇಂದಿರಾ ಗಾಂಧಿಯಂತೆ ನಾಯಕಿಯಾಗಬಹುದು ಎಂದು ಭವಿಷ್ಯ ನುಡಿದಿದ್ದರ. ಆದರೆ, ಈಕೆ ರಾಜಕೀಯ ಪ್ರವೇಶದ ಬಗ್ಗೆ ಖಚಿತತೆ ಇಲ್ಲ.
ರಾಜಕೀಯ ಕುಟುಂಬದಿಂದ ಬಂದವರಾಗಿದ್ದರೂ, ಮಿರಯಾಗೆ ಸಿಂಪಲ್ ಲೈಫ್ ಇಷ್ಟ.
ಮಿರಯಾ ಮತ್ತು ರೆಹಾನ್ ನಡುವೆ ಒಂದು ವರ್ಷದ ಅಂತರವಿದೆ. ಇಬ್ಬರೂ ತಮ್ಮ ಕುಟುಂಬದೊಂದಿಗೆ ಆಪ್ತ ಸಂಬಂಧ ಹೊಂದಿದ್ದಾರೆ ಮತ್ತು ಕುಟುಂಬದ ಖಾಸಗೀತನವನ್ನು ಕಾಪಾಡಿಕೊಳ್ಳುತ್ತಾರೆ.
ಬ್ಯಾಸ್ಕೆಟ್‌ಬಾಲ್ ಜೊತೆಗೆ ಮಿರಯಾಗೆ ಸಾಹಸ ಕ್ರೀಡೆಗಳಲ್ಲಿ, ವಿಶೇಷವಾಗಿ ಡೈವಿಂಗ್‌ನಲ್ಲಿ ಆಸಕ್ತಿ ಇದ್ದು, ತರಬೇತುದಾರ ಮಟ್ಟದ ಡೈವಿಂಗ್ ಕೋರ್ಸ್ ಮಾಡಿದ್ದಾರೆ.
ವೈಯಕ್ತಿಕ ಜೀವನದ ಬಗ್ಗೆ ಏನೂ ಅಷ್ಟು ಗೊತ್ತಿಲ್ಲ. ಸಾಮಾಜಿಕ ಮಾಧ್ಯಮ ಖಾತೆಗಳಿದ್ದರೂ, ಹೆಚ್ಚು ಸಕ್ರಿಯವಾಗಿಲ್ಲ.
ಸರಳ ಜೀವನ ನಡೆಸುತ್ತಿರೋ ಪ್ರಿಯಾಂಕಾ ಗಾಂಧಿ ಮಗಳಿಗೆ ರಾಜಕೀಯ ಕುಟುಂಬದ ಬೆಂಬಲವಿದ್ದರೂ, ಅವರ ಭವಿಷ್ಯದ ಬಗ್ಗೆ ಯಾವುದೇ ಖಚಿತತೆ ಇಲ್ಲ. ಆದರೆ, ಅಮ್ಮನಂತೆ ಇವರೂ ರಾಜಕೀಯ ಪ್ರವೇಶಿಸೋ ಸಾಧ್ಯತೆ ಅಲ್ಲಗಳೆಯುವಂತಿಲ್ಲ.