Kannada

ಚಾಣಕ್ಯ ನೀತಿ: ಮಹಿಳೆಯರು ಹೇಗೆ ದಾರಿ ತಪ್ಪುತ್ತಾರೆ?

ಹೆಣ್ಣು ಮಕ್ಕಳಿಗೆ ಕುಟುಂಬ ಹಾಗೂ ಸಮಾಜದಲ್ಲಿ ತನ್ನದೇ ಆದ ನಿರ್ಬಂಧಗಳಿವೆ. ಆದರೂ ಅವರು ಕೆಲವೊಮ್ಮೆ ದಾರಿ ತಪ್ಪಲೇನು ಕಾರಣ? 

Kannada

ಚಾಣಕ್ಯ ಸೂತ್ರ

ಆಚಾರ್ಯ ಚಾಣಕ್ಯ ತಮ್ಮ ನೀತಿಶಾಸ್ತ್ರ ಪುಸ್ತಕದಲ್ಲಿ ಜೀವನ ನಿರ್ವಹಣೆಯ ಹಲವು ಸೂತ್ರಗಳನ್ನು ಬರೆದಿದ್ದಾರೆ. ಈ ಸೂತ್ರಗಳು ನಮಗೂ ತುಂಬಾ ಉಪಯುಕ್ತ. ಈ ಸೂತ್ರಗಳಲ್ಲಿ ಮಹಿಳೆಯರ ಬಗ್ಗೆ ಹಲವು ವಿಷಯಗಳನ್ನು ಹೇಳಲಾಗಿದೆ.

Kannada

ಈ ನೀತಿ ನೆನಪಿನಲ್ಲಿಡಿ

ಆಚಾರ್ಯ ಚಾಣಕ್ಯರು ತಮ್ಮ ಒಂದು ನೀತಿಯಲ್ಲಿ ಮರ, ಮಹಿಳೆ ಮತ್ತು ರಾಜ ಹೇಗೆ ಬೇಗ ನಾಶವಾಗುತ್ತಾರೆ ಎಂದಿದ್ದಾರೆ. ಮಹಿಳೆಯರ ನಾಶ ಎಂದರೆ ಅವರು ದಾರಿ ತಪ್ಪುತ್ತಾರೆ ಅಥವಾ ತಪ್ಪು ನಿರ್ಧಾರ ತೆಗೆದುಕೊಳ್ಳುತ್ತಾರೆ.

Kannada

ಯಾರು, ಹೇಗೆ ನಾಶವಾಗುತ್ತಾರೆ?

ಚಾಣಕ್ಯ ನೀತಿ ಪ್ರಕಾರ, ನದಿಯ ದಡದಲ್ಲಿರುವ ಮರಗಳು, ಪದೇ ಪದೇ ಬೇರೆಯವರ ಮನೆಗೆ ಹೋಗುವ ಮಹಿಳೆ ಮತ್ತು ಮಂತ್ರಿಗಳಿಲ್ಲದ ರಾಜ ಬೇಗ ಸರ್ವನಾಶವಾಗುತ್ತಾರೆ. ಇದರಲ್ಲಿ ಯಾವುದೇ ಸಂದೇಹವಿಲ್ಲ.

Kannada

ನದಿ ದಡದ ಮರ ಹೇಗೆ ನಾಶವಾಗುತ್ತವೆ?

ನದಿಯಲ್ಲಿ ಪ್ರವಾಹ ಬಂದಾಗ ಅದು ಸುತ್ತಮುತ್ತಲಿನ ಮರಗಿಡಗಳನ್ನು ಕೊಚ್ಚಿಕೊಂಡು ಹೋಗುತ್ತದೆ. ಆದ್ದರಿಂದ ಆಚಾರ್ಯ ಚಾಣಕ್ಯರು ನದಿ ದಡದಲ್ಲಿರುವ ಮರಗಳು ಬೇಗ ನಾಶವಾಗುತ್ತವೆ ಎಂದಿದ್ದಾರೆ.

Kannada

ಯಾವ ರೀತಿಯ ಮಹಿಳೆ ನಾಶವಾಗುತ್ತಾಳೆ?

ಒಬ್ಬ ಮಹಿಳೆ ಪದೇ ಪದೇ ಬೇರೆಯವರ ಮನೆಗೆ ಹೋಗುತ್ತಿದ್ದರೆ, ಅವಳು ದಾರಿ ತಪ್ಪುವ ಸಾಧ್ಯತೆ ಹೆಚ್ಚು. ಅಂದರೆ ಅವಳ ಚರಿತ್ರೆಯಲ್ಲಿ ದೋಷ ಬರಬಹುದು ಮತ್ತು ಅವಳು ತಪ್ಪು ನಿರ್ಧಾರ ತೆಗೆದುಕೊಳ್ಳಬಹುದು.

Kannada

ರಾಜ ಹೇಗೆ ನಾಶವಾಗುತ್ತಾನೆ?

ಯಾವುದೇ ರಾಜ ಮಂತ್ರಿಗಳ ಸಲಹೆಯಿಲ್ಲದೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಮಂತ್ರಿಗಳಿಲ್ಲದಿದ್ದರೆ ರಾಜ ತಪ್ಪು ನಿರ್ಧಾರ ತೆಗೆದುಕೊಂಡು, ಅವನತಿಯ ಪಥ ಹಿಡಿಯೋ ಸಾಧ್ಯತೆ ಇರುತ್ತದೆ.

Nita Ambani: ಮುಕೇಶ್ ಅಂಬಾನಿ ಪತ್ನಿಯ ಐಷಾರಾಮಿ ಜೀವನಶೈಲಿ, ಆದಾಯ ಕೇಳಿದ್ರೆ ಶಾಕ್

ಸೀರೆ ಮತ್ತು ಲೆಹೆಂಗಾಗಳಿಗಾಗಿ ಲೇಟೆಸ್ಟ್ ಆಫ್-ಶೋಲ್ಡರ್ ಬ್ಲೌಸ್ ಡಿಸೈನ್‌ಗಳು

ಗ್ರಾಮದ ಹೆಮ್ಮೆ ಪ್ರಿಯಾ ರಾಣಿ: UPSC ಯಶೋಗಾಥೆ

ಅಂಟು ಅಂಟಾದ ಅಡುಗೆಮನೆ ಕಿಟಕಿಯನ್ನು ಹೀಗೆ ಸುಲಭವಾಗಿ ಸ್ವಚ್ಛ ಮಾಡಿ