ಬಿಳಿ ಬಟ್ಟೆ ಮೇಲೆ ಸಣ್ಣ ಕಲೆಯಾದರೂ ನೋಡಲು ಅಸಹ್ಯ ಎನಿಸುತ್ತದೆ. ಅಂಥ ಕಲೆ ತೆಗೆಯೋದು ಹೇಗೆ?
ಬೇಕಿಂಗ್ ಸೋಡಾ
ಬೇಕಿಂಗ್ ಸೋಡಾದಲ್ಲಿ ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿ. ಟೀ, ಅರಿಶಿನ ಕಲೆಗಳ ಮೇಲೆ ಹಚ್ಚಿ 20 ನಿಮಿಷಗಳ ನಂತರ ಉಜ್ಜಿದರೆ ಆ ಕಲೆ ಹೋಗುತ್ತವೆ.
ವಿನೆಗರ್, ಡಿಟರ್ಜೆಂಟ್
ವಿನೆಗರ್, ಡಿಟರ್ಜೆಂಟ್ ಸಮಪಾಲುಗಳಲ್ಲಿ ಬೆರೆಸಿ ಕಲೆಗಳ ಮೇಲೆ ಹಚ್ಚಿ, ಸ್ವಲ್ಪ ಹೊತ್ತು ಇಟ್ಟು, ಬಿಸಿ ನೀರಿನಿಂದ ತೊಳೆಯಬೇಕು.
ನಿಂಬೆ, ಉಪ್ಪು ಮಿಶ್ರಣ
ಕಲೆಗಳ ಮೇಲೆ ನಿಂಬೆರಸ ಹಚ್ಚಿ, ಸ್ವಲ್ಪ ಉಪ್ಪು ಸಿಂಪಡಿಸಿ, ಉಜ್ಜಿ 10-15 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಬೇಕು. ನಿಂಬೆ, ಉಪ್ಪಿನ ಆಮ್ಲೀಯ ಗುಣಗಳು ಕಲೆಗಳನ್ನು ತೆಗೆದುಹಾಕುತ್ತವೆ.
ಹೈಡ್ರೋಜನ್ ಪೆರಾಕ್ಸೈಡ್
ಹೈಡ್ರೋಜನ್ ಪೆರಾಕ್ಸೈಡ್ (3%) ಅನ್ನು ಕಲೆಗಳ ಮೇಲೆ ನೇರವಾಗಿ ಹಚ್ಚಿ ಕೆಲವು ನಿಮಿಷಗಳ ಕಾಲ ಇಟ್ಟು, ತಣ್ಣೀರಿನಿಂದ ತೊಳೆಯಬೇಕು.
ಬ್ಲೀಚಿಂಗ್ ಪೌಡರ್
ಬಿಳಿ ಬಟ್ಟೆಗಳಿಗೆ ಸ್ವಲ್ಪ ಬ್ಲೀಚಿಂಗ್ ಪೌಡರ್ ನೀರಿನಲ್ಲಿ ಬೆರೆಸಿ, ಆ ದ್ರಾವಣದಲ್ಲಿ ಬಟ್ಟೆಗಳನ್ನು ನೆನೆಸಿಡಬೇಕು. ಹೆಚ್ಚು ಹೊತ್ತು ನೆನೆಸಿಡಬಾರದು.
ಸೋಡಾ ವಾಟರ್
ಕಲೆಗಳ ಮೇಲೆ ತಕ್ಷಣ ಸೋಡಾ ವಾಟರ್ ಹಾಕಿ, ಉಜ್ಜಿದರೆ ಕಲೆಗಳು ಮಾಯವಾಗುತ್ತವೆ, ವಿಶೇಷವಾಗಿ ಟೀ ಕಲೆಗಳಿಗೆ ಇದು ಚೆನ್ನಾಗಿ ಕೆಲಸ ಮಾಡುತ್ತದೆ.
ಟೂತ್‌ಪೇಸ್ಟ್
ಟೂತ್‌ಪೇಸ್ಟ್ (ಬಿಳಿ) ಕೂಡ ಕಲೆಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಟೂತ್‌ಪೇಸ್ಟ್ ಅನ್ನು ಕಲೆಗಳ ಮೇಲೆ ಹಚ್ಚಿ ಉಜ್ಜಿ 10 ನಿಮಿಷಗಳ ಕಾಲ ಇಟ್ಟು, ತಣ್ಣೀರಿನಿಂದ ತೊಳೆಯಬೇಕು.