Small Screen
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಎಡವಟ್ಟು ಲೀಲಾ ಪಾತ್ರದ ಮೂಲಕ ಕನ್ನಡಿಗರ ಮನ ಗೆದ್ದ ಚೆಲುವೆ ಮಲೈಕಾ ವಸುಪಾಲ್.
ನಟಿಸಿದ ಮೊದಲ ಸೀರಿಯಲ್ ಮೂಲಕವೇ ತಮ್ಮ ನಟನೆಯಿಂದ ಮ್ಯಾಜಿಕ್ ಮಾಡಿದ ಈ ಮಿಲ್ಕೀ ಬ್ಯೂಟಿ, ಕನ್ನಡ ಪ್ರೇಕ್ಷಕರ ಫೇವರಿಟ್ ನಟಿಯಾಗಿದ್ದಂತೂ ನಿಜಾ. ಧಾರಾವಾಹಿಯಿಂದ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಪಡೆದಿದ್ದಾರೆ ಮಲೈಕಾ.
ಸೀರಿಯಲ್ ನಲ್ಲಿ ನಟಿಸುತ್ತಿರುವಾಗಲೇ ಉಪಾಧ್ಯಕ್ಷ ಸಿನಿಮಾದಲ್ಲಿ ಚಿಕ್ಕಣ್ಣನಿಗೆ ಜೋಡಿಯಾಗಿ ಚಂದನವನಕ್ಕೆ ಎಂಟ್ರಿ ಕೊಟ್ಟ ಚೆಲುವೆ ಕೈಯಲ್ಲಿ ಸದ್ಯ ಎರಡು ಸಿನಿಮಾಗಳು ಇವೆ.
ಇದೀಗ ನಟಿ ನಾಗಭೂಷಣ್ ಗೆ ಜೋಡಿಯಾಗಿ ವಿದ್ಯಾಪತಿ ಹಾಗೂ ಝೈದ್ ಖಾನ್ ಜೊತೆ ಕಲ್ಟ್ ಸಿನಿಮಾದಲ್ಲೂ ಮಲೈಕಾ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಚಿತಾ ರಾಮ್ ಕೂಡ ನಟಿಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಲೈಕಾ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುವುದೇ ಕಡಿಮೆಯಾಗಿದೆ. ಇದೀಗ ಕೇಸರಿ ಬಣ್ಣದ ಸೀರೆಯುಟ್ಟು ಮುದ್ದಾದ ನಗು ಬೀರುತ್ತಾ ಮಲೈಕಾ ಪೋಸ್ ಕೊಟ್ಟಿದ್ದಾರೆ.
ಮಲೈಕಾ ಅಂದಕ್ಕೆ ಅಭಿಮಾನಿಗಳು ಫಿದಾ ಆಗಿದ್ದು, ನಿಮ್ಮ ನಗುವನ್ನು ನೋಡಿ ನನ್ನ ಜಗವೇ ಮರೆತು ಹೋಯ್ತು, ಸೀರೆಯಲ್ಲಿ ಸುಂದರಿ ನೀವು, ಗೊಂಬೆ, ನಿನ್ನನ್ನು ನೋಡಿ ನನ್ನನ್ನೆ ಮರೆತೆ ನೋಡಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಇನ್ನು ಕೆಲವರಂತೂ ಕವಿಗಳಾಗಿದ್ದು, ಆಭರಣ ಮಳಿಗೆಗೆ ಆಭರಣ ಖರೀದಿಸಲು ಹೋದೋರು, ಸೀರೆ ಉಟ್ಟ ನಮ್ಮ ಬೊಂಬೆಯನ್ನ ನೋಡಿ, ಬಂದ ಕಾರಣವನ್ನೇ ಮರೆತು , ಎಲ್ಲೋ ಕಳೆದುಹೋದರು ಎಂದು ಕವನ ಗೀಚಿದ್ದಾರೆ.