ಅಪ್ಡೇಟ್ ಆಗಿ ಬ್ರೋ.. ಫೋನ್ ಟಚ್ ಮಾಡದೆ ಕಾಲ್ ಲಿಫ್ಟ್ ಮಾಡಬಹುದು
technology Jul 09 2025
Author: Sathish Kumar KH Image Credits:Freepik
Kannada
ಸೆಟ್ಟಿಂಗ್ಸ್‌ಗೆ ಹೋಗಿ
ಇದಕ್ಕಾಗಿ ಮೊದಲು ಸ್ಮಾರ್ಟ್‌ಫೋನ್‌ನಲ್ಲಿ ಸೆಟ್ಟಿಂಗ್ಸ್ (Settings) ಆಯ್ಕೆಗಳಿಗೆ ಹೋಗಿ ಸರ್ಚ್ ಬಾಕ್ಸ್‌ನಲ್ಲಿ ಮೋಷನ್ಸ್ (Motions ಅಥವಾ Additional settings) ಎಂದು ಟೈಪ್ ಮಾಡಿ.
Image credits: Gemini
Kannada
ಗೆಸ್ಚರ್ ಮತ್ತು ಮೋಷನ್ಸ್
ನಂತರ ಅಲ್ಲಿ ಕಾಣುವ ಗೆಸ್ಚರ್ ಮತ್ತು ಮೋಷನ್ಸ್ (Gesture and Motions) ಎಂಬ ಆಯ್ಕೆಯನ್ನು ಆರಿಸಿಕೊಳ್ಳಬೇಕು. ನಂತರ ಪರದೆಯನ್ನು ಮೇಲಕ್ಕೆ ಸ್ಕ್ರಾಲ್ ಮಾಡಬೇಕು.
Image credits: Social Media
Kannada
ಲಿಫ್ಟ್ ಟು ಆನ್ಸರ್ ಆಯ್ಕೆ ಸಕ್ರಿಯಗೊಳಿಸಿ
ನಂತರ ಪರದೆಯಲ್ಲಿ ಕಾಣುವ ಲಿಫ್ಟ್ ಟು ಆನ್ಸರ್ ಕಾಲ್ಸ್ ಎಂಬ ಆಯ್ಕೆಯನ್ನು ಸಕ್ರಿಯಗೊಳಿಸಿಕೊಳ್ಳಬೇಕು.
Image credits: ChatGPT
Kannada
ಇದು ಹೇಗೆ ಕೆಲಸ ಮಾಡುತ್ತದೆ?
ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿದ ನಂತರ ನಿಮಗೆ ಯಾರಾದರೂ ಕರೆ ಮಾಡಿದರೆ ಲಿಫ್ಟ್ ಮಾಡಬೇಕಾಗಿಲ್ಲ. ಫೋನ್ ಅನ್ನು ಕಿವಿ ಹತ್ತಿರ ಇಟ್ಟರೆ ಸಾಕು ಕರೆ ಸ್ವಯಂಚಾಲಿತವಾಗಿ ಲಿಫ್ಟ್ ಆಗುತ್ತದೆ.
Image credits: Social Media
Kannada
ಕರೆ ಲಿಫ್ಟ್ ಮಾಡಬಾರದೆಂದರೆ
ಒಂದು ವೇಳೆ ನಿಮಗೆ ಬರುವ ಕರೆಯನ್ನು ಮ್ಯೂಟ್ ಮಾಡಬೇಕೆಂದರೆ ಗೆಸ್ಚರ್ ಮತ್ತು ಮೋಷನ್ಸ್‌ನಲ್ಲಿ ಕೊನೆಯಲ್ಲಿ ಕಾಣುವ ಫ್ಲಿಪ್ ಟು ಮ್ಯೂಟ್ ಇನ್‌ಕಮಿಂಗ್ ಕಾಲ್ಸ್ ಆಯ್ಕೆಯನ್ನು ಸಕ್ರಿಯಗೊಳಿಸಿಕೊಳ್ಳಬೇಕು.
Image credits: Social Media
Kannada
ಇದು ಹೇಗೆ ಕೆಲಸ ಮಾಡುತ್ತದೆ?
ನಿಮಗೆ ಯಾವುದೇ ಕರೆ ಬರುತ್ತಿರುವಾಗ ಕರೆ ಲಿಫ್ಟ್ ಮಾಡಲಾಗದ ಪರಿಸ್ಥಿತಿಯಲ್ಲಿದ್ದರೆ ಫೋನ್ ಪರದೆಯನ್ನು ಕೆಳಕ್ಕೆ ತಿರುಗಿಸಿದರೆ ಸಾಕು ಫೋನ್ ಸ್ವಯಂಚಾಲಿತವಾಗಿ ಸೈಲೆಂಟ್ ಆಗುತ್ತದೆ.