ಮನುಷ್ಯನಾಗಿರಲಿ ಅಥವಾ ಪ್ರಾಣಿಯಾಗಿರಲಿ, ತಾಯಿ ಯಾವಾಗಲೂ ತನ್ನ ಮಕ್ಕಳನ್ನು ರಕ್ಷಿಸುತ್ತಾಳೆ ಅನ್ನೋದನ್ನು ನಾವು ನೋಡಿ ತಿಳಿದಿದ್ದೇವೆ.
ಇದಕ್ಕೆ ಅತ್ಯುತ್ತಮ ಉದಾಹರಣೆ ಕೋಳಿ, ಅದು ತನ್ನ ಮೊಟ್ಟೆಗಳನ್ನು ರಕ್ಷಿಸುತ್ತದೆ ಮತ್ತು ಯಾರನ್ನೂ ಅವುಗಳ ಹತ್ತಿರ ಬರಲು ಬಿಡುವುದಿಲ್ಲ. ಮತ್ತೊಂದೆಡೆ, ಕೆಲವು ಪ್ರಾಣಿಗಳು ತಮ್ಮ ಮಕ್ಕಳನ್ನು ತಾನೇ ತಿನ್ನುತ್ತವೆ.
ಇದಕ್ಕೆ ಕಾರಣ ಹಸಿವು! ಹೌದು, ನೀವು ಸರಿಯಾಗಿ ಕೇಳಿದ್ದೀರಿ. ಕೆಲವು ಪ್ರಾಣಿಗಳು ತುಂಬಾ ಹಸಿವಿನಿಂದ ತಮ್ಮ ಮಕ್ಕಳನ್ನು ಅಥವಾ ಮರಿಗಳನ್ನು ತಾವೇ ತಿನ್ನುತ್ತವೆ.
ಗಪ್ಪಿ ಒಂದು ರೀತಿಯ ಸಣ್ಣ ಮೀನು, ಇದು ನೋಡಲು ತುಂಬಾ ಸುಂದರವಾಗಿ ಕಾಣುತ್ತದೆ. ಕೆಲವು ಸಂದರ್ಭಗಳಲ್ಲಿ, ಹೆಣ್ಣು ಗಪ್ಪಿಗಳು ತಮ್ಮದೇ ಆದ ಮಕ್ಕಳನ್ನು ತಿನ್ನುತ್ತದೆ. .
ಹಿಮಕರಡಿ ಅತ್ಯಂತ ಶೀತ ಪ್ರದೇಶಗಳಲ್ಲಿ ವಾಸಿಸುವ ಕ್ರೂರ ಪ್ರಾಣಿ. ಆದರೆ ಈ ಶೀತ ವಾತಾವರಣದಿಂದಾಗಿ ಅದಕ್ಕೆ ಆಹಾರವನ್ನು ಹುಡುಕುವುದು ತುಂಬಾ ಕಷ್ಟಕರವಾಗಿರುತ್ತದೆ.
ಮಾಧ್ಯಮ ವರದಿಗಳ ಪ್ರಕಾರ, ಹವಾಮಾನ ಬದಲಾವಣೆಯಿಂದಾಗಿ, ಆಹಾರಗಳು ಸಿಗದೇ ಇದ್ದಾಗ ಹಿಮಕರಡಿಗಳು ತಮ್ಮ ಮರಿಗಳನ್ನು ತಿನ್ನಲು ಪ್ರಾರಂಭಿಸುತ್ತಿವೆ.
ಪ್ರೇಯಿಂಗ್ ಮ್ಯಾಂಟಿಸಸ್‌ಗಳು ಹಸಿರು ಕೀಟಗಳಾಗಿದ್ದು, ಅವು ತಮ್ಮ ಸಂಗಾತಿಗಳನ್ನು ಮತ್ತು ಮರಿಗಳನ್ನು ತಿನ್ನುತ್ತವೆ. ಹೆಣ್ಣು ಪ್ರೇಯಿಂಗ್ ಮ್ಯಾಂಟಿಸಸ್‌ಗಳು ಸಂಯೋಗದ ನಂತರ ತಮ್ಮ ಸಂಗಾತಿಗಳನ್ನು ತಿನ್ನುತ್ತವೆ.
ಹ್ಯಾಮ್ಸ್ಟರ್ ಅಂತಹ ಪ್ರಾಣಿಗಳಲ್ಲಿ ಒಂದಾಗಿದೆ. ಮುದ್ದಾದ ಇಲಿಗಳಂತೆ ಕಾಣುವ ಹೆಣ್ಣು ಹ್ಯಾಮ್ಸ್ಟರ್‌ಗಳು ತಮ್ಮ ಮರಿಗಳನ್ನು ತಿನ್ನುತ್ತವೆ.
ಇದು ಸಾಮಾನ್ಯವಾಗಿ ಒತ್ತಡದ ಸ್ಥಿತಿಯಲ್ಲಿ ಅಥವಾ ತಾಯಿ ಹ್ಯಾಮ್ಸ್ಟರ್ ಬದುಕುಳಿಯುವ ಸಾಧ್ಯತೆಯಿಲ್ಲ ಎಂದು ಭಾವಿಸಿದಾಗ ತನ್ನ ಮರಿಗಳನ್ನ ಅದು ತಿನ್ನುತ್ತೆ. .
ಈ ಪಟ್ಟಿಯಲ್ಲಿ ಸ್ಯಾಂಡ್ ಟೈಗರ್ ಶಾರ್ಕ್ ಹೆಸರೂ ಕೂಡ ಇದೆ. ಈ ಶಾರ್ಕ್‌ಗಳು ತಮ್ಮ ಮಕ್ಕಳನ್ನು ಮಾತ್ರವಲ್ಲದೆ ತಮ್ಮ ಸಹೋದರ ಸಹೋದರಿಯರನ್ನು ಸಹ ತಿನ್ನುತ್ತವೆ.
ಈ ಶಾರ್ಕ್‌ಗಳು ಗರ್ಭದಲ್ಲಿರುವಾಗಲೇ ತನ್ನ ಜೊತೆ ಇರುವ ಇತರ ಸಣ್ಣ ಹಾಗೂ ದುರ್ಬಲ ಶಾರ್ಕ್ ಗಳನ್ನು ತಿನ್ನುತ್ತವೆ. ಅದೇ ರೀತಿ ಮರಿಗಳು ದುರ್ಬಲವಾಗಿದ್ರೆ ಅದನ್ನೂ ತಿನ್ನುತ್ತೆ.