ಭಾರತೀಯ ಗ್ರ್ಯಾಂಡ್ ಮಾಸ್ಟರ್ ಡಿ. ಗುಕೇಶ್ ಅವರು ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಗುಕೇಶ್, ತಮಿಳುನಾಡಿನ ಚೆನ್ನೈನವರು.
Kannada
ಇದುವರೆಗಿನ ಅತ್ಯಂತ ಕಿರಿಯ ಚಾಂಪಿಯನ್
ಡಿ. ಗುಕೇಶ್ ವಿಶ್ವದ ಇದುವರೆಗಿನ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್.
Kannada
ಡಿಂಗ್ ಲಿರೆನ್ ವಿರುದ್ಧ ಜಯ
ಭಾರತೀಯ ಗ್ರ್ಯಾಂಡ್‌ಮಾಸ್ಟರ್ ಡಿ. ಗುಕೇಶ್ ಅವರು ಸಿಂಗಾಪುರದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರು ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿದ್ದಾರೆ.
Kannada
18ನೇ ವಯಸ್ಸಿನಲ್ಲಿಯೇ ವಿಶ್ವದಾಖಲೆ
ವಿಶ್ವ ಚಾಂಪಿಯನ್ ಆದ ಡಿ. ಗುಕೇಶ್ ಅವರ ವಯಸ್ಸು 18 ವರ್ಷ 8 ತಿಂಗಳು 14 ದಿನಗಳು. ತಂದೆ ಡಾ. ರಜನಿಕಾಂತ್ ಇಎನ್‌ಟಿ ಸರ್ಜನ್ ಮತ್ತು ತಾಯಿ ಪದ್ಮ ಮೈಕ್ರೋಬಯಾಲಜಿಸ್ಟ್.
Kannada
ಗ್ಯಾರಿ ಕ್ಯಾಸ್ಪರೋವ್ ದಾಖಲೆ ಭಗ್ನ
ಡಿ. ಗುಕೇಶ್ ಅವರು ವಿಶ್ವ ಚಾಂಪಿಯನ್ ಗ್ಯಾರಿ ಕ್ಯಾಸ್ಪರೋವ್ ಅವರ ದಾಖಲೆಯನ್ನು ಮುರಿದಿದ್ದಾರೆ. ಇದುವರೆಗಿನ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಕ್ಯಾಸ್ಪರೋವ್ ಆಗಿದ್ದರು.
Kannada
ಹಲವು ದಶಕಗಳ ಹಿಂದೆ ಕ್ಯಾಸ್ಪರೋವ್ ದಾಖಲೆ
ಗ್ಯಾರಿ ಕ್ಯಾಸ್ಪರೋವ್ 22 ವರ್ಷ 6 ತಿಂಗಳು 27 ದಿನಗಳ ವಯಸ್ಸಿನಲ್ಲಿ ವಿಶ್ವ ಚಾಂಪಿಯನ್ ಆಗಿದ್ದರು.
Kannada
ವಿಶ್ವ ಚಾಂಪಿಯನ್ ಆದ ಎರಡನೇ ಭಾರತೀಯ
ಭಾರತದ ಎರಡನೇ ವಿಶ್ವ ಚಾಂಪಿಯನ್ ಆಗುವ ಹೆಗ್ಗಳಿಕೆ ಡಿ. ಗುಕೇಶ್ ಅವರಿಗೆ ಸಂದಿದೆ. ಗುಕೇಶ್ ಜೊತೆಗೆ ವಿಶ್ವನಾಥನ್ ಆನಂದ್ ವಿಶ್ವ ಚೆಸ್ ಚಾಂಪಿಯನ್ ಆಗಿದ್ದರು.
Kannada
ಐದು ಬಾರಿ ವಿಶ್ವ ಚಾಂಪಿಯನ್ ಆನಂದ್
ವಿಶ್ವನಾಥನ್ ಆನಂದ್ 5 ಬಾರಿ ವಿಶ್ವ ಚಾಂಪಿಯನ್ ಆಗಿದ್ದಾರೆ. ಅವರು 2013 ರಲ್ಲಿ ಕೊನೆಯ ಬಾರಿಗೆ ವಿಶ್ವ ಚೆಸ್ ಚಾಂಪಿಯನ್ ಆಗಿದ್ದರು.