5-10 ವರ್ಷಗಳ ವಯಸ್ಸಿನ ಅಂತರ ಸಾಮಾನ್ಯ, ಆದರೆ 3 ಪಟ್ಟು ವಯಸ್ಸಿನ ಅಂತರವಿದ್ದರೆ ಆ ಸಂಬಂಧವನ್ನು ಏನೆಂದು ಕರೆಯುತ್ತಾರೆ. ಇಲ್ಲಿ 25 ವರ್ಷದ ಯುವತಿಗೆ 76 ವರ್ಷದ ವೃದ್ಧನೊಂದಿಗೆ ಪ್ರೇಮಾಂಕುರವಾದ ಕಥೆ ಹೇಳಲಿದ್ದೇವೆ.
ಅಮೆರಿಕದ 25 ವರ್ಷದ ಡಯಾನಾ ಮಾಂಟಾನೊಗೆ 76 ವರ್ಷದ ಎಡ್ಗರ್ ಮೇಲೆ ಪ್ರೇಮಾಂಕುರವಾಯಿತು. ಇಷ್ಟು ವಯಸ್ಸಿನ ಅಂತರ ಕೇಳಿದವರೆಲ್ಲರೂ ಅಸಹ್ಯ ಎಂದು ಟೀಕಿಸಿದರು.
ಡಯಾನಾ ಮತ್ತು ಎಡ್ಗರ್ ಜುಲೈ 2023 ರಲ್ಲಿ ಕಾಮನ್ ಫ್ರೆಂಡ್ಸ್ ಮೂಲಕ ಭೇಟಿಯಾದರು. ಮೊದಲ ನೋಟದಲ್ಲೇ ಇಬ್ಬರ ನಡುವೆ ಪ್ರೀತಿಯ ಕಿಡಿ ಹೊತ್ತಿಕೊಂಡಿತು. ಕ್ರಮೇಣ ಇಬ್ಬರ ನಡುವೆ ಬಾಂಧವ್ಯ ಬೆಳೆಯಿತು.
ಒಂದು ವರ್ಷದವರೆಗೆ ಡಯಾನಾ ಮತ್ತು ಎಡ್ಗರ್ ಒಬ್ಬರಿಗೊಬ್ಬರು ಮಾತನಾಡುತ್ತಲೇ ಇದ್ದರು. ಹಲವಾರು ಭೇಟಿಗಳು ಮತ್ತು ಹವಾಯಿ ಪ್ರವಾಸದ ನಂತರ ಇಬ್ಬರೂ ತಮ್ಮ ಸಂಬಂಧವನ್ನು ಕನ್‌ಫರ್ಮ್ ಮಾಡಿದರು.
ಡಯಾನಾಳ ಕುಟುಂಬ ಈ ಸಂಬಂಧದಿಂದ ಸಂತೋಷವಾಗಿಲ್ಲ. ತಾಯಿ ಮತ್ತು ತಂದೆ ವಿರೋಧಿಸಿದರು. ಆದರೆ ಚಿಕ್ಕಮ್ಮನ ಬೆಂಬಲ ಸಿಕ್ಕಿತು. ಡಯಾನಾ ನಾನೀಗ ವಯಸ್ಕಳಾಗಿದ್ದೇನೆ. ನನ್ನದೇ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲೆ ಎನ್ನುತ್ತಾರೆ.
ಡಯಾನಾ ಹೇಳುವಂತೆ ಎಡ್ಗರ್ ನನ್ನ ವಯಸ್ಸಿನ ಅನೇಕರಿಗಿಂತ ಹೆಚ್ಚು ಫಿಟ್ ಮತ್ತು ಶಕ್ತಿಯುತರು. ಅವರು ನನ್ನನ್ನು ಗೌರವಿಸುತ್ತಾರೆ ಮತ್ತು ನಾವಿಬ್ಬರು ತುಂಬಾ ಸಂತೋಷವಾಗಿದ್ದೇವೆ.
76ನೇ ವಯಸ್ಸಿನಲ್ಲೂ ಅವರು ತುಂಬಾ ಸಕ್ರಿಯರಾಗಿದ್ದಾರೆ ಎಂದು ಡಯಾನಾ ಹೇಳುತ್ತಾರೆ. ಸ್ಕೈಡೈವಿಂಗ್, ಸ್ಕೀಯಿಂಗ್, ಹೈಕಿಂಗ್ ಮತ್ತು ಜಿಮ್‌ಗೆ ಹೋಗುವುದು ಅವರ ದೈನಂದಿನ ದಿನಚರಿಯ ಭಾಗವಾಗಿದೆ.
ಆದಾಗ್ಯೂ, ಈ ಜೋಡಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ಟೀಕಿಸಲಾಗಿದೆ. ಕೆಲವರು ಇದು ಅಕ್ರಮ ಸಂಬಂಧ ಎಂದು ಹೇಳಿದರೆ, ಇನ್ನು ಕೆಲವರು ಪೋಷಕರು ತಪ್ಪು ಪಾಲನೆ ನೀಡಿದ್ದಾರೆ ಎಂದು ಹೇಳುತ್ತಾರೆ.
'ದ್ವೇಷಪೂರಿತ ಕಾಮೆಂಟ್‌ಗಳು ನಮ್ಮನ್ನು ನಗಿಸುತ್ತವೆ, ಏಕೆಂದರೆ ನಮ್ಮ ಸಂಬಂಧ ನಿಜ ಮತ್ತು ಆರೋಗ್ಯಕರ ಎಂದು ನಮಗೆ ತಿಳಿದಿದೆ. ನನಗೆ ಎಡ್ಗರ್ ಸಿಕ್ಕಿದ್ದು ಅದೃಷ್ಟ' ಎಂದು ಡಯಾನಾ ಹೇಳುತ್ತಾರೆ.