ಪುರುಷನಾಗಿರಲಿ, ಮಹಿಳೆಯಾಗಿರಲಿ, ಪ್ರೀತಿಯಲ್ಲಿ ಬ್ರೇಕಪ್ ನೋವು, ಹಾರ್ಟ್ ಬ್ರೇಕ್ ಆಗೋದು ಎಲ್ಲವೂ ಸಾಮಾನ್ಯ. ಆದರೆ, ಭಾವನೆಗಳ ವಿಷಯಕ್ಕೆ ಬಂದಾಗ, ಮಹಿಳೆಯರನ್ನು ಹೆಚ್ಚಾಗಿ ಹೆಚ್ಚು ಸೂಕ್ಷ್ಮವೆಂದು ಪರಿಗಣಿಸಲಾಗುತ್ತದೆ.
ಬ್ರೇಕಪ್ ವಿಷ್ಯಕ್ಕೆ ಬಂದ್ರೆ ಮಹಿಳೆಯರು ಹೆಚ್ಚು ಭಾವನಾತ್ಮಕವಾಗಿರುತ್ತಾರೆ , ಹೆಚ್ಚು ನೋವನ್ನು ಅನುಭವಿಸುತ್ತಾರೆ. ಪುರುಷರು ಅದನ್ನು ಇಗ್ನೋರ್ ಮಾಡಿ ಮುಂದೆ ಸಾಗುತ್ತಾರೆ ಅಂತ ಅಂದುಕೊಂಡ್ತೀವಿ.
ಬ್ರೇಕಪ್ ನಂತರ ಪುರುಷರು ಬೇಗನೆ ಮುಂದುವರಿತಾರೆ ಎನ್ನಲಾಗುತ್ತೆ. ಆದರೆ, ಬಿಹೇವಿಯರಲ್ & ಬ್ರೈನ್ ಸೈನ್ಸಸ್ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಇದು ನಿಜವಲ್ಲ.
ಪುರುಷರು ಬ್ರೇಕಪ್ ನಂತ್ರ ಹೆಚ್ಚು ಭಾವನಾತ್ಮಕ ಮತ್ತು ಮಾನಸಿಕ ತೊಂದರೆ ಅನುಭವಿಸ್ತಾರೆ. ಆದರೆ ಮಹಿಳೆಯರು ಪುರುಷರಿಗಿಂತ ಬೇಗನೇ ಆ ನೋವಿನಿಂದ ಹೊರ ಬರೋದಕ್ಕೆ ಸಾಧ್ಯವಾಗುತ್ತೆ.
ಪುರುಷರು ಸಂಗಾತಿ ಮೇಲೆ ಹೆಚ್ಚು ಡಿಪೆಂಡ್ ಆಗಿರ್ತಾರೆ. ಅವರು ತಮ್ಮ ಸಂಗಾತಿಯಿಂದ ಭಾವನಾತ್ಮಕ ಬೆಂಬಲ ಮತ್ತು ಪ್ರೀತಿ ನಿರೀಕ್ಷಿಸುತ್ತಾರೆ. ಆದರೆ ಪುರುಷರಿಗೆ ಹೋಲಿಸಿದರೆ ಮಹಿಳೆಯ ಮೇಲೆ ಬ್ರೇಕಪ್ ಪರಿಣಾಮ ಬೀರೋದು ಕಡಿಮೆ.
ಯಾಕಂದ್ರೆ ಮಹಿಳೆಯರಿಗೆ ಸ್ನೇಹಿತರು ಮತ್ತು ಕುಟುಂಬದ ಬೆಂಬಲ ಇರುತ್ತೆ. ಅಷ್ಟೇ ಅಲ್ಲದೇ ಮಹಿಳೆಯರು ತಮ್ಮ ಭಾವನೆಗಳನ್ನು ಮುಕ್ತವಾಗಿ ಚರ್ಚಿಸುತ್ತಾರೆ. ಹಾಗಾಗಿ ಅವರು ಬೇಗನೆ ನೋವಿನಿಂದ ಹೊರ ಬರುತ್ತಾರೆ.
ಆದರೆ ಪುರುಷರ ಬೆಂಬಲಕ್ಕೆ ಜನ ಇರೋದಿಲ್ಲ. ಯಾಕಂದ್ರೆ ಅವರು ತಮ್ಮ ಭಾವನೆಗಳನ್ನು ನಿಗ್ರಹಿಸಲು, ಸ್ವಾವಲಂಬಿಗಳಾಗಿರಲು ಅಭ್ಯಾಸ ಮಾಡಿಕೊಂಡಿರುತ್ತಾರೆ. ಅವರು ತಮಗಾದ ನೋವನ್ನು ಯಾರಿಗೂ ಹೇಳೋದೆ ಇಲ್ಲ.
ನಮ್ಮ ಸಮಾಜ ಪುರುಷರು ತಮ್ಮ ಫೀಲಿಂಗ್ಸ್ ಕಂಟ್ರೋಲ್ ಮಾಡಬೇಕು, ಗಂಡಸರಿಗೆ ಭಾವನಾತ್ಮಕ ಬೆಂಬಲ ಅಗತ್ಯವಿಲ್ಲ ಎನ್ನುತ್ತೆ. ಹಾಗಾಗಿ ಬ್ರೇಕಪ್ ಆದಾಗ, ಹುಡುಗ ಏಕಾಂಗಿಯಾಗಿ ನೋವನ್ನು ಅನುಭವಿಸಿ, ಮಾನಸಿಕವಾಗಿ ಕೊರಗುತ್ತಾನೆ.
ಮಹಿಳೆಯರು ಹೆಚ್ಚಾಗಿ ತಮ್ಮ ಸಂಗಾತಿಗಳು ರೋಮ್ಯಾಂಟಿಕ್ ಅಲ್ಲ ಎಂದು ದೂರುತ್ತಾರೆ. ಆದರೆ, ಈ ಅಧ್ಯಯನವು ಪುರುಷರು ಮಹಿಳೆಯರಿಗಿಂತ ಪುರುಷರು ಹೆಚ್ಚು ರೊಮ್ಯಾಂಟಿಕ್ ಆಗಿರ್ತಾರೆ ಅನ್ನೋದು ತಿಳಿದು ಬಂದಿದೆ.
ಲವ್ ಅಟ್ ಫಸ್ಟ್ ಸೈಟ್ ಎಂಬ ಪರಿಕಲ್ಪನೆಯು ಪುರುಷರಿಗೆ ಹೆಚ್ಚು ಸೂಕ್ತವಾಗಿರುತ್ತೆ. ಪುರುಷರು ಬೇಗನೆ ಪ್ರೀತಿಯಲ್ಲಿ ಬೀಳುತ್ತಾರೆ ಮತ್ತು ಸಂಬಂಧಗಳನ್ನು ತಮ್ಮ ಜೀವನದ ಪ್ರಮುಖ ಭಾಗವೆಂದು ಪರಿಗಣಿಸುತ್ತಾರೆ.
ಅಧ್ಯಯನದ ಪ್ರಕಾರ, ಸಂಬಂಧದಲ್ಲಿರುವುದು ಪುರುಷರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ, ಏಕೆಂದರೆ ಇದು ಅವರನ್ನು ಕಡಿಮೆ ಒತ್ತಡದಲ್ಲಿರಿಸುತ್ತದೆ ಮತ್ತು ಅವರ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ.