relationship

ದಾಂಪತ್ಯದಲ್ಲಿ ಸಂತಸಕ್ಕಾಗಿ 7 ಸೂತ್ರಗಳು

ಗೌರವ ಮುಖ್ಯ

ದಂಪತಿಗಳು ಸಂತೋಷವಾಗಿರಲು ಒಬ್ಬರನ್ನೊಬ್ಬರು ಗೌರವಿಸುವುದು ಬಹಳ ಮುಖ್ಯ. ಇದರಿಂದ ಪ್ರೀತಿ ಮತ್ತು ನಂಬಿಕೆಯೂ ಹೆಚ್ಚುತ್ತದೆ.

 

ಪ್ರಾಮಾಣಿಕತೆ

ಬಲವಾದ ದಾಂಪತ್ಯವು ಸ್ಪಷ್ಟ, ಪ್ರಾಮಾಣಿಕ ಸಂಭಾಷಣೆಯ ಮೇಲೆ ಅವಲಂಬಿತವಾಗಿರುತ್ತದೆ. ಭಾವನೆಗಳನ್ನು ವ್ಯಕ್ತಪಡಿಸುವುದು, ಆಲೋಚನೆಗಳನ್ನು ಹಂಚಿಕೊಳ್ಳುವುದು, ಒಬ್ಬರ ಮಾತನ್ನು ಒಬ್ಬರು ಕೇಳುವುದು ಮುಖ್ಯ.

ಒಟ್ಟಿಗೆ ಸಮಯ ಕಳೆಯಿರಿ

ಬ್ಯುಸಿ ಜೀವನದಲ್ಲಿ ಒಟ್ಟಿಗೆ ಸಮಯ ಕಳೆಯುವುದು ಬಹಳ ಮುಖ್ಯ. ಡೇಟ್ ನೈಟ್ಸ್, ಪ್ರವಾಸಗಳು, ಒಟ್ಟಿಗೆ ಅಡುಗೆ ಮಾಡುವುದು ಮುಂತಾದವುಗಳನ್ನು ಮಾಡಬೇಕು.

ಒಂದೇ ಗುರಿ, ಮೌಲ್ಯಗಳು

ಒಂದೇ ಗುರಿಗಳು, ಮೌಲ್ಯಗಳನ್ನು ಹೊಂದಿರುವ ದಂಪತಿಗಳು ದಾಂಪತ್ಯದಲ್ಲಿ ತೃಪ್ತಿಯನ್ನು ಪಡೆಯುತ್ತಾರೆ. ಕುಟುಂಬ, ವೃತ್ತಿ, ಹವ್ಯಾಸಗಳು ಏನೇ ಇರಲಿ, ಸಾಮನ್ಯ ಗುರಿಗಳು ಹತ್ತಿರ ತರುತ್ತವೆ.

ಹೊಂದಾಣಿಕೆ ಮಾಡಿಕೊಳ್ಳಿ

ವೈವಾಹಿಕ ಜೀವನ ಅನಿರೀಕ್ಷಿತ ಬದಲಾವಣೆಗಳಿಂದ ತುಂಬಿರುತ್ತದೆ. ಈ ಬದಲಾವಣೆಗಳಿಗೆ ಅನುಗುಣವಾಗಿ ಬದಲಾಗಬೇಕು.

ಪರಸ್ಪರ ಮೆಚ್ಚುಗೆ

ಮೆಚ್ಚುಗೆ, ಕೃತಜ್ಞತೆ ವ್ಯಕ್ತಪಡಿಸುವುದು ದಾಂಪತ್ಯಕ್ಕೆ ಒಳ್ಳೆಯದು. ಥ್ಯಾಂಕ್ಸ್, ಸಾರೀ ಹೇಳಿಕೊಳ್ಳಬೇಕು. ಉಡುಗೊರೆಗಳನ್ನು ನೀಡಿ ಪ್ರೀತಿಯನ್ನು ಹೆಚ್ಚಿಸಿಕೊಳ್ಳಬೇಕು.

ದೈಹಿಕ ಸಾಮೀಪ್ಯ

ಸಂತೋಷದ ದಾಂಪತ್ಯಕ್ಕೆ ಭಾವನಾತ್ಮಕ, ದೈಹಿಕ ಸಾಮೀಪ್ಯ ಮುಖ್ಯ. ಇದು ಪ್ರೀತಿಯನ್ನು ಹೆಚ್ಚಿಸುತ್ತದೆ.

ಮುಕೇಶ್ ಅಂಬಾನಿ ಮಕ್ಕಳಿಗೆ ಇಶಾ-ಆಕಾಶ್ ಎಂದೇಕೆ ಹೆಸರಿಟ್ಟರು?

ಮಹಿಳೆಗೆ ಈ 10 ಗುಣಗಳಿದ್ದರೆ ಒಳ್ಳೇ ಹೆಂಡ್ತಿ ಅಂತಾನೇ ಅರ್ಥ

ಲಿಂಗ ಅಸಮತೋಲನ, ಚೀನಾದಲ್ಲಿ ಹುಡುಗಿಯರಿಂದ ಭಾರೀ ವರದಕ್ಷಿಣೆ ಬೇಡಿಕೆ!

ಇಬ್ಬರು ಗೆಳತಿಯರಿಗೆ ಒಬ್ಬನೇ ಗೆಳೆಯ, ಇಬ್ಬರನ್ನೂ ಓಡಿಸ್ಕೊಂಡು ಹೋದ!