relationship
ಕಾಲಕ್ಕೆ ತಕ್ಕಂತೆ ಸಂಬಂಧಗಳು ಬದಲಾಗುತ್ತಿವೆ. ಈ ಬ್ಯುಸಿ ಲೈಫ್ ನಲ್ಲಿ ಸಂಬಂಧಗಳನ್ನು ಬೇಗನೆ ಮುರಿದುಕೊಳ್ಳುತ್ತಿದ್ದಾರೆ.
ದಾಂಪತ್ಯದಲ್ಲಿ ಪ್ರೀತಿ ಕಡಿಮೆಯಾಗಬಾರದೆಂದರೆ 2 2 2 ಸೂತ್ರ ಪಾಲಿಸಬೇಕು ಎನ್ನುತ್ತಾರೆ ತಜ್ಞರು. ಇದೇನೆಂದರೆ?
ಕೌನ್ಸೆಲರ್, ಸೈಕೋಥೆರಪಿಸ್ಟ್ ಸೋನಲ್ ಖಂಗರೋಟ್ ಪ್ರಕಾರ ದಾಂಪತ್ಯದಲ್ಲಿ ಪ್ರೀತಿ ಕಡಿಮೆಯಾಗದಂತೆ ಮೂರು ನಿಯಮಗಳು ಪರಿಣಾಮಕಾರಿ. ಅವು ಯಾವುವು?
ಮೊದಲ ನಿಯಮದಂತೆ, ದಂಪತಿಗಳು ಪ್ರತಿ ಎರಡು ವಾರಗಳಿಗೊಮ್ಮೆ ಡೇಟ್ ನೈಟ್ ಗೆ ಹೋಗಬೇಕು. ಇದು ಇಬ್ಬರನ್ನೂ ರಿಫ್ರೆಶ್ ಆಗಿರಿಸುತ್ತದೆ.
ಪ್ರತಿ ಎರಡು ತಿಂಗಳಿಗೊಮ್ಮೆ ಪ್ರವಾಸಕ್ಕೆ ಹೋಗಲು ಪ್ರಯತ್ನಿಸಿ. ಈ ಪ್ರವಾಸ ನಿಮ್ಮನ್ನು ಮತ್ತು ನಿಮ್ಮ ಸಂಬಂಧವನ್ನು ಉತ್ತಮಗೊಳಿಸುತ್ತದೆ.
ಮೂರನೇ ನಿಯಮದಂತೆ, ಪ್ರತಿ ಎರಡು ವರ್ಷಗಳಿಗೊಮ್ಮೆ ವಾರದ ಪ್ರವಾಸಕ್ಕೆ ಹೋಗಲು ಯೋಜಿಸಿ.
ಅನೇಕರು ತಮ್ಮ ಸಂಬಂಧಗಳನ್ನು ಉತ್ತಮಗೊಳಿಸಲು ೨-೨-೨ ಸೂತ್ರವನ್ನು ಅನುಸರಿಸುತ್ತಾರೆ. ಇದು ಸಂಬಂಧದಲ್ಲಿ ಉತ್ತಮ ಬದಲಾವಣೆ ತರುತ್ತದೆ ಎನ್ನುತ್ತಾರೆ ತಜ್ಞರು.