Private Jobs

ಜಾಬ್ ಇಂಟರ್‌ವ್ಯೂ ಗೆಲ್ಲೋದು ಹೇಗೆ?

ನಿಮ್ಮ ಕಾನ್ಪೆಡೆನ್ಸ್ ಲೆವೆಲೆ, ಸಂವಹನ ಕೌಶಲ್ಯ ಹಾಗೂ ಕಮ್ಯೂನಿಕೇಷನ್ ಸ್ಕಿಲ್ ಹೇಗೆ ಅನ್ನೋದು ಇಂಟರ್ ವ್ಯೂನಲ್ಲಿ ಪರೀಕ್ಷಿಸಲಾಗುತ್ತದೆ.

ಕಂಪನಿ ಬಗ್ಗೆ ತಿಳಿದುಕೊಳ್ಳಿ

ಇಂಟರ್ವ್ಯೂಗೆ ಹೋಗುವ ಮೊದಲು ಕಂಪನಿ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಿ. ವೆಬ್‌ಸೈಟ್, ಸಾಮಾಜಿಕ ಮಾಧ್ಯಮವನ್ನು ಬ್ರೌಸ್ ಮಾಡಿರಿ. ಇದು ಕಂಪನಿಯ ಧ್ಯೇಯ, ಮೌಲ್ಯಗಳನ್ನು ನೀವು ತಿಳಿದುಕೊಂಡಿರುವುದನ್ನು ತೋರಿಸುತ್ತದೆ.

ರಿಸ್ಯೂಮ್ ನವೀಕರಿಸಿ

ಸಿವಿ ಪ್ರತಿಯನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಿ. ಇದು ನಿಮ್ಮ ಅನುಭವವನ್ನು ಮಾತ್ರವಲ್ಲ, ಏನು ಬರೆದಿದ್ದೀರಿ ಎಂಬುದನ್ನು ನೆನಪಿಸುತ್ತದೆ. ತಪ್ಪಲ್ಲದಂತೆ ರೆಸ್ಯೂಮ್ ನವೀಕರಿಸಿ.

ಸಾಮಾನ್ಯ ಪ್ರಶ್ನೆಗಳಿಗೆ ತಯಾರಿ

ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಬಗ್ಗೆ ಹೇಳಿ. ಈ ಕಂಪನಿಯಲ್ಲಿ ಏಕೆ ಕೆಲಸ ಮಾಡಲು ಬಯಸುತ್ತೀರಿ ಎಂಬಂತಹ ಸಾಮಾನ್ಯ ಸಂದರ್ಶನ ಪ್ರಶ್ನೆಗಳಿಗೆ ಮೊದಲೇ ಉತ್ತರಿಸಿ. ಇದು ನಿಮ್ಮ ಒತ್ತಡ ಕಡಿಮೆ ಮಾಡುತ್ತದೆ.

ಉಡುಗೆ

ಔಪಚಾರಿಕ ಮತ್ತು ವೃತ್ತಿಪರವಾಗಿರುವ ಇಂಟರ್ವ್ಯೂಗೆ ಬಟ್ಟೆಗಳನ್ನು ಆರಿಸಿ. ನೀವು ಸರಿಯಾಗಿ ಉಡುಗೆ ತೊಟ್ಟರೆ, ನೀವು ಆತ್ಮವಿಶ್ವಾಸದಿಂದ ಕಾಣುತ್ತೀರಿ. ಮೊದಲ ಇಂಪ್ರೆಶನ್ ಮುಖ್ಯ. 

ಸಮಯ ಪ್ರಜ್ಞೆ

ಇಂಟರ್ವ್ಯೂಗೆ ಸಮಯಕ್ಕೆ ಸರಿಯಾಗಿ ಹಾಜರಾಗಿ. ಇದು ನಿಮ್ಮ ಸಮಯಪ್ರಜ್ಞೆಯನ್ನು ತೋರಿಸುತ್ತದೆ. 10-15 ನಿಮಿಷ ಮುಂಚಿತವಾಗಿ ತಲುಪಿ. ಇದರಿಂದ ಟೆನ್ಷನ್ ಸಹ ಕಡಿಮೆಯಾಗುತ್ತದೆ.

ಬಿ ಪಾಸಿಟಿವ್

ಸಂದರ್ಶನದ ವೇಳೆ ಸಕಾರಾತ್ಮಕ ದೃಷ್ಟಿಕೋನವನ್ನಿಟ್ಟುಕೊಳ್ಳಿ. ಆತ್ಮವಿಶ್ವಾಸವಿರಲಿ. ನಿಮ್ಮ ಅನುಭವ ಹಂಚಿಕೊಳ್ಳಿ. ಯಾವುದೇ ತೊಂದರೆಗಳನ್ನು ಎದುರಿಸಿದರೆ, ನೀವು ಅದನ್ನು ಹೇಗೆ ನಿಭಾಯಿಸಿದ್ದೀರಿ ಎಂದು ಹೇಳಿ.

ಸಂವಹನ ಕೌಶಲ್ಯ

ಮಾತನಾಡುವಾಗ ಸ್ಪಷ್ಟತೆ ಇರಲಿ. ವಿಷಯಗಳನ್ನು ಸುಲಭವಾಗಿ ವಿವರಿಸಲು ಸಣ್ಣ ವಾಕ್ಯ ಬಳಸಿ. ಕೇಳುವ ಕಲೆಯೂ ಮುಖ್ಯ. ಸಂದರ್ಶಕರು ಮಾತನಾಡುವಾಗ ಗಮನವಿಟ್ಟು ಕೇಳಿ. ಅವರ ಮಾತಿಗೆ ಪ್ರತಿಕ್ರಿಯಿಸಿ.

ಆಂಗಿಕ ಭಾಷೆ

ನಿಮ್ಮ ದೇಹ ಭಾಷೆ ನಿಮ್ಮ ಆತ್ಮವಿಶ್ವಾಸವನ್ನು ತೋರಿಸುತ್ತದೆ. ನೇರವಾಗಿ ಕುಳಿತುಕೊಳ್ಳಿ, ಕಣ್ಣಿನ ಸಂಪರ್ಕವನ್ನು ಮಾಡಿಕೊಳ್ಳಿ. ಮುಖದಲ್ಲಿ ಮಂದಹಾಸವಿರಲಿ. ಇದು ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ.

ಮುಂದಿನ ಕ್ರಮ

ಇಂಟರ್ವ್ಯೂ ನಂತರ, ಧನ್ಯವಾದ ಪತ್ರ ಅಥವಾ ಇಮೇಲ್ ಕಳುಹಿಸಿ. ಇದು ನಿಮ್ಮ ವೃತ್ತಿಪರತೆಯನ್ನು ಮಾತ್ರ ತೋರಿಸುವುದಿಲ್ಲ, ಆದರೆ ನೀವು ಅವಕಾಶವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೀರಿ ಎಂದು ಸೂಚಿಸುತ್ತದೆ.

Find Next One